Chaturgrahi Yoga On Chandra Grahan Effects: ಅದ್ಭುತ ಖಗೋಳ ವಿದ್ಯಮಾನಗಳಾದ ಸೂರ್ಯ ಗ್ರಹಣ, ಚಂದ್ರ ಗ್ರಹಣಗಳಿಗೆ ಜ್ಯೋತಿಷ್ಯ ಶಾಸ್ತ್ರದಲ್ಲೂ ಕೂಡ ಬಹಳ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಎರಡು ವಾರಗಳ ಹಿಂದಷ್ಟೇ ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಿದ್ದು, ಇದೀಗ ನಾಳೆ ಈ ವರ್ಷದ ಪ್ರಥಮ ಚಂದ್ರ ಗ್ರಹಣ ಸಂಭವಿಸಲಿದೆ. ನಾಳೆ 05 ಮೇ 2023ರಂದು ಬುದ್ಧ ಪೂರ್ಣಿಮೆಯ ದಿನ ಈ ವರ್ಷದ ಮೊದಲ ಚಂದ್ರ ಗ್ರಹಣ ಸಂಭವಿಸಲಿದೆ. ಇದೇ ದಿನ ಮೇಷ ರಾಶಿಯಲ್ಲಿ ಸೂರ್ಯ, ಬುಧ, ಗುರು ಮತ್ತು ರಾಹು ಗ್ರಹಗಳು ಒಟ್ಟಿಗೆ ಕೂಡಲಿದ್ದು ವಿಶೇಷ ಚತುರ್ಗ್ರಾಹಿ ಯೋಗವೂ ನಿರ್ಮಾಣವಾಗಲಿದೆ. 


COMMERCIAL BREAK
SCROLL TO CONTINUE READING

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬುದ್ದ ಪೂರ್ಣಿಮೆಯಂದು ಸಂಭವಿಸುತ್ತಿರುವ ಚಂದ್ರ ಗ್ರಹಣದ ದಿನ ಸೂರ್ಯ, ಬುಧ, ಗುರು ಮತ್ತು ರಾಹು ಗ್ರಹಗಳ ಸಂಯೋಜನೆಯಿಂದ ರೂಪುಗೊಳ್ಳುತ್ತಿರುವ ಚತುರ್ಗ್ರಾಹಿ ಯೋಗವು ತುಂಬಾ ವಿಶೇಷವಾಗಿದ್ದು, ಬರೋಬ್ಬರಿ 12 ವರ್ಷಗಳ ನಂತರ ಈ ರೀತಿಯ ಯೋಗ ರೂಪುಗೊಳ್ಳುತ್ತಿದೆ. ಸುಮಾರು 10 ದಿನಗಳ ಕಾಲ ಇರುವ ಈ ಯೋಗದ  ಪ್ರಭಾವವು ಎಲ್ಲಾ ರಾಶಿಯವರ ಮೇಲೆ ಕಂಡು ಬರಲಿದ್ದು, ಇದು ನಾಲ್ಕು ರಾಶಿಯವರಿಗೆ ಸಿರಿವಂತರಾಗುವ ಯೋಗವನ್ನು ನೀಡಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ.... 


ಚಂದ್ರಗ್ರಹಣದ ದಿನ ಮೇಷ ರಾಶಿಯಲ್ಲಿ ರೂಪುಗೊಳ್ಳಲಿದೆ ಚತುರ್ಗ್ರಾಹಿ ಯೋಗ: ನಾಲ್ಕು ರಾಶಿಯವರಿಗೆ ಬಂಪರ್ : 
ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಗಳ ಪ್ರಕಾರ, ನಾಳೆ ಚಂದ್ರ ಗ್ರಹಣದ ದಿಂದ ರೂಪುಗೊಳ್ಳುತ್ತಿರುವ ಚತುರ್ಗ್ರಾಹಿ ಯೋಗದ ಪ್ರಭಾವ ಮುಂದಿನ 10 ದಿನಗಳವರೆಗೆ ಇರಲಿದೆ. ಇದಲ್ಲದೆ, ಈ ಸಮಯದಲ್ಲಿ ಚಂದ್ರಗ್ರಹಣದ ಸಿದ್ಧಿ ಯೋಗ, ವೃತ್ತಿಪಟ್ ಯೋಗವೂ ನಿರ್ಮಾಣವಾಗುತ್ತಿರುವುದರಿಂದ ಇದನ್ನು ನಾಲ್ಕು ರಾಶಿಯವರಿಗೆ ತುಂಬಾ ಶುಭಕರ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... 


ಇದನ್ನೂ ಓದಿ- ದುರಾದೃಷ್ಟವನ್ನು ಅದೃಷ್ಟವಾಗಿ ಬದಲಾಯಿಸಲು ಇಂದೇ ಮನೆಯಲ್ಲಿ ಈ ಸಸಿ ನೆಡಿ


ಮೇಷ ರಾಶಿ: 
ವರ್ಷದ ಪ್ರಥಮ ಚಂದ್ರ ಗ್ರಹಣದಂದು ಮೇಷ ರಾಶಿಯಲ್ಲಿಯೇ ಚತುರ್ಗ್ರಾಹಿ ಯೋಗ ನಿರ್ಮಾಣವಾಗುತ್ತಿದ್ದು ಅದರ ಪ್ರಭಾವ ಈ ರಾಶಿಯವರ ಮೇಲೆಯೇ ಹೆಚ್ಚಾಗಿ ಕಂಡು ಬರುತ್ತದೆ. ಈ ಸಮಯದಲ್ಲಿ ಮೇಷ ರಾಶಿಯವರಿಗೆ ವ್ಯಾಪಾರ ವ್ಯವಹಾರ ಸಂಬಂಧಿತ ಪ್ರಯಾಣ ಲಾಭದಾಯಕವಾಗಿರಲಿದೆ. ಹೊಡಿಕೆಗಳಿಂದ ವಿಶೇಷ ಲಾಭವಾಗಲಿದೆ.  


ಸಿಂಹ ರಾಶಿ: 
ಚಂದ್ರ ಗ್ರಹಣದ ದಿನ ನಿರ್ಮಾಣವಾಗುತ್ತಿರುವ ಚತುರ್ಗ್ರಾಹಿ ಯೋಗಾದ ಪರಿಣಾಮ ಸಿಂಹ ರಾಶಿಯವರಿಗೆ ಉದ್ಯೋಗ ವ್ಯವಹಾರದಲ್ಲಿ ಭಾರೀ ಪ್ರಗತಿ, ಯಶಸ್ಸು ಪ್ರಾಪ್ತಿಯಾಗಲಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದ್ದು ಮನಃ ಶಾಂತಿ ನೆಲೆಸಲಿದೆ. 


ಧನು ರಾಶಿ: 
ವರ್ಷದ ಮೊದಲ ಚಂದ್ರ ಗ್ರಹಣದಲ್ಲಿ ರೂಪುಗೊಳ್ಳುತ್ತಿರುವ ಅಪರೂಪದ ಚತುರ್ಗ್ರಾಹಿ ಯೋಗದಿಂದಾಗಿ ಧನು ರಾಶಿಯವರಿಗೆ ಇಷ್ಟು ದಿನಗಳ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ದೊರೆಯಲಿದೆ. ಅದೃಷ್ಟದ ಸಂಪೂರ್ಣ ಬೆಂಬಲ ನಿಮ್ಮ ಪರವಾಗಿರಲಿದ್ದು  ಜೀವನದಲ್ಲಿ ಸುಖ, ಸಂತೋಷ, ಸಮಾಜದಲ್ಲಿ ಗೌರವ ಎಲ್ಲವೂ ದೊರೆಯಲಿದೆ. 


ಇದನ್ನೂ ಓದಿ- ಶನಿಯ ರಾಶಿಯಲ್ಲಿ ಪ್ಲುಟೊ ಗ್ರಹ ಸಂಚಾರ: ಈ ರಾಶಿಯವರಿಗೆ ಧನ ವೃಷ್ಟಿ


ಮೀನ ರಾಶಿ: 
ವರ್ಷದ ಮೊದಲ ಚಂದ್ರ ಗ್ರಹಣವು ಮೀನ ರಾಶಿಯವರ ಅದೃಷ್ಟವನ್ನು ಬದಲಾಯಿಸಲಿದೆ. ದೀರ್ಘ ಸಮಯದಿಂದ ಸ್ಥಗಿತಗೊಂಡಿದ್ದ ಕೆಲಸಗಳು ವೇಗವನ್ನು ಪಡೆಯಲಿವೆ. ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದ್ದು ನೀವು ಕೈ ಹಾಕಿದ ಕೆಲಸಗಾಲಲ್ಲೆಲ್ಲಾ ಭಾರೀ ಯಶಸ್ಸು ನಿಮ್ಮದಾಗಲಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.