Copper Vastu Benefits: ಹಿಂದೂ ಧರ್ಮದಲ್ಲಿ ತಾಮ್ರವನ್ನು ಅತ್ಯುತ್ತಮ ಲೋಹವೆಂದು ಪರಿಗಣಿಸಲಾಗುತ್ತದೆ. ತಾಮ್ರದ ಪಾತ್ರೆಗಳನ್ನು ಪೂಜೆಯಲ್ಲೂ ಬಳಸಲಾಗುತ್ತದೆ. ಅಷ್ಟೇ ಅಲ್ಲದೆ, ಅಭಿಷೇಕದ ಸಂದರ್ಭದಲ್ಲೂ ತಾಮ್ರದ ಪಾತ್ರೆಗಳನ್ನು ಬಳಕೆ ಮಾಡಲಾಗುತ್ತದೆ. ಆರೋಗ್ಯಕ್ಕೆ ಕೂಡ ಇದು ಬಹಳ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ನಕಾರಾತ್ಮಕ ಶಕ್ತಿ, ಆರ್ಥಿಕ ಬಿಕ್ಕಟ್ಟನ್ನು ತೆಗೆದುಹಾಕುವಲ್ಲಿ ತಾಮ್ರದ ಪಾತ್ರೆ ಪ್ರಮುಖ ಪಾತ್ರವನ್ನು ವಹಿಸುತ್ತದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Weight Loss: ಬೆಚ್ಚಗಿನ ನೀರಿನಲ್ಲಿ ಇದನ್ನು ಸೇರಿಸಿ ಕುಡಿಯಿರಿ.. 15 ದಿನಗಳಲ್ಲಿ 2 ಕೆಜಿ ತೂಕ ಇಳಿಸಿ!


ಮಾನಸಿಕ ಒತ್ತಡವನ್ನು ತೊಡೆದುಹಾಕಲು:


ತಾಮ್ರದ ಮಡಕೆಯಿಂದ ಮಾಡುವ ಪರಿಹಾರದ ಮೂಲಕ ಹಣಕಾಸು ಮತ್ತು ಮಾನಸಿಕ ಒತ್ತಡಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನೀವು ತೊಡೆದು ಹಾಕಬಹುದು. ಇದಕ್ಕಾಗಿ, ಪ್ರತಿದಿನ ಮಲಗುವ ಮೊದಲು, ತಾಮ್ರದ ಮಡಕೆಗಳಲ್ಲಿ ನೀರನ್ನು ತುಂಬಿಸಿ ನಿದ್ರೆ ಮಾಡಿ. ಬೇಕಿದ್ದರೆ ಆ ನೀರಿಗೆ ಸ್ವಲ್ಪ ಕೆಂಪು ಶ್ರೀಗಂಧದ ಮರದ ಪುಡಿಯನ್ನು ಸಹ ಸೇರಿಸಬಹುದು. ನಂತರ ಬೆಳಿಗ್ಗೆ ಎದ್ದು ಈ ನೀರನ್ನು ಮನೆಯಲ್ಲಿರುವ ಸಸ್ಯದ ಬುಡಕ್ಕೆ ಎರೆಯಿರಿ. ಇದು ನಿಮ್ಮ ಮಾನಸಿಕ ಸಮಸ್ಯೆಯನ್ನು ತೆಗೆದುಹಾಕುತ್ತದೆ.


ಜಾತಕದಲ್ಲಿ ಸೂರ್ಯ ಮತ್ತು ಮಂಗಳ ಗ್ರಹದ ಸ್ಥಾನವನ್ನು ಬಲಪಡಿಸಲು:


ನಿಮ್ಮ ಜಾತಕದಲ್ಲಿ ಮಂಗಳ ಮತ್ತು ಸೂರ್ಯನ ಸ್ಥಾನವು ದುರ್ಬಲವಾಗಿದ್ದರೆ, ತಾಮ್ರದ ಕಮಲದಲ್ಲಿ ನೀರನ್ನು ತೆಗೆದುಕೊಂಡು ಅದನ್ನು ಆಲದ ಮರಕ್ಕೆ ಅರ್ಪಿಸಬೇಕು. ಹೀಗೆ ಮಾಡುವುದರಿಂದ ನಿಮಗೆ ಪ್ರಯೋಜನಗಳು ಸಿಗುತ್ತವೆ. ಮೀನ ಮತ್ತು ಧನು ರಾಶಿಯ ಜನರು ಈ ಪರಿಹಾರವನ್ನು ಮಾಡಿದರೆ, ವಿಶೇಷ ಫಲಗಳನ್ನು ಪಡೆಯಬಹುದು.


ಹಣಕಾಸಿನ ನಿರ್ಬಂಧಗಳನ್ನು ತೊಡೆದುಹಾಕಲು:


ಹಣದ ಬಿಕ್ಕಟ್ಟಿನ ಬಗ್ಗೆ ನೀವು ತುಂಬಾ ಅಸಮಾಧಾನಗೊಂಡಿದ್ದರೆ, ಬೆಳಿಗ್ಗೆ ಎದ್ದು, ತಾಮ್ರದ ಕಮಲದಲ್ಲಿ ಸೂರ್ಯದೇವರಿಗೆ ನೀರನ್ನು ಅರ್ಪಿಸಿ. ಸತತ 40 ದಿನಗಳವರೆಗೆ ಈ ಪರಿಹಾರ ಮಾಡಿದರೆ, ಇದು ಜಾತಕದಲ್ಲಿ ಸೂರ್ಯಾದೇವನ ಸ್ಥಾನವನ್ನು ಬಲಪಡಿಸುತ್ತದೆ. ಜೊತೆಗೆ ಹಣಕಾಸಿನ ಬಿಕ್ಕಟ್ಟು ದೂರವಾಗುತ್ತದೆ.


ವೈವಾಹಿಕ ಜೀವನದಲ್ಲಿ ಮಾಧುರ್ಯಕ್ಕಾಗಿ:


ಮನೆಯಲ್ಲಿ ಭಿನ್ನಾಭಿಪ್ರಾಯಗಳಿದ್ದರೆ ಅಥವಾ ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದ್ದರೆ, ತಾಮ್ರದ ಕಮಲ ಅಥವಾ ಪಾತ್ರದಲ್ಲಿ ನೀರನ್ನು ತುಂಬಿಸಿ ಅದನ್ನು ಪ್ರತಿದಿನ ತುಳಸಿ ಗಿಡಕ್ಕೆ ಅರ್ಪಿಸಬೇಕು. ಹೀಗೆ ಮಾಡುವುದರಿಂದ, ಮನೆಯಿಂದ ನಕಾರಾತ್ಮಕ ಶಕ್ತಿ ದೂರವಾಗಿ  ಧನಾತ್ಮಕ ಪರಿಣಾಮವು ಹೆಚ್ಚಾಗುತ್ತದೆ.


ಇದನ್ನೂ ಓದಿ: ಶನಿ- ಚಂದ್ರ ಸಂಯೋಗದಿಂದ ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನವಾಗುವ ಸೌಭಾಗ್ಯ! ಸೋಲು ಬಳಿಯೂ ಸುಳಿಯದು!


(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee ನ್ಯೂಸ್ ಅದನ್ನು ಖಚಿತಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ