Budhvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ತೃತೀಯ ತಿಥಿಯ ಈ ದಿನ ಬುಧವಾರ, ಪುಷ್ಯ ನಕ್ಷತ್ರ, ಐಂದ್ರ ಯೋಗ, ಬವ ಕರಣ. ಇಂದಿನ ಎಲ್ಲಾ 12 ರಾಶಿಯವರ ಭವಿಷ್ಯ ಹೇಗಿದೆ ತಿಳಿಯಿರಿ.  


COMMERCIAL BREAK
SCROLL TO CONTINUE READING

ಮೇಷ ರಾಶಿಯವರ ಭವಿಷ್ಯ (Aries Horoscope):  
ಯಾವುದೇ ವಿಚಾರದಲ್ಲಿ ನಿಗದಿತ ಯಶಸ್ಸು ಸಿಗದಿದ್ದರೆ ನಿಮ್ಮನ್ನು ನೀವು ಆತ್ಮಾವಲೋಕನ ಮಾಡಿಕೊಳ್ಳಿ. ಬೇರೆಯವರ ಬಗ್ಗೆ ಬೆರಳು ತೋರಿಸುವ ನಿಮ್ಮ ವರ್ತನೆ, ಅಭಿಪ್ರಾಯಗಳು ಬದಲಾಗಬೇಕು. ಆತ್ಮವಿಶ್ವಾಸದ ಕ್ಷಣಿಕ ಕುಸಿತವು ನಿಮ್ಮನ್ನು ದುಡುಕಿನ ನಿರ್ಧಾರ ಕೈಗೊಳ್ಳುವಂತೆ ಮಾಡಬಹುದು. 


ವೃಷಭ ರಾಶಿಯವರ ಭವಿಷ್ಯ (Taurus Horoscope):  
ಉದ್ಯೋಗ ಕ್ಷೇತ್ರದಲ್ಲಿ ಇಂದು ನಿಮ್ಮ ಗೌರವ ಹೆಚ್ಚಾಗಲಿದೆ. ಅತ್ತೆಯ ಮನೆಯಲ್ಲಿ ಯಾರೊಂದಿಗಾದರೂ ಘರ್ಷಣೆ ಸಾಧ್ಯತೆ ಇರುವುದರಿಂದ ಸ್ವಲ್ಪ ಎಚ್ಚರಿಕೆಯಿಂದ ನಡೆದುಕೊಳ್ಳಿ. ಪಾಲುದಾರಿಕೆ ವ್ಯವಹಾರದಲ್ಲಿ ಬಹಳ ಯೋಜಿಸಿ ಕೆಲಸ ಮಾಡುವುದು ಒಳ್ಳೆಯದು. 


ಮಿಥುನ ರಾಶಿಯವರ ಭವಿಷ್ಯ (Gemini Horoscope):   
ನಿಮಗೆ ಇಂದು ಸಂತೋಷದ ದಿನವಾಗಿದೆ. ನಿಮ್ಮ ಸುತ್ತಲಿನ ವಾತಾವರಣ ಆಹ್ಲಾದಕರವಾಗಿರುತ್ತದೆ. ಹಳೆಯ ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದುವರೆದರೆ ಶುಭವಾಗಲಿದೆ. ಯಾರೊಂದಿಗಾದರೂ ಪ್ರಮುಖ ಮಾಹಿತಿ ಹಂಚಿಕೊಳ್ಳುವಾಗ ತುಂಬಾ ಎಚ್ಚರಿಕೆಯಿಂದ ಇರಿ. 


ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಇಂದಿನ ದಿನ ನಿಮಗೆ ಅಷ್ಟು ಶುಭಕರವಾಗಿಲ್ಲ. ಈ ಸಮಯದಲ್ಲಿ ಕೆಲಸ್ಸಾದ ವಿಚಾರದಲ್ಲಿ ನೀವು ನಿರಾಶೆಗೊಳ್ಳುವ ಸಾಧ್ಯತೆ ಇದೆ. ಯಾವುದೇ ಸಭೆ-ಸಮಾರಂಭಗಳಲ್ಲಿ ಭಾಗವಹಿಸಿದರೆ ಅಲ್ಲಿ ಅಗತ್ಯವಿರುವಷ್ಟೆ ಮಾತನಾಡಿ. ವಿನಾಕಾರಣ ವಾದ-ವಿವಾದಗಳಲ್ಲಿ ಮೂಗು ತೂರಿಸಬೇಡಿ. 


ಇದನ್ನೂ ಓದಿ-  ಹೊಸ ವರ್ಷದಿಂದ ಈ ರಾಶಿಯವರಿಗೆ ಶುಕ್ರ ದೆಸೆ... ಸಕಲವೂ ಕೈಗೂಡುವ ಪರ್ವಕಾಲ..!


ಸಿಂಹ ರಾಶಿಯವರ ಭವಿಷ್ಯ (Leo Horoscope):  
ಇಂದು ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದೆ. ವಿವಿಧ ಮೂಲಗಳಿಂದ ಶುಭ ಸುದ್ದಿಯನ್ನು ಕೇಳುವಿರಿ. ಕುಟುಂಬದ ಸದಸ್ಯರು ಕೆಲಸದ ನಿಮಿತ್ತ ಮನೆಯಿಂದ ದೂರ ಪ್ರಯಾಣಿಸಬಹುದು. ತಾಯಿ ಆರೋಗ್ಯದ ಬಗ್ಗೆ ಸ್ವಲ್ಪ ಗಮನವಹಿಸಿ. 


ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಯಾವುದೇ ರೀತಿಯ ವಹಿವಾತುಗಳಿಗೆ ಸಂಬಂಧಿಸಿದ ವಿಚಾರಗಳಲ್ಲಿ ಹೆಚ್ಚು ಜಾಗರೂಕರಾಗಿರಿ. ಮನೆಯಲ್ಲಿ ಶುಭ ಕಾರ್ಯಗಳನ್ನು ಆಯೋಜಿಸಬಹುದು. ಬೇರೆಯವರೊಂದಿಗೆ ಪ್ರಮುಖ ಮಾಹಿತಿಯನ್ನು ಹಂಚಿಕೊಳ್ಳುವಾಗ ಎಚ್ಚರಿಕೆಯಿಂದ ಇರಿ. 


ತುಲಾ ರಾಶಿಯವರ ಭವಿಷ್ಯ (Libra Horoscope): 
ಸಾಮಾಜಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಇಂದು ಉತ್ತಮ ದಿನ. ಕೆಲಸ ಸ್ಥಳದಲ್ಲಿ ನಿಮ್ಮ ಕೀರ್ತಿ ಹೊಸ ಎತ್ತರಕ್ಕೆ ಏರಲಿದೆ. ಮನೆಯನ್ನು ನವೀಕರಿಸಲು ಯೋಚಿಸುತ್ತಿದ್ದರೆ ಇಂದು ಸಮಯ ಪ್ರಾಶಸ್ತ್ಯವಾಗಿದೆ. ಆರೋಗ್ಯ ವಿಚಾರಗಳು ಕಾಡಬಹುದು. ಈ ಬಗ್ಗೆ ನಿರ್ಲಕ್ಷ್ಯ ವಹಿಸಬೇಡಿ. 


ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಇಂದು ನಿಮ್ಮ ಆದಾಯದ ಮೂಲಗಳು ಹೆಚ್ಚಾಗಲಿವೆ. ನಿಮ್ಮ ಬಾಕಿ ಉಳಿದಿರುವ ಕೆಲಸಗಳಲ್ಲಿ ಯಶಸ್ಸು ದೊರೆಯಲಿದೆ. ಆಸ್ತಿಯಲ್ಲಿ ಹೂಡಿಕೆ ಮಾಡುವುದರಿಂದ ಭವಿಷ್ಯದಲ್ಲಿ ಉತ್ತಮ ಲಾಭವನ್ನು ಪಡೆಯಬಹ್ದೂ. ಪ್ರೀತಿಯ ಜೀವನ ಮಧುರವಾಗಿರುತ್ತದೆ. 


ಇದನ್ನೂ ಓದಿ- ಬೆಳ್ಳಿ ಉಂಗುರ ಧರಿಸಿದರಷ್ಟೇ ಈ ರಾಶಿಯವರ ಹೆಗಲೇರುವುದು ಅದೃಷ್ಟ, ಸುಖದ ಸುಪ್ಪತ್ತಿಗೆಯಲ್ಲೇ ಜೀವನ...!


ಧನು ರಾಶಿಯವರ ಭವಿಷ್ಯ (Sagittarius Horoscope):  
ಇದು ನಿಮಗೆ ಹೆಚ್ಚು ಸಮಸ್ಯೆಗಳಿಂದ ಕೂಡಿದ ದಿನವಾಗಿರುತ್ತದೆ. ನಿಮ್ಮ ಸಮಸ್ಯೆಗಳು ಹೆಚ್ಚಾದಂತೆ ಒತ್ತಡವೂ ಹೆಚ್ಚಾಗಬಹುದು. ಮಕ್ಕಳ ಅನಿಯಂತ್ರಿತ ನಡವಳಿಕೆ ನಿಮ್ಮ ನೆಮ್ಮದಿಯನ್ನು ಕೆಡಿಸಬಹುದು. ಆದಾಗ್ಯೂ, ಧ್ಯಾನ ಮಾಡುವುದರಿಂದ ಮನಸ್ಸು ಶಾಂತಗೊಳ್ಳಬಹುದು. 


ಮಕರ ರಾಶಿಯವರ ಭವಿಷ್ಯ (Capricorn Horoscope):  
ಇಂದು ನಿಮಗೆ ಮಿಶ್ರ ಫಲಿತಾಂಶಗಳಿಂದ ಕೂಡಿದ ದಿನ. ದೂರದ ಊರಿನಲ್ಲಿರುವ ಕುಟುಂಬ ಸದಸ್ಯರಿಂದ ನಿರಾಶಾದಾಯಕ ವಿಚಾರವನ್ನು ಕೇಳಬಹುದು. ಯಾವುದೇ ವ್ಯವಹಾರದಲ್ಲಿ ಒಪ್ಪಂದಕ್ಕೆ ಸಹಿ ಹಾಕುವ ಮೊದಲು ಕ್ಷೇತ್ರ ತಜ್ಞರಿಂದ ಪರಿಶೀಲಿಸುವುದು ಉತ್ತಮ. 


ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಇಂದು ಹೊಸ ಮನೆ, ವಾಹನ, ಭೂಮಿ ಖರೀದಿಸಲು ದಿನ ತುಂಬಾ ಚೆನ್ನಾಗಿದೆ. ಪೂರ್ವಜರ ಆಸ್ತಿಯಿಂದ ಲಾಭವನ್ನು ಪಡೆಯಬಹುದು. ತೀರ್ಥ ಕ್ಷೇತ್ರಗಳಿಗೆ ಪ್ರಯಾಣ ಕೈಗೊಳ್ಳಬಹುದು. ಬಹಳ ದಿನಗಳಿಂದ ನಿಮ್ಮನ್ನು ಬಾಧಿಸುತ್ತಿದ್ದ ಸಮಸ್ಯೆಯೊಂದಕ್ಕೆ ಪರಿಹಾರ ಕಂಡುಕೊಳ್ಳುವಿರಿ. 


ಮೀನ ರಾಶಿಯವರ ಭವಿಷ್ಯ (Pisces Horoscope): 
ಈ ರಾಶಿಯ ವಿದ್ಯಾರ್ಥಿಗಳಿಗೆ ಇಂದು ಉತ್ತಮವಾದ ದಿನ. ಉದ್ಯೋಗಸ್ಥರಿಗೆ ನಿಮ್ಮ ಕೆಲಸಕ್ಕೆ ಬಾಸ್ ಸಂತೋಷಗೊಂಡು ಮೆಚ್ಚುಗೆ ವ್ಯಕ್ತಪಡಿಸುವರು. ಯಾವುದೇ ದೀರ್ಘಾವಧಿಯ ಬಾಕಿಯಿರುವ ಕೆಲಸಗಳಲ್ಲಿ ವೇಗವನ್ನು ಕಾಣಬಹುದು. ಕುಟುಂಬದಲ್ಲಿ ಸಂತಸದ ವಾತಾವರಣ ಇರುತ್ತದೆ. 


ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.