Guruvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಸೌರ ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ಪ್ರತಿಪದಾ ತಿಥಿ, ಗುರುವಾರದ ಈ ದಿನ ಶ್ರವಣ ನಕ್ಷತ್ರ, ವ್ಯತೀಪಾತ ಯೋಗ, ಬಾಲವ ಕರಣ. ಇಂದಿನ ದ್ವಾದಶ ರಾಶಿಗಳ ಫಲಾಫಲ ಏನು ತಿಳಿಯಿರಿ. 


COMMERCIAL BREAK
SCROLL TO CONTINUE READING

ಮೇಷ ರಾಶಿಯವರ ಭವಿಷ್ಯ (Aries Horoscope):  
ಮನೆಯಲ್ಲಿ ಹಿರಿಯರಿಗೆ ಗೌರವ ನೀಡುವುದರಿಂದ ನಿಮ್ಮ ಹಣಕಾಸಿನ ಸ್ಥಿತಿ ಸುಧಾರಿಸುತ್ತದೆ. ನಿಮ್ಮ ಆಡಳಿತಾತ್ಮಕ ಸಾಮರ್ಥ್ಯಗಳ ಮೇಲೆ ಗಮನ ಕೇಂದ್ರೀಕರಿಸುವುದರಿಂದ ಒಳ್ಳೆಯ ಫಲಗಳನ್ನು ನಿರೀಕ್ಷಿಸಬಹುದು. ವೃತ್ತಿ ವ್ಯವಹಾರದಲ್ಲಿ ಅಭಿವೃದ್ಧಿ. 


ವೃಷಭ ರಾಶಿಯವರ ಭವಿಷ್ಯ (Taurus Horoscope):  
ಯೋಜಿತ ಕೆಲಸಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಿರಿ. ಅದೃಷ್ಟದ ಬೆಂಬಲದಿಂದ ವ್ಯವಹಾರವನ್ನು ವಿಸ್ತರಿಸಲು ಸಕಾಲ. ಗುರಿಯೆಡೆಗೆ ದೃಢತೆ ಹೆಚ್ಚಾಗುತ್ತದೆ. ಸಂವಹನ ಕೌಶಲ್ಯ ಸುಧಾರಿಸುತ್ತದೆ. ವ್ಯಾಪಾರ ಚಟುವಟಿಕೆಗಳು ವೇಗವನ್ನು ಪಡೆಯಲಿವೆ. 


ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಪ್ರಮುಖ ಕಾರ್ಯಗಳನ್ನು  ನಿರ್ವಹಿಸುವಾಗ ಎಚ್ಚರಿಕೆಯಿಂದ ಇರುವುದು ಭಾಳ ಮುಖ್ಯ. ಇಲ್ಲವೇ, ಆರ್ಥಿಕ ನಷ್ಟವನ್ನು ಅನುಭವಿಸಬಹುದು. ದಿನದ ಚಟುವಟಿಕೆಗಳು ಸವಾಲಿನದಾಗಿರಬಹುದು. ಕೆಲಸ ಕ್ಷೇತ್ರದಲ್ಲಿ ಸಭ್ಯತೆಯನ್ನು ಕಾಪಾಡಿಕೊಳ್ಳಿ. 


ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಪ್ರಮುಖ ಕೌಟುಂಬಿಕ ಸಮಸ್ಯೆಯನ್ನು ಪರಿಹರಿಸುವಿರಿ. ವೈವಾಹಿಕ ಜೀವನದಲ್ಲಿ ಮಾಧುರ್ಯತೆ ಉಳಿಯಲಿದೆ. ಕುಟುಂಬದಲ್ಲಿ ಸಕಾರಾತ್ಮಕತೆ ಮೇಲುಗೈ ಸಾಧಿಸಲಿದೆ. ನಿಮ್ಮ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುವುದರಿಂದ ಮನಸ್ಸಿಗೆ ನೆಮ್ಮದಿ. 


ಇದನ್ನೂ ಓದಿ- ಫೆಬ್ರವರಿಯಲ್ಲಿ ಗುರು ಸಂಚಾರ: ಬೃಹಸ್ಪತಿ ನಡೆಯಿಂದ ಈ ರಾಶಿಯವರ ಬದುಕಿನಲ್ಲಿ ಕಷ್ಟಗಳ ಮೇಲೆ ಕಷ್ಟ, ಕೋಲಾಹಲ   


ಸಿಂಹ ರಾಶಿಯವರ ಭವಿಷ್ಯ (Leo Horoscope):  
ಉದ್ಯೋಗಸ್ಥರಿಗೆ ಕೆಲಸಗಳಲ್ಲಿ ಆವೇಗವಿರುತ್ತದೆ. ವೃತ್ತಿಪರತೆ ಸುಧಾರಿಸಲಿದೆ. ಕಠಿಣ ಪರಿಶ್ರಮಕ್ಕೆ ತಕ್ಕ ಫಲವನ್ನು ಪಡೆಯುವಿರಿ. ಹಿರಿಯರು ಮತ್ತು ಅನುಭವಿ ವ್ಯಕ್ತಿಗಳಿಂದ ಸಲಹೆ ಪಡೆದು ಮುಂದುವರೆಯುವುದರಿಂದ ಯಶಸ್ಸು. ಹಣವನ್ನು ಎರವಲು ಪಡೆಯುವುದನ್ನು ತಪ್ಪಿಸಿ. 


ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಹಣಕಾಸಿನ ವಿಚಾರಗಳಲ್ಲಿ ನಿಗಾ ವಹಿಸುವುದು ತುಂಬಾ ಮುಖ್ಯ. ಇಲ್ಲವೇ, ಸಾಲದ ಸುಳಿಯಲ್ಲಿ ಸಿಲುಕುವ ಸಾಧ್ಯತೆ ಇರುತ್ತದೆ. ವ್ಯಾಪಾರ ಸುಧಾರಣೆಯತ್ತ ಗಮನಹರಿಸಿ. ಆಧುನಿಕ ವಿಷಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ವೃತ್ತಿಪರ ವಿಷಯಗಳಲ್ಲಿ ಶುಭ ಫಲಗಳನ್ನು ನಿರೀಕ್ಷಿಸಬಹುದು. 


ತುಲಾ ರಾಶಿಯವರ ಭವಿಷ್ಯ (Libra Horoscope): 
ಕುಟುಂಬದಲ್ಲಿ ಕೆಲವು ವಿಚಾರಗಳಲ್ಲಿ ನೀವು ಮಧ್ಯಸ್ಥಿಕೆ ವಹಿಸಬೇಕಾಗಬಹುದು. ಈ ಸಮಯದಲ್ಲಿ ಉಭಯ ಪಕ್ಷಗಳ ನಡುವೆ ಸಮತೋಲನ ಕಾಪಾಡಿಕೊಳ್ಳಲು ಪ್ರಯತ್ನಿಸಿ. ಅಧ್ಯಯನದಲ್ಲಿ ಆಸಕ್ತಿ ಬೆಳೆಯುತ್ತದೆ. ಇದಕ್ಕಾಗಿ ಸಂಪನ್ಮೂಲಗಳನ್ನು ಕ್ರೋಢೀಕರಿಸುವಿರಿ. 


ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ವಾಣಿಜ್ಯ ವಿಚಾರಗಳಲ್ಲಿ ಇಂದು ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ. ವ್ಯಾಪಾರ ಸಂಬಂಧಿತ ಪ್ರವಾಸಗಳು ಫಲಪ್ರಧವಾಗಿರುತ್ತದೆ. ಅನಗತ್ಯ ಚರ್ಚೆ ತಪ್ಪಿಸುವುದರಿಂದ ಹಿಂಜರಿಕೆ ದೂರವಾಗುತ್ತದೆ. ಭಾವನಾತ್ಮಕ ಸಂಬಂಧಗಳು ಬಲಗೊಳ್ಳುತ್ತವೆ. ಧೈರ್ಯ ಮತ್ತು ಸಂಕಲ್ಪದಿಂದ ಯಶಸ್ಸು ಪ್ರಾಪ್ತಿ. 


ಇದನ್ನೂ ಓದಿ- 27ವರ್ಷಗಳ ಬಳಿಕ ಪಿತೃವಿನ ನಕ್ಷತ್ರದಲ್ಲಿ ಶನಿ ಪ್ರವೇಶ: ಈ ರಾಶಿಯವರಿಗೆ ಸಕಲೈಶ್ವರ್ಯ ಪ್ರಾಪ್ತಿ..!


ಧನು ರಾಶಿಯವರ ಭವಿಷ್ಯ (Sagittarius Horoscope):  
ನಿಮ್ಮ ಕೆಲಸದ ಸ್ಥಳದಲ್ಲಿ ಯೋಜಿತ ಕಾರ್ಯಗಳನ್ನು ವೇಗವಾಗಿ ಪೂರ್ಣಗೊಳಿಸುವಿರಿ. ಹಣಕಾಸಿನ ವಿಷಯದಲ್ಲಿ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಕಾಪಾಡಿಕೊಳ್ಳುತ್ತೀರಿ. ಸಾಮಾಜಿಕವಾಗಿ ನಿಮ್ಮ ನೆಟ್‌ವರ್ಕ್ ವಿಸ್ತರಿಸುತ್ತದೆ. 


ಮಕರ ರಾಶಿಯವರ ಭವಿಷ್ಯ (Capricorn Horoscope):  
ಇತರರಿಗಿಂತ ವಿಭಿನ್ನವಾಗಿ ಯೋಚಿಸುವ ನಿಮ್ಮ ಸ್ವಭಾವವೇ ವ್ಯವಹಾರದಲ್ಲಿ ಬಂಡವಾಳವಾಗಲಿದೆ. ನಿಮ್ಮ ಗುರಿಗಳನ್ನು ತಲುಪಲು ಅಗತ್ಯ ಶ್ರಮವಹಿಸಿ. ಯಶಸ್ಸು ನಿಮ್ಮದೇ ಆಗಲಿದೆ. ನಿಮ್ಮ ವ್ಯಕ್ತಿತ್ವವು ಸರಳತೆ ಮತ್ತು ಸೌಮ್ಯತೆಯನ್ನು ಪ್ರತಿಬಿಂಬಿಸುತ್ತದೆ. 


ಕುಂಭ ರಾಶಿಯವರ ಭವಿಷ್ಯ (Aquarius Horoscope):  
ನಿಮ್ಮ ಪ್ರೀತಿಪಾತ್ರರಿಗಾಗಿ ಖರ್ಚು ಮಾಡುವ ಬಗ್ಗೆ ನೀವು ಯೋಚಿಸುವುದಿಲ್ಲ ಆದರೆ, ನಿಮ್ಮ ಬಜೆಟ್ ಬಿಟ್ಟು ಹೋಗದಂತೆ ನಿಗಾವಹಿಸಿ. ಇಲ್ಲದಿದ್ದರೆ, ಸಾಲದ ಹೊರೆ ಹೆಚ್ಚಾಗ್ಲೈದೆ. ಸಂಬಂಧಗಳಲ್ಲಿ ಸೂಕ್ಷ್ಮತೆಯನ್ನು ಕಾಪಾಡಿಕೊಳ್ಳಿ. ವೃತ್ತಿಪರ ಕ್ಷೇತ್ರದಲ್ಲಿ ತಪ್ಪುಗಳಾಗದಂತೆ ನಿಗಾವಹಿಸಿ. 


ಮೀನ ರಾಶಿಯವರ ಭವಿಷ್ಯ (Pisces Horoscope): 
ನಿಮ್ಮ ಗುರಿಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಶಿಸ್ತನ್ನು ಅಳವಡಿಸಿಕೊಳ್ಳಿ. ಆರ್ಥಿಕ ಪರಿಸ್ಥಿತಿಯು ಇಂದು ಅನುಕೂಲಕರವಾಗಿರುತ್ತದೆ. ಕೆಲಸದಲ್ಲಿ ಹೆಚ್ಚಿನ ನಿಯಂತ್ರಣವನ್ನು ಪಡೆಯುತ್ತೀರಿ. ಬಯಸಿದ ಫಲಿತಾಂಶಕ್ಕಾಗಿ ಶ್ರದ್ದೆಯಿಂದ ಮುಂದುವರೆಯಿರಿ. 


ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.