Mangalvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ದ್ವಿತೀಯ ತಿಥಿಯ ಈ ದಿನ ಮಂಗಳವಾರ ಪುನರ್ವಸು ನಕ್ಷತ್ರ, ಬ್ರಹ್ಮ ಯೋಗ, ವಣಿಜ ಕರಣ. ಮೇಷದಿಂದ ಮೀನ ರಾಶಿಯವರೆಗೆ ಇಂದಿನ ದಿನ ಭವಿಷ್ಯ ಹೇಗಿದೆ ತಿಳಿಯಿರಿ. 


COMMERCIAL BREAK
SCROLL TO CONTINUE READING

ಮೇಷ ರಾಶಿಯವರ ಭವಿಷ್ಯ (Aries Horoscope):  
ನಿಮ್ಮ ಜೀವನದಲ್ಲಿ ತಲೆದೂರಿರುವ ಎಲ್ಲಾ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸುವಿರಿ. ಇದೇ ನಿಮ್ಮ ಯಶಸ್ಸಿನ ಶ್ರೀರಕ್ಷೆ ಆಗಿರಲಿದೆ. ಹೊಸ ವ್ಯವಹಾರಗಳಲ್ಲಿ ಆಪ್ತರಿಂದ ಬೆಂಬಲವನ್ನು ಪಡೆಯುವಿರಿ. ದೀರ್ಘಾವಧಿಯ ಯೋಜನೆಗಳಲ್ಲಿ ಪ್ರಗತಿ ಕಂಡು ಬರಲಿದೆ. 


ವೃಷಭ ರಾಶಿಯವರ ಭವಿಷ್ಯ (Taurus Horoscope):  
ನಿಮ್ಮ ವೈಯಕ್ತಿಕ ಯೋಜನೆಗೆಲು ಇಂದು ವೇಗವನ್ನು ಪಡೆಯಲಿವೆ. ಕುಟುಂಬದಲ್ಲಿ ಎಲ್ಲರೂ ಸಂತೋಷವಾಗಿರುತ್ತಾರೆ. ಸಂಬಂಧಿಕರಿಂದ ಶುಭ ಸುದ್ದಿಯನ್ನು ಸ್ವೀಕರಿಸುವಿರಿ. ಚಟುವಟಿಕೆಗಳಲ್ಲಿ ಉತ್ಸಾಹದಿಂದ ಭಾಗವಹಿಸುವಿರಿ. ಆದರೆ, ಯಾವುದೇ ಅಪಾಯ ತೆಗೆದುಕೊಳ್ಳುವುದನ್ನು ತಪ್ಪಿಸಿ. 


ಮಿಥುನ ರಾಶಿಯವರ ಭವಿಷ್ಯ (Gemini Horoscope):   
ನಿಮ್ಮ ಕೆಲಸದಲ್ಲಿ ಸೃಜನಶೀಲತೆಯನ್ನು ಕಾಪಾಡಿಕೊಳ್ಳಿ. ಅನುಕೂಲಕರ ಪರಿಸ್ಥಿತಿಗಳ ಲಾಭವನ್ನು ಪಡೆಯಿರಿ. ಹೊಸ ಆದಾಯದ ಮೂಲಗಳು ಹೊರಹೊಮ್ಮಲಿದ್ದು ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಆಧುನಿಕ ಚಿಂತನೆಯಿಂದ ಪ್ರಗತಿ ಹೊಂದುವಿರಿ. 


ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಹಣಕಾಸಿನ ವಿಷಯಗಳ ಬಗ್ಗೆ ಹೆಚ್ಚಿನ ನಿಗಾವಹಿಸಿ. ಕೆಲಸಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ದುರಾಸೆಯನ್ನು ತಪ್ಪಿಸಿ. ಕುಟುಂಬದಲ್ಲಿ ಯಾವುದೇ ವಿಚಾರದಲ್ಲಿ ಸಾಮರಸ್ಯವು ಮೇಲುಗೈ ಸಾಧಿಸಲಿದೆ. ಸಾಲ ತೆಗೆದುಕೊಳ್ಳುವುದನ್ನು ತಪ್ಪಿಸಿ. 


ಇದನ್ನೂ ಓದಿ- 12ವರ್ಷಗಳ ನಂತರ ಈ ರಾಶಿಯವರಿಗೆ ಲಕ್ಷ್ಮೀ ನಾರಾಯಣ ಯೋಗ, ಆಸೆಗಳೆಲ್ಲಾ ಈಡೇರುವ ಸುವರ್ಣ ಸಮಯ


ಸಿಂಹ ರಾಶಿಯವರ ಭವಿಷ್ಯ (Leo Horoscope):  
ನಿಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಮೂಲಕ ಹಣಕಾಸಿನ ಚಟುವಟಿಕೆಗಳಲ್ಲಿ ಲಾಭವನ್ನು ಹೆಚ್ಚಿಸುವಿರಿ. ಕೆಲಸದ ವ್ಯವಸ್ಥೆಯಲ್ಲಿ ಹೆಚ್ಚಿನ ಗಮನವಹಿಸುವುದು ಲಾಭದಾಯಕವಾಗಿರಲಿದೆ. ಸಮಾಜದಲ್ಲಿ ನಿಮ್ಮ ಖ್ಯಾತಿ ಹೆಚ್ಚಾಗಲಿದೆ. 


ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಯಾವುದೇ ಜವಾಬ್ದಾರಿಯನ್ನು ನಿಭಾಯಿಸುವಾಗ ನಿಮ್ಮ ದಕ್ಷತೆಯನ್ನು ಹೆಚ್ಚಿಸಿ. ಆಡಳಿತಾತ್ಮಕ ಕೆಲಸಗಳಲ್ಲಿ ಯಶಸ್ಸು ಸಾಧಿಸುವಿರಿ. ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸಕಾರಾತ್ಮಕತೆ ಹೊರಹೊಮ್ಮುತ್ತದೆ. ಹಣಕಾಸಿನ ವಿಷಯಗಳು ಸಕಾರಾತ್ಮಕವಾಗಿರಲಿವೆ. 


ತುಲಾ ರಾಶಿಯವರ ಭವಿಷ್ಯ (Libra Horoscope): 
ನಿಮ್ಮ ವೃತ್ತಿಪರ ಜೀವನದಲ್ಲಿ ನೀವು ಒಟ್ಟಾರೆ ಆಕರ್ಷಣೆಯನ್ನು ಕಾಪಾಡಿಕೊಳ್ಳುತ್ತೀರಿ. ಅದೃಷ್ಟದ ಪ್ರಭಾವದಿಂದ ಜೀವನದಲ್ಲಿ ಹೊಸ ಎತ್ತರವನ್ನು ಸಾಧಿಸುವಿರಿ. ವಾಣಿಜ್ಯ ವಿಷಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿರಿಕೆಯು ಲಾಭದಾಯಕವಾಗಿರಲಿದೆ. 


ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಕೆಲಸದ ಸ್ಥಳದಲ್ಲಿ ಸ್ಥಿರವಾದ ಕಾರ್ಯವಿಧಾನವನ್ನು ಕಾಪಾಡಿಕೊಂಡು ನಿಮ್ಮ ಗುರಿಗಳತ್ತ ಗಮನಹರಿಸಿ. ಪ್ರತಿ ಕೆಲಸದಲ್ಲಿ ಕುಟುಂಬ ಸದಸ್ಯರಿಂದ ಬೆಂಬಲದಿಂದ ಪ್ರೋತ್ಸಾಹ ಸಿಗಲಿದೆ. ಬುದ್ದಿವಂತಿಕೆ ಮತ್ತು ವಿವೇಕದಿಂದ ಮುಂದುವರೆಯಿರಿ. ಹಣಕಾಸಿನ ವಿಚಾರದಲ್ಲಿ ಅನಿರೀಕ್ಷಿತ ಬದಲಾವಣೆಗಳನ್ನು ಕಾಣಬಹುದು. 


ಇದನ್ನೂ ಓದಿ- Weekly Horoscope: ಈ ವಾರ ಪ್ರತಿಯುತಿ ಯೋಗ: 6 ರಾಶಿಯವರಿಗೆ ಉಕ್ಕಿ ಬರುವುದು ಧನ ಸಂಪತ್ತು


ಧನು ರಾಶಿಯವರ ಭವಿಷ್ಯ (Sagittarius Horoscope):  
ಕೈಗಾರಿಕಾ ಮತ್ತು ವ್ಯಾಪಾರ ಚಟುವಟಿಕೆಗಳಲ್ಲಿ ಖ್ಯಾತಿ ಮತ್ತು ಗೌರವವನ್ನು ಗಳಿಸ್ಸುವಿರಿ. ನಿಮ್ಮ ಸಹೋದ್ಯೋಗಿಗಳ ವಿಶ್ವಾಸವನ್ನು ಗೆಲ್ಲುತ್ತೀರೀ. ವ್ಯಾಪಾರ ವಿಸ್ತರಣೆಗೆ ಅವಕಾಶವನ್ನು ಪಡೆಯುವಿರಿ. ಕೆಲಸದಲ್ಲಿ ವಿನೂತನ ಪ್ರಯತ್ನಗಳಿಗೆ ಮನ್ನಣೆ ಜೊತೆಗೆ ನಿಮ್ಮ ಆರ್ಥಿಕ ಪರಿಸ್ಥಿತಿಯು ಬಲಗೊಳ್ಳುತ್ತದೆ. 


ಮಕರ ರಾಶಿಯವರ ಭವಿಷ್ಯ (Capricorn Horoscope):  
ನಿಮ್ಮ ಸೋಮಾರಿತನವನ್ನು ಬಿಟ್ಟು ಕೆಲಸ ಮಾಡುವುದರಿಂದ ಶುಭ. ಕೆಲಸ ಮತ್ತು ವ್ಯವಹಾರದಲ್ಲಿ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿ. ನೀವು ವೃತ್ತಿಪರತೆ ಮತ್ತು ಸಮರ್ಪಣೆಯಿಂದ ಮುಂದುವರೆದರೆ ಹೊಸ ಒಪ್ಪಂದಗಳನ್ನು ಪಡೆಯಲು ಸಾಧ್ಯವಾಗುತ್ತದೆ. 


ಕುಂಭ ರಾಶಿಯವರ ಭವಿಷ್ಯ (Aquarius Horoscope):  
ನಿಮ್ಮ ಯೋಜನೆಗಳನ್ನು ಪೂರ್ಣಗೊಳಿಸಲು ಉತ್ಸಾಹವನ್ನು ಕಾಪಾಡಿಕೊಳ್ಳಿ. ಕಲಿಕೆ ಮತ್ತು ಬೋಧನೆಯ ಮೇಲೆ ಗಮನ ಕೇಂದ್ರೀಕರಿಸುವುದರಿಂದ ಉತ್ತಮ ಫಲ ಪಡೆಯಬಹುದು. ನಿಮ್ಮ ಸಮಯ ಮತ್ತು ಶಕ್ತಿಯನ್ನು ಸರಿಯಾದ ರೀತಿಯಲ್ಲಿ ವಿನಿಯೋಗಿಸಿಕೊಳ್ಳಿ. 


ಮೀನ ರಾಶಿಯವರ ಭವಿಷ್ಯ (Pisces Horoscope): 
ವಿವಿಧ ಮೂಲಗಳಿಂದ ಆದಾಯವನ್ನು ಗಲ್ಲಿಸುವಿರಿ. ನಿಮ್ಮ ನಿರ್ವಹಣೆ ಕಾರ್ಯಗಳು ಸುಗಮವಾಗಿರಲಿವೆ. ಇಂದು ನಿಮ್ಮ ಪ್ರೀತಿಪಾತ್ರರ ಮಾತುಗಳನ್ನು ನಿರ್ಲಕ್ಷಿಸಬೇಡಿ. ಕುಟುಂಬದ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡಿ. 


ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.