Guruvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿಯ ಈ ದಿನ ಗುರುವಾರ, ಸ್ವಾತಿ ನಕ್ಷತ್ರ, ಸುಕರ್ಮ ಯೋಗ, ಬವ ಕರಣ. ದ್ವಾದಶ ರಾಶಿಗಳ ಇಂದಿನ ಫಲಾಫಲ ಏನು ತಿಳಿಯಿರಿ. 


COMMERCIAL BREAK
SCROLL TO CONTINUE READING

ಮೇಷ ರಾಶಿಯವರ ಭವಿಷ್ಯ (Aries Horoscope):  
ಹೊಸ ಕೆಲಸ ಆರಂಭಿಸಲು ಇಂದು ಉತ್ತಮ ದಿನ. ನಿಮ್ಮ ಮನೆಗೆ ಅತಿಥಿಗಳ ಆಗಮನವು ಕುಟುಂಬದಲ್ಲಿ ಸಂತಸದ ವಾತಾವರಣವನ್ನು ತರಲಿದೆ. ಯಾವುದೇ ಕೆಲಸಕ್ಕೆ ಕೈ ಹಾಕಬೇಕಾದರೆ ಬಹಳ ಚಿಂತನಶೀಲರಾಗಿ ಮಾಡುವುದು ಒಳ್ಳೆಯದು. 


ವೃಷಭ ರಾಶಿಯವರ ಭವಿಷ್ಯ (Taurus Horoscope):  
ರಾಜಕೀಯ ಬದುಕಿನಲ್ಲಿರುವವರಿಗೆ ಇಂದು ಉತ್ತಮ ದಿನ. ನಿಮ್ಮ ಬಾಕಿ ಉಳಿದಿರುವ ಕೆಲಸಗಳು ಶೀಘ್ರದಲ್ಲೇ ಪೂರ್ಣಗೊಳ್ಳುವುವು. ಕುಟುಂಬ ಸದಸ್ಯರೊಂದಿಗೆ ಒರಟಾಗಿ ಮಾತನಾಡುವುದನ್ನು ತಪ್ಪಿಸಿ. ಇಲ್ಲವೇ, ಸಮಸ್ಯೆಗಳು ಹೆಚ್ಚಾಗಬಹುದು. 


ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಇಂದು ಪ್ರಮುಖ ವಿಚಾರಗಳ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾಗಬಹುದು. ಸ್ನೇಹಿತರಂತೆ ವೇಷ ಧರಿಸಿ ಬೆನ್ನ ಹಿಂದೆ ಚೂರಿ ಹಾಕುವವರ ಬಗ್ಗೆ ಜಾಗರೂಕರಾಗಿರಿ. ಕೆಲಸದಲ್ಲಿ ಬೇರೆಯವರ ಮೇಲೆ ಅವಲಂಬಿತರಾಗದೇ ನಿಮ್ಮ ಕೆಲಸಗಳನ್ನು ನೀವೇ ನಿರ್ವಹಿಸುವತ್ತ ಗಮನಹರಿಸಿ. 


ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ನಿಮಗಿಂದು ಶಕ್ತಿಯುತವಾದ ದಿನ. ಕುಟುಂಬ ಸದಸ್ಯರು ನಿಮ್ಮ ಮನಸ್ಸು ಕದಡುವಂತ ಮಾತನಾಡಬಹುದು. ಯಾವುದಕ್ಕೂ ಜಗ್ಗದೇ ಬಂಡೆಯಂತೆ ನಿಲ್ಲುವ ದಿನ. ಕೆಲಸ ಸ್ಥಳದಲ್ಲೂ ಕೂಡ ನಿಮ್ಮ ಸಾಮರ್ಥ್ಯವನ್ನು ಬಾಸ್ ಗುರುತಿಸುವರು. 


ಇದನ್ನೂ ಓದಿ- 12 ವರ್ಷಗಳ ಬಳಿಕ ಈ ರಾಶಿಯವರಿಗೆ ಗುರು ಬಲ, ಹೊಸ ವರ್ಷದಲ್ಲಿ ಜಾಕ್ ಪಾಟ್, ಸಕಲೈಶ್ವರ್ಯ ಪ್ರಾಪ್ತಿ..!


ಸಿಂಹ ರಾಶಿಯವರ ಭವಿಷ್ಯ (Leo Horoscope):  
ಇಂದಿನ ದಿನವು ನಿಮಗೆ ಸಂತೋಷವನ್ನು ನೀಡಲಿದೆ. ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಶುಭ. ನಿಮ್ಮ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದರೆ ಇಂದು ಉತ್ತಮ ಆರೋಗ್ಯವನ್ನು ಅನುಭವಿಸುವರು. ಸಾಲದಿಂದ ಪರಿಹಾರ ಪಡೆಯುವಿರಿ. 


ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಈ ರಾಶಿಯ ವ್ಯಾಪಾರಸ್ಥರಿಗೆ ಇಂದು ಉತ್ತಮ ದಿನ. ಮನೆಗೆ ಐಷಾರಾಮಿ ವಸ್ತುಗಳನ್ನು ತರಲು ಯೋಚಿಸಬಹುದು. ಆದಾಗ್ಯೂ, ಅಧಿಕ ಖರ್ಚು ನಿಮ್ಮ ಉದ್ವೇಗಕ್ಕೆ ಕಾರಣವಾಗಬಹುದು. ಬಹಳ ಸಮಯದ ನಂತರ ನಿಮ್ಮ ಹಳೆಯ ಸ್ನೇಹಿತರನ್ನು ಭೇಟಿಯಾಗುವಿರಿ. 


ತುಲಾ ರಾಶಿಯವರ ಭವಿಷ್ಯ (Libra Horoscope): 
ಇಂದು ನಿಮಗೆ ಪ್ರಕ್ಷುಬ್ಧತೆಯ ದಿನ. ಆರೋಗ್ಯದಲ್ಲಿ ಸಮಸ್ಯೆಗಳು ಹೆಚ್ಚಾಗಬಹುದು. ಇದನ್ನು ನಿರ್ಲಕ್ಷಿಸದಿದ್ದರೆ ಒಳಿತು. ಹೊರಗಿನ ಆಹಾರ ಸೇವನೆಯು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೆಚ್ಚಿಸಬಹುದು. ನಿಮ್ಮ ಕೆಲಸಗಳಲ್ಲಿ ಕುಟುಂಬಸ್ಥರ ಸಹಾಯ ದೊರೆಯಲಿದೆ. 


ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಕೆಲಸದಲ್ಲಿ ಕೆಲವು ನಿರಾಶಾದಾಯಕ ಪ್ರತಿಕ್ರಿಯೆಗಳು ಕೇಳಿ ಬರಬಹುದು. ಖರ್ಚುಗಳು ಅಧಿಕವಾಗಲಿದ್ದು ಹೆಚ್ಚುವರಿ ಆದಾಯ ಗಳಿಸುವುದು ಹೇಗೆ ಎಂಬುದೇ ನಿಮ್ಮ ಚಿಂತೆಗೆ ಕಾರಣವಾಗಲಿದೆ. ಬೇರೆಯವರ ವಿಚಾರದಲ್ಲಿ ಅನಗತ್ಯವಾಗಿ ಮಾತನಾಡುವುದನ್ನು ತಪ್ಪಿಸಿ. 


ಇದನ್ನೂ ಓದಿ- ಹೊಸ ವರ್ಷದ ಮೊದಲ ದಿನ ತುಳಸಿ ಗಿಡಕ್ಕೆ ಇದನ್ನು ಅರ್ಪಿಸಿದರೆ ಸಾಕ್ಷಾತ್ ಲಕ್ಷ್ಮೀಯೇ ಮನೆ ಪ್ರವೇಶಿಸುತ್ತಾಳೆ..! 


ಧನು ರಾಶಿಯವರ ಭವಿಷ್ಯ (Sagittarius Horoscope):  
ಯೋಜಿತ ರೀತಿಯಲ್ಲಿ ಕೆಲಸ ಮಾಡುವುದು ಲಾಭದಾಯಕವಾಗಿದೆ. ವಾಹನ ಚಾಲನೆ ಮಾಡುವಾಗ ಎಚ್ಚರಿಕೆ. ನಿಮ್ಮ ವೈಯಕ್ತಿಕ ವಿಚಾರಗಳಲ್ಲಿ ಬೇರೆಯವರು ಮೂಗು ತೂರಿಸದಂತೆ ನೋಡಿಕೊಳ್ಳಿ. ಸಂಬಂಧಗಳಲ್ಲಿ ಮಧುರತೆ ಕಾಪಾಡಿಕೊಳ್ಳಲು ನಿಮ್ಮ ಮಾತಿನ ಬಗ್ಗೆ ಎಚ್ಚರಿಕೆ ಅಗತ್ಯವಾಗಿದೆ. 


ಮಕರ ರಾಶಿಯವರ ಭವಿಷ್ಯ (Capricorn Horoscope):  
ಇಂದು ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ಅತ್ತೆ ಮನೆ ಕಡೆಯವರೊಂದಿಗೆ ಸಮಾರಂಭದಲ್ಲಿ ಭೇಟಿ ಸಾಧ್ಯತೆ. ವ್ಯವ್ಹಾರದಲ್ಲಿ ದೀರ್ಘಕಾಲದಿಂದ ಬೇರೆಡೆ ಸಿಲುಕಿರುವ ಹಣ ಕೈ ಸೇರಲಿದೆ. ಕುಟುಂಬದಲ್ಲಿ ವಾತಾವರಣವು ಆಹ್ಲಾದಕರವಾಗಿರುತ್ತದೆ. 


ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಇಂದು ನೀವು ಮಾಡುವ ಕೆಲಸ ಕಾರ್ಯಗಳಲ್ಲಿ ಭಾರೀ ಯಶಸ್ಸನ್ನು ಗಳಿಸುವಿರಿ. ವ್ಯಾಪಾರದಲ್ಲಿ ನಿರೀಕ್ಷೆಗೂ ಮೀರಿದ ಲಾಭ ನಿಮ್ಮ ಅದೃಷ್ಟವೇ ಖುಲಾಯಿಸಲಿದೆ. ಕೌಟುಂಬಿಕ ಸಮಸ್ಯೆಗಳಿಂದ ಸ್ವಲ್ಪ ಪರಿಹಾರವನ್ನು ಕಾಣುವಿರಿ. 


ಮೀನ ರಾಶಿಯವರ ಭವಿಷ್ಯ (Pisces Horoscope): 
ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಇಂದು ಉತ್ತಮ ದಿನ. ನೀವು ಕೆಲವು ದೊಡ್ಡ ಜವಾಬ್ದಾರಿಗಳನ್ನು ಪಡೆಯಬಹುದು. ಕೆಲವು ವಿಶೇಷ ವ್ಯಕ್ತಿಯನ್ನು ಭೇಟಿಯಾಗುವ ಸಾಧ್ಯತೆ ಇದ್ದು, ಆಸ್ತಿ ಖರೀದಿ ಬಗ್ಗೆ ಮಾತುಕತೆ ನಡೆಯಬಹುದು. 


ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.