Guru Gochar 2023: ತಿಂಗಳ ಬಳಿಕ ರೂಪುಗೊಳ್ಳಲಿದೆ ವಿನಾಶಕಾರಿ ಗುರು-ಚಾಂಡಾಲ ಯೋಗ- ಈ ರಾಶಿಯವರಿಗೆ ಸಂಕಷ್ಟ
Guru-Chandal Yoga: ವೈದಿಕ ಜ್ಯೋತಿಷ್ಯದ ಪ್ರಕಾರ, ಗ್ರಹಗಳ ಸಂಯೋಜನೆಯಿಂದ ಶುಭಕರ ಯೋಗಗಳು ರೂಪುಗೊಳ್ಳುವಂತೆ, ಅಶುಭಕರ ಅಮಂಗಳಕರವಾದ ಯೋಗಗಳು ಕೂಡ ರೂಪುಗೊಳ್ಳುತ್ತವೆ. ಇದೀಗ ಮುಂದಿನ ತಿಂಗಳು ಗುರು ತನ್ನ ರಾಶಿಚಕ್ರವನ್ನು ಬದಲಾಯಿಸಲಿದ್ದು ಇದರಿಂದ ವಿನಾಶಕಾರಿ ಗುರು-ಚಾಂಡಾಲ ಯೋಗವು ನಿರ್ಮಾಣವಾಗಲಿದೆ. ಇದರಿಂದ ಕೆಲವು ರಾಶಿಯವರಿಗೆ ಕಷ್ಟದ ದಿನಗಳು ಆರಂಭವಾಗಲಿವೆ ಎಂದು ಹೇಳಲಾಗುತ್ತಿದೆ.
Guru-Rahu Yuti, Guru-Chandal Yoga Effect: ಗ್ರಹಗಳ ಗುರು ಎಂದು ಬಣ್ಣಿಸಲ್ಪಡುವ ಬೃಹಸ್ಪತಿಯು ಮುಂದಿನ ತಿಂಗಳು ಎಂದರೆ ಏಪ್ರಿಲ್ 22ರಂದು ಮೀನ ರಾಶಿಯನ್ನು ಬಿಟ್ಟು ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈಗಾಗಲೇ ನೆರಳು ಗ್ರಹ, ಪಾಪಗ್ರಹವೆಂದು ಕರೆಯಲ್ಪಡುವ ರಾಹು ಇದೇ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಸುಮಾರು ಆರು ತಿಂಗಳುಗಳ ಕಾಲ ಈ ಎರಡೂ ಗ್ರಹಗಳು ಮೇಷ ರಾಶಿಯಲ್ಲಿಯೇ ಸಂಚರಿಸಲಿವೆ. ವೈದಿಕ ಜ್ಯೋತಿಷ್ಯದ ಪ್ರಕಾರ, ಗ್ರಹಗಳ ಸಂಯೋಜನೆಯಿಂದ ಶುಭಕರ ಯೋಗಗಳು ರೂಪುಗೊಳ್ಳುವಂತೆ, ಅಶುಭಕರ ಅಮಂಗಳಕರವಾದ ಯೋಗಗಳು ಕೂಡ ರೂಪುಗೊಳ್ಳುತ್ತವೆ. ಮೇಷ ರಾಶಿಯಲ್ಲಿ ಗುರು- ರಾಹು ಯುತಿಯಿಂದಾಗಿ ವಿನಾಶಕಾರಿ ಗುರು-ಚಾಂಡಾಲ ಯೋಗ ನಿರ್ಮಾಣವಾಗುತ್ತಿದೆ.
ವೈದಿಕ ಜ್ಯೋತಿಷ್ಯದ ಪ್ರಕಾರ, ಗುರು-ರಾಹು ಸಂಯೋಜನೆಯಿಂದ ರೂಪುಗೊಳ್ಳಲಿರುವ ಈ ಗುರು-ಚಾಂಡಾಲ ಯೋಗವನ್ನು ಅಮಂಗಳಕರ, ಅತ್ಯಂತ ವಿನಾಶಕಾರಿ ಯೋಗ ಎಂದು ಹೇಳಲಾಗುತ್ತದೆ. ಇದರ ಪ್ರಭಾವ ಎಲ್ಲಾ ರಾಶಿಯವರ ಮೇಲೆ ಕಂಡು ಬರುತ್ತದೆ ಆದರೂ, ಮುಂದಿನ ಆರು ತಿಂಗಳವರೆಗೆ ಕೆಲವು ರಾಶಿಯವರ ಜೀವನದಲ್ಲಿ ಸಂಕಷ್ಟಗಳ ಸರಮಾಲೆಯೇ ಎದುರಾಗಲಿದೆ ಎಂದು ಹೇಳಲಾಗುತ್ತಿದೆ. ಹಾಗಿದ್ದರೆ, ಈ ಸಮಯದಲ್ಲಿ ಯಾವ ರಾಶಿಯವರು ಜಾಗರೂಕರಾಗಿರಬೇಕು ಎಂದು ತಿಳಿಯೋಣ...
ಏಪ್ರಿಲ್ 22ರ ಬಳಿಕ ಈ ರಾಶಿಯವರ ಸಂಕಷ್ಟ ಹೆಚ್ಚಿಸಲಿದ್ದಾರೆ ಗುರು-ರಾಹು:
ಮೇಷ ರಾಶಿ:
ಸ್ವ ರಾಶಿಯಲ್ಲಿಯೇ ಗುರು-ರಾಹು ಯುತಿಯಿಂದ ನಿರ್ಮಾಣವಾಗುತ್ತಿರುವ ಗುರು-ಚಾಂಡಾಲ ಯೋಗವು ಏಪ್ರಿಲ್ 22 ರಿಂದ ಅಕ್ಟೋಬರ್ 30 ರವರೆಗೆ ಅಂದರೆ 6 ತಿಂಗಳುಗಳ ಕಾಲ ನಿಮ್ಮ ಕಷ್ಟಗಳನ್ನು ಹೆಚ್ಚಿಸಲಿದೆ. ಈ ಸಂಯದಲ್ಲಿ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಜೊತೆಗೆ ಹಣಕಾಸಿಗೆ ಸಂಬಂಧಿಸಿದ ಬಿಕ್ಕಟ್ಟುಗಳು ಕೂಡ ಎದುರಾಗಲಿವೆ.
ಇದನ್ನೂ ಓದಿ- Budha-Guru Yuti Effect: ಇಂದಿನಿಂದ ಈ ರಾಶಿಯವರಿಗೆ ಹಣದ ಸುರಿಮಳೆ ಸುರಿಸಲಿದ್ದಾರೆ ಬುಧ-ಗುರು
ಮಿಥುನ ರಾಶಿ:
ಗುರು-ಚಾಂಡಾಲ ಯೋಗದಿಂದ ಮಿಥುನ ರಾಶಿಯವರು ಸಹ ನಾನಾ ರೀತಿಯ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ವೃತ್ತಿ ರಂಗದಲ್ಲಿ ಹೊಸ ಸವಾಲುಗಳು ಎದುರಾಗಲಿವೆ, ಇದಲ್ಲದೆ, ಹಣಕಾಸಿಗೆ ಸಂಬಂಧಿಸಿದ ವಿಷಯಗಳಲ್ಲೂ ಸಹ ಅಶುಭ ಸುದ್ದಿಗಳನ್ನು ಕೇಳಬೇಕಾಗಬಹುದು.
ಕರ್ಕಾಟಕ ರಾಶಿ:
ಗುರು-ರಾಹು ಯುತಿಯಿಂದ ನಿರ್ಮಾಣವಾಗಲಿರುವ ಗುರು-ಚಾಂಡಾಲ ಯೋಗದ ಪರಿಣಾಮವಾಗಿ ಕರ್ಕಾಟಕ ರಾಶಿಯವರು ತಮ್ಮ ವೃತ್ತಿ ಬದುಕಿನಲ್ಲಿ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇದಲ್ಲದೆ, ನಿಮ್ಮ ಮಾತಿನ ಮೇಲೆ ಸಂಯಮ ಕಾಯ್ದುಕೊಳ್ಳದಿದ್ದರೆ ನಿಮ್ಮ ಮಾತೇ ನಿಮಗೆ ಮುಳುವಾಗುವ ಸಾಧ್ಯತೆಯೂ ಇದೆ.
ಇದನ್ನೂ ಓದಿ- Weekly Numerology: ಈ ವಾರದ ನಿಮ್ಮ ಸಂಖ್ಯಾಶಾಸ್ತ್ರ ಏನು ಹೇಳುತ್ತೆ?
ಧನು ರಾಶಿ:
ಗುರು-ಚಾಂಡಾಲ ಯೋಗ ಸಂದರ್ಭದಲ್ಲಿ ಧನು ರಾಶಿಯವರು ತುಂಬಾ ಜಾಗರೂಕರಾಗಿರಬೇಕು. ಇಲ್ಲದಿದ್ದರೆ, ತೊಂದರೆಗೊಳಗಾಗಬಹುದು. ವೃತ್ತಿ ಜೀವನದಲ್ಲಿ ಸವಾಲುಗಳ ಜೊತೆಗೆ ನಿಮ್ಮ ಆದಾಯಕ್ಕಿಂತ ಖರ್ಚು ಹೆಚ್ಚಾಗುವುದರಿಂದ ನೀವು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.