ಹೊಸ ವರ್ಷದಲ್ಲಿಯೇ ರಾಜಯೋಗ ! ಮೂರು ರಾಶಿಯವರಿಗೆ ಒಲಿದು ಬರುವುದು ರಾಜವೈಭೋಗ
Lucky Zodiac Signs in 2024 :ಕೇಂದ್ರ ತ್ರಿಕೋನ ರಾಜಯೋಗದಿಂದ 3 ರಾಶಿಯವರಿಗೆ ಅಪಾರ ಸಂಪತ್ತು ಮತ್ತು ಸಂತೋಷ ಬಂದೊದಗಲಿದೆ. 2024 ರ ವರ್ಷವು ಈ ರಾಶಿಯವರಿಗೆ ಉತ್ತಮವಾಗಿರುತ್ತದೆ. 2024 ರ ಅದೃಷ್ಟದ ರಾಶಿಗಳು ಯಾವುವು ನೋಡೋಣ.
Lucky Zodiac Signs in 2024 : ವೈದಿಕ ಜ್ಯೋತಿಷ್ಯದಲ್ಲಿ, ಗುರು ಗ್ರಹವನ್ನು ದೇವಗುರು ಎಂದು ಕರೆಯಲಾಗುತ್ತದೆ. ಗುರು ಗ್ರಹ ಸಂತೋಷ, ಸಮೃದ್ಧಿ, ಅದೃಷ್ಟ, ಗೌರವ, ಕೀರ್ತಿ ಮತ್ತು ಜ್ಞಾನವನ್ನು ಕರುಣಿಸುವಾತ. ಗುರು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸ್ಥಾನವನ್ನು ಬದಲಾಯಿಸಲು ಒಂದು ವರ್ಷವನ್ನು ತೆಗೆದುಕೊಳ್ಳುತ್ತಾನೆ. ಈ ಸಮಯದಲ್ಲಿ ಗುರುವು ಮೇಷ ರಾಶಿಯಲ್ಲಿದ್ದು ಹಿಮ್ಮುಖವಾಗಿ ಚಲಿಸುತ್ತಿದ್ದಾನೆ. ಗುರು ಗ್ರಹವು ಡಿಸೆಂಬರ್ 31 2023 ರಂದು ನೇರ ನಡೆಗೆ ಮರಳಲಿದ್ದಾನೆ. ಮೇಷ ರಾಶಿಯಲ್ಲಿ ನೇರವಾಗಿ ಚಲಿಸುವ ಮೂಲಕ ಗುರು ಗ್ರಹವು ಕೇಂದ್ರ ತ್ರಿಕೋನ ರಾಜಯೋಗವನ್ನು ಸೃಷ್ಟಿಸುತ್ತದೆ. ಇದರ ಪರಿಣಾಮವು ಎಲ್ಲಾ ರಾಶಿಯವರ ಜೀವನದಲ ಮೇಲೇ ಆಗಲಿದೆ. ಆದರೆ, 3 ರಾಶಿಯವರಿಗೆ ಮಾತ್ರ ಕೇಂದ್ರ ತ್ರಿಕೋನ ರಾಜಯೋಗದಿಂದ ಅಪಾರ ಸಂಪತ್ತು ಮತ್ತು ಸಂತೋಷ ಬಂದೊದಗಲಿದೆ. 2024 ರ ವರ್ಷವು ಈ ರಾಶಿಯವರಿಗೆ ಉತ್ತಮವಾಗಿರುತ್ತದೆ. 2024 ರ ಅದೃಷ್ಟದ ರಾಶಿಗಳು ಯಾವುವು ನೋಡೋಣ.
2024 ರ ಅದೃಷ್ಟದ ರಾಶಿಗಳು :
ಮೇಷ ರಾಶಿ : ಮೇಷ ರಾಶಿಯವರಿಗೆ ಕೇಂದ್ರ ತ್ರಿಕೋನ ರಾಜಯೋಗವು ಬಹಳ ಶುಭಕರವಾಗಿರಲಿದೆ. ಈ ರಾಶಿಯವರ ಆತ್ಮವಿಶ್ವಾಸ ಹೆಚ್ಚುತ್ತಲೇ ಹೋಗುವುದು. ವೃತ್ತಿ ಮತ್ತು ವ್ಯಾಪಾರದಲ್ಲಿ ಬರುವ ಅಡೆತಡೆಗಳು ನಿವಾರಣೆಯಾಗುತ್ತವೆ. ಅದೃಷ್ಟ ಕೈ ಹಿಡಿಯುತ್ತದೆ. ವಿವಾಹಿತರ ಜೀವನದಲ್ಲಿ ಸಂತೋಷ ಇರುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಹೊಸ ಕಾರು, ಮನೆ ಅಥವಾ ಆಸ್ತಿಯನ್ನು ಖರೀದಿಸುವ ಅವಕಾಶವಿದೆ.
ಇದನ್ನೂ ಓದಿ : ಏಕಾದಶಿ ಉಪವಾಸ ವೃತ ಆಚರಿಸುವ ಮೊದಲು ಅದರ ಎಲ್ಲಾ ನಿಯಮಗಳನ್ನು ತಿಳಿದುಕೊಳ್ಳಿ
ಸಿಂಹ ರಾಶಿ : ಸಿಂಹ ರಾಶಿಯವರಿಗೆ ಕೇಂದ್ರ ತ್ರಿಕೋನ ರಾಜ್ಯಯೋಗವು ತುಂಬಾ ಪ್ರಯೋಜನಕಾರಿಯಾಗಲಿದೆ. 2024 ವರ್ಷವು ಅನೇಕ ಸಂತೋಷ ಮತ್ತು ಯಶಸ್ಸನ್ನು ನೀಡುತ್ತದೆ. ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ. ಸಂಪತ್ತಿನ ವಿಷಯಗಳಲ್ಲಿ ಅದೃಷ್ಟವು ನಿಮ್ಮ ಪರವಾಗಿ ಇರಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಲಿದೆ.
ಧನು ರಾಶಿ : ಗುರುಗ್ರಹದ ನೇರ ಸಂಚಾರದಿಂದ ರೂಪುಗೊಂಡ ಕೇಂದ್ರ ತ್ರಿಕೋನ ರಾಜಯೋಗವು ಧನು ರಾಶಿಯವರ ಭಾಗಿ ಬೆಳಗಲಿದೆ. 2024ನೇ ವರ್ಷ ನಿಮ್ಮ ಪಾಲಿಗೆ ಸಂತೋಷವನ್ನು ತರಲಿದೆ. ಈ ರಾಶಿಯವರು ತಮ್ಮ ವೃತ್ತಿಜೀವನದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಉದ್ಯೋಗದಲ್ಲಿ ಬಡ್ತಿ ಪಡೆಯಬಹುದು. ವ್ಯಾಪಾರ ವಿಸ್ತರಣೆಯಾಗಲಿದೆ. ಆದಾಯ ಹೆಚ್ಚಲಿದೆ. ಪ್ರೇಮ ಜೀವನದಲ್ಲಿ ಯಶಸ್ಸು ಸಿಗಲಿದೆ. ಸಂತಾನ ಹೊಂದುವ ಆಸೆ ಈಡೇರಬಹುದು.
ಇದನ್ನೂ ಓದಿ : ದೇವ ಉತ್ಥಾನ ಏಕಾದಶಿಯಂದು ಈ ಪರಿಹಾರ ಕೈಗೊಳ್ಳುವುದರಿಂದ ಶೀಘ್ರವೇ ಕೂಡಿಬರಲಿದೆ ಕಂಕಣ ಭಾಗ್ಯ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.