Dharmaśāstra: ಧರ್ಮಶಾಸ್ತ್ರದ ಪ್ರಕಾರ ಎಲ್ಲಿ ಊಟ ಮಾಡಬಾರದು..?
Dharmaśāstra: ಧರ್ಮಶಾಸ್ತ್ರದ ಪ್ರಕಾರ, ನಾವು ಪಾಪಿಷ್ಠರಾದವರ ಮನೆಯಲ್ಲಿ ಊಟ ಮಾಡಬಾರದು. ದುಡ್ಡಿನಲ್ಲಿ ಎಷ್ಟೇ ಶ್ರೀಮಂತನಾಗಿದ್ದರೂ ಆತ ಪಾಪ ಕೃತ್ಯ ಮಾಡುತ್ತಿದ್ದರೆ ಅಂತಹವರ ಮನೆಯಲ್ಲಿ ಊಟ ಮಾಡಬಾರದು. ಒಂದು ವೇಳೆ ನೀವು ಊಟ ಮಾಡಿದ್ದೇ ಆದಲ್ಲಿ ಅವರ ಪಾಪ ಕೃತ್ಯದಲ್ಲಿ ನೀವೂ ಒಂಚೂರು ಪಾಲು ಪಡೆದಂತಾಗುತ್ತದೆ.
Dharmaśāstra: ಹಿರಿಯರು ಅನೇಕ ಶಾಸ್ತ್ರಗಳನ್ನು ಮಾಡಿದ್ದಾರೆ. ಇವುಗಳಿಗೆ ವೈಜ್ಞಾನಿಕ ಅಥವಾ ತಾರ್ಕಿಕ ಅರ್ಥವಿರುತ್ತದೆ. ಧರ್ಮಶಾಸ್ತ್ರದಲ್ಲಿ ಇಂತಹ ಅನೇಕ ನೀತಿ-ನಿಯಮಗಳ ಬಗ್ಗೆ ಹೇಳಲಾಗಿದೆ. ಧರ್ಮಶಾಸ್ತ್ರವನ್ನು ಅಧ್ಯಯನ ಮಾಡಿದ್ರೆ ಅನೇಕ ವಿಷಯಗಳನ್ನು ನೀವು ತಿಳಿದುಕೊಳ್ಳಬಹುದು. ಈ ಧರ್ಮಶಾಸ್ತ್ರ ನಾವು ಏನು ಮಾಡಬೇಕು? ಮತ್ತು ಏನು ಮಾಡಬಾರದು? ಅನ್ನೋದರ ಬಗ್ಗೆ ಉಲ್ಲೇಖಿಸಲಾಗಿದೆ. ಕೆಲವೊಂದು ಮನೆಗಳಲ್ಲಿ ಅಥವಾ ಸ್ಥಳದಲ್ಲಿ ನಾವು ಊಟ ಮಾಡಬಾರದು ಎಂಬ ನಿಯಮವಿದೆ. ಇದರ ಮಾಹಿತಿ ಇಲ್ಲಿದೆ ನೋಡಿ...
ಅನ್ನ ಎಂದರೆ ಹಿಂದೂ ಧರ್ಮಶಾಸ್ತ್ರದ ಪ್ರಕಾರ ದೇವರ ಸಮಾನ. ಅದಕ್ಕೆ ಅಪಮಾನ ಮಾಡುವುದು ಅಷ್ಟೇ ಪಾಪದ ಕೃತ್ಯ. ಅನ್ನದಲ್ಲಿ ನಾವು ಅನ್ನಪೂರ್ಣೆ ದೇವಿಯನ್ನು ಕಾಣುತ್ತೇವೆ. ಹೀಗಿರುವಾಗ ನಾವು ಉಚಿತವಲ್ಲದ ಸ್ಥಳಗಳಲ್ಲಿ ಊಟ ಮಾಡುವುದೂ ಅನ್ನಕ್ಕೆ ಮಾಡಿದ ಅವಮಾನದಂತೆ.
ಧರ್ಮಶಾಸ್ತ್ರದ ಪ್ರಕಾರ, ನಾವು ಪಾಪಿಷ್ಠರಾದವರ ಮನೆಯಲ್ಲಿ ಊಟ ಮಾಡಬಾರದು. ದುಡ್ಡಿನಲ್ಲಿ ಎಷ್ಟೇ ಶ್ರೀಮಂತನಾಗಿದ್ದರೂ ಆತ ಪಾಪ ಕೃತ್ಯ ಮಾಡುತ್ತಿದ್ದರೆ ಅಂತಹವರ ಮನೆಯಲ್ಲಿ ಊಟ ಮಾಡಬಾರದು. ಒಂದು ವೇಳೆ ನೀವು ಊಟ ಮಾಡಿದ್ದೇ ಆದಲ್ಲಿ ಅವರ ಪಾಪ ಕೃತ್ಯದಲ್ಲಿ ನೀವೂ ಒಂಚೂರು ಪಾಲು ಪಡೆದಂತಾಗುತ್ತದೆ.
ಹಾಗಿದ್ರೆ ಎಂತಹವರ ಮನೆಯಲ್ಲಿ ಊಟ ಮಾಡಬೇಕು? ಧರ್ಮಶಾಸ್ತ್ರದ ಪ್ರಕಾರ, ಯಾರು ಮನಸ್ಸಿನಿಂದ ಶುದ್ಧರೋ, ಯಾರ ಮನೆಯಲ್ಲಿ ಸ್ವಭಾವತಃ ಸಾಧುಗಳಿದ್ದಾರೋ, ಯಾರು ಶರೀರ ಶುದ್ಧಿ ಹೊಂದಿರುತ್ತಾರೋ ಅಂತಹವರ ಮನೆಯಲ್ಲಿ ಊಟ ಮಾಡಬೇಕು. ಇಂತಹವರ ಮನೆಯಲ್ಲಿ ಊಟ ಮಾಡಿದರೆ ನಮಗೂ ಯಾವುದೇ ದೋಷ ತಟ್ಟುವುದಿಲ್ಲವೆಂದು ಹೇಳಲಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.