ನವದೆಹಲಿ: ಸಂಪತ್ತು ಮತ್ತು ಸಮೃದ್ಧಿಯನ್ನು ಪಡೆಯಲು ಜನರು ಲಕ್ಷ್ಮಿದೇವಿಯನ್ನು ಮೆಚ್ಚಿಸಲು ಕಷ್ಟಪಡುತ್ತಾರೆ. ಧನ್ತೇರಸ್ ದಿನದಂದು ನಾವು ಸಂತೋಷ ಮತ್ತು ಸಮೃದ್ಧಿ ನೀಡುವ ವಸ್ತುಗಳನ್ನು ಖರೀದಿಸುತ್ತೇವೆ. ದೀಪಾವಳಿಗೆ ನಾವು ಮನೆಯನ್ನು ಸ್ವಚ್ಛಗೊಳಿಸುತ್ತೇವೆ ಮತ್ತು ಅಲಂಕರಿಸುತ್ತೇವೆ. ದೀಪ ಮತ್ತು ರಂಗೋಲಿಯಿಂದ ಮನೆಯನ್ನು ಅಲಂಕರಿಸುತ್ತೇವೆ. ಹೀಗೆ ಮಾಡುವುದರಿಂದ ತಾಯಿ ಲಕ್ಷ್ಮಿದೇವಿ ಮನೆಗೆ ಪ್ರವೇಶಿಸಿ ಶಾಶ್ವತವಾಗಿ ನೆಲೆಸುತ್ತಾಳೆಂಬ ನಂಬಿಕೆಯಿದೆ.


COMMERCIAL BREAK
SCROLL TO CONTINUE READING

ಲಕ್ಷ್ಮಿದೇವಿಯನ್ನು ಭಕ್ತಿಯಿಂದ ಪೂಜಿಸುತ್ತಾರೆ, ಆರತಿ ಮಾಡುತ್ತಾರೆ. ಇದರಿಂದ ಲಕ್ಷ್ಮಿದೇವಿಯನ್ನು ಮೆಚ್ಚಿಸಬಹುದು ಮತ್ತು ತಾಯಿಯ ಆಶೀರ್ವಾದ ಪಡೆಯಬಹುದು. ಇಂದು ಜ್ಯೋತಿಷ್ಯದಲ್ಲಿ ಉಲ್ಲೇಖಿಸಲಾದ ಅಂತಹ ಕೆಲವು ಪರಿಹಾರಗಳ ಬಗ್ಗೆ ನಾವು ಇಲ್ಲಿ ಮಾಹಿತಿ ನೀಡುತ್ತಿದ್ದೇವೆ. ದೀಪಾವಳಿಯ ದಿನದಂದು ಈ ಸಲಹೆ ಪಾಲಿಸುವುದರಿಂದ ನಿಮಗೆ ಬಹಳಷ್ಟು ಲಾಭ, ಸಮೃದ್ಧಿ ಮತ್ತು ಯಶಸ್ಸು ಸಿಗುತ್ತದೆ.


ಇದನ್ನೂ ಓದಿ: Shani Dev Margi: ಶನಿ ಕೃಪೆಯಿಂದ ಚಿನ್ನದಂತೆ ಹೊಳೆಯಲಿದೆ ಈ ರಾಶಿಯವರ ಅದೃಷ್ಟ


ದೀಪಾವಳಿಯಲ್ಲಿ ಸಂಪತ್ತು ಗಳಿಸುವ ಮಾರ್ಗಗಳು ಇಲ್ಲಿವೆ


ಶೀಘ್ರವೇ ಶ್ರೀಮಂತರಾಗಲು ಪರಿಹಾರ: ನೀವು ಶೀಘ್ರದಲ್ಲೇ ಶ್ರೀಮಂತರಾಗಲು ಬಯಸಿದರೆ ದೀಪಾವಳಿಯ ಸಂಜೆ ಆಲದ ಮರಕ್ಕೆ ಕೂದಲಿನಿಂದ ಗಂಟು ಹಾಕಿ. ಇದರಿಂದ ಇದ್ದಕ್ಕಿದ್ದಂತೆ ಹಣ ಬರುತ್ತದೆ. ನಿಮಗೆ ಹಣ ಸಿಕ್ಕಾಗ ಆ ಗಂಟು ಬಿಚ್ಚಬೇಕು.


ಆದಾಯ ಹೆಚ್ಚಿಸಲು ಪರಿಹಾರ: ನಿಮ್ಮ ಆದಾಯ ಹೆಚ್ಚಿಸಲು ಬಯಸಿದರೆ ದೀಪಾವಳಿಯ ಸಂಜೆ ತಾಳೆಮರದ ಬೇರಿನಲ್ಲಿ ಸಂಪೂರ್ಣ ಉಂಡೆ, ಮೊಸರು ಮತ್ತು ಸಿಂಧೂರವನ್ನು ಇರಿಸಿ ದೀಪ ಬೆಳಗಬೇಕು. ಇದರಿಂದ ನಿಮ್ಮೆ ಎಲ್ಲಾ ಆಸೆಗಳು ಈಡೇರುತ್ತದೆ.


ಸಮೃದ್ಧಿ ಪಡೆಯಲು ಪರಿಹಾರ: ನಿಮ್ಮ ಮನೆಯಲ್ಲಿ ಯಾವಾಗಲೂ ಸಂಪತ್ತು ಮತ್ತು ಸಮೃದ್ಧಿ ಇರಬೇಕೆಂದು ಬಯಸಿದರೆ ದೀಪಾವಳಿಯ ರಾತ್ರಿ ಗೂಬೆಯ ಚಿತ್ರವನ್ನು ಸುರಕ್ಷಿತವಾಗಿ ಇರಿಸಿ. ಇದರಿಂದ ಲಕ್ಷ್ಮಿದೇವಿಯು ಸಂತುಷ್ಟಳಾಗುತ್ತಾಳೆ, ಕೆಲಸದಲ್ಲಿ ಹೆಚ್ಚಿನ ಯಶಸ್ಸು ಮತ್ತು ಸಂಪತ್ತನ್ನು ನೀಡುತ್ತಾಳೆ.


ಇದನ್ನೂ ಓದಿ: Plant for Vastu: ಅಯಸ್ಕಾಂತದಂತೆ ಸಂಪತ್ತನ್ನು ಆಕರ್ಷಿಸುತ್ತೆ ಈ ಗಿಡ: ಕೆಲವೇ ದಿನಗಳಲ್ಲಿ ಲಕ್ಷಾಧಿಪತಿಯಾಗಲು ಈಗಲೇ ಮನೆಗೆ ತನ್ನಿ


ಗೋಮತಿ ಚಕ್ರಕ್ಕೆ ಪರಿಹಾರ: ದೀಪಾವಳಿಯಂದು ಲಕ್ಷ್ಮಿದೇವಿಯನ್ನು ಪೂಜಿಸುವಾಗ ಗೋಮತಿ ಚಕ್ರವನ್ನು ಇಟ್ಟು ಪೂಜಿಸಿ. ನಂತರ ಈ ಗೋಮತಿ ಚಕ್ರಗಳನ್ನು ಕಮಾನಿನಲ್ಲಿ ಇರಿಸಿ. ಇದರಿಂದ ನಿಮ್ಮ ಮನೆಯ ತಿಜೋರಿ ಯಾವಾಗಲೂ ಹಣದಿಂದ ತುಂಬಿರುತ್ತದೆ.


ತಾಯಿ ಲಕ್ಷ್ಮಿದೇವಿಗೆ ಆರತಿ ಮಾಡುವುದು ಹೇಗೆ? 


ಲಕ್ಷ್ಮಿಯನ್ನು ಮೆಚ್ಚಿಸಲು ದೀಪಾವಳಿಯ ರಾತ್ರಿ ದೇವಿಗೆ ಸಂಪೂರ್ಣ ಭಕ್ತಿಯಿಂದ ಆರತಿಯನ್ನು ಮಾಡಿ. ಲಕ್ಷ್ಮಿದೇವಿಯ ಪೂಜೆಯ ಸಮಯದಲ್ಲಿ ಬೆಳ್ಳಿಯ ಬಟ್ಟಲಿನಲ್ಲಿ ಕರ್ಪೂರವನ್ನು ಉರಿಸಿ ಆರತಿ ಮಾಡುವುದು ಉತ್ತಮ. ಇದರಿಂದ ಸಂಪತ್ತು ವೃದ್ಧಿಯಾಗುತ್ತದೆ ಮತ್ತು ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಸಿಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.