ಬೆಂಗಳೂರು: ಹಲವರು ತಮ್ಮ ಬಳಿ ಏನೇ ಇದ್ದರೂ ಕೂಡ ಅದರಲ್ಲಿಯೇ ಸುಖದಿಂದ ಬದುಕುತ್ತಾರೆ. ಆದರೆ, ಉಳಿದ ಕೆಲವರು ತಮ್ಮ ಪ್ರತಿಯೊಂದು ಸಂಗತಿಗಳಿಗಾಗಿ ಬೇರೆಯವರ ಮೇಲೆ ಅವಲಂಭಿಸಿರುತ್ತಾರೆ. ಇಂತಹ ಜನರು ತಮ್ಮ ಸ್ನೇಹಿತರ ಬಟ್ಟೆ, ವೈಯಕ್ತಿಕ ವಸ್ತುಗಳನ್ನು ಕೂಡ ಬಳಸುತ್ತಾರೆ. ಇದೇ ರೀತಿ ನಾವು ಕೂಡ ನಮ್ಮ ವೈಯಕ್ತಿಕ ವಸ್ತುಗಳನ್ನು ಹಲವು ಬಾರಿ ಇತರರಿಗೆ ನೀಡಿ, ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತವೆ. ಹೀಗಿರುವಾಗ ಬೇರೆಯವರಿಗೆ ಯಾವ ವಸ್ತುಗಳನ್ನು ನೀಡಬಾರದು ಅಥವಾ ಬೇರೆಯವರ ಯಾವ ವಸ್ತುಗಳನ್ನು ಬಳಸಬಾರದು ಎಂಬುದರ ಕುರಿತು ತಿಳಿದುಕೊಳ್ಳೋಣ ಬನ್ನಿ, (Spiritual News In Kannada)

COMMERCIAL BREAK
SCROLL TO CONTINUE READING

1. ಲಿಪ್ಸ್ಟಿಕ್ - ಲಿಪ್ ಸ್ಟಿಕ್ ಅನ್ನು ಯಾರಿಂದಲೂ ಕೂಡ ಎರವಲು ಪಡೆಯಬಾರದು. ಹೀಗಾಗಿ, ಹುಡುಗಿಯರು ಇತರರಿಂದ ಲಿಪ್ ಸ್ಟಿಕ್ ಅನ್ನು ಪಡೆಯದಂತೆ ವಿಶೇಷ ಕಾಳಜಿವಹಿಸಬೇಕು.

2. ಬಟ್ಟೆ- ಬೇರೆಯವರು ಬಳಕೆ ಮಾಡಿದ ಬಟ್ಟೆಗಳನ್ನು ಎಂದಿಗೂ ಕೂಡ ಬಳಸಬಾರದು. ಇದರಿಂದ ನಮ್ಮೊಳಗೇ ನಕಾರಾತ್ಮಕ ಶಕ್ತಿ ಪ್ರವೇಶಿಸುತ್ತದೆ ಹಾಗೂ ಹಲವು ರೀತಿಯ ತೊಂದರೆಗಳು ಜೀವನದಲ್ಲಿ ಎದುರಾಗುತ್ತವೆ.

3. ಪೆನ್ - ಮಹತ್ವದ ಒಪ್ಪಂದಗಳನ್ನು ಮಾಡಿಕೊಳ್ಳುವಾಗ ಹಲವು ಜನರು ತಮ್ಮದೇ ಆದ ವಿಶೇಷ ಪೆನ್ ಬಳಸುವುದನ್ನು ನೀವು ನೋಡಿರಬಹುದು ಹಾಗೂ ಅವರು ತಮ್ಮ ಪೆನ್ ಅನ್ನು ಇತರರಿಗೆ ಕೊಡುವುದಿಲ್ಲ. ವಾಸ್ತು ಶಾಸ್ತ್ರದ ಪ್ರಕಾರ, ಬೇರೆಯವರ ಪೆನ್ ಅನ್ನು ನಾವು ನಮ್ಮ ಬಳಿಗೆ ಇಟ್ಟುಕೊಳ್ಳಬಾರದು. ವೃತ್ತಿಪರತೆಯ ದೃಷ್ಟಿಯಿಂದ ಇದು ಉಚಿತವಲ್ಲ ಮತ್ತು ಇದರಿಂದ ಧನಹಾನಿ ಕೂಡ ಸಂಭವಿಸುತ್ತದೆ. 

4. ಉಂಗುರ - ಬೇರೆಯವರ ಉಂಗರನ್ನು ಪಡೆದುಕೊಂಡು ಧರಿಸುವುದು ವಾಸ್ತುಶಾಸ್ತ್ರದ ಪ್ರಕಾರ ಅಶುಭವಾಗಿದೆ. ಇದರಿಂದ ವ್ಯಕ್ತಿಯ ಆರೋಗ್ಯ, ಜೀವನ ಹಾಗೂ ಆರ್ಥಿಕ ಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

5. ಗಡಿಯಾರ - ವಾಸ್ತುಶಾಸ್ತ್ರದ ಪ್ರಕಾರ ಗಡಿಯಾರವನ್ನು ಕೂಡ ಸಕಾರಾತ್ಮಕ ಹಾಗೂ ನಕಾರಾತ್ಮಕ ದೃಷ್ಟಿಯಿಂದ ನೋಡಲಾಗುತ್ತದೆ. ಕೈಯಲ್ಲಿ ಬೇರೆ ವ್ಯಕ್ತಿಗಳ ಗಡಿಯಾರ ಧರಿಸುವುದು ತುಂಬಾ ಅಶುಭ ಎಂದು ಪರಿಗಣಿಸಲಾಗುತ್ತದೆ. ಇದರಿಂದ ವ್ಯಕ್ತಿಯ ಕೆಟ್ಟಕಾಲ ಆರಂಭವಾಗುತ್ತದೆ ಎನ್ನಲಾಗುತ್ತದೆ. 


ಇದನ್ನೂ ಓದಿ-ವರ್ಷಾರಂಭಕ್ಕೂ ಮುನ್ನ ಮಂಗಳನ ಅಂಗಳದಲ್ಲಿ ಗುರುವಿನ ನೇರನಡೆ ಆರಂಭ, ಲಕ್ಷ್ಮಿ ಕೃಪೆಯಿಂದ ಈ ಜನರ ಬ್ಯಾಂಕ್ ಬ್ಯಾಲೆನ್ಸ್ ನಲ್ಲಿ ಅಪಾರ ಹೆಚ್ಚಳ!

6. ಕರವಸ್ತ್ರ - ಬೇರೆ ವ್ಯಕ್ತಿಯ ಕರವಸ್ತ್ರವನ್ನು ತಮ್ಮ ಬಳಿ ಇಟ್ಟುಕೊಳ್ಳುವುದರಿಂದ ಆ ವ್ಯಕ್ತಿ ಜೊತೆಗಿನ ನಮ್ಮ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ಹೀಗಾಗಿ ನಾವು ಯಾವುದೇ ಕಾರಣಕ್ಕೂ ಯಾವುದೇ ವ್ಯಕ್ತಿಯ ಕರವಸ್ತ್ರವನ್ನು ನಮ್ಮ ಬಳಿ ಇಟ್ಟುಕೊಳ್ಳಬಾರದು. ಇದು ವ್ಯಾಜ್ಯಕ್ಕೆ ಕಾರಣವಾಗುತ್ತದೆ ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ.


ಇದನ್ನೂ ಓದಿ-ಕೆಲವೇ ಗಂಟೆಗಳಲ್ಲಿ ಸ್ವರಾಶಿಗೆ ಮಂಗಳನ ಪ್ರವೇಶ, ಈ ಜನರ ಜೀವನದಲ್ಲಿ ಭಾರಿ ಧನವೃಷ್ಟಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ