Makar Sankranti Astro Tips: ಸೂರ್ಯದೇವ ಧನು ರಾಶಿಯನ್ನು ಬಿಟ್ಟು ಮಕರ ರಾಶಿಯನ್ನು ಪ್ರವೇಶಿಸುವುದನ್ನು ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಈ ದಿನದಿಂದ ಸೂರ್ಯನು ಉತ್ತರದ ಕಡೆಗೆ ಚಲಿಸುವುದರಿಂದ ಇದನ್ನು ಉತ್ತರಾಯಣ ಎಂತಲೂ ಕರೆಯಲಾಗುತ್ತದೆ. ರೈತರು ಬೆಳೆದ ಬೆಳೆ ಕೈಸೇರುವ ಸಮಯ ಇದಾಗಿರುವುದರಿಂದ ರೈತರು ಇದನ್ನು ಸುಗ್ಗಿ ಹಬ್ಬವಾಗಿಯೂ ಆಚರಿಸುತ್ತಾರೆ. 


COMMERCIAL BREAK
SCROLL TO CONTINUE READING

ಮಕರ ಸಂಕ್ರಾಂತಿ ಹಬ್ಬದಲ್ಲಿ ಪುಣ್ಯ ಸ್ನಾನ, ದಾನ, ಸೂರ್ಯದೇವರ ಆರಾಧನೆಗೆ ಬಹಳ ಮಹತ್ವವಿದೆ. ಮಕರ ಸಂಕ್ರಾಂತಿಯ ದಿನ ಕೆಲವು ಕೆಲಸಗಳನ್ನು ಮಾಡುವುದರಿಂದ ಸೂರ್ಯ ಗ್ರಹದೋಷದಿಂದ ಪರಿಹಾರ ಪಡೆಯಬಹುದು. 


ಮಕರ ಸಂಕ್ರಾಂತಿಯಲ್ಲಿ ಸೂರ್ಯದೇವರ ಆಶೀರ್ವಾದಕ್ಕಾಗಿ ಈ ಕೆಲಸಗಳನ್ನು ಮಾಡಿ: 
ಪೌರಾಣಿಕ ನಂಬಿಕೆಗಳ ಪ್ರಕಾರ, ಮಕರ ಸಂಕ್ರಾಂತಿಯ ದಿನ ಮುಂಜಾನೆ ಪುಣ್ಯ ನದಿಯಲ್ಲಿ ಸ್ನಾನ ಮಾಡಿ, ಎಳ್ಳು-ಬೆಲ್ಲವನ್ನು ನೀಡಿ ಒಳ್ಳೆಯ ಮಾತನಾಡಿ. ಜೊತೆಗೆ ನಿಮ್ಮ ಕೈಲಾದ ಮಟ್ಟಿಗೆ ಅಗತ್ಯವಿರುವವರಿಗೆ ದಾನ ಮಾಡಿ. ಇದರಿಂದ ಸೂರ್ಯನ ಆಶೀರ್ವಾಣವನ್ನು ಪಡೆಯಬಹುದು. 


ಇದನ್ನೂ ಓದಿ- Makar Sankranti 2024: ಸಂಕ್ರಾಂತಿ ಹಬ್ಬದಂದು ಅದ್ಭುತ ಯೋಗಗಳ ನಿರ್ಮಾಣ ಈ 3 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ


ಜ್ಯೋತಿಷ್ಯ ಶಾಸ್ತ್ರದಲ್ಲಿ, ಮಕರ ಸಂಕ್ರಾಂತಿಯ ದಿನ ಕೆಲವು ಕೆಲಸಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಈ ಕೆಲಸಗಳು ಸೂರ್ಯದೇವನ ಮುನಿಸಿಗೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಮಕರ ಸಂಕ್ರಾಂತಿಯ ದಿನ ಯಾವ ಕೆಲಸಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ ತಿಳಿಯಿರಿ. 


ಮಕರ ಸಂಕ್ರಾಂತಿಯಲ್ಲಿ ಮರೆತೂ ಈ ತಪ್ಪುಗಳಾಗದಂತೆ ಎಚ್ಚರವಹಿಸಿ: 
ಸ್ನಾನ ಮಾಡದೆ ಆಹಾರ ಸೇವನೆ ಮಾಡಬಾರದು: 

ಮಕರ ಸಂಕ್ರಾಂತಿಯ ದಿನ ಸ್ನಾನ ಮಾಡುವ ಮೊದಲು ಯಾವುದೇ ಕಾರಣಕ್ಕೂ ಆಹಾರವನ್ನು ಸೇವಿಸಬಾರದು. ಇದು ನಿಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಉಂಟುಮಾಡಬಹುದು. 


ಗಿಡ ಮರಗಳನ್ನು ಕಡಿಯಬೇಡಿ: 
ಮಕರ ಸಂಕ್ರಾಂತಿಯ ದಿನ ಯಾವುದೇ ಗಿಡ ಮರಗಳನ್ನು ಕಡಿಯಬಾರದು. ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ದಿನ ತುಳಸಿ ದಳವನ್ನು ಕೂಡ ಕೀಳಬಾರದು. ಇದು ಜೀವನದಲ್ಲಿ ಪ್ರಗತಿಗೆ ಅಡೆತಡೆಗಳನ್ನು ಸೃಷ್ಟಿಸುತ್ತದೆ. 


ಇದನ್ನೂ ಓದಿ- Makar Sankranti 2024: ಅನಾರೋಗ್ಯ ಸಮಸ್ಯೆಯಿಂದ ಪರಿಹಾರಕ್ಕಾಗಿ ಮಕರ ಸಂಕ್ರಾಂತಿಯಲ್ಲಿ ರಾಶಿಯಾನುಸಾರ ಈ ಮಂತ್ರಗಳನ್ನು ಪಠಿಸಿ


ಮಾಂಸಾಹಾರ ಸೇವನೆ ತಪ್ಪಿಸಿ: 
ಮಕರ ಸಂಕ್ರಾಂತಿಯ ದಿನದಂದು ಕೇವಲ ಸಾತ್ವಿಕ ಆಹಾರವನ್ನಷ್ಟೇ ಸೇವಿಸಿ. ಈ ದಿನ ಯಾವುದೇ ಕಾರಣಕ್ಕೂ ಮಾಂಸಾಹಾರ ಸೇವಿಸುವುದನ್ನು ತಪ್ಪಿಸಿ. 


ಮದ್ಯ ಸೇವನೆ: 
ಹಿಂದೂ ಧರ್ಮದಲ್ಲಿ ಮಕರ ಸಂಕ್ರಾಂತಿಯನ್ನು ಮಂಗಳಕರ ದಿನ ಎಂದು ಪರಿಗಣಿಸಲಾಗಿದ್ದು, ಈ ದಿನ ಮದ್ಯ ಸೇವನೆಯನ್ನು ತಪ್ಪಿಸಿದರೆ ಒಳ್ಳೆಯದು. 


ಅತಿಥಿ ಸತ್ಕಾರ: 
ಮಕರ ಸಂಕ್ರಾಂತಿಯ ದಿನ ನಿಮ್ಮ ಮನೆಗೆ ಬರುವ ಅತಿಥಿಗಳಿಗೆ ಏನಾದರೂ ನೀಡಿ. ಅವರನ್ನು ಯಾವುದೇ ಕಾರಣಕ್ಕೂ ಬರಿಗೈಯಲ್ಲಿ ಕಳುಹಿಸಬೇಡಿ. ಇದು ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳನ್ನು ಹೆಚ್ಚಿಸಬಹುದು ಎಂದು ಹೇಳಲಾಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.