varamahalakshmi festival 2024: ಶ್ರಾವಣ ಮಾಸದಲ್ಲಿ ವರ ಮಹಾಲಕ್ಷ್ಮಿ ಹಬ್ಬದ ದಿನ ವ್ರತ ಹಾಗೂ ಉಪವಾಸ ಮಾಡಲಾಗುತ್ತದೆ. ವರಲಕ್ಷ್ಮಿ ವ್ರತವನ್ನ ಮಹಾಲಕ್ಷ್ಮಿಯ ಆರಾಧನೆಗೆ ಮೀಸಲಿಡಲಾಗಿದೆ. ಶ್ರಾವಣ ಮಾಸದ ಎರಡನೇಯ ಶುಕ್ರವಾರದಂದು ವರಲಕ್ಷ್ಮಿ ವ್ರತವನ್ನ ಆಚರಿಸಲಾಗುತ್ತದೆ. ಈ ವರ್ಷ ವರಲಕ್ಷ್ಮಿ ವ್ರತವು ಆಗಸ್ಟ್ 16 ರಂದು ಬಆಚರಿಸಲಾಗುತ್ತಿದೆ. ಈ ಮಂಗಳಕರ ದಿನದಂದು ಲಕ್ಷ್ಮಿ ದೇವಿಗೆ ಭಕ್ತಿ ಭಾವದಿಂದ ಅಲಂಕರಿಸಿ, ಪೂಜಿಸಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ.  


COMMERCIAL BREAK
SCROLL TO CONTINUE READING

ವರ ಮಹಾಲಕ್ಷ್ಮಿ ಪೂಜೆ ವಿಧಾನ


ವರ ಮಹಾಲಕ್ಷ್ಮಿ ವ್ರತವನ್ನು ಆಚರಿಸುವ ಮಹಿಳೆಯರು ಈ ದಿನ ಬೆಳಿಗ್ಗೆ ಬೇಗ ಎದ್ದು ತಲೆಸ್ನಾನ ಮಾಡಬೇಕು. ಗಂಗಾಜಲವನ್ನು ಚಿಮುಕಿಸಿ ಪೂಜಾ ಸ್ಥಳವನ್ನು ಶುದ್ಧೀಕರಿಸಿದ ನಂತರ ಉಪವಾಸವನ್ನು ಆಚರಿಸಲು ಸಂಕಲ್ಪ ಮಾಡಬೇಕು. ಕೆಂಪು ಬಟ್ಟೆ ಅಥವಾ ಬಾಳೆ ಎಲೆಯ ಮೇಲೆ ಲಕ್ಷ್ಮಿ ಮತ್ತು ಗಣೇಶನ ವಿಗ್ರಹಗಳನ್ನು ಸ್ಥಾಪಿಸಿ. ಕಲಶವನ್ನು ಅಕ್ಕಿಯ ಮೇಲೆ ಸ್ಥಾಪಿಸಬೇಕು. ಕಲಶದ ಸುತ್ತಲೂ ಶ್ರೀಗಂಧವನ್ನು ಲೇಪಿಸಿ. ಅರಿಶಿನ ಕುಂಕುಮ ಹಚ್ಚಬೇಕು. ನಂತರ ಗಜವಸ್ತ್ರ, ಹೂವುಗಳಿಂದ ಅಲಂಕರಿಸಬೇಕು. ಬಳಿಕ ಪೂಜೆ ಸಾಮಾಗ್ರಿಗಳನ್ನು ಅರ್ಪಿಸಿ. ಪೂಜೆಯ ನಂತರ ವರ ಮಹಾಲಕ್ಷ್ಮಿ ವ್ರತದ ಕಥೆಯನ್ನು ಪಠಿಸಬೇಕು. ಬಳಿಕ ನೈವೇದ್ಯ ಅರ್ಪಿಸಿ ಆರತಿ ಮಾಡಬೇಕು.


ಇದನ್ನೂ ಓದಿ: ದಿನಭವಿಷ್ಯ: ವರಮಹಾಲಕ್ಷ್ಮಿ ಹಬ್ಬದಂದು ಮೂಲಾ ನಕ್ಷತ್ರ ವಿಷ್ಕಂಭ ಯೋಗ ನಿಮ್ಮ ರಾಶಿಯ ಇಂದಿನ ಫಲಾಫಲ


ವರಲಕ್ಷ್ಮಿ ಪೂಜಾ ಸಾಮಗ್ರಿ


ವರಲಕ್ಷ್ಮಿ ಪೂಜೆಯಲ್ಲಿ ಬಳಸುವ ಎಲ್ಲಾ ವಸ್ತುಗಳು ದೀಪಾವಳಿಯ ದಿನದಂದು ಲಕ್ಷ್ಮಿ ದೇವಿಯ ಪೂಜೆಯಲ್ಲಿ ಬಳಸಲ್ಪಡುತ್ತವೆ. ಪೂಜೆಯಲ್ಲಿ ಬಳಸುವ ಸಾಮಗ್ರಿಗಳನ್ನು ತಿಳಿಯೋಣ: ತೆಂಗಿನಕಾಯಿ, ಶ್ರೀಗಂಧ, ಅರಿಶಿನ, ಕುಂಕುಮ, ಕಲಶ, ಕೆಂಪು ಬಟ್ಟೆ, ಅಕ್ಷತೆ, ಹಣ್ಣುಗಳು, ಹೂವುಗಳು, ದೂರ್ವ, ದೀಪ, ಧೂಪ ಜಪಮಾಲೆ, ಅರಿಶಿನ, ಮಾವು, ಕನ್ನಡಿ, ಬಾಚಣಿಗೆ, ಮಾವಿನ ಎಲೆಗಳು, ವೀಳ್ಯದೆಲೆ, ದೇವಿ ಲಕ್ಷ್ಮಿಯನ್ನು ಮೊಸರು, ಬಾಳೆಹಣ್ಣು, ಪಂಚಾಮೃತ, ಕರ್ಪೂರ, ಹಾಲು ಮತ್ತು ನೀರು ಇತ್ಯಾದಿಗಳಿಂದ ಪೂಜಿಸಬೇಕು.     


ಈ ತಪ್ಪುಗಳನ್ನು ಮಾಡಬೇಡಿ: 


==> ಮಾಂಸಾಹಾರ ಮತ್ತು ಮದ್ಯ ಸೇವನೆಯನ್ನು ಮಾಡಬಾರದು. ಇದರಿಂದ ಲಕ್ಷ್ಮಿ ಕೋಪಗೊಳ್ಳುತ್ತಾಳೆ. ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಗುತ್ತದೆ.


==> ಯಾರ ಜೊತೆಗದರೂ ಮಾತನಾಡುವಾಗ ನಿಂದನೀಯ ಪದಗಳನ್ನು ಬಳಸಬಾರದಂತೆ. ಈ ದಿನ ಜಗಳವಾಡಿದರೆ ಅಥವಾ ನಿಂದಿಸಿದರೆ ಲಕ್ಷ್ಮಿ ದೇವಿಯು ಕೋಪಗೊಳ್ಳುತ್ತಾಳೆ.


==> ಈ ದಿನದಂದು ಬೆಳ್ಳಿ ಮತ್ತು ಸಕ್ಕರೆಯನ್ನು ದಾನ ಮಾಡುವುದು ಅಶುಭ ಪರಿಣಾಂ ಬೀರುತ್ತದೆ ಎನ್ನಲಾಗುತ್ತದೆ. ಶುಕ್ರ ಗ್ರಹ ದುರ್ಬಲನಾಗಿ ಭೌತಿಕ ಸಂತೋಷ ಕಡಿಮೆಯಾಗುತ್ತದೆ. 


==> ಹರಿದ ಬಟ್ಟೆಗಳನ್ನು ಧರಿಸಿ ಈ ದಿನ ದೇವರಿಗೆ ಪೂಜೆ ಮಾಡಬಾರದು. ಇದು ಬಡತನವನ್ನು ತಂದೊಡ್ಡುತ್ತದೆ. 


ಇದನ್ನೂ ಓದಿ: ತಿರುಪತಿಗೆ ಹೋದಾಗ ಅಪ್ಪಿ ತಪ್ಪಿಯೂ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ..! ಗೋವಿಂದನ ಕೃಪೆ ಲಭಿಸಲ್ಲ.. 


(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.