Durga Ashtami 2023: ಮಹಾ ಅಷ್ಟಮಿಯಂದು ಮಾಡುವ ಈ 5 ಕೆಲಸಗಳಿಂದ ಜೀವನದಲ್ಲಿ ದೊಡ್ಡ ಬದಲಾವಣೆ!
Durga Ashtami 2023: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅ.22ರಂದು ದೇಶದಾದ್ಯಂತ ಮಹಾ ಅಷ್ಟಮಿ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ದಿನದಂದು ನೀವು ಕೆಲವು ಕೆಲಸಗಳನ್ನು ಮಾಡಿದ್ರೆ ವ್ಯಕ್ತಿಯು ಸಂತೋಷ ಮತ್ತು ಅದೃಷ್ಟದ ಜೊತೆಗೆ ಸಂಪತ್ತನ್ನು ಪಡೆಯುತ್ತಾನೆಂಬ ನಂಬಿಕೆಯಿದೆ.
ನವದೆಹಲಿ: ಇಂದು ಶಾರದೀಯ ನವರಾತ್ರಿಯ 8ನೇ ದಿನ. ಇಂದು ದೇಶದಾದ್ಯಂತ ಮಹಾ ಅಷ್ಟಮಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನ ಬಾಲಕಿಯರನ್ನು ಮನೆಗೆ ಕರೆದು ಪೂಜಿಸುವ ಸಂಪ್ರದಾಯವಿದೆ. ಅ.22ನ್ನು ಮಹಾ ಅಷ್ಟಮಿ ಅಥವಾ ದುರ್ಗಾ ಅಷ್ಟಮಿ ಎಂದು ಕರೆಯಲಾಗುತ್ತದೆ. ಈ ದಿನ ದುರ್ಗಾ ಮಾತೆಯ ವಿಶೇಷ ಪೂಜೆಗೆ ಮಹತ್ವವಿದೆ. ಈ ದಿನದಂದು ಮಾಡುವ ಕೆಲವು ಕೆಲಸಗಳಿಂದ ವರ್ಷವಿಡೀ ವ್ಯಕ್ತಿಯು ಸಂಪತ್ತಿನ ಲಾಭ ಪಡೆಯುತ್ತಾನೆ. ವ್ಯಕ್ತಿಯು ಜೀವನದ ಪ್ರತಿ ತಿರುವಿನಲ್ಲಿಯೂ ಯಶಸ್ಸನ್ನು ಪಡೆಯುತ್ತಾನೆ. ಮಹಾ ಅಷ್ಟಮಿಯ ದಿನದಂದು ಕೈಗೊಳ್ಳಬೇಕಾದ ವಿಶೇಷ ಕ್ರಮಗಳ ಬಗ್ಗೆ ತಿಳಿಯಿರಿ.
ಸಂಪತ್ತನ್ನು ಪಡೆಯಲು ಈ ಕೆಲಸ ಮಾಡಿ: ಜ್ಯೋತಿಷ್ಯದ ಪ್ರಕಾರ ದುರ್ಗಾ ಅಷ್ಟಮಿ ಅಥವಾ ಮಹಾ ಅಷ್ಟಮಿಯ ದಿನದಂದು, ಲವಂಗ ಮತ್ತು ಕರ್ಪೂರದ ಈ ಪರಿಹಾರವು ನಿಮ್ಮನ್ನು ವರ್ಷಗಳವರೆಗೆ ಸಂಪತ್ತಿನಿಂದ ತುಂಬಿಸುತ್ತದೆ. ಈ ದಿನದಂದು ಮಾ ದುರ್ಗೆಗೆ ಲವಂಗ ಮತ್ತು ಕರ್ಪೂರವನ್ನು ಅರ್ಪಿಸಿ. ಇದರ ನಂತರ ದೇವಿಯ ಈ ಪ್ರಸಾದವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ ಅಥವಾ ಪರ್ಸ್‌ನಲ್ಲಿ ಇರಿಸಿ. ಇದು ಖಂಡಿತವಾಗಿಯೂ ನಿಮ್ಮ ಹಣಕಾಸಿನ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಅಲ್ಲದೆ ನೀವು ಜೀವನದಲ್ಲಿ ಯಶಸ್ಸನ್ನು ಪಡೆಯುತ್ತೀರಿ.
ಇದನ್ನೂ ಓದಿ: ಚಾಣಕ್ಯ ನೀತಿ: ಈ ಅಭ್ಯಾಸವಿರುವವರು ಎಷ್ಟು ಸಂಪಾದಿಸಿದರೂ ಏನೂ ಉಳಿಯುವುದಿಲ್ಲ
ಸಾಲ ಮತ್ತು ಅನಾರೋಗ್ಯದಿಂದ ಮುಕ್ತಿ ಪಡೆಯಲು: ನವರಾತ್ರಿಯ ಮಹಾ ಅಷ್ಟಮಿಯ ದಿನದಂದು ಲವಂಗದ ಮಾಲೆ ಮತ್ತು ಕೆಂಪು ಗುಲಾಬಿಯ ಮಾಲೆಯನ್ನು ದುರ್ಗಾಮಾತೆಗೆ ಅರ್ಪಿಸಿ. ಈ ಪರಿಹಾರವನ್ನು ಮಾಡುವುದರಿಂದ ತಾಯಿ ದುರ್ಗಾದೇವಿ ಪ್ರಸನ್ನಳಾಗುತ್ತಾಳೆ ಮತ್ತು ಹಣದ ಸಂಬಂಧಿತ ಸಮಸ್ಯೆಗಳು ಜೀವನದಲ್ಲಿ ಕೊನೆಗೊಳ್ಳುತ್ತವೆ. ಅಷ್ಟೇ ಅಲ್ಲ ಈ ದಿನದಂದು ಪರಿಹಾರಗಳನ್ನು ತೆಗೆದುಕೊಳ್ಳುವುದರಿಂದ ವ್ಯಕ್ತಿಯ ದೈಹಿಕ ಸಮಸ್ಯೆಗಳೂ ದೂರವಾಗುತ್ತವೆ. ವ್ಯಕ್ತಿ ಮಾಡಿದ ಸಾಲವೂ ದೂರವಾಗುತ್ತದೆ.
ಆಸೆಗಳನ್ನು ಪೂರೈಸಲು: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿಮ್ಮ ಮನಸ್ಸಿನಲ್ಲಿ ಯಾವುದೇ ರಹಸ್ಯವಾದ ಆಸೆಯಿದ್ದರೆ ಮತ್ತು ಅದು ದೀರ್ಘಕಾಲದವರೆಗೆ ಈಡೇರದಿದ್ದರೆ, ಮಹಾ ಅಷ್ಟಮಿಯ ದಿನದಂದು ಈ ಪರಿಹಾರವು ನಿಮ್ಮ ಎಲ್ಲಾ ಆಸೆಗಳನ್ನು ಪೂರೈಸುತ್ತದೆ. ಈ ಸಮಯದಲ್ಲಿ ಬಾಕಿ ಉಳಿದಿರುವ ಕೆಲಸವು ಪೂರ್ಣವಾಗುತ್ತದೆ. ಬಹಳ ದಿನಗಳಿಂದ ಸ್ಥಗಿತಗೊಂಡಿರುವ ಕೆಲಸ ಪೂರ್ಣಗೊಳ್ಳಬೇಕೆಂದರೆ ಕರ್ಪೂರ, ಲವಂಗವನ್ನು ಸುಟ್ಟು ಮನೆಯಾದ್ಯಂತ ಪಸರಿಸಿರಿ. ಈ ಪರಿಹಾರವನ್ನು ಮಾಡುವುದರಿಂದ ಮನಸ್ಸಿನ ಬಯಕೆ ಈಡೇರುತ್ತದೆ ಮತ್ತು ವ್ಯಕ್ತಿಯ ಬಾಕಿ ಕೆಲಸಗಳು ಪೂರ್ಣವಾಗುತ್ತದೆ.
ಇದನ್ನೂ ಓದಿ: ಈ ʼತ್ರಿನೇತ್ರ ಗಣೇಶʼನಿಗೆ ಪತ್ರ ಬರೆದ್ರೆ ನಿಮ್ಮ ಇಷ್ಟಾರ್ಥ ಸಿದ್ಧಿ, ಸಮಸ್ಯೆ ನಿವಾರಣೆ..! ಇಲ್ಲಿದೆ ʼವಿಳಾಸʼ
ನಕಾರಾತ್ಮಕತೆ ತೊಡೆದುಹಾಕಲು: ಮನೆಯಲ್ಲಿ ನಕಾರಾತ್ಮಕತೆ ಹೆಚ್ಚಾಗುತ್ತಿದ್ದರೆ ಮಹಾ ಅಷ್ಟಮಿಯ ದಿನದಂದು ತಾಯಿ ದುರ್ಗೆಯ ಮುಂದೆ ಕರ್ಪೂರ ಮತ್ತು ಲವಂಗವನ್ನು ಸುಡಬೇಕು. ನಂತರ ತಾಯಿಗೆ ಆರತಿಯನ್ನು ಮಾಡಿ. ಇದು ಮನೆಯಲ್ಲಿ ಸಂತೋಷವನ್ನು ತರುತ್ತದೆ ಮತ್ತು ನಕಾರಾತ್ಮಕತೆ ದೂರ ಹೋಗುತ್ತದೆ. ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸಿರುತ್ತದೆ ಮತ್ತು ಜೀವನದಲ್ಲಿ ಯಶಸ್ಸು ಬರುತ್ತದೆ.
ಆರ್ಥಿಕ ಲಾಭಕ್ಕೆ: ನೀವು ಯಾರಿಗಾದರೂ ನೀಡಿರುವ ಸಾಲ ವಾಪಸ್ ಬರದಿದ್ದರೆ ಮಹಾ ಅಷ್ಟಮಿಯ ದಿನದಂದು ಕರ್ಪೂರವನ್ನು ಪನ್ನೀರಿನಲ್ಲಿ ಬೆರೆಸಿ ತಾಯಿ ದುರ್ಗಾದೇವಿಗೆ ಅರ್ಪಿಸಿ. ಇದು ನಿಮ್ಮ ಹಣಕಾಸಿನ ಸಮಸ್ಯೆಗಳನ್ನು ಪರಿಹರಿವಾಗುತ್ತದೆ ಮತ್ತು ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.
(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.