Guru Asta 2023 Effect: ಜ್ಯೋತಿಷ್ಯ ಶಾಸ್ತ್ರದಲ್ಲಿ ದೇವಾನುದೇವತೆಗಳ ಗುರು ಎಂದು ಪರಿಗಣಿಸಲ್ಪಟ್ಟಿರುವ ಬೃಹಸ್ಪತಿಯನ್ನು ಅತ್ಯಂತ ಶುಭ ಗ್ರಹ ಎಂದು ಪರಿಗಣಿಸಲಾಗುತ್ತದೆ. ದೇವ ಗುರು ಬೃಹಸ್ಪತಿಯೂ ಏಪ್ರಿಲ್ 01, 2023 ರಂದು ಸಂಜೆ 07:12ರ ಸುಮಾರಿಗೆ ಮೀನ ರಾಶಿಯಲ್ಲಿ ಅಸ್ತಮಿಸಲಿದ್ದಾನೆ. ಈ ಸಂದರ್ಭದಲ್ಲಿ ಮೂರು ರಾಶಿಯವರ ಜೀವನದಲ್ಲಿ ಭಾರೀ ಸಂಕಷ್ಟಗಳು ಎದುರಾಗಲಿದ್ದು, ಅವರು ಬಹಳ ಎಚ್ಚರಿಕೆಯಿಂದ ಇರುವುದು ಅಗತ್ಯ ಎಂದು ಹೇಳಲಾಗುತ್ತಿದೆ. 


COMMERCIAL BREAK
SCROLL TO CONTINUE READING

ಮೀನ ರಾಶಿಯಲ್ಲಿ ಅಸ್ತಮಿಸಲಿರುವ ದೇವಗುರು- ಈ 3 ರಾಶಿಯವರಿಗೆ ಭಾರೀ ನಷ್ಟ:
ವೃಷಭ ರಾಶಿ:

ಮೀನ ರಾಶಿಯಲ್ಲಿ ಅಸ್ತಮಿಸಲಿರುವ ಗುರು ವೃಷಭ ರಾಶಿಯವರಿಗೆ ಭಾರೀ ಧನ ಹಾನಿ ಉಂಟುಮಾಡಲಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ವೃಷಭ ರಾಶಿಯವರು ಯಾವುದೇ ರೀತಿಯ ಹೂಡಿಕೆಗಳನ್ನು ತಪ್ಪಿಸುವುದು ಉತ್ತಮ, ಇಲ್ಲದಿದ್ದರೆ, ನಷ್ಟ ಉಂಟಾಗಬಹುದು. ನಿಮ್ಮ ವ್ಯಾಪಾರ-ವ್ಯವಹಾರದಲ್ಲಿಯೂ ಕೂಡ ಬಹಳ ಎಚ್ಚರಿಕೆಯಿಂದ ಮುಂದುವರೆಯುವ ಅವಶ್ಯಕತೆ ಇದೆ.


ಇದನ್ನೂ ಓದಿ- ಶನಿ ಸಾಡೇಸಾತಿ- ಧೈಯಾ ಪ್ರಭಾವಗಳಿಂದ ಸುಲಭ ಪರಿಹಾರ ನೀಡುತ್ತೆ ಶ್ರೀಗಂಧ


ಕರ್ಕಾಟಕ ರಾಶಿ:
ಗುರು ಅಸ್ತ ಪ್ರಭಾವದಿಂದಾಗಿ ಕರ್ಕಾಟಕ ರಾಶಿಯವರು ಉದ್ಯೋಗ ರಂಗದಲ್ಲಿ ನಾನಾ ರೀತಿಯ ತೊಂದರೆಗಳನ್ನು ಎದುರಿಸಬೇಕಾಗಬಹುದು. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ದೊರೆಯದೇ ಇರುವುದು ನಿಮ್ಮ ಮನಸ್ಸಿಗೆ ನೋವುಂಟು ಮಾದಬ್ ಅಹುದು. ಮಾತ್ರವಲ್ಲ, ಹಣಕಾಸಿನ ದೃಷ್ಟಿಯಿಂದಲೂ ಈ ಸಮಯದ ಅಷ್ಟು ಚೆನ್ನಾಗಿರುವುದಿಲ್ಲ.


ಇದನ್ನೂ ಓದಿ- Mahashivratri: 2023ರಲ್ಲಿ ಮಹಾಶಿವರಾತ್ರಿ ಯಾವಾಗ? ದಿನಾಂಕ, ಪೂಜಾ ಮುಹೂರ್ತ & ಶುಭ ಸಮಯ ತಿಳಿಯಿರಿ


ಕನ್ಯಾ ರಾಶಿ:
ಬೃಹಸ್ಪತಿ ಅಸ್ತಮ ಸ್ಥಿತಿಯು ಈ ರಾಶಿಯವರಿಗೂ ಕೂಡ ಉತ್ತಮವಲ್ಲ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ಕೆಲಸದ ಒತ್ತಡ ಹೆಚ್ಚಾಗಬಹುದು. ಇದು ನಿಮ್ಮ ವೈಯಕ್ತಿಕ ಜೀವನದ ಮೇಲೂ ನಕಾರಾತ್ಮಕ ಪರಿಣಾಮ ಬೀರಬಹುದು. ಈ ಸಂದರ್ಭದಲ್ಲಿ ಆಸ್ಪತ್ರೆಯ ಸುತ್ತಾಟ, ಆರ್ಥಿಕ ನಷ್ಟ ಹೀಗೆ ನಾನಾ ರೀತಿಯ ಸಮಸ್ಯೆಗಳು ನಿಮ್ಮನ್ನು ಬಾಧಿಸುವ ಸಾಧ್ಯತೆಯಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.