ಗುರು ಶುಕ್ರ ಯುತಿ ಪರಿಣಾಮ: ಮೂರು ರಾಶಿಯವರಿಗೆ ಭಾರೀ ಅದೃಷ್ಟ
ವೈದಿಕ ಜ್ಯೋತಿಷ್ಯದಲ್ಲಿ ಬೃಹಸ್ಪತಿಯನ್ನು ದೇವ ಗುರು ಎಂದು ಬಣ್ಣಿಸಲಾಗಿದೆ. ಅಂತೆಯೇ, ಶುಕ್ರ ಗ್ರಹವನ್ನು ಐಶಾರಾಮಿ, ಸುಖ-ಸಂತೋಷದ ಅಂಶವೆಂದು ಪರಿಗಣಿಸಲಾಗುತ್ತದೆ. ಹನ್ನೆರಡು ವರ್ಷಗಳ ಬಳಿಕ ಈ ಎರಡೂ ಶುಭ ಗ್ರಹಗಳು ಮೀನ ರಾಶಿಯಲ್ಲಿ ಸಂಯೋಜನೆಗೊಳ್ಳಲಿವೆ. ಇದರ ಪರಿಣಾಮವಾಗಿ ಮೂರು ರಾಶಿಯ ಜನರಿಗೆ ಭಾರೀ ಅದೃಷ್ಟ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...
ಬೆಂಗಳೂರು: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗುರು ಗ್ರಹವು 12 ವರ್ಷಗಳ ನಂತರ ತನ್ನ ಸ್ವರಾಶಿ ಮೀನ ರಾಶಿಯಲ್ಲಿ ಶುಕ್ರ ಗ್ರಹದೊಂದಿಗೆ ಸಂಯೋಜನೆ ಹೊಂದಲಿದ್ದಾನೆ. ವೈದಿಕ ಜ್ಯೋತಿಷ್ಯದಲ್ಲಿ ಗುರು ಗ್ರಹವನ್ನು ಅದೃಷ್ಟ ಮತ್ತು ಸಂತೋಷವನ್ನು ನೀಡುವ ಗ್ರಹ ಎಂತಲೂ, ಶುಕ್ರನನ್ನು ಸಂಪತ್ತು-ಐಷಾರಾಮಿ, ಪ್ರೀತಿ-ಸೌಂದರ್ಯಕಾರಕ ಎಂತಲೂ ಬಣ್ಣಿಸಲಾಗುತ್ತದೆ. ಈ ಎರಡೂ ಶುಭ ಗ್ರಹಗಳ ಸಂಯೋಗವು ಕೆಲವು ರಾಶಿಯವರ ಜೀವನದಲ್ಲಿ ಭಾರೀ ಅದೃಷ್ಟವನ್ನು ಹೊತ್ತು ತರಲಿದೆ ಎಂದು ಹೇಳಲಾಗುತ್ತಿದೆ. 12 ವರ್ಷಗಳ ಬಳಿಕ ಮೀನ ರಾಶಿಯಲ್ಲಿ ಗುರು ಶುಕ್ರ ಯುತಿ ಯಾವ ರಾಶಿಯವರಿಗೆ ಬಂಪರ್ ಲಾಭವನ್ನು ನೀಡಲಿದ್ದಾರೆ ಎಂದು ತಿಳಿಯೋಣ...
12 ವರ್ಷಗಳ ಬಳಿಕ ಮೀನ ರಾಶಿಯಲ್ಲಿ ಗುರು ಶುಕ್ರ ಯುತಿ- ಮೂರು ರಾಶಿಯವರಿಗೆ ಬಂಪರ್ ಲಾಭ
ಮೇಷ ರಾಶಿ:
ಮೀನ ರಾಶಿಯಲ್ಲಿ ಗುರು-ಶುಕ್ರರ ಯುತಿಯು ಮೇಷ ರಾಶಿಯವರಿಗೆ ಭಾರೀ ಪ್ರಯೋಜನಕಾರಿ ಎನ್ನಲಾಗುತ್ತಿದೆ. ಈ ಸಮಯದಲ್ಲಿ ಮೇಷ ರಾಶಿಯವರ ಜೀವನದಲ್ಲಿ ಸುಖ-ಸಂತೋಷಕ್ಕೆ ಯಾವುದೇ ಕೊರತೆ ಇರುವುದಿಲ್ಲ. ನಿಮ್ಮೆಲ್ಲಾ ಕೆಲಸಗಳಲ್ಲೂ ಅದೃಷ್ಟದ ಬೆಂಬಲ ದೊರೆಯಲಿದ್ದು, ಯಶಸ್ಸು ಪ್ರಾಪ್ತಿಯಾಗಲಿದೆ. ನಿಮ್ಮ ಬಹುದಿನದ ಕನಸುಗಳು ಈಗ ಈಡೇರಲಿವೆ.
ಇದನ್ನೂ ಓದಿ- Budh Asta 2023 : ಬುಧ ಅಷ್ಟಮಿಯಿಂದ ಈ ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ..!
ವೃಷಭ ರಾಶಿ:
ವೃಷಭ ರಾಶಿಯ ಅಧಿಪತಿ ಶುಕ್ರನೊಂದಿಗೆ ಗುರುವಿನ ಸಂಯೋಗವು ಈ ರಾಶಿಯವರಿಗೆ ತುಂಬಾ ಮಂಗಳಕರ ಫಲಿತಾಂಶಗಳನ್ನು ತರಲಿದೆ. ವೃತ್ತಿಜೀವನದಲ್ಲಿ ಭರ್ಜರಿ ಪ್ರಯೋಜನವಾಗಲಿದೆ. ವ್ಯಾಪಾರಸ್ಥರಿಗೆ ಹಠಾತ್ ಲಾಭವಾಗಲಿದೆ. ಇದರೊಂದಿಗೆ ಜೀವನದಲ್ಲಿ ಸುಖ-ಸಂತೋಷ, ನೆಮ್ಮದಿಯೂ ಇರಲಿದೆ.
ಇದನ್ನೂ ಓದಿ- Shani Mahadasha : ಶನಿಯ ಮಹಾದಶದಿಂದ ಶ್ರೀಮಂತಿಕೆ, 19 ವರ್ಷಗಳ ಕಾಲ ರಾಜಭೋಗ!
ಕರ್ಕಾಟಕ ರಾಶಿ:
ಗುರು ಮತ್ತು ಶುಕ್ರರ ಸಂಯೋಜನೆಯು ಕರ್ಕಾಟಕ ರಾಶಿಯವರಿಗೆ ಲಾಭದಾಯಕ ಎಂದು ಸಾಬೀತುಪಡಿಸಲಿದೆ. ನಿಮ್ಮ ಕೆಲಸ ಕಾರ್ಯಗಳಲ್ಲಿ ಅದೃಷ್ಟದ ಬೆಂಬಲ ದೊರೆಯಲಿದ್ದು ಸ್ಥಗಿತಗೊಂಡಿದ್ದ ಕಾರ್ಯಗಳು ಪೂರ್ಣಗೊಳ್ಳಲಿವೆ. ಆರ್ಥಿಕ ಮೂಲಗಳು ಹೆಚ್ಚಾಗಲಿದ್ದು ಆರ್ಥಿಕ ಸ್ಥಿತಿ ಸುಧಾರಿಸಲಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.