ನವದೆಹಲಿ: ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿ ಕೌರವರ ಕಾಲದಲ್ಲಿ ಸ್ಥಾಪಿಸಲಾದ ವಿಶಿಷ್ಟವಾದ ದೇವಾಲಯವಿದೆ. ಅಲ್ಲಿ ಭಕ್ತರ ಎಲ್ಲಾ ಆಸೆಗಳು ಈಡೇರುತ್ತವೆ. ಈ ದೇವಾಲಯದ ಇತಿಹಾಸವು ಸಾಕಷ್ಟು ಹಳೆಯದಾಗಿದೆ ಮತ್ತು ಇದಕ್ಕೆ ಸಂಬಂಧಿಸಿದ ಅನೇಕ ಆಶ್ಚರ್ಯಕರ ಸಂಗತಿಗಳು ಸಹ ಬೆಳಕಿಗೆ ಬಂದಿವೆ. ಈ ದೇವಾಲಯವು ಭಜರಂಗ್ ಬಲಿ ದೇವರಿಗೆ ಸಮರ್ಪಿತವಾಗಿದೆ.


COMMERCIAL BREAK
SCROLL TO CONTINUE READING

ಪ್ರತಿ ಶನಿವಾರ ಮತ್ತು ಮಂಗಳವಾರ ಇಲ್ಲಿ ಭಕ್ತರ ದಂಡು ಹರಿದು ಬರುತ್ತದೆ. ಇಷ್ಟಾರ್ಥ ಈಡೇರಿಕೆಗಾಗಿ ದೇಶ-ವಿದೇಶಗಳಿಂದಲೂ ಭಕ್ತರು ಈ ದೇವಾಲಯಕ್ಕೆ ಆಗಮಿಸುತ್ತಾರೆ. ಈ ದೇವಾಲಯದ ಹೆಸರನ್ನು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ಸೇರಿಸಲಾಗಿದೆ. ಈ ದೇವಾಲಯದ ಇತಿಹಾಸ ಮತ್ತು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಸೇರ್ಪಡೆಗೊಳ್ಳಲು ಕಾರಣವನ್ನು ನಾವು ವಿವರವಾಗಿ ತಿಳಿದುಕೊಳ್ಳೋಣ.


ಇದನ್ನೂ ಓದಿ: ತ್ವಚೆಯ ನ್ಯಾಚ್ಯುರಲ್ ಗ್ಲೋ ಗಾಗಿ ಆಲೋವಿರಾದೊಂದಿಗೆ ಈ ವಸ್ತುವನ್ನು ಬೆರೆಸಿ ಮುಖಕ್ಕೆ ಹಚ್ಚಿ !


24 ಗಂಟೆಯೂ ದೇವರ ಪಠಣ: ಬಜರಂಗ್ ಬಲಿಯ ಈ ದೇವಾಲಯದ ಹೆಸರು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಸೇರಿದೆ. ಏಕೆಂದರೆ ಇಲ್ಲಿ ಮಂತ್ರಗಳನ್ನು 24 ಗಂಟೆಗಳ ಕಾಲ ನಿಲ್ಲಿಸದೆ ಜಪಿಸಲಾಗುತ್ತದೆ. 1964ರ ಆಗಸ್ಟ್ 1ರಿಂದ ಈ ಪುರಾತನ ದೇವಾಲಯದಲ್ಲಿ ‘ಶ್ರೀರಾಮ, ಜೈ ರಾಮ್, ಜೈ ಜೈ ರಾಮ್’ ಘೋಷಣೆಗಳು ನಿಲ್ಲದೆ ನಿರಂತರವಾಗಿ ನಡೆಯುತ್ತಿವೆ.


ದೇವಾಲಯವನ್ನು ಸ್ಥಾಪಿಸಿದವರು ಯಾರು?: ಈ ಪುರಾತನ ದೇವಾಲಯವನ್ನು ಸ್ಥಾಪಿಸಿದ್ದು ಬೇರೆ ಯಾರೂ ಅಲ್ಲ ಪಾಂಡವರು. ವಾಸ್ತವವಾಗಿ ದೆಹಲಿಯ ಹಳೆಯ ಹೆಸರು ಇಂದ್ರಪ್ರಸ್ಥ, ತಮ್ಮ ಕಾಲದಲ್ಲಿ ಪಾಂಡವರು ಯಮುನಾ ನದಿಯ ದಡದಲ್ಲಿ ನೆಲೆಸಿದ್ದರು. ಈ ಸಮಯದಲ್ಲಿ ಅವರು ಈ ಪ್ರಾಚೀನ ಹನುಮಾನ್ ದೇವಾಲಯವನ್ನು ಸಹ ಸ್ಥಾಪಿಸಿದರು. ಪಾಂಡವರು ದೆಹಲಿಯಲ್ಲಿ 5 ದೇವಾಲಯಗಳನ್ನು ಸ್ಥಾಪಿಸಿದ್ದರು, ಅವುಗಳಲ್ಲಿ ಬಜರಂಗಬಲಿಯ ಈ ದೇವಾಲಯವೂ ಒಂದಾಗಿದೆ.


ಇದನ್ನೂ ಓದಿ: ನಯನತಾರಾ ಅವರಿಂದ ದೀಪಿಕಾ ವರೆಗೆ, ಸೆಲೆಬ್ರಿಟಿಗಳು ತಮ್ಮ ಮದುವೆಯಂದು ಕೆಂಪು ಬಟ್ಟೆಯನ್ನು ಏಕೆ ಧರಿಸುತ್ತಾರೆ ಗೊತ್ತಾ?


ಬಜರಂಗ್ ಬಲಿಯ ದೇವಸ್ಥಾನ ತಲುಪುವುದು ಹೇಗೆ?: ದೆಹಲಿಯ ಈ ಪುರಾತನ ದೇವಾಲಯವು ಕನ್ನಾಟ್ ಪ್ಲೇಸ್‌ನಲ್ಲಿರುವ ಖರಗ್ ಸಿಂಗ್ ಮಾಂಗೆಯಲ್ಲಿದೆ. ಮೆಟ್ರೋ ಮೂಲಕ ಇಲ್ಲಿಗೆ ತಲುಪಲು ಭಕ್ತರು ಮೊದಲು ರಾಜೀವ್ ಚೌಕ್‌ನಲ್ಲಿ ಇಳಿಯಬೇಕು. ಅಲ್ಲಿಂದ ಸ್ವಲ್ಪ ದೂರದಲ್ಲಿ ಈ ದೇವಾಲಯವಿದೆ. ಇಲ್ಲಿ ಪ್ರತಿದಿನ ಭಕ್ತರ ದಂಡೇ ಇರುತ್ತದೆ. ಈ ದೇವಾಲಯವನ್ನು ತಲುಪಲು ಭಕ್ತರು ರಸ್ತೆಯನ್ನು ಸಹ ಬಳಸಬಹುದು. 


(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.