Surya Grahana Effect: ಇಂದು 2023ರ ಮೊದಲ ಸೂರ್ಯ ಗ್ರಹಣ ಸಂಭವಿಸಲಿದೆ. ವೈಶಾಖ ಅಮಾವಾಸ್ಯೆಯ ಈ ದಿನ ಬೆಳಿಗ್ಗೆ 7 ಗಂಟೆಯಿಂದ ಆರಂಭವಾಗಲಿರುವ ಈ ಗ್ರಹಣ ಮಧ್ಯಾಹ್ನ 12:29ಕ್ಕೆ ಕೊನೆಗೊಳ್ಳಲಿದೆ. ಗ್ರಹನಗಳಂತಹ ಖಗೋಳ ವಿದ್ಯಮಾನವನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಭ ಎಂದು ಪರಿಗಣಿಸಲಾಗುವುದಿಲ್ಲ. ಆದರೆ, ಇಂದು ಸಂಭವಿಸುತ್ತಿರುವ ಸೂರ್ಯ ಗ್ರಹಣದಿಂದಾಗಿ ಐದು ಶುಭ ಯೋಗಗಳು ರೂಪುಗೊಳ್ಳುತ್ತಿವೆ. ಈ ಯೋಗಗಳು ಕೆಲವು ರಾಶಿಯವರ ಅದೃಷ್ಟದ ಬಾಗಿಲುಗಳನ್ನು ತೆರೆಯಲಿವೆ ಎಂದು ಹೇಳಲಾಗುತ್ತಿದೆ. 


COMMERCIAL BREAK
SCROLL TO CONTINUE READING

ವರ್ಷದ ಮೊದಲ ಸೂರ್ಯಗ್ರಹಣವಾದ ಇಂದು ರೂಪುಗೊಳ್ಳುತ್ತಿರುವ ಸರ್ವಾರ್ಥ ಸಿದ್ಧಿ, ಪ್ರೀತಿಯಂತಹ ಯೋಗಗಳು ಯಾವ ರಾಶಿಯವರಿಗೆ ಮಂಗಳಕರ ಎಂದು ತಿಳಿಯೋಣ... 


ವೈಶಾಖ ಅಮಾವಾಸ್ಯೆಯಂದು ವರ್ಷದ ಮೊದಲ ಸೂರ್ಯಗ್ರಹಣ, ಈ ರಾಶಿಯವರಿಗೆ ಭಾರೀ ಅದೃಷ್ಟ : 
ಮಿಥುನ ರಾಶಿ: 

ಈ ವರ್ಷದ ಮೊದಲ ಸೂರ್ಯಗ್ರಹಣವು ಮಿಥುನ ರಾಶಿಯವರಿಗೆ ಯಾವುದೇ ವರದಾನಕ್ಕಿಂತ ಕಡಿಮೆಯಿಲ್ಲ. ಈ ಸಮಯದಲ್ಲಿ ನೀವು ಉದ್ಯೋಗ ಕ್ಷೇತ್ರದಲ್ಲಿ ಪ್ರಶಂಸೆಗೆ ಪಾತ್ರರಾಗುವಿರಿ. ಮಾತ್ರವಲ್ಲ, ಬಹುದಿನಗಳಿಂದ ನಿಮ್ಮ ಕೈಸೇರದ ಹಣ ಈ ಸಮಯದಲ್ಲಿ ನಿಮ್ಮದಾಗಲಿದೆ. ಹಣಕಾಸಿನ ಸ್ಥಿತಿ ಬಲಗೊಳ್ಳಲಿದೆ. 


ಇದನ್ನೂ ಓದಿ- Guru Gochar Effect: ಮೇಷ ರಾಶಿಯಲ್ಲಿ ಗುರು ಚಂಡಾಲ ಯೋಗದಿಂದ ನಾಲ್ಕು ರಾಶಿಯವರಿಗೆ ಸಂಕಷ್ಟ


ಕರ್ಕಾಟಕ ರಾಶಿ: 
ಸೂರ್ಯ ಗ್ರಹಣದಲ್ಲಿ ರೂಪುಗೊಳ್ಳುತ್ತಿರುವ ಮಂಗಳಕರ ಯೋಗಗಳ ಫಲವಾಗಿ ಈ ರಾಶಿಯವರು ಉದ್ಯೋಗ ಕ್ಷೇತ್ರದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸುವರು. ಮಾತ್ರವಲ್ಲ ವಿದ್ಯಾಭ್ಯಾಸ ಅಥವಾ ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗಲು ಬಯಸುವವರಿಗೆ ಈ ಸಮಯದಲ್ಲಿ ನಿಮ್ಮ ಆಸೆ ನೇರವೇರಲಿದೆ. 


ಸಿಂಹ ರಾಶಿ: 
ಸಿಂಹ ರಾಶಿಯವರಿಗೂ ಸಹ ಸೂರ್ಯ ಗ್ರಹಣವು ವರದಾನ ಎಂತಲೇ ಹೇಳಬಹುದು. ಈ ಸಮಯದ್ಲಲಿ ನೀವು ಏಕಾಗ್ರತೆಯಿಂದ ಮಾಡಿದ ಕೆಲಸಗಳಲ್ಲಿ ಭಾರೀ ಯಶಸ್ಸನ್ನು ಗಳಿಸುವಿರಿ. ವೃತ್ತಿ ರಂಗದಲ್ಲಿ ನಿಮ್ಮ ಕೌಶಲ್ಯಗಳಿಗೆ ಸರಿಯಾದ ಮನ್ನಣೆ ದೊರೆಯಲಿದ್ದು ಕೀರ್ತಿಯೂ ಹೆಚ್ಚಾಗಲಿದೆ. ಹಣಕಾಸಿನ ಹರಿವು ಹೆಚ್ಚಾಗಲಿದ್ದು ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ. 


ಇದನ್ನೂ ಓದಿ- Surya Grahan 2023: ಈ 2 ರಾಶಿಯವರ ಜೀವನದಲ್ಲಿ ಶುರುವಾಗಲಿದೆ ಸಂಕಷ್ಟ !


ಧನು ರಾಶಿ: 
ಇಂದು ಸಂಭವಿಸಲಿರುವ ಸೂರ್ಯ ಗ್ರಹಣವು ಧನು ರಾಶಿಯವರಿಗೆ ವೃತ್ತಿ ಬದುಕಿನಲ್ಲಿ ಪ್ರಗತಿಯ ಹಾದಿಯನ್ನು ತೆರೆಯಲಿದೆ. ವ್ಯಾಪಾರ-ವ್ಯವಹಾರದಲ್ಲಿಯೂ ಬಂಪರ್ ಲಾಭವನ್ನು ನೀಡಲಿದ್ದು, ಹಣಕಾಸಿನ ಸ್ಥಿತಿ ಉತ್ತಮಗೊಳ್ಳಲಿದೆ. ನೀವು ಹೊಸ ಕೆಲಸಗಳನ್ನು ಮಾಡಲು ಚಿಂತಿಸುತ್ತಿದ್ದರೆ ಉತ್ತಮ ಸಮಯ ಇದಾಗಿದೆ. 


ಕುಂಭ ರಾಶಿ: 
ಕುಂಭ ರಾಶಿಯವರಿಗೂ ಸಹ ವರ್ಷದ ಮೊದಲ ಸೂರ್ಯಗ್ರಹಣ ಮಂಗಳಕರ ಎಂದು ಸಾಬೀತುಪಡಿಸಲಿದೆ. ಈ ಸಮಯದಲ್ಲಿ ಕೌಟುಂಬಿಕ ಸುಖ-ಸಂತೋಷ ವೃದ್ಧಿಯಾಗಲಿದ್ದು, ಆರೋಗ್ಯ ಸಮಸ್ಯೆಗಳಿಂದಲೂ ಪರಿಹಾರ ಸಿಗಲಿದೆ. ನಿಮ್ಮ ಶ್ರಮಕ್ಕೆ ತಕ್ಕಪ್ರತಿಫಲ ದೊರೆತು ಮನಸ್ಸು ಉಲ್ಲಾಸದಿಂದ ಕೂಡಿರುತ್ತದೆ.  


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.