ಹಸ್ತದಲ್ಲಿ ಈ ಐದು ರೇಖೆಗಳಿದ್ದರೆ ಅದೃಷ್ಟದ ಬಾಗಿಲು ತೆರೆದಂತೆಯೇ ! ಸಿರಿವಂತರಾಗುವುದು ಗ್ಯಾರಂಟಿಯಂತೆ !
Lucky Line On Palm :ಹಸ್ತದಲ್ಲಿ ಈ 5 ರೇಖೆಗಳಿದ್ದರೆ ವ್ಯಕ್ತಿಯನ್ನು ಸಿರಿವಂತರಾಗುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ.
Lucky Line On Palm : ಜ್ಯೋತಿಷ್ಯದಲ್ಲಿ ಹಸ್ತಸಾಮುದ್ರಿಕ ಶಾಸ್ತ್ರಕ್ಕೆ ಬಹಳ ಪ್ರಾಮುಖ್ಯತೆ ಇದೆ. ಹಸ್ತಸಾಮುದ್ರಿಕ ಶಾಸ್ತ್ರದ ಮೂಲಕ, ವ್ಯಕ್ತಿಯ ಭವಿಷ್ಯವನ್ನು ಅವನ ಕೈಯಲ್ಲಿರುವ ರೇಖೆಗಳ ಮೂಲಕ ತಿಳಿಯಬಹುದು. ಅನೇಕ ಬಾರಿ ಕೈಯಲ್ಲಿರುವ ಈ ರೇಖೆಗಳು ಶುಭ ಮತ್ತು ಅಶುಭ ಫಲಿತಾಂಶಗಳನ್ನು ಸೂಚಿಸುತ್ತವೆ. ಹಸ್ತದಲ್ಲಿ ಈ 5 ರೇಖೆಗಳಿದ್ದರೆ ವ್ಯಕ್ತಿ ಸಿರಿವಂತರಾಗುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ.
ಹಸ್ತದ ಅದೃಷ್ಟ ರೇಖೆಗಳು :
ಹೃದಯ ರೇಖೆಯ ಮುಂಭಾಗದಲ್ಲಿ ವ್ಯಕ್ತಿಯ ಕೈಯಲ್ಲಿ ತ್ರಿಶೂಲದ ಗುರುತು ಇದ್ದರೆ, ಅದು ಮಂಗಳಕರವಾಗಿರುತ್ತದೆ. ಈ ತ್ರಿಶೂಲವಾದ ಸೂರ್ಯ ಪರ್ವತವು ಉಂಗುರದ ಬೆರಳಿನ ಕೆಳಗೆ ಇದ್ದರೆ, ಅದರ ಸ್ಥಿತಿಯು ಉತ್ತಮವಾಗಿರುತ್ತದೆ. ಇದರಿಂದ ಅಂತಹ ವ್ಯಕ್ತಿಗೆ ಸಮಾಜದಲ್ಲಿ ಒಳ್ಳೆಯ ಹೆಸರು, ಗೌರವವೂ ಪ್ರಾಪ್ತಿಯಾಗುತ್ತದೆ. ಅಷ್ಟೇ ಅಲ್ಲ, ಇವರ ಬೆಳವಣಿಗೆ ಸೂರ್ಯನಷ್ಟೇ ಪ್ರಖರವಾಗಿರುತ್ತದೆಯಂತೆ.
ಇದನ್ನೂ ಓದಿ : Salt tradition: ಉಪ್ಪನ್ನು ನೇರವಾಗಿ ಇನ್ನೊಬ್ಬರಿಗೆ ನೀಡಬೇಡಿ..! ಇದರ ಹಿಂದಿನ ಕಥೆ ನಿಮಗೆ ತಿಳಿದಿದೆಯೇ?
ಹಸ್ತ ರೇಖೆಗಳಲ್ಲಿ ಸೂರ್ಯನ ರೇಖೆಯ ಮೇಲೆ ಗುರು ಪರ್ವತದ ಸ್ಥಾನವು ಸರಿಯಾಗಿದ್ದರೆ, ಸರ್ಕಾರಿ ಉದ್ಯೋಗವನ್ನು ಪಡೆಯುವ ಸಾಧ್ಯತೆಗಳಿರುತ್ತವೆ. ಜೊತೆಗೆ ಸಮಾಜದಲ್ಲಿಯೂ ಒಳ್ಳೆಯ ಹೆಸರು ಪ್ರಾಪ್ತಿಯಾಗುತ್ತದೆ.
ಇನ್ನು ಹಣಕಾಸಿನ ರೇಖೆಯ ಬಗ್ಗೆ ಮಾತನಾಡುವುದಾದರೆ, ಅದು ಹಸ್ತದ ಮಧ್ಯಭಾಗದಲ್ಲಿರುತ್ತದೆ. ಈ ರೇಖೆಯು ಯಾರ ಕೈಯಲ್ಲಿರುತ್ತದೆಯೋ ಅವರು ಜೀವನದಲ್ಲಿ ಕೀರ್ತಿ, ಐಶ್ವರ್ಯವನ್ನು ಗಳಿಸುತ್ತಾರೆ.
ಅದೃಷ್ಟ ರೇಖೆಯು ಶನಿ ಪರ್ವತದವರೆಗೆ ಹೋಗುತ್ತಿದ್ದು, ಅದರೊಂದಿಗೆ ಸೂರ್ಯನ ರೇಖೆಯು ದಪ್ಪ ಮತ್ತು ಸ್ಪಷ್ಟವಾಗಿದ್ದರೆ ಅಂತಹವರನ್ನು ತುಂಬಾ ಅದೃಷ್ಟವಂತರು ಎಂದು ಕರೆಯಲಾಗುತ್ತದೆ. ಇವರು ಪ್ರತಿ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಾರೆ.
ಇದನ್ನೂ ಓದಿ : Samudrika Shastra: ಸಾಮುದ್ರಿಕಾ ಶಾಸ್ತ್ರದ ಸತ್ಯ..! ಈ ಕೈ ತುರಿಕೆಯಾದರೆ ಐಶ್ವರ್ಯ, ಅದೃಷ್ಟ.
ವ್ಯಕ್ತಿಯ ಕೈಯಲ್ಲಿ ಅದೃಷ್ಟ ರೇಖೆಯು ಗುರುಗ್ರಹದ ಮೌಂಟ್ ಅಥವಾ ಮೂನ್ ಮೌಂಟ್‌ನಿಂದ ಪ್ರಾರಂಭವಾಗಿ ಉದ್ದ, ಸ್ಪಷ್ಟ ಮತ್ತು ದಪ್ಪವಾಗಿ ಕಾಣಿಸಿಕೊಂಡರೆ, ಅವರು ಜೀವನದಲ್ಲಿ ಸುಲಭವಾಗಿ ಯಶಸ್ಸನ್ನು ಸಾಧಿಸುತ್ತಾರೆ. ಈ ಜನರು ತಮ್ಮ ಜೀವನದಲ್ಲಿ ಹೆಚ್ಚು ಕಷ್ಟಪಡಬೇಕಾಗಿಲ್ಲ ಎದ್ನು ಹೇಳಲಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ