Solar Eclipse 2022: ಇನ್ನೇನು ಕೆಲವೇ ದಿನಗಳಲ್ಲಿ ದೀಪಾವಳಿ ಹಬ್ಬ ಬರಲಿದೆ. ಆದರೆ ದೀಪಾವಳಿಯ ಮರುದಿನ ವರ್ಷದ ಕೊನೆಯ ಸೂರ್ಯಗ್ರಹಣ ಬೀಳಲಿದೆ. ಅಕ್ಟೋಬರ್ 25 ರಂದು ಸಂಭವಿಸಲಿರುವ ಈ ಸೂರ್ಯಗ್ರಹಣವನ್ನು ಕೇತು ಖಗ್ರಾಸ ಸೂರ್ಯಗ್ರಹಣ ಅಥವಾ ಖಂಡಗ್ರಾಸ ಸೂರ್ಯಗ್ರಹಣ ಎಂದು ಕರೆಯಲಾಗುತ್ತದೆ. ಈ ಗ್ರಹಣದ ಸಮಯ, ಆ ಸಂದರ್ಭದಲ್ಲಿ ಮಾಡಬೇಕಾದ ಪೂಜೆಗಳು, ಅವುಗಳ ವಿಧಾನ ಮತ್ತು ಗ್ರಹಣ ನಿಯಮಗಳ ಬಗ್ಗೆ ತಿಳಿದುಕೊಳ್ಳೋಣ. 


ಇದನ್ನೂ ಓದಿ: Surya Grahan 2022: ಒಂದೇ ಮಾಸದಲ್ಲಿ 2 ಗ್ರಹಣ, ಮಹಾಭಾರತ ಯುದ್ಧದಂತಹ ಸ್ಥಿತಿ ನಿರ್ಮಾಣ...ಎಚ್ಚರ!


COMMERCIAL BREAK
SCROLL TO CONTINUE READING

ಅಕ್ಟೋಬರ್ 25 ರಂದು ಸಂಭವಿಸಲಿರುವ ವರ್ಷದ ಕೊನೆಯ ಸೂರ್ಯಗ್ರಹಣವು ಯುರೋಪ್, ಈಶಾನ್ಯ ಆಫ್ರಿಕಾ ಮತ್ತು ಪಶ್ಚಿಮ ಏಷ್ಯಾದ ವಿವಿಧ ಭಾಗಗಳಲ್ಲಿ ಗೋಚರಿಸಲಿವೆ. ಇನ್ನು ದೇಶದ ಕೆಲವು ಸ್ಥಳಗಳಲ್ಲಿಯೂ ಗ್ರಹಣ ದರ್ಶನವಾಗಲಿದೆ. ಇನ್ನು ಭಾರತದಲ್ಲಿ ಈ ಗ್ರಹಣವು ವರ್ಷದ ಎರಡನೇ ಮತ್ತು ಕೊನೆಯ ಸೂರ್ಯಗ್ರಹಣವಾಗಿದೆ. ದೆಹಲಿ, ಬೆಂಗಳೂರು, ಕೋಲ್ಕತ್ತಾ, ಚೆನ್ನೈ, ಉಜ್ಜಯಿನಿ, ವಾರಣಾಸಿ ಮತ್ತು ಮಥುರಾದಲ್ಲಿ ಈ ಗ್ರಹಣ ಗೋಚರವಾಗಲಿದೆ.


ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಬಂದು ಸೂರ್ಯನ ಬೆಳಕನ್ನು ಭೂಮಿಗೆ ತಲುಪದಂತೆ ಸ್ವಲ್ಪ ಸಮಯದವರೆಗೆ ತಡೆಯುವುದನ್ನು ಸೂರ್ಯಗ್ರಹಣ ಎಂದು ಕರೆಯಲಾಗುತ್ತದೆ. ದೆಹಲಿಯಲ್ಲಿ ಸೂರ್ಯಗ್ರಹಣವು ಭಾರತೀಯ ಕಾಲಮಾನ ಸಂಜೆ 4:29 ಕ್ಕೆ ಪ್ರಾರಂಭವಾದರೆ, ಮುಂಬೈನಲ್ಲಿ ಸೂರ್ಯಗ್ರಹಣವು ಸಂಜೆ 4:49 ಕ್ಕೆ ಪ್ರಾರಂಭವಾಗುತ್ತದೆ. ಇನ್ನು ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಮುಂಬೈ ಎರಡಕ್ಕೂ ಕ್ರಮವಾಗಿ 1 ಗಂಟೆ 13 ನಿಮಿಷಗಳು ಮತ್ತು 1 ಗಂಟೆ 19 ನಿಮಿಷಕ್ಕೆ ಗ್ರಹಣ ಗೋಚರವಾಗಲಿದೆ. ಕೋಲ್ಕತ್ತಾದಲ್ಲಿ ಸೂರ್ಯಗ್ರಹಣವು ಭಾರತೀಯ ಕಾಲಮಾನ ಸಂಜೆ 4:52 ಕ್ಕೆ ಪ್ರಾರಂಭವಾಗುತ್ತದೆ. ಚೆನ್ನೈನಲ್ಲಿ ಸಂಜೆ 5:14 ಕ್ಕೆ ಪ್ರಾರಂಭವಾಗುತ್ತದೆ. ಇನ್ನು ಕರ್ನಾಟಕದ ಉಡುಪಿಯಲ್ಲಿ ಗ್ರಹಣ ಸ್ಪರ್ಶ ಸಂಜೆ 5:08 ರಿಂದ ಗ್ರಹಣ ಮೋಕ್ಷ ಸಂಜೆ 6:29ರವರೆಗೆ ಇರಲಿದೆ.


ಇದನ್ನೂ ಓದಿ: Dhanatrayodashi 2022: ಧನತ್ರಯೋದಶಿಯ ದಿನ ಖರೀದಿಗಾಗಿ ನಿರ್ಮಾಣಗೊಳ್ಳುತ್ತಿದೆ ಈ ಅದ್ಭುತ ಯೋಗಗಳು


ತುಲಾ, ವೃಶ್ಚಿಕ, ಮೀನ, ವೃಷಭ, ಕರ್ಕಾಟಕ ರಾಶಿಯವರಿಗೆ ಗ್ರಹಣದ ಅರಿಷ್ಠ ಪ್ರಭಾವವಿದ್ದರೆ, ಕುಂಭ, ಮೇಷ, ಮಿಥುನ, ಕನ್ಯಾ ರಾಶಿಯವರಿಗೆ ಮಧ್ಯಮ ಪ್ರಭಾವವಿರುತ್ತದೆ. ಇನ್ನು ಗ್ರಹಣದ ದಿನದಂದು ಉಪಹಾರ ಮಾತ್ರ ತೆಗೆದುಕೊಳ್ಳಬೇಕು. ಭೋಜನ ನಿಷಿದ್ಧವಾಗಿರುತ್ತದೆ. ಉಪಹಾರವನ್ನುಮಧ್ಯಾಹ್ನ 2 ಗಂಟೆಯ ಮುಂಚಿತವಾಗಿ ಸೇವನೆ ಮಾಡಬೇಕು. ಗ್ರಹಣ ಮೋಕ್ಷ ರಾತ್ರಿ 7 ರ ಸಂಭವಿಸಲಿದ್ದು, ಆ ಬಳಿಕ ಮಕ್ಕಳು, ವೃದ್ಧರು ಮತ್ತು ಅನಾರೋಗ್ಯ ವ್ಯಕ್ತಿಗಳು ಆಹಾರ ಸೇವನೆ ಮಾಡಬಹುದು. ಇನ್ನು ಈ ಸಮಯದಲ್ಲಿ ಗ್ರಹಣ ಶಾಂತಿ ಹಾಗೂ ಜಪ - ತಪ, ಅನುಷ್ಠಾನ, ವಿಷ್ಣು ಸಹಸ್ರ ನಾಮ ಪಠಣ ಮಾಡುವುದು ಉತ್ತಮ. ಇನ್ನು ಮುಖ್ಯವಾದ ವಿಚಾರವೆಂದರೆ ಗ್ರಹಣ ಹಿಡಿಯುವ ಮುನ್ನ ಮತ್ತು ಮುಗಿದ ನಂತರ ಸ್ನಾನ ಮಾಡಲೇಬೇಕು. ಆ ಬಳಿಕ ಆಹಾರ ಸೇವನೆ ಮಾಡಬೇಕು. 


 


 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.