ಬೆಂಗಳೂರು : ಜನ್ಮ ನಕ್ಷತ್ರ, ಜನ್ಮ ರಾಶಿ, ಜನ್ಮದಿನಾಂಕ,ಕೈಯಲ್ಲಿರುವ ರೇಖೆಗಳ  ಮೂಲಕ ನಮ್ಮ ನಾಳೆಗಳು ಹೇಗಿರಬಹುದು ಎನ್ನುವ ಬಗ್ಗೆ ತಕ್ಕ ಮಟ್ಟಿಗೆ ಅಂದಾಜಿಸಬಹುದು. ಹಾಗೆಯೇ,ವ್ಯಕ್ತಿಯ ಭವಿಷ್ಯ,ವೃತ್ತಿ,ಆರ್ಥಿಕ ಸ್ಥಿತಿ,ಸ್ವಭಾವ ಇತ್ಯಾದಿಗಳನ್ನು ನಮ್ಮ ಪಾದದ ಆಕಾರ,ವಿನ್ಯಾಸ, ಪಾದಗಳ ಬಣ್ಣ, ಕಾಲ್ಬೆರಳುಗಳು ಮತ್ತು ಅಡಿಭಾಗದಲ್ಲಿರುವ ಗುರುತುಗಳ ಮೂಲಕ ತಿಳಿಯಬಹುದು. 


COMMERCIAL BREAK
SCROLL TO CONTINUE READING

ಕಾಲ್ಬೆರಳುಗಳು:ಕಾಲ್ಬೆರಳುಗಳು ದಪ್ಪವಾಗಿದ್ದರೆ, ಆ ವ್ಯಕ್ತಿಯು ತನ್ನ ಪ್ರೀತಿಪಾತ್ರರಿಗಾಗಿ ಪ್ರಾಣ ಕೂಡಾ ಕೊಡಲು ಸಿದ್ದನಿರುತ್ತಾನೆ.ಯಾವಾಗಲೂ ತನ್ನ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಬಗ್ಗೆಯೇ ಚಿಂತಿಸುತ್ತಾ ಇರುತ್ತಾನೆ. ತನ್ನ ಸುತ್ತಲಿನ ಜನರನ್ನು ಸಂತೋಷವಾಗಿರಿಸಲು ತನ್ನ ಶಕ್ತಿ ಮೀರಿ ಶ್ರಮಿಸುತ್ತಾನೆ.


ಆದರೆ ಯಾರ ಕಾಲ್ಬೆರಳುಗಳು ಸಣ್ಣಗೆ ಇರುತ್ತವೆ ಅವರು ತನ್ನ ಇಚ್ಛೆಯಂತೆಯೇ  ಜೀವನವನ್ನು ನಡೆಸುತ್ತಾರೆ. ಅವರಿಗೆ ಅವರ ಸುಖ ಸಂತೋಷ ಬಿಟ್ಟರೆ ಬೇರೆ ಯಾರ ಬಗ್ಗೆಯೂ ಯೋಚನೆ ಇರುವುದೇ ಇಲ್ಲ.ಇವರು ತಮ್ಮ ಮೇಲೆ ಮಾತ್ರ ಖರ್ಚು ಮಾಡಿಕೊಳ್ಳುತ್ತಾರೆ. 


ಇದನ್ನೂ ಓದಿ :  19 ವರ್ಷಗಳ ರಾಜಯೋಗ !ಉಕ್ಕಿ ಬರುವ ಧನ ಸಂಪತ್ತು, ಹೆಜ್ಜೆ ಹೆಜ್ಜೆಗೂ ಗೆಲುವು !ಶನಿ ಮಹಾತ್ಮನಿಂದಲೇ ಬೆಳಗುವುದು ಈ ರಾಶಿಯವರ ಬಾಳು!


ಉದ್ದನೆಯ ಕಾಲ್ಬೆರಳು:ಕಾಲ್ಬೆರಳು ಪಕ್ಕದ ಬೆರಳಿಗೆ ಸಮನಾಗಿದ್ದರೆ ಅಂತಹ ಜನರು ಪ್ರಾಬಲ್ಯವನ್ನು ಹೊಂದಿರುತ್ತಾರೆ.ಅವರು ತಮ್ಮ ದೃಷ್ಟಿಕೋನವನ್ನು ಇತರರು ಒಪ್ಪಿಕೊಳ್ಳುವಂತೆ ಮಾಡುತ್ತಾರೆ. ನಾಯಕತ್ವದ ಗುಣ ಇವರಲ್ಲಿ ಇರುತ್ತದೆ. 


ಪಾದದ ಬಣ್ಣ: ಪಾದದ ಬಣ್ಣ ಗುಲಾಬಿ ಅಥವಾ ಕೆಂಪು ಬಣ್ಣದಲ್ಲಿದ್ದರೆ ಅದು ತುಂಬಾ ಮಂಗಳಕರವಾಗಿರುತ್ತದೆ.ಅಂತಹ ವ್ಯಕ್ತಿಯು ರಾಜನಂತೆ ಜೀವನ ನಡೆಸುತ್ತಾನೆ.ಅಪಾರ ಸಂಪತ್ತಿನ ಜತೆಗೆ ಸ್ಥಾನಮಾನ, ಪ್ರತಿಷ್ಠೆಯೂ ಸಿಗುತ್ತದೆ. ಒರಟು ಚರ್ಮದೊಂದಿಗೆ ಒಣ ಮತ್ತು ಹಳದಿ ಅಡಿಭಾಗ ಹೊಂದಿದ್ದರೆ ಅದು ಒಳ್ಳೆಯದಲ್ಲ. ಅಂತಹ ವ್ಯಕ್ತಿಯ ಜೀವನವು ಆರ್ಥಿಕ ಬಿಕ್ಕಟ್ಟು,ಹೋರಾಟ ಮತ್ತು ಸಮಸ್ಯೆ ಗಳಲ್ಲಿಯೇ ಮುಳುಗಿರುತ್ತದೆ. ಒಡೆದ ಹಿಮ್ಮಡಿಗಳಿದ್ದರೆ ಅದು ಹೆಚ್ಚು ಅಶುಭ. 


ಕಾಲ್ಬೆರಳುಗಳ ನಡುವಿನ ಅಂತರ: ಕಾಲ್ಬೆರಳುಗಳ ನಡುವೆ ದೊಡ್ಡ ಹೆಚ್ಚು ಅಂತರವಿದ್ದರೆ ಅವರು ತುಂಬಾ ಸ್ವಾರ್ಥಿಗಳಾಗಿರುತ್ತಾರೆ.ಶೋ ಆಫ್ ಮಾಡಿಕೊಂಡು ಬಾಳುವ ಬದುಕು ಇವರದ್ದು. ಇನ್ನು ಕಾಲ ಬೆರಳುಗಳು ಒಣದಕ್ಕೊಂದು ಅಂಟಿಕೊಂಡಿದ್ದರೆ ಅವರು ತುಂಬಾ ಪ್ರಾಮಾಣಿಕರು ಮತ್ತು ಶಾಂತ ಸ್ವಭಾವವನ್ನು ಹೊಂದಿರುತ್ತಾರೆ.


ಇದನ್ನೂ ಓದಿ: Budha Uday: ದೀಪಾವಳಿಗೂ ಮೊದಲೇ ಈ ರಾಶಿಯವರಿಗೆ ಲಕ್ಷ್ಮೀ ಕೃಪೆ, ಕೈತುಂಬಾ ಹಣ!


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.