ಗಣೇಶ ಚತುರ್ಥಿ ದಿನದಿಂದಲೇ ಈ ರಾಶಿಯವರ ಜೀವನದಲ್ಲಿ ಬೆಳಕು! ಪ್ರಗತಿಯ ಹಾದಿ ತೋರಿಸುತ್ತಾನೆ ವಿಘ್ನ ವಿನಾಶಕ
ಜ್ಯೋತಿಷ್ಯಶಾಸ್ತ್ರದ ಪ್ರಕಾರ, 300 ವರ್ಷಗಳ ನಂತರ ಈ ವರ್ಷ ವಿನಾಯಕ ಚತುರ್ಥಿಯಂದು ಅದ್ಭುತವಾದ ಯೋಗ ನಿರ್ಮಾಣವಾಗುತ್ತಿದೆ. ಈ ಮಂಗಳಕರ ಯೋಗಗಳು ಮೂರು ರಾಶಿಯವರ ಜೀವನದ ದಿಕ್ಕನ್ನೇ ಬದಲಾಯಿಸಲಿದೆ.
ಬೆಂಗಳೂರು : ವಿನಾಯಕ ಚತುರ್ಥಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ವಿನಾಯಕ ಚತುರ್ಥಿಯನ್ನು ಶಿವ ಮತ್ತು ಪಾರ್ವತಿ ದೇವಿಯ ಮಗ ವಿನಾಯಕನ ಜನ್ಮದಿನವಾಗಿ ಆಚರಿಸಲಾಗುತ್ತದೆ. ಈ ಬಾರಿಯ ವಿನಾಯಕ ಚತುರ್ಥಿಯನ್ನು ಸೆ.18ರಂದು ಆಚರಿಸಲಾಗುತ್ತಿದೆ. ವಿನಾಯಕ ಚತುರ್ಥಿಯ ತಿಥಿ ಸೆಪ್ಟೆಂಬರ್ 18 ರಂದು ಮಧ್ಯಾಹ್ನ 2:09 ರಿಂದ ಸೆಪ್ಟೆಂಬರ್ 19 ರಂದು ಮಧ್ಯಾಹ್ನ 3:13 ರವರೆಗೆ ಇರಲಿದೆ.
ಜ್ಯೋತಿಷ್ಯಶಾಸ್ತ್ರದ ಪ್ರಕಾರ, 300 ವರ್ಷಗಳ ನಂತರ ಈ ವರ್ಷ ವಿನಾಯಕ ಚತುರ್ಥಿಯಂದು ಅದ್ಭುತವಾದ ಯೋಗ ನಿರ್ಮಾಣವಾಗುತ್ತಿದೆ. ಈ ದಿನದಂದು ಬ್ರಹ್ಮಯೋಗ, ಶುಕ್ಲಯೋಗ ಮತ್ತು ಶುಭಯೋಗಗಳೆಂಬ ಮೂರು ಅದ್ಭುತ ಯೋಗಗಳು ಒಟ್ಟಾಗಿ ರೂಪುಗೊಳ್ಳುತ್ತವೆ. ಈ ಮಂಗಳಕರ ಯೋಗಗಳು ಮೂರು ರಾಶಿಯವರ ಜೀವನದ ದಿಕ್ಕನ್ನೇ ಬದಲಾಯಿಸಲಿದೆ.
ಇದನ್ನೂ ಓದಿ : Ketu Gochar: ಈ ರಾಶಿಯವರ ಜೀವನದಲ್ಲಿ ಬಿರುಗಾಳಿ ಎಬ್ಬಿಸಲಿದ್ದಾನೆ ಕೇತು
ಗಣೇಶ ಚತುರ್ಥಿ ದಿನದಿಂದ ಬದಲಾಗುವುದು ಈ ರಾಶಿಯವರ ಭವಿಷ್ಯ :
ಮೇಷ ರಾಶಿ :
ರಾಶಿಯವರಿಗೆ ಗಣೇಶನ ವಿಶೇಷ ಆಶೀರ್ವಾದ ಸಿಗುತ್ತದೆ. ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಕೆಲಸಗಳು ಗಣಪತಿಯ ಕೃಪೆಯಿಂದ ಪೂರ್ಣಗೊಳ್ಳಲಿವೆ. ವೈಯಕ್ತಿಕ ಜೀವನವೂ ಸಂತೋಷದಿಂದ ಕೂಡಿರುತ್ತದೆ. ಈಗ ಭೂಮಿಯ ಮೇಲೆ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಪಡೆಯಬಹುದು. ವಿನಾಯಕ ಚತುರ್ಥಿಯ ದಿನದಂದು, ಮೇಷ ರಾಶಿಯ ಜನರು ಗಣೇಶನಿಗೆ ಸಿಂಧೂರವನ್ನು ಅರ್ಪಿಸಿದರೆ ಅದರ ಮಂಗಳಕರ ಲಾಭವನ್ನು ಪಡೆಯಬಹುದು.
ಮಿಥುನ ರಾಶಿ :
ಗಣೇಶ ಚತುರ್ಥಿಯು ಮಿಥುನ ರಾಶಿಯವರಿಗೆ ಉತ್ತಮ ಸಮಯವನ್ನು ತರುವ ಅವಧಿಯಾಗಿದೆ. ಮಿಥುನ ರಾಶಿಯವರ ಭವಿಷ್ಯ ಉಜ್ವಲವಾಗಿರುತ್ತದೆ. ದೊಡ್ಡ ಮೊತ್ತದ ಹಣವನ್ನು ಪಡೆಯುವ ಅವಕಾಶವಿದೆ. ಕೆಲಸ ಮತ್ತು ವ್ಯವಹಾರದಲ್ಲಿ ಯಶಸ್ಸು ಸಿಗುವುದು. ಆರ್ಥಿಕ ಲಾಭವಾಗುವುದು. ಆರ್ಥಿಕ ಬಿಕ್ಕಟ್ಟು ದೂರವಾಗಲಿದೆ. ಕುಟುಂಬದಲ್ಲಿಯೂ ಸಂತೋಷ ಮತ್ತು ಸಮೃದ್ಧಿ ಇರುತ್ತದೆ.
ಇದನ್ನೂ ಓದಿ : Budh Uday2023: ಸಿಂಹ ರಾಶಿಯಲ್ಲಿ ಬುಧನ ಉದಯ, 4 ರಾಶಿಗಳ ಜನರ ಅಷ್ಟೈಶ್ವರ್ಯವನ್ನು ದುಪ್ಪಟ್ಟು ಮಾಡಲು ಬರಲಿದ್ದಾಳೆ ಅದೃಷ್ಟ ಲಕ್ಷ್ಮಿ!
ಮಕರ ರಾಶಿ :
ಗಣೇಶ ಚತುರ್ಥಿಯ ದಿನದಿಂದ ಮಕರ ರಾಶಿಯವರಿಗೆ ಹೆಚ್ಚಿನ ಗೌರವ ಸಿಗುತ್ತದೆ. ಮಕರ ರಾಶಿಯವರು ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಯಾಗಿ ಹೊರ ಹೊಮ್ಮುತ್ತಾರೆ. ಆದರೆ ಚತುರ್ಥಿಯಂದು ಗಣಪತಿಯನ್ನು ಪೂಜಿಸುವುದನ್ನು ಮರೆಯಬೇಡಿ. ಮಕರ ರಾಶಿಯವರಿಗೆ ಆದಾಯದ ಮೂಲಗಳು ವೇಗವಾಗಿ ಹೆಚ್ಚಾಗುತ್ತವೆ. ವ್ಯಾಪಾರ ಮತ್ತು ವ್ಯವಹಾರದಲ್ಲಿನ ತೊಂದರೆಗಳು ದೀರ್ಘಕಾಲದವರೆಗೆ ದೂರವಿರುತ್ತವೆ. ಎಲ್ಲಾ ಚಿಂತೆಗಳಿಂದ ಮುಕ್ತರಾಗುತ್ತೀರಿ. ಈ ಅವಧಿಯಲ್ಲಿಹಣಕಾಸಿನ ಲಾಭವಿರುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ