ಮುಂದಿನ ಶನಿವಾರದಿಂದ ಈ ರಾಶಿಯವರ ಮೇಲೆ ಲಕ್ಷ್ಮೀ ಕೃಪೆ ! ಒಲಿದು ಬರುವುದು ಕುಬೇರ ಖಜಾನೆ !
Sharad Purnima Gajkesari Yoga:ಈ ಬಾರಿಯ ಶರದ್ ಪೂರ್ಣಿಮೆಯ ಸಂದರ್ಭದಲ್ಲಿ ವರ್ಷದ ಕೊನೆಯ ಚಂದ್ರಗ್ರಹಣ ಕೂಡಾ ಸಂಭವಿಸಲಿದೆ. ಈ ಬಾರಿ ಶರದ್ ಪೂರ್ಣಿಮೆಯ ದಿನದಂದು ಅತ್ಯಂತ ಅಪರೂಪದ ಯೋಗಗಳು ರೂಪುಗೊಳ್ಳುತ್ತಿವೆ.
Sharad Purnima Gajkesari Yoga : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಬಾರಿ ಅಕ್ಟೋಬರ್ 28 ರಂದು ಅಶ್ವಿನಿ ಮಾಸದ ಹುಣ್ಣಿಮೆ ಬರುತ್ತದೆ. ಇದನ್ನು ಶರದ್ ಪೂರ್ಣಿಮಾ ಎಂದು ಕರೆಯಲಾಗುತ್ತದೆ. ಶರದ್ ಪೂರ್ಣಿಮೆಯ ವಿಶೇಷ ಮಹತ್ವವನ್ನು ಹಿಂದೂ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಈ ಬಾರಿಯ ಶರದ್ ಪೂರ್ಣಿಮೆಯ ಸಂದರ್ಭದಲ್ಲಿ ವರ್ಷದ ಕೊನೆಯ ಚಂದ್ರಗ್ರಹಣ ಕೂಡಾ ಸಂಭವಿಸಲಿದೆ. ಈ ಬಾರಿ ಶರದ್ ಪೂರ್ಣಿಮೆಯ ದಿನದಂದು ಅತ್ಯಂತ ಅಪರೂಪದ ಯೋಗಗಳು ರೂಪುಗೊಳ್ಳುತ್ತಿವೆ.
30 ವರ್ಷಗಳ ನಂತರ ಶರದ್ ಪೂರ್ಣಿಮೆಯ ದಿನದಂದು ಸಂಭವಿಸಲಿರುವ ಚಂದ್ರಗ್ರಹಣದೊಂದಿಗೆ ಗಜಕೇಸರಿ ಯೋಗವೂ ರೂಪುಗೊಳ್ಳುತ್ತಿದೆ. ಇದು 4 ರಾಶಿಯವರ ಅದೃಷ್ಟದ ಬಾಗಿಲು ತೆರೆಯಲಿದೆ. ಚಂದ್ರಗ್ರಹಣವು ಅಕ್ಟೋಬರ್ 28ರಂದು ರಾತ್ರಿ 11:32 ಕ್ಕೆ ಪ್ರಾರಂಭವಾಗಿ ಮುಂಜಾನೆ 3:36 ಕ್ಕೆ ಕೊನೆಗೊಳ್ಳುತ್ತದೆ.
ಇದನ್ನೂ ಓದಿ : ಶೀಘ್ರದಲ್ಲೇ ಮಂಗಳನ ಅಂಗಳದಲ್ಲಿ ಗುರು-ಚಂದ್ರರ ಮೈತ್ರಿ, ಶ್ರೀಹರಿ ಲಕ್ಷ್ಮಿ ಕೃಪೆಯಿಂದ ಈ ಜನ ತಿಜೋರಿ ಹಣದಿಂದ ತುಂಬಿ ತುಳುಕಲಿದೆ!
ಯಾರಿಗೆ ಒಲಿದು ಬರುವುದು ಅದೃಷ್ಟ :
ವೃಷಭ ರಾಶಿ :
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಶರದ್ ಪೂರ್ಣಿಮೆಯ ದಿನದಂದು ಸಂಭವಿಸುವ ಈ ಅಪರೂಪದ ಯೋಗ ವೃಷಭ ರಾಶಿಯ ಜನರ ಜೀವನದ ಮೇಲೆ ಮಂಗಳಕರ ಪರಿಣಾಮವನ್ನು ಬೀರುತ್ತದೆ. ಪರಿಣಾಮವಾಗಿ, ಉದ್ಯೋಗಿಗಳು ಮತ್ತು ವ್ಯಾಪಾರಿಗಳು ಎದುರಿಸುತ್ತಿರುವ ಸಮಸ್ಯೆಗಳು ಕೊನೆಗೊಳ್ಳುತ್ತವೆ. ವೃತ್ತಿಯಲ್ಲಿ ಪ್ರಗತಿಯ ಹಾದಿಗಳು ತೆರೆದುಕೊಳ್ಳುತ್ತವೆ. ವೇತನ ಹೆಚ್ಚಾಗುತ್ತದೆ. ಅನಿರೀಕ್ಷಿತ ಹಣ ಹರಿದು ಬರುತ್ತದೆ.
ಮಿಥುನ ರಾಶಿ :
ಚಂದ್ರಗ್ರಹಣದಂದು ರೂಪುಗೊಂಡ ಗಜಕೇಸರಿ ಯೋಗವು ಈ ರಾಶಿಯವರಿಗೆ ಬಹಳ ಮಂಗಳಕರವಾಗಿರಲಿದೆ. ಈ ಅವಧಿಯಲ್ಲಿ, ಗ್ರಹಣದ ಶುಭ ಫಲಿತಾಂಶಗಳು ಸಿಗಲಿವೆ. ಇದರಿಂದ ಜನರಿಗೆ ಮಾನಸಿಕ ಒತ್ತಡದಿಂದ ಮುಕ್ತಿ ಸಿಗಲಿದೆ. ದುಂದು ವೆಚ್ಚಕ್ಕೆ ಕಡಿವಾಣ ಬೀಳಲಿದೆ. ಈ ಅವಧಿಯಲ್ಲಿ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ. ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಹೆಚ್ಚಿನ ಲಾಭವಾಗುವುದು.
ಇದನ್ನೂ ಓದಿ : ಒಂದು ವರ್ಷದ ಬಳಿಕ ಶುಕ್ರನಿಂದ ನೀಚ್ ಭಂಗ್ ರಾಜಯೋಗ ರಚನೆ, ಶುಕ್ರದೆಸೆಯಿಂದ ಈ ಜನರ ಮೇಲೆ ಭಾರಿ ಕನಕವೃಷ್ಟಿ!
ಕನ್ಯಾರಾಶಿ :
ಜ್ಯೋತಿಷ್ಯದ ಪ್ರಕಾರ, ಕನ್ಯಾ ರಾಶಿಯವರಿಗೆ ಅಕ್ಟೋಬರ್ 28 ಅತ್ಯಂತ ಮಂಗಳಕರ ಮತ್ತು ವಿಶೇಷವಾಗಿರಲಿದೆ. ಈ ದಿನ ಈ ರಾಶಿಯವರು ಸಾಕಷ್ಟು ಲಾಭವನ್ನು ಗಳಿಸುತ್ತಾರೆ. ಸಾಲದಿಂದ ಶಾಶ್ವತವಾಗಿ ಮುಕ್ತಿ ಸಿಗಲಿದೆ. ಆಸ್ತಿಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ದೀರ್ಘಕಾಲದವರೆಗೆ ಲಾಭವನ್ನು ಗಳಿಸುವಿರಿ. ಒಟ್ಟಾರೆಯಾಗಿ, ಚಂದ್ರಗ್ರಹಣವು ದೈಹಿಕ, ಮಾನಸಿಕ ಮತ್ತು ಆರ್ಥಿಕ ಜೀವನಕ್ಕೆ ಮಂಗಳಕರವಾಗಿರುತ್ತದೆ.
ಕುಂಭ ರಾಶಿ :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕುಂಭ ರಾಶಿಯ ಜನರು ಚಂದ್ರನ ಪ್ರಭಾವದಿಂದ ಪ್ರತಿಯೊಂದು ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಈ ಅವಧಿಯಲ್ಲಿ ವ್ಯಾಪಾರದಲ್ಲಿ ಅಪಾರವಾದ ಆರ್ಥಿಕ ಲಾಭಗಳಿರುತ್ತವೆ. ಿ ಅನಿರೀಕ್ಷಿತವಾಗಿ ಹಣ ಕೈ ಸೇರುತ್ತದೆ. ಪೂರ್ವಿಕರ ಆಸ್ತಿಯಿಂದ ಲಾಭವಾಗುವುದು. ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಯಾಗುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಧನಾತ್ಮಕ ಫಲಿತಾಂಶಗಳನ್ನು ಕಾಣಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.