Gajlaxmi Rajyog: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಐಷಾರಾಮಿ ಜೀವನಕಾರಕ ಶುಕ್ರನು ಇನ್ನೂ ಮೂರು ದಿನಗಳಲ್ಲಿ ಎಂದರೆ ಮೇ 19ರಂದು ವೃಷಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಜ್ಯೋತಿಷ್ಯದಲ್ಲಿ ಮಂಗಳ ಗ್ರಹಗಳಲ್ಲಿ ಒಂದು ಎಂದು ಪರಿಗಣಿಸಲಾಗಿರುವ ಗುರು ಈಗಾಗಲೇ ಮೇ 01ರಂದು ವೃಷಭ ರಾಶಿಗೆ ಪದಾರ್ಪಣೆ ಮಾಡಿದ್ದಾರೆ. ಇದರಿಂದಾಗಿ ವೃಷಭ ರಾಶಿಯಲ್ಲಿ ಗುರು-ಶುಕ್ರರ ಸಂಯೋಗ (Guru Shukra Yuti) ಉಂಟಾಗಲಿದೆ. ಇದರಿಂದಾಗಿ ಅತ್ಯಂತ ಮಂಗಳಕರ ಯೋಗಗಳಲ್ಲಿ ಒಂದಾದ ಗಜಲಕ್ಷ್ಮಿ ಯೋಗ (Gajalaxmi Rajayoga) ರಚನೆಯಾಗಲಿದೆ.


COMMERCIAL BREAK
SCROLL TO CONTINUE READING

ಗಜಲಕ್ಷ್ಮಿ ಯೋಗದ ಪರಿಣಾಮ: 
ಗುರು-ಶುಕ್ರರ ಸಂಯೋಗದಿಂದ ನಿರ್ಮಾಣವಾಗಲಿರುವ ಗಜಲಕ್ಷ್ಮಿ ರಾಜಯೋಗವು  (Gajalaxmi Rajayoga) ಎಲ್ಲಾ 12 ರಾಶಿಯವರ ಮೇಲೆ ಪರಿಣಾಮ ಬಿರುತ್ತದೆ. ಆದರೂ, ನಾಲ್ಕು ರಾಶಿಯವರಿಗೆ ಇದನ್ನು ಅದೃಷ್ಟದ ಸಮಯ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ಹಣದ ಪ್ರವಾಹವೇ ಹರಿಯಲಿದ್ದು  ನಾಲ್ಕು ರಾಶಿಯವರು ಶ್ರೀಮಂತರಾಗುವ ಯೋಗವಿದೆ ಎಂದು ಹೇಳಲಾಗುತ್ತಿದೆ. ಆ ದೃಷ್ಟದ ರಾಶಿಗಳೆಂದರೆ.. 


ಮೂರು ದಿನಗಳ ಬಳಿಕ ಈ ರಾಶಿಯವರಿಗೆ ತೆರೆಯಲಿದೆ ಭಾಗ್ಯದ ಬಾಗಿಲು: 
ಮೇಷ ರಾಶಿ: 

ಗಜಲಕ್ಷ್ಮಿ ರಾಜಯೋಗವು (Gajalaxmi Rajayoga) ಮೇಷ ರಾಶಿಯ ಜನರಿಗೆ ಹಣಕಾಸಿನ ಮೂಲಗಳನ್ನು ಹೆಚ್ಚಿಸಲಿದೆ. ನಿಮಗೆ ನಿಮ್ಮ ಮಾತೇ ಬಂಡವಾಳವಾಗಿರುವುದರಿಂದ ಇದರ ಸದುಪಯೋಗ ಪಡಿಸಿಕೊಳ್ಳಿ. ಉದ್ಯೋಗಸ್ಥರಿಗೆ ಬಡ್ತಿ ಸಂಭವ, ಸಮಾಜದಲ್ಲಿ ಗೌರವವೂ ಹೆಚ್ಚಾಗಲಿದೆ. 


ಇದನ್ನೂ ಓದಿ- Shash Rajyog 2024: ಈ ರಾಶಿಯವರು ಮುಂದಿನ 1 ವರ್ಷ ಸಾಕಷ್ಟು ಹಣವನ್ನು ಗಳಿಸುತ್ತಾರೆ..!


ವೃಷಭ ರಾಶಿ: 
ಸ್ವ ರಾಶಿಯಲ್ಲಿ ನಿರ್ಮಾಣವಾಗುತ್ತಿರುವ ಗಜಲಕ್ಷ್ಮಿ ರಾಜಯೋಗವು ವೃಷಭ ರಾಶಿಯ ಜನರಿಗೆ ಭಾಗ್ಯದ ಬಾಗಿಲುಗಳನ್ನು ತೆರೆಯಲಿದೆ. ಈ ಸಮಯದಲ್ಲಿ ಬಹು ದಿನಗಳಿಂದ ಸ್ಥಗಿತಗೊಂಡಿರುವ ಮಹತ್ವದ ಕೆಲಸಗಳು ಪೂರ್ಣಗೊಳ್ಳಲಿವೆ. ವೃತ್ತಿ ಬದುಕಿನಲ್ಲಿ ಒಳ್ಳೆಯ ಅವಕಾಶಗಳು ದೊರೆಯಲಿವೆ. ಹಣಕಾಸಿನ ಸ್ಥಿತಿ ಸುಧಾರಿಸಿ, ನಿಮ್ಮ ಬಹುದಿನಗಳ ಕನಸು ನನಸಾಗುವ ಸಮಯ ಇದಾಗಿದೆ. 


ಮಕರ ರಾಶಿ: 
ಗಜಲಕ್ಷ್ಮಿ ರಾಜಯೋಗ ಮಕರ ರಾಶಿಯವರಿಗೆ  ಕೂಡ  ಯಶಸ್ಸಿನ ಹಾದಿಯನ್ನು ಟೆತೆಯಲಿದೆ. ಅನಿರೀಕ್ಷಿತ ಧನ ಲಾಭಗಳು ಹಣಕಾಸಿನ ಸ್ಥಿತಿಯನ್ನು ಸುಧಾರಿಸಲಿವೆ. ಕೌಟುಂಬಿಕ ಜೀವನ ಆರಾಮದಾಯಕವಾಗಿ, ಸುಖಮಯವಾಗಿರಲಿದೆ. ಮಕ್ಕಳಿಂದ ಸಿಹಿ ಸುದ್ದಿಯನ್ನು ನಿರೀಕ್ಷಿಸಬಹುದು. 


ಇದನ್ನೂ ಓದಿ- ಗುರುವಿನ ರಾಶಿಯಲ್ಲಿ ನಾಲ್ಕು ದೊಡ್ಡ ಗ್ರಹಗಳ ಸಂತೆ, ಈ ಜನರಿಗೆ ಹಗಲು ರಾತ್ರಿ ಎನ್ನದೆ ಭಾರಿ ಸಿರಿಸಂಪತ್ತು ಸಿಗಲಿದೆ!


ಕುಂಭ ರಾಶಿ: 
ಗುರು-ಶುಕ್ರರ ಯುತಿಯಿಂದ ನಿರ್ಮಾಣವಾಗಿರುವ ಗಜಲಕ್ಷ್ಮಿ ರಾಜಯೋಗವು ಕುಂಭ ರಾಶಿಯವರ ಜೀವನದಲ್ಲಿ ಸುಖ-ಸಂತೋಷ-ಸಮೃದ್ಧಿಯನ್ನು ಹೆಚ್ಚಿಸಲಿದೆ. ಹೂಡಿಕೆಯಿಂದ ಲಾಭವನ್ನು ಪಡೆಯುವಿರಿ. ಹೊಸ ಮನೆ, ವಾಹನ ಖರೀದಿ ಯೋಗವಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=O-hDphMYFMg
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.