Ganesh Sthapana Muhurat 2023 : ಗಣೇಶೋತ್ಸವ ಹಬ್ಬವು ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ದಿನಾಂಕದಿಂದ ಪ್ರಾರಂಭವಾಗುತ್ತದೆ. ಈ ದಿನದಂದು ಪ್ರತಿ ಮನೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಈ ವರ್ಷ, ಗಣೇಶ ಉತ್ಸವವು , ಸೆಪ್ಟೆಂಬರ್ 19  2023 ಮಂಗಳವಾರದಿಂದ ಪ್ರಾರಂಭವಾಗುತ್ತಿದೆ. ಸೆಪ್ಟೆಂಬರ್ 28 ರ ಅನಂತ ಚತುರ್ದಶಿಯಂದು ಗಣೇಶ ವಿಸರ್ಜನೆ ನಡೆಯಲಿದೆ. ದೇಶದ ಹಲವು ರಾಜ್ಯಗಳಲ್ಲಿ ಗಣೇಶ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. 


COMMERCIAL BREAK
SCROLL TO CONTINUE READING

ಗಣೇಶನ ಪ್ರತಿಷ್ಠಾಪನೆಗೆ ಶುಭ ಸಮಯ  : 
ಗಣೇಶ ಚತುರ್ಥಿಯ ದಿನದಂದು ಜನರು ವಿಘ್ನವಿನಾಶಕ ಗಣಪತಿಯ ಮೂರ್ತಿಯನ್ನು ವಿಜೃಂಭಣೆಯಿಂದ ಮನೆಗೆ ತಂದು ಪ್ರತಿಷ್ಠಾಪಿಸುತ್ತಾರೆ. ಈ ದಿನ ಗಣೇಶನನ್ನು ವಿಧಿ ವಿಧಾನಗಳೊಂದಿಗೆ ಪೂಜಿಸಲಾಗುತ್ತದೆ. ಅಲ್ಲದೆ, ಸಾರ್ವಜನಿಕ ಸ್ಥಳಗಳಲ್ಲಿಯೂ ಗಣೇಶ ಮಂಡಳಿಗಳಿಂದ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಈ ವರ್ಷ, ಭಾದ್ರಪದ ಶುಕ್ಲದ ಚತುರ್ಥಿ ತಿಥಿಯು 18 ಸೆಪ್ಟೆಂಬರ್ 2023 ರಂದು ಮಧ್ಯಾಹ್ನ 12:39 ರಿಂದ ಪ್ರಾರಂಭವಾಗುತ್ತದೆ ಮತ್ತು ಸೆಪ್ಟೆಂಬರ್ 19 ರಂದು ಮಧ್ಯಾಹ್ನ 01:43 ಕ್ಕೆ ಕೊನೆಗೊಳ್ಳುತ್ತದೆ. ಈ ಸಮಯದಲ್ಲಿ, ಸೆಪ್ಟೆಂಬರ್ 19 ರಂದು ಬೆಳಿಗ್ಗೆ 11:01 ರಿಂದ ಮಧ್ಯಾಹ್ನ 1:28 ರವರೆಗೆ ಗಣೇಶ ಸ್ಥಾಪನಾ ಅಥವಾ ಪೂಜೆಗೆ ಮಂಗಳಕರ ಸಮಯವಾಗಿರುತ್ತದೆ. ಅಂದರೆ, ಈ ವರ್ಷ ಗಣೇಶ ಸ್ಥಾಪನಾ ಶುಭ ಮುಹೂರ್ತದ ಒಟ್ಟು ಅವಧಿ 02 ಗಂಟೆ 27 ನಿಮಿಷಗಳು.


ಇದನ್ನೂ ಓದಿ : 300 ವರ್ಷಗಳ ಬಳಿಕ 3 ಮಹಾಯೋಗಗಳು: ಈ ರಾಶಿಗೆ ಸಿರಿವಂತಿಕೆ ಭಾಗ್ಯ: ಮಹತ್ವಾಕಾಂಕ್ಷೆ ಈಡೇರುವ ಸಮಯ, ಇವರಷ್ಟು ಅದೃಷ್ಟವಂತರು ಮತ್ಯಾರೂ ಇಲ್ಲ


ಗಣೇಶ ಚತುರ್ಥಿಯ ದಿನ ಚಂದ್ರನನ್ನು ನೋಡಬಾರದು : 
ಧಾರ್ಮಿಕ ಗ್ರಂಥಗಳ ಪ್ರಕಾರ, ಚತುರ್ಥಿಯ ದಿನದಂದು ಚಂದ್ರನನ್ನು ನೋಡಬಾರದು. ಗಣೇಶ ಚತುರ್ಥಿಯ ದಿನದಂದು ಚಂದ್ರನನ್ನು ನೋಡಿದರೆ  ವ್ಯಕ್ತಿ ಸುಳ್ಳು ಕಳಂಕವನ್ನು ಹೊರಬೇಕಾಗಿ ಬರುತ್ತದೆ ಎನ್ನುವುದು ನಂಬಿಕೆ.  ಭಗವಾನ್ ಶ್ರೀ ಕೃಷ್ಣನು ಚತುರ್ಥಿಯಂದು ಚಂದ್ರನನ್ನು ನೋಡಿದ್ದ ಕಾರಣದಿಂದಾಗಿ ಶಮಂತಕ ಮಣಿಯನ್ನು ಕದ್ದಿರುವ ಆರೋಪ ಹೊರಬೇಕಾಯಿತು ಎನ್ನುತ್ತದೆ ಪುರಾಣ. ಒಂದು ವೇಳೆ ಗಣೇಶ ಚತುರ್ಥಿ ದಿನದಂದು ಚಂದ್ರನನ್ನು ನೋಡಿದರೆ, ಕೃಷ್ಣ ಶಮಂತಕ ಮಣಿಯ  ಕಥೆಯನ್ನು ಓದುವ ಅಥವಾ ಕೇಳುವ ಮೂಲಕ  ಈ ಪಾಪದಿಂದ ಮುಕ್ತಿ ಹೊಂದಬಹುದು. 


ಗಣೇಶ ಚತುರ್ಥಿಯಂದು ಚಂದ್ರೋದಯ ಸಮಯ : 
ಈ ಗಣೇಶ ಚತುರ್ಥಿಯಂದು, ಚಂದ್ರೋದಯದ ಸಮಯವು ಒಂದು ದಿನ ಮುಂಚಿತವಾಗಿರುತ್ತದೆ. ಇಂದು ಚಂದ್ರದರ್ಶನ ಸಮಯವು ಬೆಳಿಗ್ಗೆ 09:45 ರಿಂದ ರಾತ್ರಿ 08:44 ರವರೆಗೆ ಇರುತ್ತದೆ. ಅಂದರೆ ಸುಮಾರು 10 ಗಂಟೆ 59 ನಿಮಿಷಗಳವರೆಗೆ ಇರುತ್ತದೆ.  


ಇದನ್ನೂ ಓದಿ : Weekly Horoscope: ಈ 2 ರಾಶಿಯ ನಿರುದ್ಯೋಗಿಗಳಿಗೆ ಹೊಸ ಉದ್ಯೋಗ ಯೋಗ, ಹಣಕಾಸಿನ ಸ್ಥಿತಿಯಲ್ಲಿ ಸುಧಾರಣೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.