Ganesh Chalisa: ಭಕ್ತಿಯಿಂದ ಗಣೇಶ ಚಾಲೀಸಾ ಪಠಿಸಿದ್ರೆ ಕಷ್ಟಗಳು ದೂರಾಗಿ ಸಂಪತ್ತು ಹೆಚ್ಚಾಗುತ್ತದೆ!
Ganesh Chalisa Vidhi: ಶಾಸ್ತ್ರಗಳ ಪ್ರಕಾರ ಮಾನಸಿಕ ಶಾಂತಿಗಾಗಿ ಗಣೇಶ ಚಾಲೀಸಾವನ್ನು ಪಠಿಸಲು ಸಹ ಸಲಹೆ ನೀಡಲಾಗುತ್ತದೆ. ಇದರಿಂದ ಮನೆಯಲ್ಲಿ ಸುಖ ಶಾಂತಿ ನೆಲೆಸಿದ್ದು, ಅಧ್ಯಯನದಲ್ಲಿ ಏಕಾಗ್ರತೆ ಹೆಚ್ಚುತ್ತದೆ.
ನವದೆಹಲಿ: ಯಾವುದೇ ಶುಭ ಕಾರ್ಯಗಳಿಗೆ ಮೊದಲ ಆಮಂತ್ರಣವನ್ನು ವಿಘ್ನನಿವಾರಕ ಗಣೇಶನಿಗೆ ನೀಡಲಾಗುತ್ತದೆ. ಇದರಿಂದ ಆ ಕೆಲಸಗಳು ಸುಗಮವಾಗಿ ಪೂರ್ಣಗೊಳ್ಳುತ್ತವೆ ಎಂಬ ನಂಬಿಕೆಯಿದೆ. ಶಾಸ್ತ್ರಗಳಲ್ಲಿ ಗಣೇಶನನ್ನು ಮೊದಲು ಪೂಜಿಸಲಾಗುತ್ತದೆ ಎಂದು ವಿವರಿಸಲಾಗಿದೆ. ವಾರದ ಬುಧವಾರ ಗಣೇಶನಿಗೆ ಸಮರ್ಪಿತವಾಗಿದೆ. ಈ ದಿನದಂದು ಗಣೇಶನನ್ನು ಭಕ್ತಿಯಿಂದ ಪೂಜಿಸುವುದು, ಉಪವಾಸ ಇತ್ಯಾದಿ ಮಾಡುವುದರಿಂದ ವ್ಯಕ್ತಿಯು ಜೀವನದಲ್ಲಿ ಯಾವುದೇ ಬಿಕ್ಕಟ್ಟು ಮತ್ತು ದುಃಖ ಎದುರಾಗುವುದಿಲ್ಲ. ಇದಲ್ಲದೆ ಗಣಪತಿಯ ಕೃಪೆಯಿಂದ ಭಕ್ತರ ಇಷ್ಟಾರ್ಥಗಳು ನೆರವೇರುತ್ತವೆ.
ಜ್ಯೋತಿಷ್ಯದಲ್ಲಿ ಗಣೇಶ ಚಾಲೀಸಾವನ್ನು ಪಠಿಸುವ ವಿಶೇಷ ಪ್ರಾಮುಖ್ಯತೆಯ ಬಗ್ಗೆ ವಿವರಿಸಲಾಗಿದೆ. ಕ್ರಮಬದ್ಧವಾಗಿ ಗಣೇಶ ಚಾಲೀಸವನ್ನು ಪಠಿಸುವುದರಿಂದ ನಿಮಗೆ ಅನೇಕ ಪ್ರಯೋಜನಗಳಿವೆ. ಧರ್ಮಗ್ರಂಥಗಳ ಪ್ರಕಾರ ಗಣೇಶ ಚಾಲೀಸಾವನ್ನು ಸರಿಯಾದ ರೀತಿಯಲ್ಲಿ ಪಠಿಸುವುದರಿಂದ ಪೂಜೆಯ ಸಂಪೂರ್ಣ ಫಲಿತಾಂಶ ದೊರೆಯುತ್ತದೆ. ಇದಕ್ಕಾಗಿಯೇ ಗಣೇಶ ಚಾಲೀಸವನ್ನು ಪಠಿಸುವಾಗ ಈ ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.
ಇದನ್ನೂ ಓದಿ: Bad Luck : ಯಾವಾಗಲೂ ಮನೆಯಲ್ಲಿ ಹಾಲು ಉಕ್ಕುತ್ತಿದ್ದರೆ ಅದರ ಅರ್ಥ ಏನು ಗೊತ್ತಾ?
ಗಣೇಶ ಚಾಲೀಸಾ ಪಠಿಸುವ ಸರಿಯಾದ ವಿಧಾನ
- ಬುಧವಾರದಂದು ಗಣೇಶ ಚಾಲೀಸಾವನ್ನು ಪಠಿಸಲು ಬೆಳಗ್ಗೆ ಬೇಗನೆ ಎದ್ದು, ಸ್ನಾನ ಇತ್ಯಾದಿಗಳನ್ನು ಮಾಡಿದ ನಂತರ ಶುದ್ಧವಾದ ಬಟ್ಟೆಗಳನ್ನು ಧರಿಸಿ ಪಂಚೋಪಚಾರದಿಂದ ಪೂಜಿಸಬೇಕು.
- ಪೂಜೆಯ ಸಮಯದಲ್ಲಿ ಗಣೇಶನಿಗೆ ತನ್ನ ಪ್ರೀತಿಯ ಗರಿಕೆ ಹುಲ್ಲನ್ನು ಅರ್ಪಿಸಬೇಕು. ಇದಲ್ಲದೆ ಹೂವುಗಳು ಮತ್ತು ಅವರ ನೆಚ್ಚಿನ ವಸ್ತುಗಳನ್ನು ಸಹ ಅರ್ಪಿಸಬೇಕು.
- ಗಣೇಶ ಚಾಲೀಸಾವನ್ನು ಪಠಿಸುವಾಗ ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖಮಾಡಿ ಮಾತ್ರ ಪೂಜಿಸಬೇಕು.
- ಇದರ ನಂತರ ಭಗವಾನ್ ಶಿವ, ತಾಯಿ ಪಾರ್ವತಿ ಮತ್ತು ಗಣೇಶನನ್ನು ಭಕ್ತಿಯಿಂದ ಧ್ಯಾನಿಸಬೇಕು.
ಗಣೇಶ ಚಾಲೀಸಾ ಪಠಿಸುವುದರಿಂದ ಆಗುವ ಲಾಭಗಳು
- ಈ ದಿನ ಗಣೇಶ ಚಾಲೀಸವನ್ನು ಪಠಿಸುವುದರಿಂದ ರಿದ್ಧಿ-ಸಿದ್ಧಿ, ಜ್ಞಾನ, ವಿವೇಚನೆ ಇತ್ಯಾದಿಗಳನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ. ಅದೇ ರೀತಿ ಹಣ ಗಳಿಸಲು ಗಣೇಶ ಚಾಲೀಸಾವನ್ನು ಪಠಿಸಬೇಕು.
- ಶಾಸ್ತ್ರಗಳ ಪ್ರಕಾರ ಮಾನಸಿಕ ಶಾಂತಿಗಾಗಿ ಗಣೇಶ ಚಾಲೀಸಾವನ್ನು ಪಠಿಸಲು ಸಹ ಸಲಹೆ ನೀಡಲಾಗುತ್ತದೆ. ಇದರಿಂದ ಮನೆಯಲ್ಲಿ ಸುಖ ಶಾಂತಿ ನೆಲೆಸಿದ್ದು, ಅಧ್ಯಯನದಲ್ಲಿ ಏಕಾಗ್ರತೆ ಹೆಚ್ಚುತ್ತದೆ.
- ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗಣೇಶ ಚಾಲೀಸಾವನ್ನು ಸರಿಯಾದ ರೀತಿಯಲ್ಲಿ ಪಠಿಸಿದರೆ ವ್ಯವಹಾರದಲ್ಲಿ ಪ್ರಗತಿಯಾಗುತ್ತದೆ. ಶತ್ರುಗಳ ಮೇಲೆ ವಿಜಯವನ್ನು ಪಡೆಯಲು ಗಣೇಶ ಚಾಲೀಸಾವನ್ನು ಪಠಿಸಲು ಸಹ ಸಲಹೆ ನೀಡಲಾಗುತ್ತದೆ.
ಚತುರ್ಥಿಯ ದಿನದಂದು ‘ಗಜಾನನಂ ಭೂತ ಗಣಾದಿ ಸೇವಿತಂ, ಕಪಿತ್ತ ಜಂಬು ಫಲ ಚಾರು ಭಕ್ಷಣಂ’ ಮತ್ತು 'ಉಮಾಸುತಂ ಶೋಕ ವಿನಾಶಕಾರಕಂ, ನಮಾಮಿ ವಿಘ್ನೇಶ್ವರ ಪಾದ ಪಂಕಜಂ’ ಮಂತ್ರ ಪಠಿಸುವ ಮೂಲಕ ಗಣಪತಿಯನ್ನು ಪೂಜಿಸಬೇಕು. ಇದರಿಂದ ನಿಮ್ಮ ಎಲ್ಲಾ ರೀತಿಯ ಅಡೆತಡೆಗಳು ನಿವಾರಣೆಯಾಗುತ್ತವೆ.
ಅಪಾರ ಸಂಪತ್ತನ್ನು ಪಡೆಯುವ ಆಸೆಯಿದ್ದರೆ ಗಣೇಶ ಸ್ತೋತ್ರ ಮತ್ತು ಕುಬೇರ ಮಂತ್ರದೊಂದಿಗೆ ‘ಓಂ ಶ್ರೀಂ ಓಂ ಹ್ರೀಂ ಶ್ರೀಂ ಹ್ರೀಂ ಕ್ಲೀಂ ಶ್ರೀಂ ಕ್ಲೀಂ ವಿತ್ತೇಶ್ವರಾಯ ನಮಃ’ ಮಂತ್ರವನ್ನು 11 ಬಾರಿ ಪಠಿಸಬೇಕು. ಇದರಿಂದ ನಿಮಗೆ ಅಪಾರ ಸಂಪತ್ತಿನ ಲಾಭ ದೊರೆಯುತ್ತದೆ.
ಇದನ್ನೂ ಓದಿ: Samudrik Shastra : ಹಣೆಯ ಮೇಲಿನ ಗೆರೆಗಳಿಂದ ನಿಮ್ಮ ಆಯಸ್ಸನ್ನು ತಿಳಿಯಿರಿ
(ಸೂಚನೆ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದಕ್ಕೆ ಹೊಣೆಯಾಗಿರುವುದಿಲ್ಲ)
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.