Ganesh Favourite Zodiac Signs: ಕೆಲವೊಂದು ರಾಶಿಗಳಿಗೆ ಕೆಲವೊಂದು ಗ್ರಹಗಳು ಅಧಿದೇವತೆಯಾಗಿರುತ್ತವೆ. ಇನ್ನೂ ಕೆಲ ರಾಶಿಗಳೆಂದರೆ ದೇವರಿಗೆ ಅತೀ ಪ್ರಿಯವಾಗಿರುತ್ತವೆ. ಅಂತೆಯೇ ನಾವಿಂದು ಗಣಪತಿ ಪ್ರಿಯವಾದ ಕೆಲ ರಾಶಿಗಳ ಬಗ್ಗೆ ಮತ್ತು ದೀಪಾವಳಿ ಹಬ್ಬದಂದು ಅವರ ರಾಶಿಭವಿಷ್ಯ ಹೇಗಿರುತ್ತವೆ ಎಂದು ತಿಳಿಸಿಕೊಡಲಿದ್ದೇವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ತಾತ ಪ್ರಧಾನಿ.. ಪತಿ ಸ್ಟಾರ್ ಹೀರೋ.. ಈಕೆ ಬ್ಯಾಗ್ರೌಂಡ್‌ ಕೇಳಿದ್ರೆ ನಿಮ್ಮ ತಲೆ ಗಿರ್‌.. ಅನ್ನುತ್ತೆ...!


ವಿಘ್ನ ವಿನಾಶಕ ಗಣೇಶನ ಕೃಪೆಯಿಂದ ದೀಪಾವಳಿ ಹಬ್ಬದಂದು ಮೂರು ರಾಶಿಯ ಜನರಿಗೆ ಸಮೃದ್ಧಿಯ ಜೊತೆಗೆ ಜೀವನದಲ್ಲಿ ಸಂತೋಷ, ಮತ್ತು ವೈಭವ ತುಂಬಲಿದೆ. ಅಷ್ಟೇ ಅಲ್ಲದೆ, ಗಣೇಶನು ಯಾವಾಗಲೂ ಇವರ ಮೇಲೆ ದಯೆ ತೋರುತ್ತಾನೆ ಎಂದು ಜೋತಿಷ್ಯದಲ್ಲಿ ಉಲ್ಲೇಖಿಸಲಾಗಿದೆ.


ಹಿಂದೂ ಧರ್ಮದಲ್ಲಿ ಗಣೇಶ ದೇವರನ್ನು ಮೊದಲ ಪೂಜ್ಯ ದೇವತೆ ಎಂದು ಪರಿಗಣಿಸಲಾಗುತ್ತದೆ. ಗೌರಿಸುತ  ಶ್ರೀಗಣೇಶನನ್ನು ಯಾವುದೇ ಮಂಗಳಕರ ಕೆಲಸ ಅಥವಾ ಆಚರಣೆಗಳ ಮೊದಲು ಪೂಜಿಸಲಾಗುತ್ತದೆ. ಗಣೇಶನನ್ನು ಮೊದಲು ಪೂಜಿಸಿದರೆ ಯಾವುದೇ ಕೆಲಸವು ಖಂಡಿತವಾಗಿಯೂ ಯಶಸ್ವಿಯಾಗುತ್ತದೆ ಎಂದು ನಂಬಿಕೆ. ಅಂದಹಾಗೆ ಗಣೇಶನ ಕೃಪೆಯಿಂದ ಯಾವ ರಾಶಿಯವರಿಗೆ ಜೀವನದಲ್ಲಿ ಒಳಿತಾಗಲಿದೆ ಎಂಬುದನ್ನು ತಿಳಿದುಕೊಳ್ಳೋಣ.


ಮೇಷ ರಾಶಿ: ಜ್ಯೋತಿಷ್ಯದ ಪ್ರಕಾರ, ಮೇಷ ರಾಶಿಯ ಜನರು ಗಣೇಶನ ಆಶೀರ್ವಾದವನ್ನು ಹೊಂದಿರುತ್ತಾರೆ. ಗಣೇಶನ ಕೃಪೆಯಿಂದ ಈ ರಾಶಿಯ ಜನರು ಹೆಚ್ಚು ಕೌಶಲ್ಯ ಮತ್ತು ಬುದ್ಧಿವಂತರಾಗುತ್ತಾರೆ. ಪ್ರತಿ ಕಷ್ಟಕರವಾದ ಕೆಲಸವನ್ನು ಸುಲಭವಾಗಿ ಮಾಡಲು ಇವರಿಗೆ ಸಾಧ್ಯವಾಗುತ್ತದೆ.


ಮಿಥುನ ರಾಶಿ: ಮಿಥುನ ರಾಶಿಯವರಿಗೆ ಕೂಡ ಗಣೇಶ ದೇವರ ದಯೆ ಇರುತ್ತದೆ. ಇದೇ ಕಾರಣದಿಂದ ಈ ರಾಶಿಯ ಜನರಿಗೆ  ಅಧ್ಯಯನದಲ್ಲಿ ಪ್ರಗತಿ ಇರುತ್ತದೆ. ಜೊತೆಗೆ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸು ಇರುತ್ತದೆ.


ಮಕರ ರಾಶಿ: ಈ ರಾಶಿಯ ಜನರು ತುಂಬಾ ಸೂಕ್ಷ್ಮ ಮನಸ್ಸನ್ನು ಹೊಂದಿರುತ್ತಾರೆ. ಪ್ರತೀದಿನ ಇವರು ಮನಸ್ಸಲ್ಲಿ ಗಣಪತಿಯನ್ನು ಜಪಿಸಿದರೆ ಬೆನ್ನುಬಿಡದೆ ನೆರಳಾಗಿ ಕಾಯುತ್ತಾನೆ ಗೌರಿಸುತ.


ಇದನ್ನೂ ಓದಿ: ಇದು ಎಲಿಮಿನೇಷನ್‌ ಅಲ್ಲ... ಆದ್ರೂ ಹಂಸ ಬೆನ್ನಲ್ಲೇ ಬಿಗ್‌ ಬಾಸ್‌ನಿಂದ ಹೊರಬಿದ್ದ ಟಾಪ್‌ 4ರಲ್ಲಿದ್ದ ಕಂಟೆಸ್ಟೆಂಟ್‌! ಕಣ್ಣೀರಿಡುತ್ತಲೇ ಹೊರಬಂದ ಫೋಟೋ


(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.