ನವದೆಹಲಿ: ಆಗಸ್ಟ್ 1ರಂದು ಅಂದರೆ ಸೋಮವಾರ ಶ್ರಾವಣ ಶುಕ್ಲ ಪಕ್ಷದ ಚತುರ್ಥಿ ದಿನಾಂಕ. ಈ ಚತುರ್ಥಿಯನ್ನು ವಿನಾಯಕ ಚತುರ್ಥಿ ಎಂದೂ ಕರೆಯುತ್ತಾರೆ. ಗಣೇಶ ಭಕ್ತರಿಗೆ ಈ ದಿನ ವಿಶೇಷ ಮಹತ್ವವನ್ನು ಹೊಂದಿದೆ. ಈ ದಿನದಂದು ಗಣಪತಿಯನ್ನು ಪೂಜಿಸುವುದರಿಂದ ಆತನು ಸಂತೋಷಪಡುತ್ತಾನೆ ಮತ್ತು ಬಯಸಿದ ಫಲ ನೀಡುತ್ತಾನೆಂದು ನಂಬಲಾಗಿದೆ.


COMMERCIAL BREAK
SCROLL TO CONTINUE READING

ಶುಭ ಕಾರ್ಯಗಳಿಗೆ ಗಣೇಶನ ಪೂಜೆ ಅಗತ್ಯ


ಗಣಪತಿಯು ದೋಷನಿವಾರಣೆಗೆ ಪ್ರಸಿದ್ಧನಾಗಿದ್ದಾನೆ. ಆತನ ಪೂಜೆಯಿಂದ ಪ್ರತಿಯೊಂದು ಆಸೆಯೂ ಈಡೇರುತ್ತದೆ. ಭಾರತದ ಸನಾತನ ನಂಬಿಕೆ ಪ್ರಕಾರ ಗಣೇಶನನ್ನು ಪೂಜಿಸುವುದರಿಂದ ಒಳಿತಾಗುತ್ತದೆ. ದೇವತೆಗಳನ್ನು ಪೂಜಿಸುವಾಗ ಅಥವಾ ಇನ್ನಾವುದೇ ಶುಭ ಕಾರ್ಯಗಳನ್ನು ಮಾಡುವಾಗ ವಿನಾಯಕನ ಪೂಜೆ ಅಗತ್ಯ.


ಇದನ್ನೂ ಓದಿ: Angarak Yog : ಈ ರಾಶಿಯವರ ಮೇಲೆ 'ಅಂಗಾರಕ ಯೋಗ'ದ ಪರಿಣಾಮ : ಆಗಸ್ಟ್ 10 ರವರೆಗೆ ಎಚ್ಚರಿಕೆಯಿಂದಿರಿ!


ಗಣಗಳ ಅಧಿಪತಿ ಗಣೇಶ


ಗಣಪತಿಯ ಪೂಜೆಯಿಲ್ಲದೆ ಹಿಂದೂ ಧರ್ಮದ ಯಾವುದೇ ಶುಭ ಕಾರ್ಯಗಳು ಪೂರ್ಣಗೊಳ್ಳುವುದಿಲ್ಲ. ಬೇರೆ ಯಾವ ದೇವರಿಗೂ ಇಷ್ಟೊಂದು ಮಹತ್ವ ಸಿಕ್ಕಿಲ್ಲ. ಗಣೇಶನ ಅಕ್ಷರಶಃ ಅರ್ಥ ಗಣಗಳ ಅಧಿಪತಿ. ಮಾನವ ದೇಹವು 5 ಇಂದ್ರಿಯಗಳು, ಮತ್ತು 4 ಆಂತರಿಕ ಅಂಗಗಳಿಂದ ನಿಯಂತ್ರಿಸಲ್ಪಡುತ್ತದೆ ಮತ್ತು ಕಾರ್ಯಾಚರಣೆಯ ಹಿಂದಿನ ಶಕ್ತಿಯು 14 ವಿಭಿನ್ನ ದೇವತೆಗಳ ಶಕ್ತಿಯಾಗಿದೆ. ಇದರ ಮೂಲ ಸ್ಫೂರ್ತಿಯೇ ಭಗವಾನ್ ಗಣೇಶ.


ಹೀಗೆ ಭಕ್ತಿಯಿಂದ ಪೂಜಿಸಿರಿ


ಯಾರೇ ಆಗಲಿ ಗಣಪತಿಯಿಂದ ಅದೃಷ್ಟ ಮತ್ತು ದುಃಖಗಳಿಂದ ಮುಕ್ತಿ ಹೊಂದಲು ಬಯಸಿದರೆ ಅವರು ಚತುರ್ಥಿಯಂದು ವಿಶೇಷ ಪೂಜೆ ಮಾಡಬೇಕು. 1 ವರ್ಷದವರೆಗೆ ಪ್ರತಿ ಚತುರ್ಥಿ ತಿಥಿಯಂದು ಗಣಪತಿಯನ್ನು ಪೂಜಿಸಿದರೆ ಅವರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಪೂಜೆ ಪ್ರಾರಂಭಿಸುವ ಮೊದಲು ‘ಗಜಾನನಂ ಭೂತ ಗಣಾದಿ ಸೇವಿತಂ ಕಪಿಕ್ತಾ ಜಂಬೂ ಫಲ ಸಾರ ಭಕ್ಷಿತಂ’ ಮಂತ್ರದಿಂದ ಆರಾಧಿಸಬೇಕು. ‘ದುಃಖ ನಾಶಮಾಡುವ ಉಮಾ ಪುತ್ರನಾದ ಸರ್ವ ವಿಘ್ನಗಳ ಭಗವಂತನ ಪಾದಕಮಲಗಳಿಗೆ ನಮಿಸುತ್ತೇನೆ’ ಎಂಬುದು ಇದರರ್ಥ.


ಇದನ್ನೂ ಓದಿ: Nag Panchami 2022: ಪಂಚಮಿಯ ದಿನ ಅಪ್ಪಿ-ತಪ್ಪಿಯೂ ಕೂಡ ಈ ಕೆಲಸ ಮಾಡಬೇಡಿ, ಜೀವನವಿಡಿ ಕಷ್ಟ ಅನುಭವಿಸಬೇಕಾಗುತ್ತದೆ


ಭೋಲೇಶಂಕರ ಆಶೀರ್ವಾದ ಸಿಗಲಿದೆ


ಪೂಜೆ ಮಾಡುವಾಗ ‘ಓಂ ಗಣ ಗಣಪತಯೇ ನಮಃ’ ಎಂಬ ಮಂತ್ರದ ಕನಿಷ್ಠ ಒಂದು ಜಪಮಾಲೆ ಪಠಿಸಬೇಕು. ಜಪ ಮಾಡುವಾಗ ಗಣಪತಿಯನ್ನು ಧ್ಯಾನಿಸಬೇಕು. ಈ ಪ್ರಕ್ರಿಯೆಯನ್ನು ನಿರಂತರವಾಗಿ ಮಾಡಿದರೆ ದೇವರ ಕೃಪೆ ಖಂಡಿತ ಸಿಗುತ್ತದೆ. ಇದಲ್ಲದೇ ಗಣೇಶನ ಗಾಯತ್ರಿ ಮಹಾಮಂತ್ರವಾದ ‘ಓಂ ಏಕದಂತಾಯ ವಿದ್ಮಹೇ, ವಕ್ರತುಂಡಾಯ ಧೀಮಹಿ, ತನ್ನೋ ದಂತಿ ಪ್ರಚೋದಯಾತ್’ ಕೂಡ ಬಹಳ ಫಲಪ್ರದವಾಗಿದೆ. ಈ ಬಾರಿ ಶ್ರಾವಣ ಶುಕ್ಲ ಪಕ್ಷದ ಸೋಮವಾರದಂದು ಗಣೇಶ ಚತುರ್ಥಿ ಬರುತ್ತಿದೆ. ಸೋಮವಾರವನ್ನು ಗಣೇಶನ ತಂದೆ ಶಿವನ ದಿನವೆಂದು ಪರಿಗಣಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಈ ದಿನದಂದು ಮಾಡಿದ ರುದ್ರಾಭಿಷೇಕ ಮತ್ತು ಗಣೇಶ ಸಾಧನವು ವಿಶೇಷವಾಗಿ ಫಲ ನೀಡುತ್ತದೆ. ಭಕ್ತರು ತಂದೆ ಮತ್ತು ಮಗನ ಆಶೀರ್ವಾದವನ್ನು ಒಟ್ಟಿಗೆ ಪಡೆಯುತ್ತಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.