ghee lamp: ಸಾಮಾನ್ಯವಾಗಿ ನೀವು ನಿಮ್ಮ ಮನೆಯಲ್ಲಿ ದೀಪ ಹಚ್ಚುತ್ತೀರ ಆದರೆ, ಈ ದೀಪ ಹಚ್ಚುವುದರಿಂದ ಎಷ್ಟೆಲ್ಲಾ ಪ್ರಯೋಜನೆಗಳಿವೆ ಗೊತ್ತಾ, ಸರಿಯಾದ ರೀತಿಯಲ್ಲಿ ಸರಿಯಾದ ದೀಪವನ್ನು ಹಚ್ಚವುದರಿಂದ ಅದೃಷ್ಟದ ಬಾಗಿಲು ತೆರೆದು ನಿಮ್ಮ ಎಲ್ಲಾ ಆರ್ಥಿಕ ಸಂಕಷ್ಟಗಳು ದೂರವಾಗಿ, ಹಣದ ಹೊಳೆ ಹರಿಯಲು ಶುರುವಾಗುತ್ತದೆ.


COMMERCIAL BREAK
SCROLL TO CONTINUE READING

ಹಿಂದೂ ಧರ್ಮದಲ್ಲಿ, ಒಬ್ಬರ ಜೀವನದಲ್ಲಿ ಹಣ ಮತ್ತು ಸಂಪತ್ತಿಗೆ ಸಂಬಂಧಿಸಿದ ಕೆಲವು ಗ್ರಹಗಳು ಮತ್ತು ದೇವರುಗಳಿವೆ. ಇವೆರಡನ್ನೂ ಸರಿಯಾಗಿ ಪೂಜಿಸಿದರೆ ಫಲ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಇದಕ್ಕಾಗಿ ದೊಡ್ಡ ಪ್ರಾರ್ಥನೆಗಳನ್ನು ಮಾಡುವ ಅಗತ್ಯವಿಲ್ಲ. ಕೇವಲ ಒಂದು ತುಪ್ಪದ ದೀಪವನ್ನು ಹಚ್ಚಿ ಪೂಜಿಸುವುದರಿಂದ ನಿಮಗೆ ಎಲ್ಲಾ ರೀತಿಯ ಲಾಭಗಳು ದೊರೆಯುತ್ತವೆ.


ಗುರು ಭಗವಾನ್:


ಆ ನಿಟ್ಟಿನಲ್ಲಿ ಸಂಪತ್ತಿನ ಅಧಿಪತಿ ಶುಕ್ರ ಮತ್ತು ಗುರು. ಈ ಎರಡರಲ್ಲೂ ಶುಕ್ರನು ನಮ್ಮ ದೈನಂದಿನ ಅಗತ್ಯಗಳನ್ನು ಪೂರೈಸುವ ಮಟ್ಟಿಗೆ ಮಾತ್ರ ಹಣವನ್ನು ನೀಡುತ್ತಾನೆ ಎಂದು ಹೇಳಲಾಗುತ್ತದೆ. ಆದರೆ ಗುರು ಭಗವಾನ್ ಹಾಗಲ್ಲ. ಆತನು ನಮ್ಮ ಅಗತ್ಯಕ್ಕೆ ಮೀರಿದ ಹಣವನ್ನು ಒದಗಿಸುತ್ತಾನೆ.


ಅಂತಹ ಗುರುವನ್ನು ಗುರುವಾರದಂದು ದೀಪ ಬೆಳಗಿಸಿ ಪೂಜಿಸಿದರೆ ಆದಾಯ ಹೆಚ್ಚುತ್ತದೆ ಎಂಬ ನಂಬಿಕೆ ಇದೆ. ಗುರುಭಗವಾನರ ದಿನವಾದ ಗುರುವಾರದಂದು ದೀಪವನ್ನು ಹಚ್ಚುವುದು ಒಳ್ಳೆಯದು. ಆದರೆ ಅದನ್ನು ಯಾವಾಗ ಹಚ್ಚಬೇಕು ಎನ್ನುವ ಪ್ರಸ್ನೆ ನಿಮ್ಮಲ್ಲಿಯೂ ಉದಭವಿಸಬಹುದು, ಅದಕ್ಕೆ ಉತ್ತರ ಇಲ್ಲಿದೆ.


ಇದನ್ನೂ ಓದಿ: ಮನೆ ಮುಖ್ಯ ದ್ವಾರದ ಎದುರು ಈ ವಸ್ತುಗಳನ್ನು ಇಡುವುದನ್ನು ಬಿಡಿ.. ಹೀಗೆ ಮಾಡುವುದರಿಂದ ಜಗಳ, ನಷ್ಟ, ಕಲಹಕ್ಕೆ ಇದೆ ಕೊನೆ!


ತುಪ್ಪದ ದೀಪ ಹಚ್ಚಲು ಸೂಕ್ತ ಸಮಯ:


ಗುರುವಾರ ಬೆಳಗ್ಗೆ 6-7 ಅಥವಾ ಮಧ್ಯಾಹ್ನ 1-2 ಗಂಟೆಯೊಳಗೆ ತುಪ್ಪದ ದೀಪವನ್ನು ಹಚ್ಚಿ ಗುರು ಭಗವಾನನನ್ನು ಪೂಜಿಸಬೇಕು. ರಾತ್ರಿಯಲ್ಲಿ ಎಂದಿಗೂ ದೀಪವನ್ನು ಹಚ್ಚುವ ತಪ್ಪನ್ನು ಮಾಡಬೇಡಿ. ಸೂರ್ಯನು ಉದಯಿಸಿದಾಗ ಮಾತ್ರ ಉತ್ತಮ ಫಲಿತಾಂಶ ಸಿಗುತ್ತದೆ.


ಈ ದೀಪವನ್ನು ಎಲ್ಲಿ ಹಚ್ಚಬೇಕು?


ಹಣದ ಹರಿವನ್ನು ಹೆಚ್ಚಿಸಲು ನಿಮ್ಮ ಮನೆಯಲ್ಲಿ ನೀವು ದೀಪವನ್ನು ಯಾವ ದಿಕ್ಕಿನಲ್ಲಿ ಹಚ್ಚುತ್ತಿದ್ದೀರಿ ಎನ್ನುವುದು ಕೂಡ ಮುಖ್ಯವಾಗುತ್ತದೆ. ನಿಮ್ಮ ಮನೆಯ ಪೂಜಾ ಕೊಠಡಿಯ ಉತ್ತರ ದಿಕ್ಕಿಗೆ ಈ ದೀಪವನ್ನು ಇಡಬೇಕು. ತುಪ್ಪ ಶುದ್ಧವಾಗಿರಬೇಕು ಎಂದು ನೆನಪಿಡಿ. ವಾರದಲ್ಲಿ ಒಂದೇ ಒಂದು ದಿನ ಈ ತುಪ್ಪದ ದೀಪವನ್ನು ಹಚ್ಚಿದರೆ ನಿಮ್ಮ ಜೀವನದಲ್ಲಿ ಧನಾತ್ಮಕ ಬದಲಾವಣೆಗಳನ್ನು ಕಾಣುವುದು ಖಂಡಿತ. ನೀವು ಊಹಿಸಿರುವುದಕ್ಕಿಂತ ಹೆಚ್ಚಿನ ಹಣವನ್ನು ನೀವು ಗಳಿಸುತ್ತೀರ. 


ಇದನ್ನೂ ಓದಿ: ಮನೆಯ ʻಈʼ ಜಾಗದಲ್ಲಿ ತುಳಸಿ ಗಿಡ ಇಟ್ಟಿದ್ದರೆ ಈಗಲೇ ತೆಗೆಯಿರಿ..ಇಲ್ಲವಾದಲ್ಲಿ ಹೆಚ್ಚಲಿದೆ ನಿಮ್ಮ ಮನೆಯಲ್ಲಿನ ಸಂಕಷ್ಟ


(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.