Akshaya Tritiya: ಅಕ್ಷಯ ತೃತೀಯ ದಿನ ಈ ತಪ್ಪುಗಳಿಂದ ಶಾಶ್ವತವಾಗಿ ಕೋಪಗೊಳ್ಳುತ್ತಾಳೆ ತಾಯಿ ಲಕ್ಷ್ಮಿ
Akshaya Tritiya: ಹಿಂದೂ ಧರ್ಮದಲ್ಲಿ ಅಕ್ಷಯ ತೃತೀಯ ಡಿಯವನ್ನು ಅತ್ಯಂತ ಮಂಗಳಕರ ದಿನ ಎಂದು ಪರಿಗಣಿಸಲಾಗಿದೆ. ಈ ದಿನ ಕೆಲವು ಕೆಲಸಗಳನ್ನು ಮಾಡುವುದರಿಂದ ಸಂಪತ್ತಿನ ಅಧಿದೇವತೆ ಲಕ್ಷ್ಮಿ ಮನೆ ಪ್ರವೇಶಿಸುತ್ತಾಳೆ. ಅಂತೆ ಕೆಲವು ಕೆಲಸಗಳನ್ನು ಮಾಡುವುದರಿಂದ ತಾಯಿ ಮಹಾಲಕ್ಷ್ಮೀ ಶಾಶ್ವತವಾಗಿ ಕೋಪಿಸಿಕೊಳ್ಳಬಹುದು ಎಂದು ಹೇಳಲಾಗುತ್ತದೆ.
Akshaya Tritiya 2024: ಇಂದು ದೇಶಾದ್ಯಂತ ಅಕ್ಷಯ ತೃತೀಯವನ್ನು ಆಚರಿಸಲಾಗುತ್ತಿದೆ. ಹಿಂದೂ ಧರ್ಮದಲ್ಲಿ ಅಕ್ಷಯ ತೃತೀಯ ದಿನವನ್ನು ಅತ್ಯಂತ ಶುಭ ದಿನ ಎಂದು ಹೇಳಲಾಗುತ್ತದೆ. ಈ ದಿನ ಚಿನ್ನ, ಬೆಳ್ಳಿ ಸೇರಿದಂತೆ ಕೆಲವು ವಸ್ತುಗಳನ್ನು ಖರೀದಿಸುವುದನ್ನು ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಸಂಪತ್ತಿನ ದೇವತೆ ಲಕ್ಷ್ಮಿ ಮನೆ ಪ್ರವೇಶಿಸುತ್ತಾಳೆ ಎಂಬ ನಂಬಿಕೆ ಇದೆ. ಅಂತೆಯೇ, ಅಕ್ಷಯ ತೃತೀಯ ದಿನದಂದು ನಮಗೆ ಗೊತ್ತೋ-ಗೊತ್ತಿಲ್ಲದೆಯೋ ಮಾಡುವ ಕೆಲವು ಕೆಲಸಗಳು ತಾಯಿ ಲಕ್ಷ್ಮಿಯನ್ನು ಕೆರಳಿಸುತ್ತವೆ. ಜೊತೆಗೆ ಇದರಿಂದ ಲಕ್ಷ್ಮಿ ದೇವಿ ಕೋಪಗೊಳ್ಳಬಹುದು ಎಂದು ಹೇಳಲಾಗುತ್ತದೆ.
ಧಾರ್ಮಿಕ ನಂಬಿಕೆಗಳ ಪ್ರಕಾರ, ಅಕ್ಷಯ ತೃತೀಯ ದಿನದಂದು (Akshaya Tritiya Day) ಮಾಡುವ ಕೆಲವು ಕೆಲಸಗಳು ಬಡತನಕ್ಕೆ ಆಹ್ವಾನ ನೀಡುತ್ತವೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಅಕ್ಷಯ ತೃತೀಯದಂದು ಯಾವ ಕೆಲಸಗಳನ್ನು ಮಾಡಬಾರದು (What should not be done on Akshaya Trithiya) ಎಂದು ತಿಳಿಯಿರಿ...
ಕಪ್ಪು ಬಟ್ಟೆ:
ಅಕ್ಷಯ ತೃತೀಯ ದಿನದಂದು ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಬಾರದು. ಇದರಿಂದ ಜೀವನದಲ್ಲಿ ನಕಾರಾತ್ಮಕತೆ ಹೆಚ್ಚುತ್ತದೆ. ಹಾಗಾಗಿ, ಇಂದು ಅಪ್ಪಿತಪ್ಪಿಯೂ ಕಪ್ಪು ಬಟ್ಟೆ ಧರಿಸಬೇಡಿ.
ಇದನ್ನೂ ಓದಿ- Akshaya Tritiya 2024: ಅಕ್ಷಯ ತೃತೀಯದಂದು ನಿರ್ಮಾಣಗೊಳ್ಳಲಿದೆ ಪಂಚ ಮಹಾಯೋಗ
ಈ ವಸ್ತುಗಳನ್ನು ಖರೀದಿಸಬೇಡಿ:
ಅಕ್ಷಯ ತೃತೀಯ (Akshaya Tritiya) ದಿನದಂದು ಚಿನ್ನ, ಬೆಳ್ಳಿ ಸೇರಿದಂತೆ ಕೆಲವು ವಸ್ತುಗಳನ್ನು ಖರೀದಿಸುವುದು ತುಂಬಾ ಮಂಗಳಕರ. ಆದರೆ, ಈ ದಿನ ಪ್ಲಾಸ್ಟಿಕ್, ಅಲ್ಯೂಮಿನಿಯಂ, ಗಾಜು ಅಥವಾ ಸ್ಟೀಲ್ ಪಾತ್ರೆಗಳು ಅಥವಾ ಇತರ ವಸ್ತುಗಳನ್ನು ಖರೀದಿಸಬಾರದು. ಇದರಿಂದ ಮನೆಯಲ್ಲಿ ಋಣಾತ್ಮಕತೆ ಹೆಚ್ಚಾಗಿ ಕುಟುಂಬದ ಶಾಂತಿಗೆ ಧಕ್ಕೆ ಉಂಟಾಗಬಹುದು ಎಂದು ಹೇಳಲಾಗುತ್ತದೆ.
ಅಸಭ್ಯ ವರ್ತನೆ:
ಅಕ್ಷಯ ತೃತೀಯ ದಿನದಂದು ಜೂಜಾಟ, ಸುಳ್ಳು ಹೇಳುವುದು, ಮೋಸ ಮಾಡುವುದು ಇತ್ಯಾದಿ ರೀತಿಯ ಅಸಭ್ಯ ವರ್ತನೆಗಳನ್ನು ತಪ್ಪಿಸಿ. ಇಂತಹ ವರ್ತನೆಗಳಿಂದ ತಾಯಿ ಲಕ್ಷ್ಮಿ (Goddess Laxmi) ನಿಮ್ಮ ಮೇಲೆ ಶಾಶ್ವತವಾಗಿ ಮುನಿಸಿಕೊಳ್ಳಬಹುದು. ಇದರಿಂದ ಜೀವನದಲ್ಲಿ ಬಡತನ ಆವರಿಸುತ್ತದೆ.
ಇದನ್ನೂ ಓದಿ- Akshaya Tritiya 2024: ಅಕ್ಷಯ ತೃತೀಯದಂದು ಈ 5 ಕೆಲಸ ಮಾಡಿದರೆ ಲಕ್ಷ್ಮಿ ಕೃಪೆ, ಕೈ ತುಂಬಾ ಹಣ
ಸಾಲ ಕೊಡುವುದು/ಪಡೆಯುವುದು:
ಅಕ್ಷಯ ತೃತೀಯ ದಿನದಂದು ಯಾರಿಗಾದರೂ ಸಾಲ ನೀಡುವುದು ಅಥವಾ ಯಾರಿಂದಲಾದರೂ ಸಾಲ ಪಡೆಯುವ ತಪ್ಪನ್ನು ಎಂದಿಗೂ ಮಾಡಬೇಡಿ. ಇದು ಬಡತನಕ್ಕೆ ಆಹ್ವಾನ ನೀಡಿದಂತಾಗುತ್ತದೆ.
ಮಾಂಸಾಹಾರಿ-ಮದ್ಯಪಾನ:
ಅಕ್ಷಯ ತೃತೀಯ ದಿನದಂದು ಮಾಂಸಾಹಾರಿ-ಮದ್ಯಪಾನವನ್ನು ಮಾಡಬೇಡಿ. ಇದು ಜೀವನದಲ್ಲಿ ನಕಾರಾತ್ಮಕತೆ, ನೋವು, ಬಡತನ ಮತ್ತು ದುಃಖವನ್ನು ಹೆಚ್ಚಿಸುತ್ತದೆ ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ.
ಕೊಳಕು:
ಅಕ್ಷಯ ತೃತೀಯ ಶುಭ ದಿನದಂದು ಸ್ವಚ್ಛತೆಗೆ ಹೆಚ್ಚಿನ ಪ್ರಾಮುಖ್ಯಾತೆ ನೀಡಿ. ಮನೆಯನ್ನು ಸಂಪೂರ್ಣವಾಗಿ ಶುಚಿಯಾಗಿಡಿ. ಇಲ್ಲದಿದ್ದರೆ ಇದು ನಿಮ್ಮ ಆರ್ಥಿಕ ಜೀವನದ ಮೇಲೆ ಪರಿಣಾಮ ಉಂಟು ಮಾಡಬಹುದು ಎನ್ನಲಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.