ಬೆಂಗಳೂರು : ಸಾಮಾನ್ಯವಾಗಿ ಎಲ್ಲರೂ ಚಿನ್ನ ಅಥವಾ ವಜ್ರದ ಉಂಗುರವನ್ನು ಧರಿಸಲು ಇಷ್ಟಪಡುತ್ತಾರೆ. ಪ್ರತಿಯೊಂದು ಲೋಹಕ್ಕೂ ಅದರದ್ದೇ ಆದ ಮಹತ್ವವಿದೆ. ಲೋಹಗಳ ಮಹತ್ವ, ಮತ್ತು ವಿಶೇಷತೆಯನ್ನು ಜ್ಯೋತಿಷ್ಯದಲ್ಲಿ ವಿವರಿಸಲಾಗಿದೆ. ವಜ್ರವನ್ನು ಎಲ್ಲರೂ ಧರಿಸುವಂತಿಲ್ಲ. ರಾಶಿಗನುಗುಣವಾಗಿ ವಜ್ರವನ್ನು ಕೆಲವು ರಾಶಿಯವರು ಮಾತ್ರ ಧರಿಸಬೇಕು. ಅದೇ ರೀತಿ ಕೆಲವು ರಾಶಿಯವರು ಚಿನ್ನದ ಉಂಗುರವನ್ನು ಧರಿಸಿದರೆ, ಅದು ಅವರಿಗೆ ಹೆಚ್ಚು ಅದೃಷ್ಟವನ್ನು ತರುತ್ತದೆ.  ಪ್ರತಿಯೊಂದು ಲೋಹವು ವ್ಯಕ್ತಿಯ ಜೀವನದಲ್ಲಿ ವಿಭಿನ್ನ ಪರಿಣಾಮಗಳನ್ನು ಬೀರುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಚಿನ್ನವನ್ನು ಧರಿಸುವುದು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಉಂಗುರದ ಬೆರಳಿಗೆ ಚಿನ್ನದ ಉಂಗುರವನ್ನು ಧರಿಸುವುದರಿಂದ ಮಕ್ಕಳ ಸಂತೋಷದಲ್ಲಿ ಬರುವ ಅಡೆತಡೆಗಳಿಂದ ಮುಕ್ತಿ ಸಿಗುತ್ತದೆ ಎಂದು ಹೇಳಲಾಗುತ್ತದೆ. ಇದರೊಂದಿಗೆ, ಧನಲಾಭ ಮತ್ತು ವೃತ್ತಿ ಪ್ರಗತಿಯನ್ನು ಕೂಡಾ ಸಾಧಿಸಬಹುದು ಎಂದು ಹೇಳಲಾಗುತ್ತದೆ.


COMMERCIAL BREAK
SCROLL TO CONTINUE READING

ಈ ರಾಶಿಯವರ ಅದೃಷ್ಟ ಹೆಚ್ಚಿಸುತ್ತದೆ ಚಿನ್ನದ ಉಂಗುರ :  
ಸಿಂಹ ರಾಶಿ :
 ಸಿಂಹ ರಾಶಿಯವರಿಗೆ ಚಿನ್ನದ ಉಂಗುರ ಅತ್ಯಂತ ಮಂಗಳಕರ ಎಂದು ಹೇಳಲಾಗುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಸಿಂಹ ರಾಶಿ ಬೆಂಕಿಯ ಅಂಶದ ಸಂಕೇತವಾಗಿದೆ. ಈ ರಾಶಿಯ ಅಧಿಪತಿ ಸೂರ್ಯ. ಆದ್ದರಿಂದ, ಸಿಂಹ ರಾಶಿಯ ಜನರು ಚಿನ್ನದ ಉಂಗುರವನ್ನು ಧರಿಸುವುದು ಮಂಗಳಕರ ಎಂದು ಹೇಳಲಾಗುತ್ತದೆ. 


ಇದನ್ನೂ ಓದಿ : ಹನ್ನೆರಡು ವರ್ಷಗಳ ಬಳಿಕ ಪವರ್ಫುಲ್ ರಾಜ ಲಕ್ಷಣ ರಾಜಯೋಗ ರಚನೆ, ಲಕ್ಷ್ಮಿ ಕೃಪೆಯಿಂದ ಈ ಜನರಿಗೆ ಸಾಹುಕಾರರಾಗುವ ಯೋಗ!


ಕನ್ಯಾ ರಾಶಿ : ಈ ರಾಶಿಯ ಜನರು ಸುಖ ಸಮೃದ್ದಿಯ ಜೀವನವನ್ನು ಇಷ್ಟ ಪಡುತ್ತಾರೆ. ಕನ್ಯಾ ರಾಶಿಯ ಜನರು ಚಿನ್ನದ ಉಂಗುರ, ಚೈನ್ ಹೀಗೆ ಚಿನ್ನದಿಂದ ಮಾಡಿದ ಆಭರಣವನ್ನು ಧರಿಸಿದರೆ ಅದು ಅವರಿಗೆ ಶುಭ. ಚಿನ್ನವೇ ಅವರ ಅದೃಷ್ಟ ಬೆಳಗುತ್ತದೆ ಎಂದು ಹೇಳಲಾಗುತ್ತದೆ. 


ತುಲಾ ರಾಶಿ : ತುಲಾ ರಾಶಿಯ ಜನರಿಗೂ ಚಿನ್ನ ಅದೃಷ್ಟ ತರುತ್ತದೆ.   ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಚಿನ್ನದ ಉಂಗುರವು ತುಲಾ ರಾಶಿಯವರಿಗೆ ಅದೃಷ್ಟವನ್ನು ನೀಡುತ್ತದೆ. ಈ ರಾಶಿಯ ಅಧಿಪತಿ ಶುಕ್ರ ದೇವ. ಚಿನ್ನ ಶುಕ್ರನಿಗೆ ಲಾಭದಾಯಕ ಎಂದು ಹೇಳಲಾಗುತ್ತದೆ. 


ಇದನ್ನೂ ಓದಿ : Astro Tips: ಜಾತಕದಲ್ಲಿ 'ರಾಹು ಬಲ'ವಿದ್ದರೆ ವ್ಯಕ್ತಿಯ ಅದೃಷ್ಟವೇ ಬದಲಾಗುತ್ತದೆ, ಅಪಾರ ಸುಖ-ಸಂಪತ್ತು ಸಿಗುತ್ತದೆ!


ಮೀನ ರಾಶಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಿನ್ನವನ್ನು ಧರಿಸುವುದು ಮೀನ ರಾಶಿಯವರಿಗೆ  ಅತ್ಯಂತ ಶುಭ. ಚಿನ್ನವನ್ನು ಧರಿಸುವುದು ಈ ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ಜೀವನದಲ್ಲಿನ ಅಡೆತಡೆಗಳನ್ನು ಚಿನ್ನವೇ ನಿವಾರಿಸುತ್ತದೆ. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.