Grahan 2023: ಗ್ರಹಣ ಎಂಬುದು ಒಂದು ದೊಡ್ಡ ಖಗೋಳ ಘಟನೆ. ಆದರೆ, ಜ್ಯೋತಿಷ್ಯ ಶಾಸ್ತ್ರದಲ್ಲೂ ಕೂಡ ಗ್ರಹನಗಳಿಗೆ ಮಹತ್ವವನ್ನು ನೀಡಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಣಗಳು ಜನರ ಜೀವನದ ಮೇಲೂ ಮಹತ್ವದ ಪರಿಣಾಮ ಬೀರುತ್ತವೆ. ಹಾಗಾಗಿ, ಗ್ರಹಣದ ಸಮಯದಲ್ಲಿ ಜಾಗರೂಕರಾಗಿರುವಂತೆ ಹೇಳಲಾಗುತ್ತದೆ. ಹೊಸ ವರ್ಷದಲ್ಲಿ ಅಂದರೆ 2023ರಲ್ಲಿ ಎಷ್ಟು ಗ್ರಹಣಗಳು ಸಂಭವಿಸಲಿವೆ? ಈ ಗ್ರಹಣಗಳು ಭಾರತದಲ್ಲಿ ಗೋಚರಿಸುತ್ತವೆಯೇ ಇಲ್ಲವೇ? ಮೊದಲ ಗ್ರಹಣ ಯಾವಾಗ ಸಂಭವಿಸುತ್ತದೆ ಎಂದು ತಿಳಿಯಿರಿ.


COMMERCIAL BREAK
SCROLL TO CONTINUE READING

2023ರಲ್ಲಿ ಎಷ್ಟು ಗ್ರಹಣಗಳು ಸಂಭವಿಸಲಿವೆ?
ಈ ವರ್ಷ 2023ರಲ್ಲಿ ಒಟ್ಟು ನಾಲ್ಕು ಗ್ರಹಣಗಳು ಸಂಭವಿಸಲಿದ್ದು, ಇವುಗಳಲ್ಲಿ ಎರಡು ಸೂರ್ಯ ಗ್ರಹಣ, ಮತ್ತೆರಡು ಚಂದ್ರ ಗ್ರಹಣಗಳು ಸೇರಿವೆ. 


ಇದನ್ನೂ ಓದಿ- Vastu Tips: ನಿಮ್ಮ ಪ್ರಗತಿಯನ್ನು ಕುಂಠಿತಗೊಳಿಸುವ ಈ ವಸ್ತುಗಳನ್ನು ಇಂದೇ ನಿಮ್ಮ ಮನೆಯಿಂದ ಹೊರಹಾಕಿ


2023ರ ಮೊದಲ ಸೂರ್ಯಗ್ರಹಣ ಯಾವಾಗ ಸಂಭವಿಸಲಿದೆ:
2023ರಲ್ಲಿ ಮೊದಲ ಸೂರ್ಯಗ್ರಹಣವು  20 ಏಪ್ರಿಲ್ 2023ರಂದು ಬೆಳಿಗ್ಗೆ 07.40ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 12.29 ಕ್ಕೆ ಕೊನೆಗೊಳ್ಳುತ್ತದೆ. ಆದಾಗ್ಯೂ, ಈ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. 


ಇದನ್ನೂ ಓದಿ- Bathroom Vastu: ಬಾತ್ ರೂಂನಲ್ಲಿರುವ ಬಕೆಟ್ ಕೂಡ ನಿಮ್ಮ ಅದೃಷ್ಟವನ್ನು ಬದಲಿಸಬಹುದು


ಈ ವರ್ಷದ ಮೊದಲ ಚಂದ್ರಗ್ರಹಣ ಯಾವಾಗ?
ಜ್ಯೋತಿಷ್ಯಶಾಸ್ತ್ರದ ಪ್ರಕಾರ, 2023 ರಲ್ಲಿ ಮೊದಲ ಚಂದ್ರಗ್ರಹಣವು 5 ಮೇ 2023 ರಂದು ಗೋಚರಿಸಲಿದೆ. ಇದು ಪೂರ್ಣ ಚಂದ್ರಗ್ರಹಣವಾಗಿದ್ದು ಮೇ 05ರ ರಾತ್ರಿ 08.45 ಕ್ಕೆ ಪ್ರಾರಂಭವಾಗುವ ಚಂದ್ರ ಗ್ರಹಣವು ಮಧ್ಯರಾತ್ರಿ 01 ಗಂಟೆಗೆ ಕೊನೆಗೊಳ್ಳಲಿದೆ. ಭಾರತದ ಅನೇಕ ಭಾಗಗಳಲ್ಲಿ ಈ ಚಂದ್ರಗ್ರಹಣವು ಗೋಚರಿಸ್ಲಿದ್ದು, ಸೂತಕದ ಅವಧಿಯೂ ಮಾನ್ಯವಾಗಿರುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ