Guru Gochar 2023: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ದೇವಗುರು ಸ್ಥಾನವನ್ನು ಪಡೆದಿರುವ ಬೃಹಸ್ಪತಿಯನ್ನು ಕೀರ್ತಿ, ಆಧ್ಯಾತ್ಮಿಕತೆ, ಯಶಸ್ಸಿನ ಅಂಶ ಎಂದು ಪರಿಗಣಿಸಲಾಗಿದೆ. ಯಾವ ವ್ಯಕ್ತಿಯ ಜಾತಕದಲ್ಲಿ ಗುರು ಶುಭ ಸ್ಥಾನದಲ್ಲಿರುತ್ತಾನೋ ಆ ವ್ಯಕ್ತಿಯು ಜೀವನದಲ್ಲಿ ಭಾರೀ ಯಶಸ್ಸನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ. ಗುರುವಿನ ಸಂಚಾರವು ದ್ವಾದಶ ರಾಶಿಗಳ ಮೇಲೆ ಶುಭ-ಅಶುಭ ಪರಿಣಾಮಗಳನ್ನು ಉಂಟು ಮಾಡುತ್ತದೆ. 


COMMERCIAL BREAK
SCROLL TO CONTINUE READING

ದೇವಗುರು ಬೃಹಸ್ಪತಿಯು 22 ಏಪ್ರಿಲ್ 2023ರಂದು ಮೇಷ ರಾಶಿಯನ್ನು ಪ್ರವೇಶಿಸಿದ್ದಾನೆ. ಯಾವುದೇ ಒಂದು ರಾಶಿಯಲ್ಲಿ ಸುಮಾರು ಒಂದೂವರೆ ವರ್ಷದವರೆಗೆ ಸಂಚರಿಸುವ ದೇವಗುರುವು, ಇನ್ನೂ 16 ತಿಂಗಳುಗಳ ಕಾಲ ಇದೇ ರಾಶಿಯಲ್ಲಿ ಸಂಚರಿಸಲಿದ್ದಾನೆ. ಈ ಸಮಯದಲ್ಲಿ ಕೆಲವು ರಾಶಿಯವರಿಗೆ ದಿಢೀರ್ ಹಣ ಪಡೆಯುವ ಯೋಗವಿದ್ದು ಅಪಾರ ಸಂಪತ್ತಿನ ಒಡೆಯರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. 


ಇದನ್ನೂ ಓದಿ- Surya Transit 2023: ಹತ್ತು ದಿನಗಳ ಬಳಿಕ ಸೂರ್ಯನಂತೆ ಉಜ್ವಲಿಸಲಿದೆ ಈ ರಾಶಿಯವರ ಭವಿಷ್ಯ


ಗುರು ಗೋಚಾರದಿಂದ ಈ ರಾಶಿಯವರಿಗೆ ವಿಶೇಷ ಪ್ರಯೋಜನ: 
ಮೇಷ ರಾಶಿ: 

ಪ್ರಸ್ತುತ ಮೇಷ ರಾಶಿಯಲ್ಲಿಯೇ ಸಂಚರಿಸುತ್ತಿರುವ ಗುರು ಈ ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲವನ್ನು ನೀಡಲಿದ್ದಾರೆ. ಈ ಸಮಯದಲ್ಲಿ ಈ ರಾಶಿಯವರ ಆತ್ಮವಿಶ್ವಾಸ ಹೆಚ್ಚಾಗಲಿದ್ದು ಇವರು ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ ಭಾರೀ ಯಶಸ್ಸನ್ನು ಪಡೆಯಲಿದ್ದಾರೆ. ಇವರ ಕಠಿಣ ಪರಿಶ್ರಮದ ಫಲವಾಗಿ ಹಣದ ಹೊಳೆಯೇ ಹರಿಯಲಿದ್ದು ಶ್ರೀಮಂತರಾಗುವ ಯೋಗವೂ ಇವರಿಗಿದೆ. 


ಕರ್ಕಾಟಕ ರಾಶಿ: 
ಗುರು ರಾಶಿ ಪರಿವರ್ತನೆಯು ಕರ್ಕಾಟಕ ರಾಶಿಯವರಿಗೂ ಸಹ ಮಂಗಳಕರ ಎಂದು ಸಾಬೀತುಪಡಿಸಲಿದೆ. ಮುಂದಿನ 16 ತಿಂಗಳುಗಳವರೆಗೆ ಈ ರಾಶಿಯವರಿಗೆ ವ್ಯಾಪಾರ-ವ್ಯವಹಾರದಲ್ಲಿ ಭರ್ಜರಿ ಲಾಭವಾಗಲಿದೆ. ಉದ್ಯೋಗ ಬದಲಾಯಿಸಲು ಬಯಸುವ ಉದ್ಯೋಗಿಗಳಿಗೂ ಕೂಡ ಶುಭ ಸಮಯ ಇದಾಗಿದ್ದು, ನೀವು ಬಯಸಿದ ಕೆಲಸ ನಿಮ್ಮದಾಗಲಿದೆ. ಹಠಾತ್ ಧನಯೋಗ ಪ್ರಾಪ್ತಿಯಾಗಲಿದ್ದು, ವ್ಯಾಪಾರ ವಿಸ್ತರಿಸಲು ಯೋಚಿಸುತ್ತಿರುವವವರಿಗೆ ಅತ್ಯುತ್ತಮ ಸಮಯ ಇದಾಗಿದೆ. ಆದರೆ, ಆಶುಭ ಸ್ಥಾನದಲ್ಲಿರುವ ಶನಿ ನಿಮ್ಮ ಆರೋಗ್ಯದಲ್ಲಿ ತೊಂದರೆ ಉಂಟುಮಾಡುವ ಸಾಧ್ಯತೆ ಇರುವುದರಿಂದ ಆರೋಗ್ಯದ ಬಗ್ಗೆ ಗಮನಹರಿಸಿ. 


ಇದನ್ನೂ ಓದಿ- Shukra Gochar: ಜುಲೈ 7ರವರೆಗೆ ಈ ರಾಶಿಯವರಿಗೆ ವ್ಯಾಪಾರದಲ್ಲಿ ಬಂಪರ್ ಹಣ, ಉದ್ಯೋಗದಲ್ಲಿ ಪ್ರಗತಿ


ಧನು ರಾಶಿ: 
ಮೇಷ ರಾಶಿಗೆ ಪದಾರ್ಪಡೆ ಮಾಡಿರುವ ಗುರು ಧನು ರಾಶಿಯ ಜನರಿಗೆ ವಿಶೇಷ ಪ್ರಯೋಜನವನ್ನು ನೀಡಲಿದ್ದಾನೆ. ಈ ಸಮಯದಲ್ಲಿ ಧನು ರಾಶಿಯವರು ನಿಮ್ಮ ಮಕ್ಕಳಿಗೆ ಸಂಬಂಧಿಸಿದಂತೆ ಶುಭ ಸುದ್ದಿಗಳನ್ನು ಪಡೆಯಬಹುದು. ಮಾತ್ರವಲ್ಲ, ಹೂಡಿಕೆಗಳಿಂದಲೂ ಉತ್ತಮ ಲಾಭ ದೊರೆಯಲಿದೆ. ಭೂಮಿ, ವಾಹನ ಖರೀದಿ ಯೋಗವೂ ಇದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ