ಗುರು ರಾಶಿ ಪರಿವರ್ತನೆ ಪರಿಣಾಮ: ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರು ಗ್ರಹವನ್ನು ಮಂಗಳಕರ ಗ್ರಹ ಎಂದು ಪರಿಗಣಿಸಲಾಗಿದೆ. ಯಾವುದೇ ವ್ಯಕ್ತಿಯ ಜಾತಕದಲ್ಲಿ ಗುರು ಗ್ರಹವು ಶುಭ ಸ್ಥಾನದಲ್ಲಿದ್ದರೆ ಅವರ ವೈವಾಹಿಕ ಜೀವನ ಸಂತಸಮಯವಾಗಿರುವುದರ ಜೊತೆಗೆ ಆರ್ಥಿಕ ಸ್ಥಿತಿಯೂ ಉತ್ತಮವಾಗಿರುತ್ತದೆ ಎಂದು ನಂಬಲಾಗಿದೆ. ಶುಭ ಸ್ಥಾನದಲ್ಲಿರುವ ಗುರುವು ಆ ವ್ಯಕ್ತಿಯ ಅದೃಷ್ಟವನ್ನು ಬೆಳಗುತ್ತಾನೆ. ಅವರು ಕೈ ಹಾಕಿದ ಕೆಲಸಗಳಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ. ಗುರು ಗ್ರಹವು ಸುಮಾರು 1 ವರ್ಷದಲ್ಲಿ ರಾಶಿಯನ್ನು ಬದಲಾಯಿಸುತ್ತದೆ. 


COMMERCIAL BREAK
SCROLL TO CONTINUE READING

ಈ ವರ್ಷದ ಏಪ್ರಿಲ್‌ನಲ್ಲಿ ಗುರು ಗ್ರಹವು ರಾಶಿಯನ್ನು ಬದಲಿಸಿ ಮೀನ ರಾಶಿಯನ್ನು ಪ್ರವೇಶಿಸಿತ್ತು. ಈಗ ಗುರುವು 1 ವರ್ಷ ಮೀನ ರಾಶಿಯಲ್ಲಿರುತ್ತಾನೆ ಮತ್ತು ಈ ಸಮಯದಲ್ಲಿ ಗುರು ಗ್ರಹವು ಮೂರು ರಾಶಿಯ ಜನರಿಗೆ ಆಶೀರ್ವಾದವನ್ನು ಸುರಿಸಲಿದ್ದು ವರ್ಷಪೂರ್ತಿ ಹಣದ ಮನೆ ಸುರಿಸಲಿದ್ದಾನೆ. ಆ ರಾಶಿಗಳು ಯಾವುವು ಎಂದು ತಿಳಿಯೋಣ...


ಇದನ್ನೂ ಓದಿ- ಕರ್ಕಾಟಕ ರಾಶಿಯಲ್ಲಿ ಸೂರ್ಯ-ಬುಧ ಯುತಿ- ಈ ನಾಲ್ಕು ರಾಶಿಯವರಿಗೆ ಹಣದ ಸುರಿಮಳೆ


ಈ ರಾಶಿಯವರಿಗೆ ವರ್ಷಪೂರ್ತಿ ಹಣದ ಮಳೆ ಸುರಿಸಲಿದ್ದಾನೆ ಗುರು:-
ವೃಷಭ ರಾಶಿ:
ಗುರುವು ಮೀನ ರಾಶಿಗೆ ಪ್ರವೇಶಿಸಿದ ನಂತರ ವೃಷಭ ರಾಶಿಯವರಿಗೆ ಶುಭ ದಿನಗಳು ಆರಂಭವಾಗಿವೆ. ಕಾಲ ಕಳೆದಂತೆ ಇದರ ಶುಭ ಪರಿಣಾಮ ಹೆಚ್ಚುತ್ತದೆ. ಆದಾಯ ಹೆಚ್ಚಲಿದೆ. ಹಣವು ಪ್ರಯೋಜನಕಾರಿಯಾಗಲಿದೆ. ವ್ಯವಹಾರದಲ್ಲಿ ಸಿಲುಕಿರುವ ಹಣ ಕೈ ಸೇರಲಿದೆ. ವೃತ್ತಿ ಜೀವನದಲ್ಲಿ ಬಲವಾದ ಯಶಸ್ಸು ಇರುತ್ತದೆ. ವ್ಯಾಪಾರಿಗಳಿಗೂ ಹೆಚ್ಚಿನ ಲಾಭ ದೊರೆಯಲಿದೆ. ಕೆಲಸ ಮಾಡುವ ವಿಧಾನ ಸುಧಾರಿಸುತ್ತದೆ. ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. 
 
ಮಿಥುನ ರಾಶಿ: ಮಿಥುನ ರಾಶಿಯವರಿಗೆ ಗುರು ಸಂಕ್ರಮವು ಶುಭಕರವಾಗಿದೆ. ಈ ರಾಶಿಯ ಜನರು ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಹೊಸ ಉದ್ಯೋಗ ಸಿಗಬಹುದು. ನೀವು ಬಡ್ತಿ-ಹೆಚ್ಚಳವನ್ನು ಪಡೆಯುತ್ತೀರಿ. ಬಡ್ತಿ ಪಡೆಯುವ ಬಲವಾದ ಅವಕಾಶಗಳಿವೆ. ವರ್ಗಾವಣೆ ಆಗಬಹುದು. ವ್ಯಾಪಾರಿಗಳ ಜಾಲ ಹೆಚ್ಚಲಿದೆ. ವ್ಯಾಪಾರ ವಿಸ್ತರಣೆಯಾಗಲಿದೆ. 


ಇದನ್ನೂ ಓದಿ- Mangal Grah Transit: ಆಗಸ್ಟ್ 10 ರವರೆಗೆ ಈ ರಾಶಿಯವರಿಗೆ ಅದೃಷ್ಟ ತರಲಿದ್ದಾನೆ ಮಂಗಳ


ಕರ್ಕಾಟಕ ರಾಶಿ: ಕರ್ಕಾಟಕ ರಾಶಿಯವರಿಗೆ ಮೀನ ರಾಶಿಯಲ್ಲಿ ಗುರುವಿನ ಪ್ರವೇಶವು ಶುಭಕರವಾಗಿದೆ. ಈ ಜನರು ಪ್ರತಿ ಕೆಲಸದಲ್ಲಿ ಅದೃಷ್ಟದ ಬೆಂಬಲವನ್ನು ಪಡೆಯುತ್ತಾರೆ. ಕೆಲಸದಲ್ಲಿ ಯಶಸ್ಸು ಸಿಗಲಿದೆ. ವಿವಾದಿತ  ಆಸ್ತಿ ಸಂಬಂಧಿ ವಿಷಯ ಈಗ ಬಗೆಹರಿಯಲಿದೆ. ವ್ಯಾಪಾರಸ್ಥರಿಗೆ ಲಾಭವಾಗಲಿದೆ. ಪ್ರವಾಸಗಳು ಇರುತ್ತವೆ. ಪ್ರಯಾಣ ಲಾಭದಾಯಕವಾಗಲಿದೆ. ಆಹಾರ ಮತ್ತು ಪಾನೀಯಕ್ಕೆ ಸಂಬಂಧಿಸಿದ ಉದ್ಯಮಿಗಳು ವಿಶೇಷವಾಗಿ ದೊಡ್ಡ ಪ್ರಯೋಜನಗಳನ್ನು ಪಡೆಯುತ್ತಾರೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.