ಬೆಂಗಳೂರು : ವೈದಿಕ ಜ್ಯೋತಿಷ್ಯದಲ್ಲಿ ಗುರುವಿಗೆ ವಿಶೇಷ ಸ್ಥಾನವಿದೆ. ದೇವ ಗುರುವನ್ನು ಲಾಭದಾಯಕ ಗ್ರಹ ಎಂದು ಪರಿಗಣಿಸಲಾಗಿದೆ. ಗುರು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ತೆರಳಲು ಸುಮಾರು 13 ತಿಂಗಳು ಬೇಕಾಗುತ್ತದೆ. ವೈದಿಕ ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಗುರುವಿನ ಅಂಶವನ್ನು ಎಲ್ಲಾ ಗ್ರಹಗಳಲ್ಲಿ ಅತ್ಯಂತ ಮಂಗಳಕರ ಮತ್ತು ಲಾಭದಾಯಕವೆಂದು ಪರಿಗಣಿಸಲಾಗುತ್ತದೆ. 


COMMERCIAL BREAK
SCROLL TO CONTINUE READING

ಸೆಪ್ಟೆಂಬರ್‌ನಲ್ಲಿ ಗುರು ವಕ್ರ ಸಂಕ್ರಮಣ:
ಪ್ರಸ್ತುತ ಮೇಷ ರಾಶಿಯಲ್ಲಿ ಗುರುವಿನ ಸಂಚಾರವಿದೆ. ಈ ವರ್ಷವೇ ಗುರು ಗ್ರಹ ತನ್ನ ರಾಶಿಯನ್ನು ಬದಲಾಯಿಸಿದೆ. ಏಪ್ರಿಲ್ 22, 2023 ರಂದು ಗುರು  ಮೀನ ರಾಶಿಯನ್ನು ತೊರೆದು ತನ್ನ ಸ್ನೇಹಿ ಗ್ರಹವಾದ ಮಂಗಳನ  ರಾಶಿಯಾದ  ಮೇಷ ರಾಶಿಯನ್ನು ಪ್ರವೇಶಿಸಿದೆ. ಮತ್ತೊಂದೆಡೆ, ದೇವಗುರು ಸೆಪ್ಟೆಂಬರ್ 4, 2023 ರಂದು ಸಂಜೆ 5 ಗಂಟೆಗೆ ಗುರು ಗ್ರಹದ ವಕ್ರ ನಡೆ ಆರಂಭವಾಗಲಿದೆ. ಇದಾದ  ನಂತರ ಡಿಸೆಂಬರ್ 31, ರವರೆಗೆ ಗುರು  ಗ್ರಹ ವಕ್ರ ನಡೆಯಲ್ಲಿಯೇ ಇರಲಿದೆ.   ಸೆಪ್ಟೆಂಬರ್ 4, 2023 ರಂದು ಗುರು ವಕ್ರ ಸಂಕ್ರಮಣ ಮಾಡುವ ಮೂಲಕ ಕೆಲವು ರಾಶಿಯವರ ಅದೃಷ್ಟದ ದಿನಗಳು ಆರಂಭವಾಗಲಿದೆ. 


ಇದನ್ನೂ ಓದಿ : ಆಶ್ಲೇಷಾ ನಕ್ಷತ್ರದಲ್ಲಿ ಸೂರ್ಯನ ಪ್ರವೇಶ, ಮೂರು ರಾಶಿಗಳ ಜನರಿಗೆ ಅಪಾರ ಧನಪ್ರಾಪ್ತಿಯ ಯೋಗ!


ಮೇಷ ರಾಶಿ : ಮೇಷ ರಾಶಿಯಲ್ಲಿ ಗುರು ಸಂಕ್ರಮಿಸುವುದರಿಂದ ಮೇಷ ರಾಶಿಯವರಿಗೆ ಸುವರ್ಣ ದಿನಗಳು ಆರಂಭವಾಗಲಿವೆ. ಗುರು ವಕ್ರ ಸಂಕ್ರಮಣ ವು ಮೇಷ ರಾಶಿಯವರಿಗೆ ತುಂಬಾ ಪ್ರಯೋಜನಕಾರಿಯಾಗಲಿದ್ದು, ಅವರ ಜೀವನದಲ್ಲಿ ಕೆಲವು ಉತ್ತಮ ಬದಲಾವಣೆಗಳನ್ನು ಉಂಟುಮಾಡುತ್ತದೆ.  ಗುರು ನಿಮ್ಮ ರಾಶಿಯ ಲಗ್ನದಲ್ಲಿ ಸಾಗಲಿದ್ದಾರೆ. ಹೀಗಾಗಿ ಅದೃಷ್ಟದ ಸಂಪೂರ್ಣ ಬೆಂಬಲ ನಿಮಗೆ ಸಿಗಲಿದೆ. ವ್ಯಾಪಾರ ಮತ್ತು ವ್ಯವಹಾರದಲ್ಲಿ ಉತ್ತಮ ಲಾಭವಾಗಲಿದೆ. ಈ ಸಮಯದಲ್ಲಿ ಆರ್ಥಿಕ ಲಾಭವಾಗಲಿದೆ. ಆರ್ಥಿಕ ಸ್ಥಿತಿಯು ಮೊದಲಿಗಿಂತ ಉತ್ತಮವಾಗಿರುತ್ತದೆ. ಹೊಸ ಉದ್ಯೋಗ ಹುಡುಕುತ್ತಿದ್ದವರ ಹುಡುಕಾಟ ಕೊನೆಯಾಗಲಿದೆ. 


ಮಿಥುನ ರಾಶಿ : ಮಿಥುನ ರಾಶಿಯವರ ಏಳನೇ ಮತ್ತು ಹತ್ತನೇ ಮನೆಗಳಿಗೆ ಗುರು ಅಧಿಪತಿಯಾಗಿದ್ದು, ನಿಮ್ಮ ಜಾತಕದ ಆದಾಯದ ಮನೆಯಲ್ಲಿ ಸಾಗಲಿದ್ದಾನೆ. ಈ ಸ್ಥಿತಿಯಲ್ಲಿ ಉತ್ತಮ ಆದಾಯವನ್ನು ಪಡೆಯುವ ಅವಕಾಶವಿದೆ. ಕೆಲಸದ ಸ್ಥಳದಲ್ಲಿ ಪ್ರಾಬಲ್ಯ ಸಾಧಿಸುವಿರಿ. ಕೆಲವು ಐಷಾರಾಮಿ ವಸ್ತುಗಳನ್ನು ಖರೀದಿಸುವಿರಿ. ವೈವಾಹಿಕ ಜೀವನಕ್ಕೆ ವಕ್ರ ಗುರು ವರದಾನವಾಗಲಿದೆ. ಹೊಸ ಆಸ್ತಿ ಖರೀದಿಗೆ ಇದು ಶುಭ ಸಮಯ.


ಇದನ್ನೂ ಓದಿ :  ಕೇಂದ್ರ ತ್ರಿಕೋನ ರಾಜಯೋಗದಿಂದ ಈ ರಾಶಿಯವರಿಗೆ ಧನವೃಷ್ಟಿ ! ಬೆನ್ನ ಹಿಂದಿದ್ದು ಕಾಯುವನು ಶನಿ ಮಹಾತ್ಮ


ಕರ್ಕಾಟಕ ರಾಶಿ : ಸೆಪ್ಟೆಂಬರ್ ನಿಮಗೆ ತುಂಬಾ ಅನುಕೂಲಕರವಾಗಿರುತ್ತದೆ. ಕರ್ಕಾಟಕ ರಾಶಿಯವರಿಗೆ ವಕ್ರ ಗುರು ವರವಾಗಿರುತ್ತಾನೆ. ಗುರುವಿನ ಈ ಸಂಕ್ರಮಣವು ನಿಮ್ಮ ಜಾತಕದ ಹತ್ತನೇ ಮನೆಯಲ್ಲಿ ಸಂಭವಿಸುತ್ತದೆ. ಈ ಕಾರಣದಿಂದಾಗಿ ವೃತ್ತಿ ಮತ್ತು ವ್ಯವಹಾರದಲ್ಲಿ ಅದ್ಭುತ ಬೆಳವಣಿಗೆ  ಕಾಣುವಿರಿ.  ನಿರುದ್ಯೋಗಿಗಳಿಗೆ ಗುರು ಅದ್ಭುತವಾದ ಉದ್ಯೋಗಾವಕಾಶವನ್ನು ಸೃಷ್ಟಿಸುತ್ತಾನೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ