Guru Uday: ಗುರು ಉದಯದಿಂದ `ಮಹಾಧನ ಯೋಗ`, ಹೆಚ್ಚಾಗಲಿದೆ ಈ ರಾಶಿಯವರ ಬ್ಯಾಂಕ್ ಬ್ಯಾಲೆನ್ಸ್
Guru Uday: ಜ್ಯೋತಿಷ್ಯ ಶಾಸ್ತ್ರದಲ್ಲಿ ದೇವಗುರು ಸ್ಥಾನಮಾನವನ್ನು ಪಡೆದಿರುವ ಬೃಹಸ್ಪತಿ ಉದಯಿಸಿದ್ದಾನೆ. ಈ ಸಮಯದಲ್ಲಿ ಮೇಷ ರಾಶಿಯಲ್ಲಿ ಗುರುವಿನ ಸಂಚಾರದಿಂದಾಗಿ `ಮಹಾಧನ ಯೋಗ` ಸೃಷ್ಟಿಯಾಗುತ್ತಿದೆ. ಇದು ಕೆಲವು ರಾಶಿಯವರಿಗೆ ಭಾಗ್ಯೋದಯವನ್ನು ಕರುಣಿಸಲಿದೆ ಎಂದು ಹೇಳಲಾಗುತ್ತಿದೆ.
Guru Rise Good Effects On All Zodiac Signs: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ಒಂದು ಗ್ರಹದ ಸಂಚಾರವು ಎಲ್ಲಾ 12 ರಾಶಿಗಳ ಮೇಲೆ ಶುಭ- ಅಶುಭ ಪರಿಣಾಮಗಳನ್ನು ಬೀರುತ್ತದೆ. ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ದೇವಗುರು ಸ್ಥಾನಮಾನವನ್ನು ಪಡೆದಿರುವ ಬೃಹಸ್ಪತಿಯು ಯಾವುದೇ ಒಂದು ರಾಶಿಯಿಂದ ಮತ್ತೊಂದು ರಾಶಿಯನ್ನು ಪ್ರವೇಶಿಸಲು ಸುಮಾರು ಒಂದು ವರ್ಷವನ್ನು ತೆಗೆದುಕೊಳ್ಳುತ್ತಾನೆ. ಅರ್ಥಾತ್ ಗುರು ಯಾವುದೇ ಒಂದು ರಾಶಿಯನ್ನು ಮತ್ತೆ ಪ್ರವೇಶಿಸಲು ಸುಮಾರು 12 ವರ್ಷಗಳನ್ನು ತೆಗೆದುಕೊಳ್ಳುತ್ತಾನೆ.
ಇತ್ತೀಚೆಗೆ 22 ಏಪ್ರಿಲ್ 2023ರಂದು ದೇವಗುರು ಬೃಹಸ್ಪತಿ ಸುಮಾರು 12 ವರ್ಷಗಳ ಬಳಿಕ ಮೇಷ ರಾಶಿಯನ್ನು ಪ್ರವೇಶಿಸಿದ್ದಾನೆ. ನಂತರ 27 ಏಪ್ರಿಲ್ 2023ರಂದು ಗುರು ಇದೇ ರಾಶಿಯಲ್ಲಿ ಉದಯಿಸಿದ್ದಾನೆ. ಇದೇ ವೇಳೆ ಗುರುವಿನ ಉದಯದೊಂದಿಗೆ ಶುಭಕರ "ಮಹಾಧಾನ ಯೋಗ" ರೂಪುಗೊಂಡಿದೆ. ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ವ್ಯಕ್ತಿಯ ಜಾತಕದಲ್ಲಿ ಗುರು ಪ್ರಬಲನಾಗಿದ್ದಾಗ ಆತನ ಜೀವನದಲ್ಲಿ ಮಂಗಳ ಕಾರ್ಯಗಳು ನಡೆಯುವ ಯೋಗ ಚೆನ್ನಾಗಿರುತ್ತದೆ ಎಂದು ನಂಬಲಾಗಿದೆ. ಇದೀಗ ಗುರು ಉದಯದಿಂದ ನಿರ್ಮಾಣವಾಗಿರುವ "ಮಹಾ ಧನ ಯೋಗವು" ಕೆಲವು ರಾಶಿಯವರ ಅದೃಷ್ಟದ ಬಾಗಿಲುಗಳನ್ನು ತೆರೆಯಲಿದ್ದು ಅವರಿಗೆ ಲಕ್ಷಾಧಿಪತಿಯಾಗುವ ಯೋಗವಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ- 12 ವರ್ಷಗಳ ಬಳಿಕ ಚಂದ್ರಗ್ರಹಣದಂಡು ಅದ್ಭುತ ಸಂಯೋಗ, ಈ ರಾಶಿಯವರಿಗೆ ಸಿರಿವಂತರಾಗುವ ಯೋಗ
ಗುರು ಉದಯದಿಂದ 'ಮಹಾಧನ ಯೋಗ', ಹೆಚ್ಚಾಗಲಿದೆ ಈ ರಾಶಿಯವರ ಬ್ಯಾಂಕ್ ಬ್ಯಾಲೆನ್ಸ್:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗುರು ಉದಯದಿಂದ ನಿರ್ಮಾಣಗೊಂಡಿರುವ 'ಮಹಾ ಧನಯೋಗ'ವು ಈ ರಾಶಿಯವರ ಜೀವನದಲ್ಲಿ ಭಾಗ್ಯೋದಯವನ್ನು ಕರುಣಿಸಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
ಮೇಷ ರಾಶಿ:
ಬರೋಬ್ಬರಿ 12 ವರ್ಷಗಳ ನಂತರ ದೇವಗುರು ಬೃಹಸ್ಪತಿ ಮೇಷ ರಾಶಿಯನ್ನು ಪ್ರವೇಶಿಸಿದ್ದಾನೆ. ಈ ಸಮಯವು ಮೇಷ ರಾಶಿಯವರ ಜೀವನದಲ್ಲಿ ಅದೃಷ್ಟದ ಬಾಗಿಲುಗಳು ತೆರೆಯಲಿವೆ. ಇದೇ ವೇಳೆ ಗುರು ಉದಯದಿಂದ ರೂಪುಗೊಂಡಿರುವ ಮಹಾ ಧನಯೋಗವು ಈ ರಾಶಿಯವರಿಗೆ ಉದ್ಯೋಗ ವ್ಯವಹಾರದಲ್ಲಿ ಪ್ರಗತಿಯನ್ನು ತರಲಿದೆ. ಈ ಸಮಯದಲ್ಲಿ ನಿಮ್ಮ ಕನಸಿನ ಉದ್ಯೋಗ, ವೃತ್ತಿ ರಂಗದಲ್ಲಿ ಉನ್ನತ ಹುದ್ದೆಗೇರುವ ನಿರೀಕ್ಷೆ ಇದೆ. ಜೊತೆಗೆ ಬಂಪರ್ ಧನ ವೃಷ್ಟಿಯಾಗಲಿದ್ದು ಇದರಿಂದ ಈ ರಾಶಿಯವರ ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.
ಕರ್ಕಾಟಕ ರಾಶಿ:
ಗುರು ಉದಯದಿಂದ ರೂಪುಗೊಂಡಿರುವ 'ಮಹಾ ಧನಯೋಗ'ವು ಕರ್ಕಾಟಕ ರಾಶಿಯವರಿಗೆ ಬಂಪರ್ ಹಣಕಾಸಿನ ಲಾಭವನ್ನು ನೀಡಲಿದೆ. ಈ ಸಮಯದಲ್ಲಿ ನೀವು ಕೈ ಹಾಕಿದ ಕೆಲಸದಲ್ಲೆಲ್ಲಾ ಅದೃಷ್ಟದ ಸಂಪೂರ್ಣ ಬೆಂಬಲ ನಿಮಗೆ ಪ್ರಾಪ್ತಿಯಾಗಲಿದ್ದು ಪ್ರತಿ ಕೆಲಸದಲ್ಲೂ ವಿಜಯಲಕ್ಷ್ಮಿ ಒಲಿಯಲಿದ್ದಾಳೆ. ಮಾತ್ರವಲ್ಲ, ಉದ್ಯೋಗಸ್ಥರಿಗೆ ಪ್ರಮೋಷನ್ ಭಾಗ್ಯವಿದ್ದು, ಸಂಬಳ ಹೆಚ್ಚಾಗುವುದರಿಂದ ವಿತ್ತೀಯ ಸ್ಥಿತಿ ಸುಧಾರಿಸಲಿದೆ. ವ್ಯಾಪಾರಸ್ಥರಿಗೂ ಉತ್ತಮ ಸಮಯ ಇದಾಗಿದ್ದು ದೊಡ್ಡ ಆರ್ಡರ್ ಪಡೆಯುವ ಸಾಧ್ಯತೆ ಇದೆ.
ಇದನ್ನೂ ಓದಿ- ಶನಿಯ ರಾಶಿಯಲ್ಲಿ ಪ್ಲುಟೊ ಗ್ರಹ ಸಂಚಾರ: ಈ ರಾಶಿಯವರಿಗೆ ಧನ ವೃಷ್ಟಿ
ಧನು ರಾಶಿ:
ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗುರು ಉದಯದಿಂದ ನಿರ್ಮಾಣಗೊಂಡಿರುವ 'ಮಹಾ ಧನಯೋಗ'ವು ಧನು ರಾಶಿಯವರಿಗೆ ವರದಾನಕ್ಕಿಂತ ಕಡಿಮೆ ಇಲ್ಲ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ಧನು ರಾಶಿಯಾಯಾವರಿಗೆ ದೀರ್ಘಕಾಲದ ಸಂಕಟಗಳಿಂದ ಮುಕ್ತಿ ದೊರೆಯುವ ಸಾಧ್ಯತೆ ಇದೆ. ಮಾತ್ರವಲ್ಲ, ನೀವು ನಿಮ್ಮ ಮಕ್ಕಳಿಂದಲೂ ಕೂಡ ಶುಭ ಸಮಾಚಾರವನ್ನು ಸ್ವೀಕರಿಸುವಿರಿ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಜವಾಬ್ದಾರಿಗಳು ಹೆಗಲೇರಲಿದ್ದು ಎಲ್ಲರನ್ನೂ ನಿಮ್ಮತ್ತ ಆಕರ್ಷಿಸುವಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.