Guru Vakri 2023: ಡಿಸೆಂಬರ್ 31ರವರೆಗೆ ಈ ರಾಶಿಯವರು ತುಂಬಾ ಎಚ್ಚರಿಕೆಯಿಂದಿರಿ
Guru Vakri 2023: ನವಗ್ರಹಗಳಲ್ಲೇ ದೇವಗುರು ಸ್ಥಾನಮಾನವನ್ನು ಪಡೆದಿರುವ ಬೃಹಸ್ಪತಿಯು ಇಂದಿನಿಂದ ತನ್ನ ಹಿಮ್ಮುಖ ಚಲನೆಯನ್ನು ಆರಂಭಿಸಲಿದ್ದಾನೆ. ಈ ವರ್ಷಾಂತ್ಯದವರೆಗೂ ಇದೇ ಸ್ಥಿತಿಯಲ್ಲಿ ಸಂಚರಿಸಲಿರುವ ಗುರು ಗ್ರಹದ ಪರಿಣಾಮ ಎಲ್ಲಾ ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಈ ಸಮಯದಲ್ಲಿ ಕೆಲವು ರಾಶಿಯವರಿಗೆ ತುಂಬಾ ಎಚ್ಚರಿಕೆ ಅಗತ್ಯ ಎಂದು ಹೇಳಲಾಗುತ್ತಿದೆ.
Guru Vakri 2023: ವೈದಿಕ ಜ್ಯೋತಿಷ್ಯದ ಪ್ರಕಾರ, ನವ ಗ್ರಹಗಳಲ್ಲಿ ಯಾವುದೇ ಒಂದು ಗ್ರಹದ ಸಂಚಾರದಲ್ಲಿನ ಒಂದು ಸಣ್ಣ ಬದಲಾವಣೆಯೂ ಎಲ್ಲಾ 12 ರಾಶಿಗಳ ಮೇಲೆ ಶುಭ-ಅಶುಭ ಪರಿಣಾಮಗಳನ್ನು ಉಂಟು ಮಾಡುತ್ತದೆ. ಇಂದು ಎಂದರೆ 04 ಸೆಪ್ಟೆಂಬರ್ 2023ರ ಸೋಮವಾರದಂದು ದೇವಗುರು ಬೃಹಸ್ಪತಿಯು ಮೇಷ ರಾಶಿಯಲ್ಲಿ ತನ್ನ ಹಿಮ್ಮುಖ ಚಲನೆಯನ್ನು ಆರಂಭಿಸಲಿದ್ದಾನೆ.
ಡಿಸೆಂಬರ್ 31ರವರೆಗೆ ಗುರುವಿನ ಹಿಮ್ಮುಖ ಚಲನೆಯು ಎಲ್ಲಾ ರಾಶಿಯವರ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತದೆ. ಆದಾಗ್ಯೂ, 118 ದಿನಗಳ ಕಾಲ ಗುರುವಿನ ವಕ್ರ ನಡೆಯು ಕೆಲವು ರಾಶಿಯವರ ಬದುಕಿನಲ್ಲಿ ಸಂಕಷ್ಟಗಳ ಸುರಿಮಳೆಗೈಯಲಿದ್ದು, ಈ ಸಮಯದಲ್ಲಿ ಈ ರಾಶಿಯವರು ತುಂಬಾ ಜಾಗರೂಕರಾಗಿರಬೇಕು ಎಂದು ಹೇಳಲಾಗುತ್ತಿದೆ. ಇಲ್ಲದಿದ್ದರೆ, ಅವರು ಭಾರೀ ಆರ್ಥಿಕ ನಷ್ಟವನ್ನು ಅನುಭವಿಸಬೇಕಾಗಬಹುದು ಎಂದು ಹೇಳಲಾಗುತ್ತಿದೆ. ಹಾಗಿದ್ದರೆ, ಈ ಸಮಯದಲ್ಲಿ ಯಾವ ರಾಶಿಯ ಜನರು ಜಾಗರೂಕರಾಗಿರುವುದು ಅವಶ್ಯಕ ಎಂದು ತಿಳಿಯೋಣ...
ಈ ವರ್ಷಾಂತ್ಯದವರೆಗೆ ಈ ರಾಶಿಯವರನ್ನು ಬೆಂಬಿಡದೆ ಕಾಡಲಿದ್ದಾನೆ ವಕ್ರೀ ಗುರು:
ಮೇಷ ರಾಶಿ:
ಸ್ವ ರಾಶಿಯಲ್ಲಿ ಗುರು ಹಿಮ್ಮುಖ ಚಲನೆಯು ಮೇಷ ರಾಶಿಯವರ ಜೀವನದಲ್ಲಿ ಹಲವು ರೀತಿಯ ಸಂಕಷ್ಟಗಳನ್ನು ತಂದೊಡ್ಡಲಿದ್ದಾನೆ. ಅದರಲ್ಲೂ ಪ್ರಮುಖವಾಗಿ, ಈ ಸಮಯದಲ್ಲಿ ಮೇಷ ರಾಶಿಯವರಿಗೆ ಆರೋಗ್ಯ ಸಂಬಂಧಿತ ಸಮಸ್ಯೆಗಳು ಉಲ್ಬಣಿಸಲಿವೆ. ಮಾತ್ರವಲ್ಲ, ಆದಾಯಕ್ಕಿಂತ ಖರ್ಚು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಹಣಕಾಸಿನ ಸಮಸ್ಯೆಗಳು ಕೂಡ ಬಾಧಿಸಬಹುದು. ಹೀಗಾಗಿ, ನಿಮ್ಮ ಬಜೆಟ್ ಬಗ್ಗೆ ಗಮನಹರಿಸಿ. ಇಲ್ಲದಿದ್ದರೆ, ಸಾಲದ ಸುಳಿಯಲ್ಲಿ ಸಿಲುಕುವ ಸಾಧ್ಯತೆಯಿದೆ.
ಇದನ್ನೂ ಓದಿ- ಇದೇ ನೋಡಿ ವಿಶ್ವದ ಅತಿ ದೊಡ್ಡ ಕೃಷ್ಣ ದೇವಾಲಯ
ವೃಷಭ ರಾಶಿ:
ಬೃಹಸ್ಪತಿಯ ಹಿಮ್ಮುಖ ಚಲನೆಯು ವೃಷಭ ರಾಶಿಯವರ ವೃತ್ತಿ ವ್ಯವಹಾರದಲ್ಲಿ ನಕಾರಾತ್ಮಕ ಪರಿಣಾಮವನ್ನು ಬೀರಲಿದೆ. ಈ ವರ್ಷಾಂತ್ಯದವರೆಗೆ ನಿಮ್ಮ ಹಿತ ಶತ್ರುಗಳ ಬಗ್ಗೆ ತುಂಬಾ ಜಾಗರೂಕರಾಗಿರಿ. ಇಲ್ಲದಿದ್ದರೆ, ಜೀವನದಲ್ಲಿ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇರುತ್ತದೆ. ಕೌಟುಂಬಿಕ ಜೀವನದಲ್ಲಿಯೂ ಭಿನ್ನಾಭಿಪ್ರಾಯಗಳು ಮೂಡುವ ಸಂಭವವಿರುವುದರಿಂದ ಬೇರೆಯವರ ಮಾತಿಗೆ ಕಿವಿಗೊಡಬೇಡಿ.
ಕರ್ಕಾಟಕ ರಾಶಿ:
ಈ ವರ್ಷಾಂತ್ಯದವರೆಗೆ ಹಿಮ್ಮುಖವಾಗಿರುವ ಗುರುವು ಕರ್ಕಾಟಕ ರಾಶಿಯವರಿಗೆ ವೃತ್ತಿ ಬದುಕಿನಲ್ಲಿ ನಾನಾ ಸವಾಲುಗಳನ್ನು ತಂದೊಡ್ಡಲಿದೆ. ನಿಮ್ಮ ಮನೆಯ ಹಿರಿಯ ಆರೋಗ್ಯ ಉಲ್ಬಣಿಸುವ ಸಾಧ್ಯತೆ ಇರುವುದರಿಂದ ಸಣ್ಣ ನಿರ್ಲಕ್ಷ್ಯವೂ ನಿಮಗೆ ಭಾರೀ ಹೊಡೆತವನ್ನು ನೀಡಬಹುದು. ಹಾಗಾಗಿ ಎಚ್ಚರಿಕೆಯಿಂದ ಇರಿ.
ಸಿಂಹ ರಾಶಿ:
ಹಿಮ್ಮುಖ ಗುರುವು ಸಿಂಹ ರಾಶಿಯವರಿಗೆ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹೆಚ್ಚಿಸಬಹುದು. ಹಾಗಾಗಿ, ಪ್ರಾಣಾಯಾಮದಂತಹ ಹವ್ಯಾಸವನ್ನು ರೂಢಿಸಿಕೊಳ್ಳಿ. ಇದಲ್ಲದೆ, ಹಣಕಾಸಿನ ಖರ್ಚು ಹೆಚ್ಚಾಗಬಹುದಾದ್ದರಿಂದ ಖರ್ಚಿಗೆ ಕಡಿವಾಣ ಹಾಕಿ. ಇಲ್ಲದಿದ್ದರೆ, ಭಾರೀ ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆ ಇದೆ. ಇನ್ನೂ ದಂಪತಿಗಳ ನಡುವೆ ಭಿನ್ನಾಭಿಪ್ರಾಯ ಸಾಧ್ಯತೆ ಇರುವುದರಿಂದ ಯಾವುದೇ ವೈಮಸ್ಸನ್ನು ಹೆಚ್ಚು ಮುಂದುವರೆಸದೆ ಅಲ್ಲಿಂದಲ್ಲಿಗೆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ಒಳಿತು.
ಇದನ್ನೂ ಓದಿ- Shani Margi: 2024ರವರೆಗೆ ಈ ರಾಶಿಯವರಿಗೆ ಹೆಜ್ಜೆ ಹೆಜ್ಜೆಗೂ ಯಶಸ್ಸು ನೀಡಲಿದ್ದಾನೆ ಶನಿ ದೇವ
ಧನು ರಾಶಿ:
ಧನು ರಾಶಿಯವರು ಈ ಸಮಯದಲ್ಲಿ ನಿಮ್ಮ ಜವಾಬ್ದಾರಿಯನ್ನು ಅರಿತು ನಡೆಯಿರಿ. ನಿಮ್ಮ ಹೆತ್ತವರಿಗೆ ಬೇಸರವಾಗದಂತೆ ನಡೆದುಕೊಳ್ಳಿ. ಇಲ್ಲದಿದ್ದರೆ, ಇದು ನಿಮ್ಮ ತಾಯಿಯ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಆಸ್ಪತ್ರೆಯ ಖರ್ಚುಗಳು ಹೆಚ್ಚಾಗಬಹುದು. ಹಣಕಾಸಿನ ವಿಷಯದಲ್ಲೂ ಸಮಯ ಅಷ್ಟು ಶುಭಕರವಾಗಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.