Astro: ಹನುಮಂತ ಪ್ರಿಯ ಈ ವಸ್ತುವನ್ನು ಪೂಜೆ ವೇಳೆ ಅರ್ಪಿಸಿದರೆ ಕ್ಷಣದಲ್ಲಿ ಇಷ್ಟಾರ್ಥ ನೆರವೇರಿಸುವನು ಪವನಸುತ!
Lord Hanuman: ಬೂಂದಿಯನ್ನು ನೈವೇದ್ಯದ ರೂಪದಲ್ಲಿ ದೇವರಿಗೆ ಅರ್ಪಿಸಬೇಕು. ಇದು ಹನುಮಂತ ಪ್ರಿಯ ಎಂದು ಹೇಳಲಾಗುತ್ತದೆ. ಆಂಜನೇಯನನ್ನು ಪೂಜಿಸಿದಾಗಲೆಲ್ಲಾ ಬೂಂದಿಯನ್ನು ನೈವೇದ್ಯವಾಗಿ ಅರ್ಪಿಸಿ, ಬಳಿಕ ಅದನ್ನು ಪ್ರಸಾದದ ರೂಪದಲ್ಲಿ ಸ್ವೀಕರಿಸಿ. ಹೀಗೆ ಮಾಡಿದರೆ, ನಿಮಗೆ ಒಳಿತು ಮಾಡುತ್ತಾನೆ ಪವನಸುತ.
Lord Hanuman: ಕಲಿಯುಗದ ಹನುಮಂತನನ್ನು ಮೆಚ್ಚಿಸಲೆಂದು ಭಕ್ತರು ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಾರೆ. ಅಷ್ಟೇ ಅಲ್ಲದೆ, ಮಂಗಳವಾರದಂದು ಮತ್ತು ಶನಿವಾರದಂದು ಹನುಮಂತ ದೇವರನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಈ ದಿನಗಳನ್ನು ಭಗವಾನ್ ಆಂಜನೇಯನ ಆರಾಧನೆಯ ದಿನ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: 70 ಸಾವಿರದ iPhone 13 ಜಸ್ಟ್ 30 ಸಾವಿರಕ್ಕೆ! ನಿಮ್ಮ ಫೇವರೇಟ್ ಫೋನ್ ಖರೀದಿಸಲು ಇದುವೇ ಸರಿಯಾದ ಟೈಂ!
ಇನ್ನು ಮಂಗಳವಾರ ಮತ್ತು ಶನಿವಾರದಂದು ನೀವು ಆಂಜನೇಯ ದೇವರನ್ನು ಪೂಜಿಸಿದರೆ, ನಿಮ್ಮ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎಂದು ಹೇಳಲಾಗುತ್ತದೆ. ದೇವರನ್ನು ಮೆಚ್ಚಿಸಲೆಂದು ಅನೇಕ ಬಗೆಯ ನೈವೇದ್ಯಗಳನ್ನು ಸಮರ್ಪಿಸಲಾಗುತ್ತದೆ. ಆದರೆ ಆಂಜನೇಯನಿಗೆ ಪ್ರಿಯವಾದ ನೈವೇದ್ಯವೊಂದಿದೆ. ಇದನ್ನು ಪೂಜೆಯ ಸಮಯದಲ್ಲಿ ಅರ್ಪಿಸಿದರೆ, ನಿಮ್ಮ ಇಷ್ಟಾರ್ಥಗಳನ್ನು ಕ್ಷಣದಲ್ಲಿ ಪವನಸುತ ಈಡೇರಿಸತ್ತಾನೆ ಎಂದು ಹೇಳಲಾಗುತ್ತದೆ.
ಬೂಂದಿಯನ್ನು ನೈವೇದ್ಯದ ರೂಪದಲ್ಲಿ ದೇವರಿಗೆ ಅರ್ಪಿಸಬೇಕು. ಇದು ಹನುಮಂತ ಪ್ರಿಯ ಎಂದು ಹೇಳಲಾಗುತ್ತದೆ. ಆಂಜನೇಯನನ್ನು ಪೂಜಿಸಿದಾಗಲೆಲ್ಲಾ ಬೂಂದಿಯನ್ನು ನೈವೇದ್ಯವಾಗಿ ಅರ್ಪಿಸಿ, ಬಳಿಕ ಅದನ್ನು ಪ್ರಸಾದದ ರೂಪದಲ್ಲಿ ಸ್ವೀಕರಿಸಿ. ಹೀಗೆ ಮಾಡಿದರೆ, ನಿಮಗೆ ಒಳಿತು ಮಾಡುತ್ತಾನೆ ಪವನಸುತ.
ಕಡಲೆ ಹಿಟ್ಟಿನ ಲಡ್ಡೂಗಳು ಬಜರಂಗಬಲಿಗಳಿಗೆ ಬಹಳ ಪ್ರಿಯವಾಗಿವೆ. ಮಂಗಳವಾರ ಮತ್ತು ಶನಿವಾರದಂದು ಹನುಮಾನ್ ದೇವರಿಗೆ ಕಡಲೆ ಹಿಟ್ಟಿನ ಬೂಂದಿ ಲಡ್ಡೂಗಳನ್ನು ಅರ್ಪಿಸಬೇಕು. ಹೀಗೆ ಮಾಡಿದರೆ ಎಂದಿಗೂ ಕೂಡ ನಿಮಗೆ ದಯೆ ತೋರುತ್ತಾನೆ. 7, 11, 21 ಮಂಗಳವಾರ ಮತ್ತು ಶನಿವಾರದಂದು ನೀವು ಬಜರಂಗಬಲಿಗೆ ಕಡಲೆ ಲಡ್ಡೂಗಳನ್ನು ಅರ್ಪಿಸಿದರೆ, ನಿಮ್ಮ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುತ್ತಾನೆ ಎಂದು ನಂಬಲಾಗಿದೆ.
ಪಂಚಮೇವಾ ಭೋಗ:
ಬಜರಂಗಬಲಿ ಭಗವಂತನೂ ಪಂಚಮೇವಾವನ್ನು ತಿನ್ನಲು ಇಷ್ಟಪಡುತ್ತಾನೆ. ಪಂಚಮೇವವನ್ನು ಅರ್ಪಿಸುವ ಮೂಲಕ ಹನುಮಂತನು ಸಂತುಷ್ಟನಾಗುತ್ತಾನೆ ಮತ್ತು ಭಕ್ತರ ಮೇಲೆ ತನ್ನ ಆಶೀರ್ವಾದವನ್ನು ನೀಡುತ್ತಾನೆ ಎಂದು ನಂಬಲಾಗಿದೆ. ನಿಮ್ಮ ಮನೆಯಲ್ಲಿ ಬಜರಂಗಬಲಿ ಪೂಜೆಯನ್ನು ವಿಧಿ ವಿಧಾನಗಳೊಂದಿಗೆ ಮಾಡುವಾಗ, ಪಂಚಮೇವ ಪ್ರಸಾದವನ್ನು ಅರ್ಪಿಸಲು ಮರೆಯಬೇಡಿ.
ಗುಲಾಬಿ:
ಭಜರಂಗಬಲಿ ದೇವರಿಗೆ ಹೂವಿನ ಹಾರಗಳನ್ನು ಅರ್ಪಿಸುವಾಗ, ಗುಲಾಬಿಗಳಿಂದ ಮಾಡಿದ ಮಾಲೆಗಳನ್ನು ಅರ್ಪಿಸಿ. ಅಷ್ಟೇ ಅಲ್ಲ, ಅವುಗಳನ್ನು ದೇವರ ಪಾದಗಳಿಗೆ ಅರ್ಪಿಸಿ. ಆಂಜನೇಯ ದೇವರಿಗೆ ಗುಲಾಬಿ ಹೂ ಎಂದರೆ ತುಂಬಾ ಇಷ್ಟ. ಅದಕ್ಕಾಗಿಯೇ ಬಜರಂಗಬಲಿ ಪೂಜೆ ಮಾಡುವಾಗ ಗುಲಾಬಿ ಹೂವನ್ನು ಅರ್ಪಿಸಿ.
ಇದನ್ನೂ ಓದಿ: CSK vs RR ಪಂದ್ಯದಲ್ಲಿ ಅಂಪೈರ್ ವಿರುದ್ಧ ಗಂಭೀರ ಆರೋಪ ಮಾಡಿದ ಅಶ್ವಿನ್! ಹುಟ್ಟಿಕೊಂಡ ಹೊಸ ವಿವಾದ ಏನು?
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.