Hardik Pandya: ಭಾರತ ತಂಡದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಅವರ ಪತ್ನಿ ನತಾಶಾ ಸ್ಟಾಂಕೋವಿಕ್ ಅಧಿಕೃತವಾಗಿ ಬೇರ್ಪಟ್ಟಿದ್ದಾರೆ. ಇಬ್ಬರು ವಿಚ್ಛೇದನದ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಆದರೆ ಈಗ ಅವರ ಮಗ ಅಗಸ್ತ್ಯ ಯಾರೊಂದಿಗೆ ವಾಸಿಸುತ್ತಾನೆ ಎಂಬುದು ಪ್ರಶ್ನೆಯಾಗಿದೆ. ಪಾಂಡ್ಯ ಮತ್ತು ನತಾಶಾ ತಮ್ಮ ಸೋಷಿಯಲ್‌ ಮಿಡಿಯಾ ಹ್ಯಾಂಡಲ್‌ಗಳಲ್ಲಿ ಅದೇ ಟಿಪ್ಪಣಿಯನ್ನು ಹಂಚಿಕೊಂಡಿದ್ದಾರೆ ಮತ್ತು ಅದರಲ್ಲಿ ಅಗಸ್ತ್ಯನನ್ನು ಸಹ ಉಲ್ಲೇಖಿಸಿದ್ದಾರೆ. ಪಾಂಡ್ಯ ಮತ್ತು ನತಾಶಾ ಇಬ್ಬರೂ ಒಟ್ಟಿಗೆ ಅಗಸ್ತ್ಯನನ್ನು ಬೆಳೆಸುತ್ತಾರೆ. ಇದಕ್ಕೆ ಇಬ್ಬರೂ ಸಹಮತ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

"ಅಗಸ್ತ್ಯ ನಮ್ಮಿಬ್ಬರ ಜೀವನದ ಪ್ರಮುಖ ಭಾಗವಾಗಿ ಉಳಿಯುತ್ತಾನೆ.. ನಾವು ಇಬ್ಬರೂ ಅವನನ್ನು ಪೋಷಣೆ ಮಾಡುತ್ತೇವೆ ಮತ್ತು ಅವನ ಸಂತೋಷವಾಗಿ ನೋಡಿಕೊಳ್ಳುತ್ತೇವೆ" ಎಂದು ಬರೆದುಕೊಂಡಿದ್ದಾರೆ..


ಇದನ್ನೂ ಓದಿ-ಬಾಲಿವುಡ್ ನ ಈ ನಟ ನಟಿಯರು ಅಂಗಾಂಗ ದಾನ ಮಾಡಿದ್ದಾರೆ.. ಇವರೇ ನೋಡಿ ಆ ಆಕ್ಟರ್ಸ್!!


ಹಾರ್ದಿಕ್ ಮತ್ತು ನತಾಶಾ 2020 ರಲ್ಲಿ ವಿವಾಹವಾದರು ಮತ್ತು ಅಗಸ್ತ್ಯ ಅದೇ ವರ್ಷದಲ್ಲಿ ಜನಿಸಿದರು.. ಇತ್ತೀಚೆಗೆ ನತಾಶಾ ತನ್ನ ಪೋಷಕರು ವಾಸಿಸುತ್ತಿರುವ ಸರ್ಬಿಯಾದಲ್ಲಿನ ಮನೆಗೆ ತೆರಳಿದ್ದಾರೆ.. ಆ ವೇಳೆ ಮುಂಬೈ ವಿಮಾನ ನಿಲ್ದಾನದಲ್ಲಿ ಕಾಣಿಸಿಕೊಂಡಿದ್ದು, ಜೊತೆಗೆ ಮಗ ಅಗಸ್ತ್ಯ ಕೂಡ ಇದ್ದ.. ಹಾರ್ದಿಕ್ ಮತ್ತು ನತಾಶಾ ನಡುವಿನ ಸಂಬಂಧ ಬಹಳ ದಿನಗಳಿಂದ ಸರಿಯಾಗಿ ಇರಲಿಲ್ಲ. ಅವರ ವಿಚ್ಛೇದನದ ಸುದ್ದಿ ಬಹಳ ಹಿಂದೆಯೇ ಬಂದಿತ್ತು. ಇದೀಗ ಇಬ್ಬರೂ ಕೂಡ ಇದನ್ನು ಖಚಿತಪಡಿಸಿದ್ದಾರೆ.


ಕಳೆದ ಕೆಲವು ತಿಂಗಳುಗಳು ಹಾರ್ದಿಕ್ ಪಾಂಡ್ಯಗೆ ತುಂಬಾ ಕಷ್ಟಕರವಾಗಿತ್ತು. 2024 ರ ಟಿ 20 ವಿಶ್ವಕಪ್ ವಿಜಯದ ನಂತರ ಪಾಂಡ್ಯ ಕೆಟ್ಟದಾಗಿ ಅಳುತ್ತಾ ತಮ್ಮ ಹೃದಯದ ಭಾವನೆಗಳನ್ನು ವ್ಯಕ್ತಪಡಿಸಿದರು. ಐಪಿಎಲ್ 2024 ರ ಸಮಯದಲ್ಲಿ ಪಾಂಡ್ಯ ಕೂಡ ಸಾಕಷ್ಟು ಟ್ರೋಲ್ ಆಗಿದ್ದರು.


 ಇದನ್ನೂ ಓದಿ-ಚಿತ್ರರಂಗಕ್ಕೆ ಕಾಲಿಟ್ಟಾಗ 7000ರೂ ಸಂಭಾವನೆ ಪಡೆದ ನಟಿ, ಇದೀಗ ಬಾಲಿವುಡ್ ನ ಹಾಟ್ ಬ್ಯೂಟಿ ಕ್ವೀನ್...!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.