Holi 2024 Upay: ಹೋಳಿ ದಿನ 4 ಶುಭಯೋಗಗಳ ರಚನೆ, ಏನು ಮಾಡಬೇಕು? ಮಾಡಬಾರದು ಇಲ್ಲಿ ತಿಳಿಯಿರಿ!
Holi 2024 Dos And Don`ts: Holi 2024 ರ ದಿನ ಕೆಲ ಕೆಲಸಗಳನ್ನು ನಿರ್ವಹಿಸಲು ನಿಷಿದ್ಧ ಎನ್ನಲಾಗಿದೆ(follow these remedies for festival day). ಬನ್ನಿ ಯಾವುವು ತಿಳಿದುಕೊಳ್ಳೋಣ, (Spiritual News In Kannada)
Holi 2024 Remedies: ಕೆಟ್ಟ ಸಂಗತಿಗಳ ಮೇಲೆ ಒಳ್ಳೆಯ ಸಂಗತಿಗಳ ಗೆಲುವಿನ ಪ್ರತೀಕವಾಗಿ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಬಾಂಧವ್ಯ, ಪರಸ್ಪರ ಪ್ರೀತಿ ವಿಶ್ವಾಸ ಹಾಗೂ ಸದ್ಭಾವನೆಯ ಪ್ರತೀಕ ಹೋಳಿ ಹಬ್ಬ, ವೈದಿಕ ಪಂಚಾಂಗದ ಪ್ರಕಾರ ಫಾಲ್ಗುಣಿ ಮಾಸದ ಕ್ದೃಷ್ಣ ಪಕ್ಷದ ಹುಣ್ಣಿಮೆಯ ತಿಥಿಯಂದು ಹೋಳಿ ಹುಣ್ಣಿಮೆಯನ್ನು ಆಚರಿಸಲಾಗುತ್ತದೆ (follow these remedies for festival day). ಈ ಬಾರಿ 24 ಮಾರ್ಚ್ 2024ರ ಭಾನುವಾರದಂದು ಈ ಹಬ್ಬ ಬೀಳುತ್ತಿದೆ. ಮಾರ್ಚ್ 25 ರಂದು ಬಣ್ಣದೊಕುಳಿ ಆಡಲಾಗುತ್ತದೆ. ಈ ಬಾರಿಯ ಹೋಳಿ ಹಬ್ಬದ ದಿನ ನಾಲ್ಕು ಶುಭಯೋಗಗಳು ರಚನೆಯಾಗುತ್ತಿವೆ. ಹೀಗಾಗಿ ಈ ದಿನದ ಮಹತ್ವ ಇನ್ನೂ ಹೆಚ್ಚಾಗಿದೆ. ಹೋಳಿ ದಹನದ ದಿನ ಕೆಲ ಕೆಲಸಗಳನ್ನು ಮಾಡದಿರಲು ಸಲಹೆ ನೀಡಲಾಗುತ್ತದೆ.
ಈ ಶುಭ ಯೋಗಗಳು ರಚನೆಯಾಗುತ್ತಿವೆ
ಹೋಳಿ ಹಬ್ಬದ ದಿನ ನಾಲ್ಕು ಶುಭಯೋಗಗಳು ರಚನೆಯಾಗುತ್ತಿವೆ. ಅರ್ಥಾತ್ ಮಾರ್ಚ್ 24 ರಂದು, ಸರ್ವಾರ್ಥ ಸಿದ್ಧಿಯೋಗ, ರವಿಯೋಗ, ಗಂಡಯೋಗ, ಹಾಗೂ ಬುಧಾದಿತ್ಯ ರಾಜಯೋಗದ ಶುಭ ಕಾಕತಾಳೀಯ ಕೂಡ ನಿರ್ಮಾಣಗೊಳ್ಳುತ್ತಿದೆ. ಇಡೀ ದಿನ ವೃದ್ಧಿಯೋಗ, ಬುಧಾದಿತ್ಯ ಯೋಗ, ವಾಶಿ ಯೋಗ ಹಾಗೂ ಸುನಫಾ ಯೋಗ ಇರಲಿದೆ. ಜೋತಿಷ್ಯ ಶಾಸ್ತ್ರದಲ್ಲಿ ಈ ಯೋಗಗಳನ್ನು ಅತ್ಯಂತ ಶುಭ ಯೋಗಗಳೆಂದು ಭಾವಿಸಲಾಗುತ್ತದೆ. (Holi 2024 remedies)
ಹೋಳಿ ದಹನದ ದಿನ ಈ ಕೆಲಸ ಮಾಡಿ
>> ಒಂದು ವೇಳೆ ನಿಮಗೆ ಕಂಡರಿಯದ ಭಯ ಕಾಡುತ್ತಿದ್ದರೆ, ಹೋಳಿ ದಹನ ನೋಡಲು ಹೋದಾಗ ಜೇಬಿನಲ್ಲಿ ಕಾಡಿಗೆ ಡಬ್ಬಿ ಇಟ್ಟುಕೊಳ್ಳಿ. (holi 2024 astro remedies)
>> ಮಗುವಿಗೆ ಅಥವಾ ಯಾವುದೇ ವ್ಯಕ್ತಿಗೆ ಪದೇ ಪದೇ ಕೆಟ್ಟ ದೃಷ್ಟಿ ಬೀಳುತ್ತಿದ್ದರೆ, ಒಂದು ತೆಂಗಿನ ಕಾಯಿ ತೆಗೆದುಕೊಂಡು ಅಡಿಯಿಂದ ಮುಡಿಯವರೆಗೆ ಏಳು ಬಾರಿ ನಿವಾಳಿಸಿ, ಹೋಳಿ ಅಗ್ನಿಗೆ ಆಹುತಿ ನೀಡಿ.
>> ಹೋಳಿ ಅಗ್ನಿಯಲ್ಲಿ ಕಚ್ಚಾ ಗೋದಿಯ ದಳಗಳನ್ನು ಕುದಿಸಿ ಅದನ್ನು ಪ್ರಸಾದದ ರೂಪದಲ್ಲಿ ಸೇವಿಸಿ, ಆಯುರಾರೋಗ್ಯ ಪ್ರಾಪ್ತಿಯಾಗುತ್ತದೆ.
>> ವೃತ್ತಿ ವ್ಯಾಪಾರದಲ್ಲಿ ಉನ್ನತಿಗಾಗಿ ಈ ದಿನ 7 ಗೋಮತಿ ಚಕ್ರಗಳನ್ನು ತೆಗೆದುಕೊಂಡು ಶಿವಲಿಂಗದ ಮೇಲೆ ಅರ್ಪಿಸಿ,
ಇದನ್ನೂ ಓದಿ-Lakshmi Narayan Rajyog 2024: ವರ್ಷದ ಬಳಿಕ ಲಕ್ಷ್ಮಿ ನಾರಾಯಣ ರಾಜಯೋಗ ರಚನೆ, ಈ ಜನರ ಜೀವನದಲ್ಲಿ ಸುವರ್ಣ ಕಾಲ ಆರಂಭ!
ಈ ಕೆಲಸಗಳನ್ನು ಮರೆತೂ ಮಾಡಬೇಡಿ
>> ಹೋಳಿ ದಹನದ ದಿನ ಯಾರಿಂದಲೂ ಹಣವನ್ನು ಎರವಲು ಪಡೆಯಬೇಡಿ. ಹೀಗೆ ಮಾಡುವುದರಿಂದ ಇಡೀ ವರ್ಷ ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಗುತ್ತದೆ.
>> ಹೋಳಿ ದಹದಡ ವೇಳೆ ಕೆಲ ಜನರು ತಮ್ಮ ಮನೆಯಲ್ಲಿರುವ ಕಸವನ್ನು ಗೂಡಿಸಿ ಅಗ್ನಿಗೆ ಹಾಕುತ್ತಾರೆ. ಇದರಿಂದ ಜೀವನದಲ್ಲಿ ದಾರಿದ್ರ್ಯ ಬರುತ್ತದೆ.
>> ಹೋಳಿ ದಹನ ಹಾಗೂ ಬಣ್ಣದೊಕುಳಿಯ ದಿನ ಕಬ್ಬಿಣ ಅಥವಾ ಸ್ಟೀಲ್ ವಸ್ತುಗಳನ್ನು ದಾನ ಮಾಡಬಾರದು ಎನ್ನಲಾಗುತ್ತದೆ, ಹೀಗೆ ಮಾಡುವುದು ಅಶುಭ ಎನ್ನಲಾಗಿದೆ.
ಇಯನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ