Holi Festival 2024 Special - ಈ ಬಾರಿ ಹೋಳಿ ಹಬ್ಬವನ್ನು ಮಾರ್ಚ್ 17 ಮತ್ತು 18 ರಂದು ಆಚರಿಸಲಾಗುತ್ತಿದೆ, ಆದರೆ ಜಾರ್ಖಂಡ್‌ನ (Jharkhand) ಸಂತಾಲ್ ಬುಡಕಟ್ಟು ಜನಾಂಗದ (Santal Tribal Community) ಜನರಲ್ಲಿ, ಕಳೆದ ಸುಮಾರು 15 ದಿನಗಳಿಂದ ನೀರು ಮತ್ತು ಹೂವುಗಳ ಮೂಲಕ ಆಚರಿಸಲಾಗುವ  ಹೋಳಿ ಹಬ್ಬ (Holi Festival 2024) ಈಗಾಗಲೇ ಆರಂಭಗೊಂಡಿದೆ. ಸಂತಾಲಿ ಬುಡಕಟ್ಟು ಜನಾಂಗದವರು ಈ ಹಬ್ಬವನ್ನು 'ಬಾಹಾ' ಹಬ್ಬ ಎಂದು ಆಚರಿಸುತ್ತಾರೆ. ಆದರೆ, ಈ ಜನಾಂಗದವರ ಸಂಪ್ರದಾಯದಲ್ಲಿ ಬಣ್ಣ ಹಚ್ಚಲು ಅವಕಾಶವಿಲ್ಲ. ಈ ಸಮಾಜದಲ್ಲಿ ಬಣ್ಣ ಹಚ್ಚುವುದಕ್ಕೆ ವಿಶೇಷ ಅರ್ಥವಿದೆ. ಇಲ್ಲಿ ಒಬ್ಬ ಯುವಕ ಕನ್ಯೆಗೆ ಅಥವಾ ಹುಡುಗಿಗೆ ಬಣ್ಣ ಹಚ್ಚಿದರೆ, ಅವನು ಆ ಹುಡುಗಿಯನ್ನು ಮದುವೆಯಾಗಬೇಕು. ಆತ ಹಾಗೆ ಮಾಡದೆ ಹೋದರೆ ಆತನಿಗೆ ಭಾರಿ ದಂಡ ವಿಧಿಸಲಾಗುತ್ತದೆ (santhals celebrate festival of new flowers).

COMMERCIAL BREAK
SCROLL TO CONTINUE READING

ಈ  ಹಬ್ಬದ ಪ್ರಕ್ರಿಯೆಯೂ ಕೂಡ ಹೋಳಿಗೆ ಮೊದಲು ಪ್ರಾರಂಭವಾಗುತ್ತದೆ. 'ಬಾಹಾ' ಎಂದರೆ ಹೂವಿನ ಹಬ್ಬ (Festival Of Flowers) ಎಂದರ್ಥ. ಈ ದಿನ ಸಂತಾಲ್ ಬುಡಕಟ್ಟು ಸಮುದಾಯದ ಜನರು ಬಾಣ ಮತ್ತು ಬಿಲ್ಲುಗಳನ್ನು ಪೂಜಿಸುತ್ತಾರೆ. ಡೊಳ್ಳು-ಡ್ರಮ್ ತಾಳಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸುತ್ತಾರೆ. (Spiritual News In Kannada))

'ಬಾಹಾ' ದಿನದಂದು ನೀರು ಹಾಕಲು ಕೂಡ ಒಂದು ನಿಯಮವಿದೆ. ಯಾರ ಜೊತೆ ಸಂಬಂಧದಲ್ಲಿ ತಮಾಷೆ ಇರುತ್ತದೆಯೋ ಕೇವಲ ಅವರೊಂದಿಗೆ ಮಾತ್ರ ಹೋಳಿ ಆಡಬೇಕು. ಇನ್ನೊಂದೆಡೆ, ಯಾವುದೇ ಯುವಕ ಒಂದು ವೇಳೆ ಕನ್ಯೆಯಾಗಿರುವ ಹುಡುಗಿಗೆ ಬಣ್ಣ ಹಾಕಿದರೆ, ಸಮಾಜದ ಪಂಚಾಯಿತಿ ಹುಡುಗಿಯ ಮದುವೆ ಹುಡುಗನ ಜೊತೆಗೆ ನೆರವೇರಿಸುತ್ತದೆ. ಒಂದು ವೇಳೆ ಹುಡುಗಿಗೆ ಈ ಪ್ರಸ್ತಾವನೆ ಒಪ್ಪಿಗೆ ಇಲ್ಲ ಎಂದಾದಲ್ಲಿ, ಪಂಚಾಯಿತಿ ಬಣ್ಣ ಹಾಕಿದ ಹುಡುಗನ ಎಲ್ಲಾ ಆಸ್ತಿಯನ್ನು ಹುಡುಗಿಯ ಹೆಸರಿಗೆ ವರ್ಗಾಯಿಸಿ, ಶಿಕ್ಷೆ ವಿಧಿಸುತ್ತದೆ. ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್‌ನಿಂದ ಪಶ್ಚಿಮ ಬಂಗಾಳದ ಜಲ್ಪೈಗುಡಿಯವರೆಗಿನ ಪ್ರದೇಶದಲ್ಲಿ ಈ ನಿಯಮವು ಚಾಲ್ತಿಯಲ್ಲಿದೆ. ಈ ಭಯದಿಂದಾಗಿ ಯಾವುದೇ ಸಂತಾಲ್ ಯುವಕ ಯಾವುದೇ ಹುಡುಗಿಯೊಂದಿಗೆ ಬಣ್ಣ ಆಡುವುದಿಲ್ಲ. ಸಂಪ್ರದಾಯದ ಪ್ರಕಾರ, ಪುರುಷರು ಕೇವಲ ಪುರುಷರೊಂದಿಗೆ ಮಾತ್ರ ಹೋಳಿ ಆಟ ಆಡಬಹುದು. 

ಪೂರ್ವ ಸಿಂಗ್  ಭೂಮ್ ಜಿಲ್ಲೆಯ (East Singbhoom District) ಸಂತಾಲ್ ಸಮುದಾಯದ 'ಬಾಹಾ' ಹಬ್ಬದ ಕುರಿತು ಮಾಹಿತಿ ನೀಡುವ ದೇಶಪ್ರಾಣಿಕ್ ಮಧು ಸೋರೆನ್, 'ನಮ್ಮ ಸಮಾಜದಲ್ಲಿ ಪ್ರಕೃತಿಯನ್ನು ಪೂಜಿಸುವ ಪದ್ಧತಿ ಇದೆ. ಬಾಹೋತ್ಸವದಲ್ಲಿ ಸಮಾಜದ ಜನರು ಕಿವಿಗೆ ಹೂವು ಮತ್ತು ಎಲೆಗಳನ್ನು ಧರಿಸುತ್ತಾರೆ' ಎನ್ನುತ್ತಾರೆ


ಇದನ್ನೂ ಓದಿ-Rudraksha Remedies: ಶನಿಯ ಸಾಡೇಸಾತಿ ಕಾಟದಿಂದ ಮುಕ್ತಿ ನೀಡುತ್ತೇ ಈ ಪ್ರಕಾರದ ರುದ್ರಾಕ್ಷ!

'ಹೇಗೆ ಎಲೆಗಳು ತಮ್ಮ ಬಣ್ಣ  ಬದಲಾಗುವುದಿಲ್ಲವೋ ಹಾಗೆಯೇ ನಮ್ಮ ಸಮಾಜವೂ ಕೂಡ ತನ್ನ ಸಂಪ್ರದಾಯವನ್ನು ಹಾಗೆಯೇ ಉಳಿಸಿಕೊಳ್ಳುತ್ತದೆ' ಎಂದು ಅವರು ಹೇಳುತ್ತಾರೆ. ಬಾಹೋತ್ಸವದಂದು ಪೂಜೆ ಮಾಡುವವರನ್ನು ನಾಯಕಿ ಬಾಬಾ ಎಂದು ಗುರುತಿಸಲಾಗುತ್ತದೆ. ಪೂಜೆಯ ನಂತರ, ಅವರು ಸುಖಹಾ, ಮಹುವಾ  ಮತ್ತು ಸಾಲ್ ಹೂವುಗಳನ್ನು ವಿತರಿಸುತ್ತಾರೆ. ಈ ಪೂಜೆಯೊಂದಿಗೆ ಸಂತಾಲ್ ಸಮಾಜದಲ್ಲಿ ವಿವಾಹ ಪ್ರಕ್ರಿಯೆ ಪ್ರಾರಂಭವಾಗುತ್ತದೆ ಎಂದು ಹೇಳಲಾಗುತ್ತದೆ.


ಇದನ್ನೂ ಓದಿ-Bay Leaves Remedy: ರಾತ್ರೋರಾತ್ರಿ ನಿಮ್ಮನ್ನು ಶ್ರೀಮಂತರನ್ನಾಗಿಸುತ್ತವೆ ತಮಾಲಪತ್ರದ ಈ ಉಪಾಯಗಳು!


(Disclaimer- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ