Holi 2024: ಹಣಕಾಸಿನ ಸಮಸ್ಯೆಯಿಂದ ಮುಕ್ತಿಗಾಗಿ ಮತ್ತು ಸುಖ-ಸಮೃದ್ಧಿ ಹೆಚ್ಚಳಕ್ಕೆ ಹೋಳಿ ಹಬ್ಬದ ದಿನ ಈ ಒಂದು ಕೆಲಸ ಮಾಡಿ ಸಾಕು!
Holi 2024 Remedies: ಹೋಳಿ ದಹನದ ಕೆಲ ಸಂಗತಿಗಳನ್ನು ಹೋಳಿಯ ಉರಿಯುತ್ತಿರುವ ಅಗ್ನಿಗೆ ಆಹುತಿಯಾಗಿ ಅರ್ಪಿಸಬೇಕು. ಇದರಿಂದ ಶುಭ ಫಲಗಳು ಪ್ರಾಪ್ತಿಯಾಗುತ್ತವೆ. (Spiritual News In Kannada)
Holi 2024 Special Remedies 2024: ಸನಾತನ ಧರ್ಮ ಶಾಸ್ತ್ರದಲ್ಲಿ ಹೋಳಿ ಹಬ್ಬಕ್ಕೆ ವಿಶೇಷ ಮಹತ್ವ ಕಲ್ಪಿಸಲಾಗಿದೆ. ಪ್ರತಿ ವರ್ಷ ಫಾಲ್ಗುಣ ಮಾಸದ ಹುಣ್ಣಿಮೆಯ ತಿಥಿಯಂದು ಕಾಮ ದಹನ ನೆರವೇರಿಸಲಾಗುತ್ತದೆ ಮತ್ತು ಮಾರನೆಯ ದಿನ ಬಣ್ಣದೋಕುಳಿ ಆಡಲಾಗುತ್ತದೆ. ಈ ವರ್ಷ ಮಾರ್ಚ್ 24, 2024 ರಂದು ಹೋಳಿ ಮಹಾಪರ್ವ ಆಚರಿಸಲಾಗುತ್ತದೆ. ಪೌರಾಣಿಕ ನಂಬಿಕೆಗಳ ಪ್ರಕಾರ ಭಕ್ತ ಪ್ರಲ್ಹಾದನ ತಂದೆ ಹಿರಣ್ಯಕಶಪು ಮತ್ತು ಸೋದರತ್ತೆ ಪ್ರಲ್ಹಾದನನ್ನು ಹೋಳಿಗೆ ಆಹುತಿಯಾಗಿ ನೀಡಲು ಬಯಸಿರುತ್ತಾರೆ ಆಗ ವಿಷ್ಣುದೇವ ಬಂದು ಪ್ರಲ್ಹಾದನ ಪ್ರಾಣ ರಕ್ಷಿಸುತ್ತಾನೆ ಎನ್ನಲಾಗುತ್ತದೆ. ಹೀಗಾಗಿ ಈ ದಿನವನ್ನು ಕೆಟ್ಟ ಸಂಗತಿಗಳ ಮೇಲೆ ಒಳ್ಳೆಯ ಸಂಗತಿಗಳ ವಿಜಯದ ರೂಪದಲ್ಲಿ ಆಚರಿಸಲಾಗುತ್ತದೆ. ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಹೋಳಿ ದಹನದಲ್ಲಿ ಕೆಲ ಸಂಗತಿಗಳನ್ನು ಬೆಂಕಿಗೆ ಆಹುತಿಯಾಗಿ ಹಾಕಬೇಕು ಎನ್ನಲಾಗುತ್ತದೆ. ಇದರಿಂದ ಮನೆಯಲ್ಲಿ ಸುಖ-ಶಾಂತಿ-ಸಮೃದ್ಧಿಯ ಜೊತೆಗೆ ಖುಷಿಗಳ ಆಗಮನವಾಗುತ್ತದೆ ಎನ್ನಲಾಗುತ್ತದೆ. ಬನ್ನಿ ಹೋಳಿ ಹಬ್ಬದ ದಿನ ಅಗ್ನಿಗೆ ಏನನ್ನು ಆಹುತಿಯಾಗಿ ಅರ್ಪಿಸಬೇಕು ತಿಳಿದುಕೊಳ್ಳೋಣ (Spiritual News In Kannada)
ಹೋಳಿ ದಹನದ ವೇಳೆ ಇವುಗಳನ್ನು ಅಗ್ನಿಗೆ ಅರ್ಪಿಸಿ (Holi Festival Astro Remedies)
ಉತ್ತಮ ಆರೋಗ್ಯಕ್ಕಾಗಿ: ನಿಮ್ಮ ಹಾಗೂ ನಿಮ್ಮ ಕುಟುಂಬ ಸದಸ್ಯರ ಉತ್ತಮ ಆರೋಗ್ಯಕ್ಕಾಗಿ ಹೋಳಿ ಅಗ್ನಿಗೆ 10 ರಿಂದ 11 ಬೇವಿನ ಎಲೆಗಳನ್ನು ಅರ್ಪಿಸಿ, ಸ್ವಲ್ಪ ಕರ್ಪೂರ ಹಾಗೂ ಆರು ಲವಂಗ ಕುಡಿಗಳನ್ನು ನಿಮ್ಮ ಅಡಿಯಿಂದ ಮುಡಿಯವರೆಗೆ ನಿವಾಳಿಸಿ ಅಗ್ನಿಗೆ ಆಹುತಿ ನೀಡಿ.
ಸುಖ ಸಮೃದ್ಧಿಗಾಗಿ: ಜೀವನದಲ್ಲಿ ದೀರ್ಘಕಾಲದಿಂದ ನಡೆದುಕೊಂಡು ಬಂದ ಸಮಸ್ಯೆಗಳ ನಿಂವಾರಣೆಗೆ ಅಗ್ನಿಗೆ ಸ್ವಲ್ಪ ಜೋಳ ಅಥವಾ ಅಕ್ಕಿಯನ್ನು ಆಹುತಿಯಾಗಿ ನೀಡಿ, ಇದರಿಂದ ಜೀವನದಲ್ಲಿ ಸುಖ-ನೆಮ್ಮದಿ ನೆಲೆಸಿ, ತಾಯಿ ಲಕ್ಷ್ಮಿಯ ವಿಶೇಷ ಕೃಪೆ ನಿಮ್ಮ ಮೇಲಾಗುತ್ತದೆ. ಜೀವನದಲ್ಲಿನ ಹಣಕಾಸಿನ ಮುಗ್ಗಟ್ಟು ನಿವಾರಣೆಯಾಗುತ್ತದೆ. (try these Holi Festival Astro Remedies to get rid of various problems in life)
ಬಿಸ್ನೆಸ್ ನಲ್ಲಿ ಲಾಭಕ್ಕಾಗಿ: ಬಿಸ್ನೆಸ್ ನಲ್ಲಿ ಅಪಾರ ಯಶಸ್ಸು ಮತ್ತು ಹಣ ಗಳಿಸಲು ನೀವು ಬಯಸುತ್ತಿದ್ದರೆ. ಹೋಳಿ ಅಗ್ನಿಯಲ್ಲಿ ಗೋದಿಯ ಮೂರು ದಳಗಳು ಮತ್ತು ಅಗಸೆಯ 6 ದಳಗಳನ್ನು ಸ್ವಲ್ಪ ಬಿಸಿ ಮಾಡಿ. ನಂತರ ಅವುಗಳನ್ನು ಕೆಂಪು ವಸ್ತ್ರದಲ್ಲಿ ಸುತ್ತಿ ಆಫೀಸ್ ನಲ್ಲಿ ಇರಿಸಿ.
ಆರ್ಥಿಕ ಲಾಭಕ್ಕಾಗಿ: ಆರ್ಥಿಕ ಮುಗ್ಗಟ್ಟು ನಿವಾರಣೆಗೆ ಕಬ್ಬಿನ ಎಲೆ ಎಲೆಗಳನ್ನು ತೆಗೆದುಕೊಂಡು ರಾತ್ರಿ ಹೋಳಿ ಅಗ್ನಿಯಲ್ಲಿ ಹಗುರವಾಗಿ ಸುಟ್ಟು, ಅದನ್ನು ದಕ್ಷಿಣ ಪಶ್ಚಿಮ ದಿಕ್ಕಿನಲ್ಲಿರಿಸಿ. ಇದರಿಂದ ನಿಮಗೆ ಲಾಭ ಸಿಗಲಿದೆ.
ಇದನ್ನೂ ಓದಿ-Lakshmi Narayan Rajyog 2024: ವರ್ಷದ ಬಳಿಕ ಲಕ್ಷ್ಮಿ ನಾರಾಯಣ ರಾಜಯೋಗ ರಚನೆ, ಈ ಜನರ ಜೀವನದಲ್ಲಿ ಸುವರ್ಣ ಕಾಲ ಆರಂಭ!
ಒಣ ಕೊಬ್ಬರಿ ಉಪಾಯ: ಹೋಳಿ ದಹನದ ಸಂದರ್ಭದಲ್ಲಿ ಒಣ ಕೊಬ್ಬರಿಯ ಕೆಲ ತುಂಡುಗಳನ್ನು ಹೋಳಿ ಅಗ್ನಿಗೆ ಅರ್ಪಿಸಬೇಕು, ಇದರಿಂದ ತಾಯಿ ಲಕ್ಷ್ಮಿ ಅತಿ ಪ್ರಸನ್ನಳಾಗುತ್ತಾಳೆ ಮತ್ತು ಸುಖ-ಸಮೃದ್ಧಿಗಾಗಿ ಆಶೀರ್ವದಿಸುತ್ತಾಳೆ.
ಇದನ್ನೂ ಓದಿ-Holi 2024: ವಿಶ್ವದ ಈ ದೇಶಗಳಲ್ಲಿಯೂ ಕೂಡ ಹೋಳಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ
(Disclaimer- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ