ದಿನಭವಿಷ್ಯ 07-11-2022 :    ಇಂದು 07 ನವೆಂಬರ್ 2022ರ ಶುಭ ಕಾರ್ತಿಕ ಸೋಮವಾರದ ದಿನ ಮೇಷ ರಾಶಿಯಿಂದ ಮೀನ ರಾಶಿಯವರೆಗೆ ಯಾವ ರಾಶಿಯವರಿಗೆ ಶುಭ, ಯಾವ ರಾಶಿಯವರಿಗೆ ಅಶುಭ ಎಂದು ತಿಳಿಯೋಣ...


COMMERCIAL BREAK
SCROLL TO CONTINUE READING

ಇಂದಿನ ಪಂಚಾಂಗ:-
ವಾರ: ಶುಭ ಕಾರ್ತಿಕ ಸೋಮವಾರ
ತಿಥಿ: ಶುದ್ಧ ಚತುರ್ದಶಿ 
ನಕ್ಷತ್ರ: ಅಶ್ವಿನಿ ನಕ್ಷತ್ರ 
ಯೋಗ: ಸಿದ್ದಿ ಯೋಗ
ಕರಣ: ವಣಿಕ್ ಕರಣ 
ವಿಶೇಷ ಸೂಚನೆ: ಸಂಜೆ 06:10ರ ನಂತರ ಶ್ರೀ ಸತ್ಯ ನಾರಾಯಣ ಸ್ವಾಮಿ ಪೂಜೆ/ವ್ರತವನ್ನು ಮಾಡಬಹುದು.


ಇಂದಿನ ದ್ವಾದಶ ರಾಶಿಗಳ ಫಲಾಫಲ:
ಮೇಷ ರಾಶಿ:
ಇಂದು ಮೇಷ ರಾಶಿಯವರು ಪರಾಕ್ರಮದಿಂದ ಕಾರ್ಯ ಸಾಧನೆ ಮಾಡುವರು. ಅಗ್ನಿ ಅವಘಡದಿಂದ ಪಾರಾಗಲು ಸುಬ್ರಹ್ಮಣ್ಯ ದೇವರ ದರ್ಶನ ಮಾಡಿ. 
ಯಶಸ್ಸು-62%


ವೃಷಭ ರಾಶಿ: ಈ ರಾಶಿಯವರು ಇಂದು ಸರಳ ತಪಾಸಣೆಗಾಗಿ  ಮನೋವೈದ್ಯರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಶಿವನ ಭಸ್ಮವನ್ನು ಧರಿಸುವುದು, ಶುಭ ಕಾರ್ಯಗಳಿಗೆ ಆಹ್ವಾನ ಬರುವ ಸಾಧ್ಯತೆ ಇದೆ. ಅಸಹಜ ಲೈಂಗಿಕ ಆಸಕ್ತಿ ಮೂದ್ವ ಸಾಧ್ಯತೆ.
ಯಶಸ್ಸು - 57%


ಮಿಥುನ ರಾಶಿ: ಈ ರಾಶಿಯವರಿಗೆ ಅನುವಂಷಿಕ ಖಾಯಿಲೆ ಬರುವ ಸಾಧ್ಯತೆ ಇದೆ. ಪರ ಸ್ತ್ರೀಯರಿನ ವಶೀಕರಣವಾಗುವ ಸಂಭವ.
ಯಶಸ್ಸು-67%


ಕರ್ಕಾಟಕ ರಾಶಿ: ಈ ರಾಶಿಯ ಒಡಹುಟ್ಟಿದವರಿಗೆ ಅಶುಭ ವಾರ್ತೆ. ಅತೃಪ್ತ ಮನೋಭಾವ, ಮಾಡಲಿಂಗ್ ಕ್ಷೇತ್ರದಲ್ಲಿ ಆಸಕ್ತಿ. ಒಂಟಿತನ ಕಾಡುವ ಸಂಭವ.
ಯಶಸ್ಸು- 71% 


ಇದನ್ನೂ ಓದಿ- ಈ ಮಂದಿರದಲ್ಲಿ 480 ವರ್ಷಗಳಿಂದ ಬೆಳಗುತ್ತಿದೆ ಅಖಂಡ ಜ್ಯೋತಿ


ಸಿಂಹ ರಾಶಿ: ಕಾಲಿಗೆ ಸಮಸ್ಯೆ ಆಗುವ ಸಂಭವ, ರಹಸ್ಯವಾಗಿ ಕಾರ್ಯಸಾಧನೆ. ತಂದೆಯೊಂದಿಗೆ ಸ್ವಲ್ಪ ಕೋಪ.
ಯಶಸ್ಸು- 57% 


ಕನ್ಯಾ ರಾಶಿ: ಅವಿವಾಹಿತರಿಗೆ ವಿವಾಹಯೋಗ, ಪುಣ್ಯ ಕ್ಷೇತ್ರ ದರ್ಶನ, ಆರೋಗ್ಯದಲ್ಲಿ ಚೇತರಿಕೆ. ಗುರುವನ್ನು ನೆನೆದು ಇಷ್ಟಾರ್ಥ ಸಿದ್ದಿ ಆಗುವುದು.
ಯಶಸ್ಸು- 82%


ತುಲಾ ರಾಶಿ: ಆಲಸ್ಯ, ಸೋಮಾರಿತನ, ಜಗಳ ಆಡುವ ಸಂಭವ. ಗಣಪತಿಯನ್ನು ಗರಿಕೆಯಿಂದ ಪೂಜಿಸಿ. 
ಯಶಸ್ಸು- 53%


ವೃಶ್ಚಿಕ ರಾಶಿ: ಪರಾಕ್ರಮದಲ್ಲಿ ಸ್ವಲ್ಪ ಕೊರತೆ, ಸಾಲಬಾಧೆ ಕಾಡುವ ಸಂಭವ, ಲೈಂಗಿಕ ರೋಗ ತಜ್ಞರನ್ನು ಭೇಟಿ ಮಾಡುವ ಸಾಧ್ಯತೆ.
ಯಶಸ್ಸು- 66%


ಇದನ್ನೂ ಓದಿ- Guru Mahadasha: 16 ವರ್ಷಗಳವರೆಗೆ ಗುರು ಮಹಾದಶಾ- ಯಾರಿಗೆಲ್ಲಾ ಹಣ, ಗೌರವ, ಸಂತೋಷ ಕರುಣಿಸಲಿದ್ದಾನೆ ಗುರು!


ಧನು ರಾಶಿ: ಪುರಾಣ ಕೇಳುವುದರಲ್ಲಿ ಆಸಕ್ತಿ, ವಾಹನ ಸೌಖ್ಯ, ಸ್ತ್ರೀಯರ ಸಹವಾಸದಿಂದ ಬುದ್ದಿ ನಾಶ.
ಯಶಸ್ಸು- 55%


ಮಕರ ರಾಶಿ: ಹಣಕಾಸಿನ ಸಮಸ್ಯೆ, ಸಂಬಂಧಗಳಲ್ಲಿ ಬಿರುಕು, ಗುಪ್ತರೋಗ ಸಮಸ್ಯೆ ಕಾಡಬಹುದು. ಕೆಲಸಗಳಲ್ಲಿ ಅಲ್ಪ ಪ್ರಮಾಣದ ಪ್ರಗತಿ ಸಾಧ್ಯ.
ಯಶಸ್ಸು- 63%


ಕುಂಭ ರಾಶಿ: ಹೊಸ ಅವಕಾಶಗಳು, ಹೊಸ ಯೋಜನೆಗಳ ಕುರಿತು ಮಾತುಕಥೆ ಸಾಧ್ಯತೆ. ಸುತ್ತಾಟದಿಂದ ಸುಸ್ತಾಗುವ ಸಂಭವ.
ಯಶಸ್ಸು-71%


ಮೀನ ರಾಶಿ: ಕುಟುಂಬದಲ್ಲಿ ಕೆಟ್ಟ ಸುದ್ದಿ, ಸೊಂಟದಲ್ಲಿ ಸಮಸ್ಯೆ, ಗಂಟಲು ನೋವು, ಮಕ್ಕಳು ದಾರಿ ತಪ್ಪುವ ಸಾಧ್ಯತೆ.
ಯಶಸ್ಸು- 66%


- ಆಚಾರ್ಯ ಡಾ.ಮುರುಳಿಧರ್ (digitalguru6655@gmail.com)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.