Budhvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಸೌರ ಶಿಶಿರ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ನವಮಿ ತಿಥಿಯ ಈ ದಿನ ಬುಧವಾರ, ಅಶ್ವಿನಿ ನಕ್ಷತ್ರ, ಸಿದ್ಧ ಯೋಗ, ತೈತಿಲ ಕರಣ. ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ. 


COMMERCIAL BREAK
SCROLL TO CONTINUE READING

ಮೇಷ ರಾಶಿಯವರ ಭವಿಷ್ಯ (Aries Horoscope):  
ಇಂದು ನಿಮ್ಮ ಸಂಬಂಧಗಳು ಬಲಗೊಳ್ಳಲಿವೆ. ಸುತ್ತಲಿನ ವಾತಾವರಣ ಆಹ್ಲಾದಕರವಾಗಿರುತ್ತದೆ. ಉದ್ಯೋಗ ರಂಗದಲ್ಲಿ ನೀವು ಕೈಗೊಂಡ ಪ್ರಮುಖ ಕೆಲಸಗಳಲ್ಲಿ ಜಯಶಾಲಿ ಆಗುವಿರಿ. ವ್ಯಾಪಾರದಲ್ಲಿ ಹೊಸ ಒಪ್ಪಂದಕ್ಕೆ ಸಹಿ ಹಾಕುವಿರಿ. 


ವೃಷಭ ರಾಶಿಯವರ ಭವಿಷ್ಯ (Taurus Horoscope):  
ಯಾವುದೇ ಕಾರಣಕ್ಕೂ ಹಣಕಾಸಿನ ವಿಚಾರದಲ್ಲಿ ನಿರ್ಲಕ್ಷ್ಯ ತೋರದಿರಿ. ಇಲ್ಲವೇ, ಭವಿಷ್ಯದಲ್ಲಿ ಇದು ಭಾರೀ ಸಂಕಷ್ಟಕ್ಕೆ ಸಿಲುಕಿಸಬಹುದು. ವಿದೇಶ ವ್ಯವಹಾರಗಳಲ್ಲಿ ಭಾರೀ ಲಾಭ ಸಾಧ್ಯತೆ. ನಿಮ್ಮ ಮಾತು ಮತ್ತು ನಡವಳಿಕೆಯಲ್ಲಿ ಸೌಮ್ಯತೆ ಇದ್ದರೆ ಒಳಿತು. 


ಮಿಥುನ ರಾಶಿಯವರ ಭವಿಷ್ಯ (Gemini Horoscope):   
ವೃತ್ತಿಪರರಿಗೆ ನಿಮ್ಮ ಕೆಲಸ ನಿರ್ವಹಣೆ ಸುಧಾರಿಸಲಿದೆ. ವ್ಯಾಪಾರವನ್ನು ವಿಸ್ತರಿಸಲು ನೀವು ಉತ್ಸುಕರಾಗಿರುವಿರಿ. ವೃತ್ತಿ-ವ್ಯವಹಾರದಲ್ಲಿ ಗಮನ ಕೇಂದ್ರೀಕರಿಸಿ. ಸ್ಪರ್ಧಾತ್ಮಕ ಮನೋಭಾವದಿಂದ ಮುಂದುವರೆಯುವುದರಿಂದ ಯಶಸ್ಸು. 


ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಕೆಲಸ ಮತ್ತು ವ್ಯವಹಾರವು ಸಂಘಟಿತವಾಗಿ ಉಳಿಯುತ್ತವೆ. ಪೂರ್ವಿಕರ ಆಸ್ತಿಯಿಂದ ಲಾಭವಾಗಲಿದೆ. ಕೈಗಾರಿಕಾ ಕ್ಷೇತ್ರದಲ್ಲಿರುವವರ ಕೀರ್ತಿ ಹೆಚ್ಚಾಗಲಿದೆ. ಕೆಲಸದಲ್ಲಿ ಹೆಚ್ಚು ಗಮನವಹಿಸುವುದರಿಂದ ಮೇಲುಗೈ ನಿಮ್ಮದೇ ಆಗಲಿದೆ. 


ಇದನ್ನೂ ಓದಿ- 12ವರ್ಷಗಳ ಬಳಿಕ ಗಜಲಕ್ಷ್ಮಿ ರಾಜಯೋಗ: ಈ ರಾಶಿಯವರಿಗೆ ಹಣದ ಸುರಿಮಳೆ, ಕೋಟ್ಯಾಧಿಪತಿಯಾಗುವ ಯೋಗ


ಸಿಂಹ ರಾಶಿಯವರ ಭವಿಷ್ಯ (Leo Horoscope):  
ಇಂದು ನಿಮಗೆ ಭಾರೀ ಅದೃಷ್ಟದ ದಿನ. ಮಹತ್ವದ ವಿಷಯಗಳಲ್ಲಿ ವೇಗವನ್ನು ಪಡೆಯುವಿರಿ. ಕೈಗಾರಿಕೆ ಮತ್ತು ವ್ಯಾಪಾರದಲ್ಲಿ ಪ್ರಮುಖ ಬದಲಾವಣೆಗಳನ್ನು ಕಾಣುವಿರಿ. ಹೊಸ ವ್ಯವಹಾರಗಳನ್ನು ಆರಂಭಿಸುವಾಗ ಹಿರಿಯರ ಮಾರ್ಗದರ್ಶನದಂತೆ ಮುಂದುವರೆದರೆ ಶುಭ. 


ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ನಿಮ್ಮ ಕುಟುಂಬ ಸದಸ್ಯರ ನಂಬಿಕೆ ಮತ್ತು ಬೆಂಬಲವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ವೈಯಕ್ತಿಕ ಸಂಬಂಧಗಳು ಲಾಭದಾಯಕವಾಗಿರಲಿದೆ. ವೃತ್ತಿ ವ್ಯವಹಾರದಲ್ಲಿ ನಿಮ್ಮ ಆಕರ್ಷಕ ಮಾತಿನಿಂದ ಎಂತಹವರನ್ನೂ ನಿಮ್ಮತ್ತ ಆಕರ್ಷಿಸುವಿರಿ. 


ತುಲಾ ರಾಶಿಯವರ ಭವಿಷ್ಯ (Libra Horoscope): 
ಕೆಲಸದಲ್ಲಿ ನಿಮ್ಮ ಕಾರ್ಯಕ್ಷಮತೆಯೂ ನಿರೀಕ್ಷೆಗಿಂತ ಹೆಚ್ಚಿರುತ್ತದೆ. ಪಾಲುದಾರಿಕೆ ವ್ಯವಹಾರಗಳಲ್ಲಿ ಭಾರಿ ಲಾಭವನ್ನು ಕಾಣುವಿರಿ. ವ್ಯವಹಾರವನ್ನು ವಿಸ್ತರಿಸಲು ಯೋಚಿಸುತ್ತಿರುವವರು ಈ ನಿಟ್ಟಿನಲ್ಲಿ ಕೂಲಂಕುಷವಾಗಿ ಯೋಚಿಸಿ ನಿರ್ಧರಿಸಿ. 


ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಇಂದು ನಿಮ್ಮ ಕಠಿಣ ಪರಿಶ್ರಮವು ಅನುಕೂಲಕರ ಫಲಿತಾಂಶಗಳನ್ನು ಕಾಪಾಡಿಕೊಳ್ಳಲು ಸಹಾಯಕವಾಗಿದೆ. ಕೆಲಸ ಮತ್ತು ವ್ಯವಹಾರಗಳಲ್ಲಿ ನೀವು ಹೆಚ್ಚು ಅಲರ್ಟ್ ಆಗುವುದರಿಂದ ಹೆಚ್ಚು ಲಾಭ. ಉದ್ಯೋಗಿಗಳು ಉತ್ತಮವಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸುವುದು ಒಳ್ಳೆಯದು. 


ಇದನ್ನೂ ಓದಿ- ಧರ್ಮಸ್ಥಳದಲ್ಲೂ ತಿರುಪತಿ ಮಾದರಿ: ಏನೆಲ್ಲಾ ಹೊಸ ವ್ಯವಸ್ಥೆ ಮಾಡಲಾಗಿದೆ ಗೊತ್ತಾ...?


ಧನು ರಾಶಿಯವರ ಭವಿಷ್ಯ (Sagittarius Horoscope):  


ಸೃಜನಶೀಲ ಚಟುವಟಿಕೆಗಳಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ. ನೀವು ಹೊಸ ವಿಷಯಗಳಲ್ಲಿ ಆಸಕ್ತಿ ತೋರುವಿರಿ. ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಪ್ರಯತ್ನಗಳು ಸುಧಾರಿಸಲಿವೆ. ನಿಮ್ಮ ಆಪ್ತರೊಂದಿಗೆ ಇಂದು ಉತ್ತಮ ಸಮಯವನ್ನು ಕಳೆಯುವಿರಿ. ವ್ಯಾಪಾರಸ್ಥರಿಗೆ ಲಾಭದ ಅವಕಾಶಗಳು ಹೆಚ್ಚು. 


ಮಕರ ರಾಶಿಯವರ ಭವಿಷ್ಯ (Capricorn Horoscope):  
ವೈಯಕ್ತಿಕ ಪ್ರಯತ್ನಗಳಲ್ಲಿ ಯಶಸ್ಸು ಗಳಿಸುವಿರಿ. ನಿರ್ದಿಷ್ಟ ವ್ಯಕ್ತಿಗಳು ಇಂದು ನಿಮ್ಮ ಸಮಯವನ್ನು ಸೆಳೆಯಬಹುದು. ಕುಟುಂಬದಲ್ಲಿ ಸಾಮರಸ್ಯ ಮೇಲುಗೈ ಸಾಧಿಸಲಿದೆ. ಅತಿಯಾದ ಉತ್ಸಾಹ ಮತ್ತು ಹಠಾತ್ ಪ್ರವೃತ್ತಿಯನ್ನು ತಪ್ಪಿಸುವುದು ಒಳ್ಳೆಯದು. 


ಕುಂಭ ರಾಶಿಯವರ ಭವಿಷ್ಯ (Aquarius Horoscope):  
ವ್ಯಾಪಾರಸ್ಥರಿಗೆ ಇಂದು ಬಂಪರ್ ಲಾಭ. ಸಾಂಪ್ರದಾಯಿಕ ವ್ಯವಹಾರಗಳಲ್ಲಿ ಭಾರೀ ಲಾಭವನ್ನು ಗಳಿಸುವಿರಿ. ಸಾಮಾಜಿಕ ಕ್ಷೇತ್ರದಲ್ಲಿ ನಿಮ್ಮ ಕೀರ್ತಿ ಹೆಚ್ಚಾಗಲಿದೆ. ಸಂಬಂಧಗಳಲ್ಲಿ ಮೂಡಿದ್ದ ಬಿರುಕು ಸರಿಹೋಗಲಿದೆ. ವಾಣಿಜ್ಯ ವ್ಯವಹಾರಗಳಲ್ಲಿ ಹೆಚ್ಚಿನ ಶ್ರಮ ಅಗತ್ಯವಿದೆ. 


ಮೀನ ರಾಶಿಯವರ ಭವಿಷ್ಯ (Pisces Horoscope): 
ಕುಟುಂಬಸ್ಥರು ಇಂದು ಪರಸ್ಪರ ಉತ್ಸಾಹವನ್ನೂ ಕಾಪಾಡಿಕೊಳ್ಳುವರು. ಕುಟುಂಬದವರೊಂದಿಗೆ ಆತ್ಮೀಯತೆ ಹೆಚ್ಚಾಗಲಿದೆ.  ಆರ್ಥಿಕ ಮತ್ತು ವಾಣಿಜ್ಯ ಪ್ರಯತ್ನಗಳಲ್ಲಿ ಗಮನವಿರಲಿ. ಉದ್ಯೋಗ ರಂಗದಲ್ಲಿ ನಡವಳಿಕೆಯಲ್ಲಿ ಮಾಧುರ್ಯ ಕಾಪಾಡಿಕೊಂಡರೆ ಒಳಿತು. 


ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.