Budhvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾ ಸಂವತ್ಸರ, ಉತ್ತರಾಯಣ, ಸೌರ ಶಿಶಿರ ಋತು, ಪುಷ್ಯ ಮಾಸ, ಕೃಷ್ಣ ಪಕ್ಷದ ಈ ದಿನ ಮೌನಿ ಅಮಾವಾಸ್ಯೆ ತಿಥಿ, ಬುಧವಾರದಂದು ಉ.ಷಾ. ನಕ್ಷತ್ರ, ಸಿದ್ಧಿ ಯೋಗ, ಚತುಷ್ಪಾದ ಕರಣ. ಇಂದು ದ್ವಾದಶ ರಾಶಿಗಳಿಗೆ ಏನು ಫಲ ತಿಳಿಯಿರಿ. 


COMMERCIAL BREAK
SCROLL TO CONTINUE READING

ಮೇಷ ರಾಶಿಯವರ ಭವಿಷ್ಯ (Aries Horoscope):  
ನಿಮ್ಮ ಬುದ್ದಿವಂತಿಕೆ ಸಾಮರ್ಥ್ಯವನ್ನು ಪ್ರಶಂಸಿಸಲಾಗುತ್ತದೆ. ದೀರ್ಘಕಾಲದ ನಿಮ್ಮ ಕನಸೊಂದು ನನಸಾಗುವ ಸಮಯ. ವೃತ್ತಿ-ವ್ಯವಹಾರಕ್ಕೆ ಸಂಬಂಧಿಸಿದಂತೆ ಗುಡ್ ನ್ಯೂಸ್ ಒಂದನ್ನು ಕೇಳುವಿರಿ. ವ್ಯವಹಾರದಲ್ಲಿ ಗರಿಷ್ಠ ಲಾಭವನ್ನು ಪಡೆಯುವಿರಿ. 


ವೃಷಭ ರಾಶಿಯವರ ಭವಿಷ್ಯ (Taurus Horoscope):  
ಇಂದು ನಿಮಗೆ ಸಂತೋಷದ ದಿನ. ನಿಮ್ಮ ಕೆಲಸದ ಕ್ಷೇತ್ರದಲ್ಲಿ ಬಿಡುವಿಲ್ಲದ ದಿನಚರಿಯ ಹೊರತಾಗಿಯೂ ಕುಟುಂಬದೊಂದಿಗೆ ಉತ್ತಮ ಸಮಯವನ್ನು ಆನಂದಿಸುವಿರಿ. ಆರೋಗ್ಯ ಸಮಸ್ಯೆಗಳು ಚೇತರಿಕೆ ಕಾಣಲಿವೆ. ಹೂಡಿಕೆಯಿಂದ ಲಾಭವಾಗಲಿದೆ. 


ಮಿಥುನ ರಾಶಿಯವರ ಭವಿಷ್ಯ (Gemini Horoscope):   
ನಿಮಗಿಂದು ತುಂಬಾ ವಿಶೇಷವಾದ ದಿನ. ಇಂದು ದೀರ್ಘಕಾಲದ ನಿಮ್ಮ ಸಮಸ್ಯೆಯೊಂದು ಬಗೆಹರಿದು ಮಾನಸಿಕ ಶಾಂತಿಯನ್ನು ಪಡೆಯುವಿರಿ. ಕೆಲಸದಲ್ಲಿ ಕಠಿಣ ಪರಿಶ್ರಮದ ಸಂಪೂರ್ಣ ಫಲ ದೊರೆಯಲಿದೆ. ಮನೆಯಲ್ಲಿ ಮಂಗಳ ಕಾರ್ಯಗಳು ಜರುಗಬಹುದು. 


ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಇಂದು ಶುಭ ಕಾರ್ಯದಲ್ಲಿ ಪಾಲ್ಗೊಳ್ಳುವಿರಿ. ಹಣಕಾಸು ಸಂಬಂಧಿತ ಸಮಸ್ಯೆ ಬಗೆಹರಿಯಲಿದೆ. ಬೇರೆಡೆ ಸಿಲುಕಿರುವ ಹಣ ನಿಮ್ಮ ಕೈ ಸೇರಲಿದೆ. ವ್ಯಾಪಾರ ಉದ್ಯಮದಲ್ಲಿ ಭಾರೀ ಲಾಭವನ್ನು ಗಳಿಸುವಿರಿ. ರಾಜಕೀಯದಲ್ಲಿರುವವರಿಗೆ ಪ್ರಯೋಜನಕಾರಿ ದಿನ. 


ಇದನ್ನೂ ಓದಿ- ಮೌನಿ ಅಮಾವಾಸ್ಯೆ ದಿನವೇ ಮೀನ ರಾಶಿಗೆ ಶುಕ್ರನ ಪ್ರವೇಶ: ಈ ರಾಶಿಯವರಿಗೆ ತೆರೆಯಲಿದೆ ಭಾಗ್ಯದ ಬಾಗಿಲು, ಮಣ್ಣೂ ಹೊನ್ನಾಗುವ ಸಮಯ 


ಸಿಂಹ ರಾಶಿಯವರ ಭವಿಷ್ಯ (Leo Horoscope):  
ವ್ಯವಹಾರದಲ್ಲಿ ಕೆಲಸದ ಹೊರೆ ಹೆಚ್ಚಾಗಬಹುದು. ಉದ್ಯೋಗಸ್ಥರಿಗೆ ದೊಡ್ಡ ಜವಾಬ್ದಾರಿ ಹೆಗಲೇರಬಹುದು. ಪ್ರಗತಿಯ ಹೊಸ ಹಾದಿ ತೆರೆಯಲಿದೆ. ಮನೆಯಲ್ಲಿ ಶಾಂತಿ ಮತ್ತು ಸಂತೋಷದ ವಾತಾವರಣ ಇರಲಿದೆ. ತಾಯಿ ಕಡೆಯವರಿಂದ ಶುಭ ಸುದ್ದಿ ಕೇಳುವಿರಿ. 


ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಮನೆಯ ಹಿರಿಯರೊಂದಿಗೆ ಆಸ್ತಿ ಬಗ್ಗೆ ಮಾತನಾಡಲು ಯೋಚಿಸುತ್ತಿದ್ದರೆ ಇಂದಿನ ದಿನ ಪ್ರಾಶಸ್ತ್ಯವಾಗಿದೆ. ಕಾನೂನು ತಕರಾರುಗಳಿದ್ದರೆ ಜಯ ಸಾಧಿಸುವಿರಿ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಪಡೆಯುವಿರಿ. ಆರೋಗ್ಯದಲ್ಲಿ ಚೇತರಿಕೆ ಕಂಡು ಬರಲಿದೆ. 


ತುಲಾ ರಾಶಿಯವರ ಭವಿಷ್ಯ (Libra Horoscope): 
ನಿಮ್ಮ ನಿಕಟ ವ್ಯಕ್ತಿಯ ಬಗ್ಗೆ ಆಳವಾಗಿ ಯೋಚಿಸುವ ಮೂಲಕ ಸಂಬಂಧದಲ್ಲಿ ಸುಧಾರಣೆಯನ್ನು ಕಾಣುವಿರಿ. ವ್ಯವಹಾರದಲ್ಲಿ ಸಾಮರಸ್ಯ ಕಾಪಾಡಿಕೊಳ್ಳಿ. ನ್ಯಾಯಾಲಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಯಶಸ್ಸನ್ನು ಗಳಿಸುವಿರಿ. ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗಲು ಯೋಚಿಸಬಹುದು. 


ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಇಂದು ಕೆಲಸದ ಸ್ಥಳದಲ್ಲಿ ಶುಭ ಫಲಗಳನ್ನು ಪಡೆಯುವಿರಿ. ಯಾವುದೇ ಸಂದಿಗ್ಧ ಪರಿಸ್ಥಿತಿಯಲ್ಲಿ ಗಾಬರಿಯಾಗುವ ಬದಲು ಪರಿಹಾರ ಹೂಡಿಕಿದರೆ ಶೀಘ್ರವೇ ಪರಿಹಾರ ಪಡೆಯುವಿರಿ. ಕೆಲಸ ಮಾಡುವ ಹೊಸ ವಿಧಾನವು ನಿಮಗೆ ಫಲಪ್ರದವಾಗಿರುತ್ತದೆ. ಮಕ್ಕಳಿಗೆ ಸಮಯ ನೀಡಿ ಹೆಚ್ಚು ಪ್ರೀತಿ ಪಡೆಯಬಹುದು. 


ಇದನ್ನೂ ಓದಿ- ಹಣೆಗೆ ಯಾವ ಬೆರಳಿನಿಂದ ತಿಲಕ ಹಚ್ಚಿದ್ರೆ ಅದೃಷ್ಟ ಖುಲಾಯಿಸುತ್ತೆ ಗೊತ್ತಾ...! 


ಧನು ರಾಶಿಯವರ ಭವಿಷ್ಯ (Sagittarius Horoscope):  
ಹೊಸ ಚೈತನ್ಯ ತುಂಬುವ ದಿನ. ಇಂದು ನಿಮ್ಮ ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಸರಕುಗಳನ್ನು ಖರೀದಿಸಲು ಮಾರುಕಟ್ಟೆಗೆ ಹೋಗಬೇಕಾಗಬಹುದು. ಇಂದು ಯಾವುದೇ ಸಮಸ್ಯೆಗಳನ್ನು ಬುದ್ದಿವಂತಿಕೆಯಿಂದ ಬಗೆಹರಿಸಲು ಪ್ರಯತ್ನಿಸಿ. ನಿಮ್ಮ ದಕ್ಷತೆ, ಸಾಮರ್ಥ್ಯಕ್ಕೆ ಪ್ರಶಂಸೆಯನ್ನು ಪಡೆಯುವಿರಿ. 


ಮಕರ ರಾಶಿಯವರ ಭವಿಷ್ಯ (Capricorn Horoscope):  
ನಿಮ್ಮ ಕಷ್ಟಕರ ಸಂದರ್ಭಗಳಲ್ಲಿ ಕುಟುಂಬವು ಬೆನ್ನೆಲುಬಾಗಿ ನಿಲ್ಲಲಿದೆ. ಯಾವುದೇ ಕಾರ್ನಾದಿಂದ ಗೊಂದಲ ಉಂಟಾದರೆ ಸಾಮಾಧಾನದಿಂದ ಅದನ್ನು ಬಗೆಹರಿಸಿ. ಉದ್ಯೋಗದಲ್ಲಿ ಯಶಸ್ಸಿನ ದಿನ. ಮಹಿಳೆಯರು ನಿಮ್ಮ ಪ್ರೀತಿಪಾತ್ರರಿಂದ ಉಡುಗೊರೆಯನ್ನು ಸ್ವೀಕರಿಸುವಿರಿ. 


ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಉದ್ಯೋಗಸ್ಥರು ಇಂದು ಹೊಸ ಪ್ರಾಜೆಕ್ಟ್ ಪಡೆಯಬಹುದು. ಕೆಲಸದಲ್ಲಿ ಯಶಸ್ಸಿಗಾಗಿ ಶ್ರದ್ದೆಯಿಂದ ದುಡಿಯಿರಿ. ವ್ಯವಹಾರದಲ್ಲಿ ತಲೆದೂರಿದ್ದ ಅಡೆತಡೆಗಳು ನಿವಾರಣೆಯಾಗಲಿವೆ. ಕುಟುಂಬದಲ್ಲಿ ಹಬ್ಬದ ವಾತಾವರಣ ಇರುತ್ತದೆ. ಆಸ್ತಿ ಸಂಬಂಧಿತ ಮಾತುಕತೆಗಳು ಮುಂದುವರೆಯಲಿವೆ. 


ಮೀನ ರಾಶಿಯವರ ಭವಿಷ್ಯ (Pisces Horoscope): 
ಹೂಡಿಕೆಗಾಗಿ ಯೋಚಿಸುತ್ತಿರುವವರಿಗೆ ಇಂದು ಶುಭ ದಿನ. ಮನೆಗೆ ಅತಿಥಿಗಳ ಆಗಮನದಿಂದ ಹಬ್ಬದ ವಾತಾವರಣ ಇರಲಿದೆ. ನಿಕಟ ಸಂಬಂಧಿಕರನ್ನು ಭೇಟಿಯಾಗುವ ಅವಕಾಶ ದೊರೆಯಲಿದೆ. ದೀರ್ಘ ಸಮಯದಿಂದ ಬಾಕಿ ಉಳಿದಿದ್ದ ಕೆಲಸವೊಂದು ಪೂರ್ಣಗೊಳ್ಳಲಿದೆ. 


ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.