ಬೆಂಗಳೂರು : ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರು ಪುಷ್ಯ ಯೋಗವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.ಗುರುವಾರ ಪುಷ್ಯ ನಕ್ಷತ್ರ ಕಾಣಿಸಿಕೊಂಡಾಗ  ಈ ವಿಶೇಷ ಯೋಗವು ರೂಪುಗೊಳ್ಳುತ್ತದೆ.ಈ ಯೋಗದಲ್ಲಿ ಮಾಡಿದ ಕೆಲಸವು ಶಾಶ್ವತ ಯಶಸ್ಸು ಮತ್ತು ಸಂಪತ್ತಿನ ಹೆಚ್ಚಳಕ್ಕೆ ಕಾರಣವಾಗುತ್ತದೆ. 


COMMERCIAL BREAK
SCROLL TO CONTINUE READING

ಈ ದಿನ ಗುರು ಪುಷ್ಯ ಯೋಗ : 
8 ದಿನಗಳ ನಂತರ ಅಂದರೆ ಅಕ್ಟೋಬರ್ 24 ರಂದು ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ ಗುರು ಪುಷ್ಯ ಯೋಗ ರೂಪುಗೊಳ್ಳುತ್ತದೆ.ಈ ಯೋಗವು ವಿಶೇಷವಾಗಿ ಮೂರು ರಾಶಿಯವರಿಗೆ ಮಂಗಳಕರವಾಗಿರುತ್ತದೆ.ಈ ರಾಶಿಯವರು ವ್ಯಾಪಾರ, ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಯಶಸ್ಸನ್ನು ಪಡೆಯುವುದರೊಂದಿಗೆ ಆರ್ಥಿಕ ಲಾಭವಾಗುವ ಸಾಧ್ಯತೆಗಳಿವೆ. 


ಇದನ್ನೂ ಓದಿ : ಇಂದಿನಿಂದ ಈ ರಾಶಿಯವರಿಗೆ ಶುಕ್ರ ದೆಸೆ !ಈಡೇರುವುದು ಮನೆ ನಿರ್ಮಾಣ, ವಾಹನ ಖರೀದಿ ಕನಸು ! ಈ ಬಾರಿ ಉನ್ನತ ಸ್ಥಾನಕ್ಕೆ ಏರುವುದೂ ಖಚಿತ !


ವೃಷಭ ರಾಶಿ :
ಈ ರಾಶಿಯವರಿಗೆ ಗುರು ಪುಷ್ಯ ಯೋಗವು ಶುಭ ಸುದ್ದಿ ತರಬಹುದು. ಉದ್ಯೋಗ ಮತ್ತು ವ್ಯವಹಾರದಲ್ಲಿ ಅಪಾರ ಯಶಸ್ಸನ್ನು ಸಾಧಿಸುವಿರಿ.ಹೊಸ ಕೆಲಸ ಆರಂಭಿಸಲು ಸಮಯ ಅನುಕೂಲಕರವಾಗಿದೆ.ಕೆಲಸದಲ್ಲಿ ಸಹೋದ್ಯೋಗಿಗಳಿಂದ ಸಂಪೂರ್ಣ ಬೆಂಬಲ ಸಿಗುವುದು.ವ್ಯಾಪಾರ ವಿಸ್ತರಿಸಬಹುದು.ವೃತ್ತಿಜೀವನದಲ್ಲಿ  ಹೊಸ ಅವಕಾಶಗಳನ್ನು ಪಡೆಯಬಹುದು.ಪ್ರೇಮ ಜೀವನದಲ್ಲಿ ಎದುರಾಗಿರುವ  ಸಮಸ್ಯೆಗಳೂ ದೂರವಾಗುತ್ತವೆ.


ಕನ್ಯಾ ರಾಶಿ :
ಕನ್ಯಾ ರಾಶಿಯವರಿಗೆ ಬಡ್ತಿಯೊಂದಿಗೆ ವೇತನದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ.  ದೀರ್ಘಾವಧಿಯಿಂದ ಬಾಕಿ ಉಳಿದಿರುವ ಕೆಲಸಗಳು ಈ ಹೊತ್ತಿನಲ್ಲಿ ಪೂರ್ಣಗೊಳ್ಳುವುದು.ಕುಟುಂಬ ಸಂಬಂಧಗಳು ಬಲಗೊಳ್ಳುತ್ತವೆ.ಅದೃಷ್ಟವು ನಿಮ್ಮ ಬೆನ್ನಿಗಿರುವುದು.ಬಹಳ ದಿನಗಳಿಂದ ಬಾಕಿ ಉಳಿದಿರುವ ಕೆಲಸ ಕೈಗೂಡುವುದು.    


ಇದನ್ನೂ ಓದಿ: 118 ದಿನಗಳ ಕಾಲ ಈ ರಾಶಿಯವರಿಗೆ ಕೈತುಂಬಾ ಹಣ, ವೃತ್ತಿ-ವ್ಯವಹಾರದಲ್ಲಿ ಭಾರೀ ಯಶಸ್ಸು ನೀಡಲಿದ್ದಾನೆ ದೇವಗುರು ಬೃಹಸ್ಪತಿ


ಮೀನ ರಾಶಿ :
ವ್ಯಾಪಾರದಲ್ಲಿ ಹೊಸ ಲಾಭದ ಮೂಲಗಳು ಹುಟ್ಟಿಕೊಳ್ಳುವುದು.  ದೀರ್ಘಕಾಲದಿಂದ ಬಾಧಿಸುತ್ತಿದ್ದ ಕಾಯಿಲೆಯಿಂದ ಮುಕ್ತಿ ಸಿಗುವುದು. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ತೋರುವಿರಿ.ಉದ್ಯೋಗವನ್ನು ಹುಡುಕುತ್ತಿರುವವರ ಹುಡುಕಾಟ ಕೊನೆಯಾಗುವುದು. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.