Dhanatrayodashi 2023 Lucky Things : ಹಿಂದೂ ಧರ್ಮದಲ್ಲಿ  ದೀಪಾವಳಿಗೂ ಮುನ್ನಾ ದಿನ ಅಂದರೆ ಧನತ್ರಯೋದಶಿಗೆ  ವಿಶೇಷ ಮಹತ್ವ ಇದೆ. ಈ ದಿನದಂದು, ಜನರು ಲಕ್ಷ್ಮಿ ದೇವಿಯ ವಿಶೇಷ ಆಶೀರ್ವಾದವನ್ನು ಪಡೆಯಲು ಅನೇಕ ಹೊಸ ವಸ್ತುಗಳನ್ನು ಖರೀದಿಸುತ್ತಾರೆ.  ಇದರಿಂದ ಮನೆಯಲ್ಲಿ ಸುಖ ಸಮೃದ್ಧಿ ನೆಲೆಯಾಗುತ್ತದೆ ಮಾತ್ರವಲ್ಲ ಕುಬೇರನ ಆಶೀರ್ವಾದವೂ ಸಿಗುತ್ತದೆ ಎಂದು ಹೇಳಲಾಗುತ್ತದೆ. 


COMMERCIAL BREAK
SCROLL TO CONTINUE READING

ಕಾರ್ತಿಕ ಮಾಸದ ಕೃಷ್ಣ ಪಕ್ಷದ ತ್ರಯೋದಶಿಯಂದು ಆಚರಿಸಲಾಗುವ ಧನತ್ರಯೋದಶಿಯನ್ನು ಈ ವರ್ಷ ನವೆಂಬರ್ 10 ರಂದು ಆಚರಿಸಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ, ಈ ದಿನ ಹೊಸ ವಸ್ತುಗಳನ್ನು ಖರೀದಿಸುವುದು ಮಂಗಳಕರ. ಇದಲ್ಲದೆ, ಧನತ್ರಯೋದಶಿ ದಿನದಂದು ಕೆಲವೊಂದು ವಸ್ತುಗಳು ಕಣ್ಣಿಗೆ ಬೀಳುವುದು ಕೂಡಾ ಶುಭ ಎನ್ನಲಾಗಿದೆ. ಈ ವಸ್ತುಗಳು ಕಣ್ಣಿಗೆ ಬೀಳುವ ಮೂಲಕ ಜೀವನದಲ್ಲಿ ಲಕ್ಷ್ಮೀ ದೇವಿಯ ಪ್ರವೇಶವಾಗುತ್ತಿದೆ ಎನ್ನುವ ಸೂಚನೆ ಸಿಕ್ಕಂತೆ ಎಂದು ಹೇಳಲಾಗುತ್ತದೆ.


ಇದನ್ನೂ ಓದಿ : Mercury Rise: ದೀಪಾವಳಿಯ ಮರುದಿನವೇ ಖುಲಾಯಿಸಲಿದೆ ಈ ರಾಶಿಯವರ ಅದೃಷ್ಟ, ಬೆಳಗಲಿದೆ ಭಾಗ್ಯ


ಧನತ್ರಯೋದಶಿ ದಿನದಂದು ಯಾವ ವಸ್ತುಗಳನ್ನು ನೋಡಿದರೆ ಶುಭ : 
ತೃತೀಯ ಲಿಂಗಿಗಳು ಕಂಡರೆ  : 

ಧನತ್ರಯೋದಶಿ ದಿನದಂದು ತೃತೀಯ ಲಿಂಗಿಗಳು ಕಣ್ಣಿಗೆ ಬಿದ್ದರೆ ಅದು ಶುಭ ಮಾತ್ರವಲ್ಲ, ಅವರ ಕೈಗೆ ಆ ದಿನ ಮನಸಾರೆ ಕೆಲವು ನಾಣ್ಯಗಳನ್ನು ನೀಡಿದರೆ ನಿಮ್ಮ ಜೀವನದಲ್ಲಿ ಎಂದಿಗೂ ಹಣದ ಕೊರತೆ ಕಾಡುವುದಿಲ್ಲ ಎನ್ನಲಾಗುತ್ತದೆ. 


ಹಲ್ಲಿ  ಕಂಡರೆ : 
ಶಾಸ್ತ್ರಗಳ ಪ್ರಕಾರ, ಹಲ್ಲಿಯು ತಾಯಿ ಲಕ್ಷ್ಮೀಯ  ಸಂಕೇತವಾಗಿದೆ. ಆದ್ದರಿಂದ  ಧನತ್ರಯೋದಶಿ  ದಿನದಂದು ಹಳ್ಳಿ ಕಣ್ಣಿಗೆ ಬಿದ್ದರೆ ನಿಮ್ಮ ಜೀವನದಲ್ಲಿ ಲಕ್ಷ್ಮೀ ದೇವಿಯ ಆಗಮನವಾಗಿದೆ ಎನ್ನುವುದನ್ನು ಸೂಚಿಸುತ್ತದೆ. 


ಗೂಬೆ ಕಣ್ಣಿಗೆ ಬಿದ್ದರೆ :  
ಧನತ್ರಯೋದಶಿ ದಿನದಂದು ಗೂಬೆ ಕಂಡರೆ ಶುಭ. ಗೂಬೆಯು ಲಕ್ಷ್ಮಿ ದೇವಿಯ ವಾಹನವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಗೂಬೆಯನ್ನು ನೋಡುವುದು ಲಕ್ಷ್ಮಿ ದೇವಿಯ ಆಗಮನದ ಸಂದೇಶವನ್ನು ನೀಡುತ್ತದೆ.


ಇದನ್ನೂ ಓದಿ : ಕೇಂದ್ರ ತ್ರಿಕೋನ ರಾಜಯೋಗ.. 100 ವರ್ಷ ಬಳಿಕ ಈ 3 ರಾಶಿಗೆ ಅದೃಷ್ಟ, ಪಾಪ ಕಳೆದು ಸೌಭಾಗ್ಯ ನೀಡುವ ಶನಿ !


ಬಿಳಿ ಬೆಕ್ಕು : 
ಧನತ್ರಯೋದಶಿ ದಿನ ಬಿಳಿ ಬೆಕ್ಕು ಕಾಣಿಸಿಕೊಂಡರೆ, ಬಾಕಿ ಉಳಿದಿರುವ ಎಲ್ಲಾ ಕೆಲಸಗಳು ಪೂರ್ಣಗೊಳ್ಳಲಿವೆ ಎಂದರ್ಥ. 


ರಸ್ತೆಯಲ್ಲಿ ಬಿದ್ದಿರುವ ನಾಣ್ಯ : 
ಒಬ್ಬ ವ್ಯಕ್ತಿಯು ರಸ್ತೆಯ ಮೇಲೆ ಬಿದ್ದಿರುವ ನಾಣ್ಯಗಳನ್ನು ನೋಡಿದರೆ, ಅದು  ಮಂಗಳಕರ. ನಾಣ್ಯಗಳು ಲಕ್ಷ್ಮೀ ದೇವಿಯ ಸಂಕೇತವಾಗಿದೆ. ವ್ಯಕ್ತಿಯು ಮುಂದಿನ ದಿನಗಳಲ್ಲಿ ಹಣವನ್ನು ಗಳಿಸುವ ಸಂಕೇತವಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.