Things to buy during Navratri: ಇಂದಿನಿಂದ ಅತಿ ಪವಿತ್ರ ಹಬ್ಬ ನವರಾತ್ರಿ ಆರಂಭವಾಗಿದೆ. ಈ ವರ್ಷ ಶರಧೀಯ ನವರಾತ್ರಿಯನ್ನು ವಿಜೃಂಭಣೆಯಿಂದ ದೇಶದೆಲ್ಲೆಡೆ ಆಚರಿಸಲಾಗುತ್ತದೆ. ಈ ಒಂಬತ್ತು ದಿನಗಳ ಕಾಲ ತಾಯಿ ದುರ್ಗೆಯನ್ನು ನವರೂಪಗಳಲ್ಲಿ ಆರಾಧಿಸಲಾಗುತ್ತದೆ.


COMMERCIAL BREAK
SCROLL TO CONTINUE READING

ಇನ್ನು ನವರಾತ್ರಿಯ ಸಮಯದಲ್ಲಿ ಕೆಲ ವಸ್ತುಗಳನ್ನು ಮನೆಗೆ ತಂದರೆ ಶುಭ ಎಂದು ಪರಿಗಣಿಸಲಾಗುತ್ತದೆ. ಅಂತಹ ವಸ್ತುಗಳಿಂದ ಸುಖ, ಶಾಂತಿ, ನೆಮ್ಮದಿ ನೆಲೆಸುತ್ತದೆ ಎಂಬುದು ನಂಬಿಕೆ. ಹಾಗಾದರೆ ಅಂತಹ 5 ವಸ್ತುಗಳು ಯಾವುವು ಎಂದು ತಿಳಿಯೋಣ.


ಇದನ್ನೂ ಓದಿ:  ಪಾಕ್ ವಿರುದ್ಧದ ಪಂದ್ಯದಿಂದ ಭಾರತದ ಆಲ್’ರೌಂಡರ್ ರೂಲ್ಡೌಟ್! ಆಸೀಸ್ ವಿರುದ್ಧ ಟೀಂ ಇಂಡಿಯಾ ಗೆದ್ದಿದ್ದೇ ಈತನಿಂದ…


ಮೂರ್ತಿಯನ್ನು ಅಥವಾ ಫೋಟೋ:


ನವರಾತ್ರಿಯ ಸಮಯದಲ್ಲಿ ಮನೆಗೆ ದುರ್ಗಾ ದೇವಿಯ ಮೂರ್ತಿ ಅಥವಾ ಫೋಟೋ ತಂದರೆ, ಶುಭ ಎಂದು ಪರಿಗಣಿಸಲಾಗುತ್ತದೆ.


ದುರ್ಗಾ ಯಂತ್ರ:


ನವರಾತ್ರಿಯ ಸಮಯದಲ್ಲಿ ದುರ್ಗಾ ಯಂತ್ರವನ್ನು ಮನೆಯಲ್ಲಿಟ್ಟು ಪೂಜಿಸಿದರೆ ಶುಭ ಫಲಗಳನ್ನು ನೀಡುತ್ತದೆ ಎಂಬುದು ನಂಬಿಕೆ.


​ಕಲಶ​:


ಕಲಶ ಎಂಬುದು ತಾಯಿ ದುರ್ಗೆಗೆ ಪ್ರಿಯವಾದ ವಸ್ತು, ಹೀಗಾಗಿ ಅದನ್ನು ಸಹ ಮನೆಗೆ ತಂದರೆ ಜಗನ್ಮಾತೆ ಒಲಿದು ಹರಸುತ್ತಾಳೆ ಎಂಬುದು ನಂಬಿಕೆ.


​ಪತಾಕೆ:


ನವರಾತ್ರಿಯ ಸಂದರ್ಭದಲ್ಲಿ ಕೆಂಪು ಬಣ್ಣದ ತ್ರಿಕೋನಾಕಾರವುಳ್ಳ ಪತಾಕೆಯನ್ನು ಮನೆಗೆ ತಂದರೆ ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಯಾಗುತ್ತದೆ ಎಂದು ಹೇಳಲಾಗುತ್ತದೆ.


​ ಹೆಜ್ಜೆ ಗುರುತು​:


ನವರಾತ್ರಿಯ ಶುಭಸಮಯದಲ್ಲಿ ದುರ್ಗಾ ದೇವಿಯ ಪಾದದ ಗುರುತುಗಳನ್ನು ಮನೆಗೆ ತಂದರೆ, ಮನೆಯಲ್ಲಿ ಸಾಕ್ಷಾತ್ ತಾಯಿಯೇ ನೆಲೆಸುತ್ತಾಳೆ. ಅಷ್ಟೇ ಅಲ್ಲದೆ, ಇದನ್ನು ಪೂಜಿಸುವುದು ಅತ್ಯಂತ ಶುಭದಾಯಕ.


ಇದನ್ನೂ ಓದಿ: ನವರಾತ್ರಿಯಲ್ಲೇ ಸೂರ್ಯ ಗೋಚರ: ಈ ರಾಶಿಗೆ ದುರ್ಗೆಯ ಅನುಗ್ರಹದಿಂದ ಒಲಿಯುವುದು ಸರ್ವೈಶ್ವರ್ಯ-ಲೈಫೇ ಚೇಂಜ್, ಸರ್ಕಾರಿ ವೃತ್ತಿಯ ಭರಪೂರ ಅವಕಾಶ


(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ) 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.