Bilva Patre: ಶಿವನಿಗೆ ಬಿಲ್ವಪತ್ರೆ ಅರ್ಪಿಸುವ ಸರಿಯಾದ ಪದ್ಧತಿ ತಿಳಿಯಿರಿ
ನೀವು ಬೇಲದ ಎಲೆಗಳ ಅದ್ಭುತ ಉಪಯೋಗ ತಿಳಿಯಬೇಕೆಂದರೆ ಅದನ್ನು ಪೂಜೆಗೆ ಹೇಗೆ ಬಳಸಬೇಕು, ಶಿವನಿಗೆ ಹೇಗೆ ಅರ್ಪಿಸಬೇಕೆಂಬುದರ ಬಗ್ಗೆ ತಿಳಿದುಕೊಳ್ಳಬೇಕು.
ನವದೆಹಲಿ: ಶಿವನ ಪೂಜೆಯಲ್ಲಿ ನೀರು ಮತ್ತು ಬಿಲ್ವಪತ್ರೆ ಎಲೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಬಿಲ್ವಪತ್ರೆಯಿಲ್ಲದೆ ಶಿವನ ಆರಾಧನೆ ಪೂರ್ಣವಾಗುವುದಿಲ್ಲ. ಬೇಲ ಮರದ ಎಲೆಗಳನ್ನು ಬಿಲ್ವಪತ್ರೆ ಎಂದು ಕರೆಯಲಾಗುತ್ತದೆ. ಒಟ್ಟಿಗೆ 3 ಎಲೆ ಇದ್ದರೆ ಮಾತ್ರ ಅದನ್ನು ಪೂಜೆಗೆ ಬಳಸುವ ಬಿಲ್ವಪತ್ರೆ ಎಂದು ಪರಿಗಣಿಸಲಾಗುತ್ತದೆ. ಬಿಲ್ವಪತ್ರೆಯು ದೈವಿಕ ಉಪಯೋಗಕ್ಕೆ ಮಾತ್ರವಲ್ಲದೇ ಔಷಧೀಯ ಗುಣಗಳನ್ನುಹೊಂದಿದೆ.
ನೀವು ಬೇಲದ ಎಲೆಗಳ ಅದ್ಭುತ ಉಪಯೋಗ ತಿಳಿಯಬೇಕೆಂದರೆ ಅದನ್ನು ಪೂಜೆಗೆ ಹೇಗೆ ಬಳಸಬೇಕು, ಶಿವನಿಗೆ ಹೇಗೆ ಅರ್ಪಿಸಬೇಕೆಂಬುದರ ಬಗ್ಗೆ ತಿಳಿದುಕೊಳ್ಳಬೇಕು. ಅದರ ಮಹತ್ವ ಮತ್ತು ಉಪಯೋಗಗಳ ಬಗ್ಗೆ ತಿಳಿದರೆ ನೀವು ನಿಜಕ್ಕೂ ಆಶ್ಚರ್ಯಪಡುತ್ತೀರಿ.
3 ಎಲೆಗಳನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ
ಭಗವಾನ್ ಶಂಕರನ ಆರಾಧನೆಗೆ ಬಿಲ್ವಪತ್ರೆಯ 3 ಎಲೆಗಳನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ. ಗೊಂಚಲಿನಲ್ಲಿ ಕೇವಲ 2 ಎಲೆಗಳಿದ್ದರೆ ಅಥವಾ ಒಂದರಲ್ಲಿ ರಂಧ್ರವಿದ್ದರೆ ಅಥವಾ ಅದು ಭಾಗಶಃ ಹಾಳಾಗಿದ್ದರೆ ಅದನ್ನು ಶಿವನಿಗೆ ಅರ್ಪಿಸುವುದಿಲ್ಲ. ನೀವು ಶಿವನಿಗೆ ಉತ್ತಮ ಸ್ಥಿತಿಯಲ್ಲಿರುವ ಬಿಲ್ವಪತ್ರೆಯನ್ನು ಮಾತ್ರ ಅರ್ಪಿಸಬೇಕು. ನೀರಿನಲ್ಲಿ ಹಾಕಿ ತೊಳೆದ ಬಳಿಕ ಪೂಜೆಗೆ ಬಳಸಬೇಕು.
ಇದನ್ನೂ ಓದಿ: Surya Gochar 2022: ಇಂದಿನಿಂದ ‘ಸೂರ್ಯ’ ಈ ಜನರಿಗೆ ಹಣ ನೀಡಲಿದ್ದಾನೆ, ಅದೃಷ್ಟವೇ ಬದಲಾಗಲಿದೆ!
ಮದುವೆ ವಿಳಂಬಕ್ಕೆ ಬಿಲ್ವಪತ್ರೆಯನ್ನು ಹೀಗೆ ಅರ್ಪಿಸಿ
ಯಾರಿಗಾದರೂ ಮದುವೆ ವಿಳಂಬವಾದರೆ 108 ಎಲೆಗಳನ್ನು ತೆಗೆದುಕೊಂಡು ಪ್ರತಿ ಬಿಲ್ವಪತ್ರೆಯ ಮೇಲೆ ಶ್ರೀಗಂಧದಿಂದ ರಾಮ ಎಂದು ಬರೆಯಿರಿ. ಶಿವಲಿಂಗದ ಮುಂದೆ ಕುಳಿತು ‘ಓಂ ನಮಃ ಶಿವಾಯ’ ಎಂದು ಹೇಳಿ ಅದನ್ನು ಅರ್ಪಿಸಿ. ಮದುವೆಗಾಗಿ ನೀವು ಪೂಜೆ ಮಾಡುತ್ತಿದ್ದರೆ ‘ಓಂ ನಮಃ ಶಿವಾಯ’ ಮಂತ್ರವನ್ನು ಪಠಿಸುವಾಗ ಶಿವಲಿಂಗದ ಮೇಲೆ ಬಿಲ್ವಪತ್ರೆಯನ್ನು ಭಕ್ತಿಯಿಂದ ಅರ್ಪಿಸಬೇಕು. ಎಲ್ಲಾ ಬಿಲ್ವಪತ್ರೆಗಳನ್ನು ಅರ್ಪಿಸಿದ ನಂತರ ಶೀಘ್ರ ಮದುವೆಗಾಗಿ ಭೋಲೇಶಂಕರನನ್ನು ಪ್ರಾರ್ಥಿಸಿ. ಈ ಪ್ರಯೋಗವನ್ನು ಶ್ರಾವಣ ಮಾಸದ ಯಾವುದೇ ಸೋಮವಾರ, ಶಿವರಾತ್ರಿ ಅಥವಾ ಶ್ರಾವಣ ಪ್ರದೋಷದಂದು ಮಾಡಿದರೆ ತುಂಬಾ ಮಂಗಳಕರ.
ಗಂಭೀರ ಕಾಯಿಲೆಗೆ ಪರಿಹಾರ
ಯಾವುದೇ ಗಂಭೀರ ಆರೋಗ್ಯ ಸಂಬಂಧಿ ಸಮಸ್ಯೆಗಳಿದ್ದರೆ ಶ್ರಾವಣದಲ್ಲಿ ಯಾವುದಾದರೂ ಒಂದು ದಿನ ಬಟ್ಟಲಿನಲ್ಲಿ ನೀರಿನ ಜೊತೆಗೆ 108 ಎಲೆಗಳು ಮತ್ತು ಶ್ರೀಗಂಧದ ಸುಗಂಧ ಅಥವಾ ಶ್ರೀಗಂಧವನ್ನು ಇರಿಸಿ. ನಂತರ ಪ್ರತಿ ಬಿಲ್ವಪತ್ರೆಯನ್ನು ಅದರಲ್ಲಿ ಮುಳುಗಿಸಿ ಶಿವಲಿಂಗಕ್ಕೆ ಅರ್ಪಿಸಿ ಮತ್ತು ‘ಓಂ ಹಾಂ ಹೌಂ ಶಿವಾಯ ನಮಃ’ ಎಂಬ ಮಂತ್ರವನ್ನು ಜಪಿಸುತ್ತಾ ಇರಿ. ಕೊನೆಯಲ್ಲಿ ನೀವು ಆರೋಗ್ಯ ಪ್ರಯೋಜನಗಳಿಗಾಗಿ ಶಿವನನ್ನು ಪ್ರಾರ್ಥಿಸಿದರೆ ಖಂಡಿತ ಪ್ರಯೋಜನ ನೀಡುತ್ತದೆ.
ಮಕ್ಕಳನ್ನು ಪಡೆಯಲು ಪರಿಣಾಮಕಾರಿ
ಎಷ್ಟು ಪ್ರಯತ್ನ ಮಾಡಿದರೂ ಮಕ್ಕಳು ಆಗದಿದ್ದರೆ ಬಿಲ್ವಪತ್ರೆಯ ಈ ಪ್ರಯೋಗ ಮಾಡಿ ನೋಡಿ. ನಿಮ್ಮ ವಯಸ್ಸಿನಷ್ಟು ಬಿಲ್ವಪತ್ರೆ ಎಲೆಗಳನ್ನು ತೆಗೆದುಕೊಂಡು ಒಂದು ಬಟ್ಟಲಿನಲ್ಲಿ ಸ್ವಲ್ಪ ಹಾಲು ಇರಿಸಿ. ಪ್ರತಿ ಎಲೆಯನ್ನು ಅದರಲ್ಲಿ ಮುಳುಗಿಸಿ ಮತ್ತು ಶಿವಲಿಂಗದ ಮೇಲೆ ಅರ್ಪಿಸುವಾಗ, ‘ಓಂ ನಮೋ ಭಗವತೇ ಮಹಾದೇವಾಯ’ ಮಂತ್ರವನ್ನು ಜಪಿಸುತ್ತಾ ಇರಿ. ನಂತರ ಬಟ್ಟಲಿನಲ್ಲಿ ಉಳಿದ ಹಾಲನ್ನು ಅರ್ಪಿಸಿ ಮತ್ತು ಶಿವಲಿಂಗದ ಮೇಲೆ ನೀರು ಹಾಕಿರಿ. ಕೊನೆಯಲ್ಲಿ ಮಗು ಕರುಣಿಸುವಂತೆ ಶಿವನಲ್ಲಿ ಪ್ರಾರ್ಥಿಸಿ. ಈ ಪ್ರಯೋಗವನ್ನು ಶ್ರಾವಣ ಮಾಸದ ಯಾವುದೇ ದಿನದಂದು ನೀವು ಮಾಡಬಹುದು.
ಇದನ್ನೂ ಓದಿ: ಈ ರಾಶಿಯವರು ತಮ್ಮ ಪರಿಶ್ರಮದಿಂದ ಯಶಸ್ಸಿನ ಉತ್ತುಂಗಕ್ಕೆ ಏರುತ್ತಾರೆ
ದೀರ್ಘಕಾಲದ ತಲೆನೋವಿಗೆ ಪರಿಹಾರ
ಬಿಲ್ವಪತ್ರೆಯಿಂದ ಆಯುರ್ವೇದ ಔಷಧಿಗಳಲ್ಲಿ ಸಹ ಬಳಕೆ ಮಾಡಲಾಗುತ್ತದೆ. ದೃಷ್ಟಿ ಹೆಚ್ಚಿಸಲು ಇದರ ಎಲೆಗಳ ರಸವನ್ನು ಕಣ್ಣಿಗೆ ಹಾಕಿದರೆ ಪರಿಹಾರ ಸಿಗುತ್ತದೆ. ಕಫದ ಸಮಸ್ಯೆ ಇದ್ದರೆ ಈ ಎಲೆಗಳ ಕಷಾಯವನ್ನು ಜೇನುತುಪ್ಪದೊಂದಿಗೆ ಬೆರೆಸಿ ಕುಡಿಯುವುದು ಉತ್ತಮ. ಬಿಲ್ವಪತ್ರೆಯ 11 ಎಲೆಗಳ ರಸವನ್ನು ತೆಗೆದು ಬೆಳಗ್ಗೆ ಕುಡಿದರೆ ಎಷ್ಟೇ ಹಳೆಯ ತಲೆನೋವಾಗಿದ್ದರೂ ತಕ್ಷಣವೇ ವಾಸಿಯಾಗುತ್ತದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.