Diwali Good Omen: ದೀಪಾವಳಿ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ವರ್ಷ ದೀಪಾವಳಿಯನ್ನು ನವೆಂಬರ್ 12 ರಂದು ಆಚರಿಸಲಾಗುತ್ತದೆ. ದೀಪಾವಳಿಯ ದಿನದಂದು ಕಾಣಿಸುವ ಕೆಲವು ಸೂಚನೆಗಳು ತುಂಬಾ ಮಂಗಳಕರ ಎಂದು ಹೇಳಲಾಗುತ್ತದೆ. ಈ ಸೂಚಕಗಳು ಲಕ್ಷ್ಮಿ ದೇವಿ ನಿಮಗೆ ಒಲಿಯಲಿದ್ದಾಳೆ ಎಂಬುದರ ಸಂಕೇತವಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ವಿಶ್ವಕಪ್’ನಲ್ಲಿ ದ್ವಿಶತಕ ಸಿಡಿಸಿ ಅಬ್ಬರಿಸಿದ ಗ್ಲೆನ್ ಮ್ಯಾಕ್ಸ್ ವೆಲ್ ಪತ್ನಿ ಭಾರತ ಮೂಲದ ಖ್ಯಾತ ವೈದ್ಯೆ! ಈ ಸುಂದರಿ ಯಾರೆಂದು ತಿಳಿಯಿತೇ?


ದೀಪಾವಳಿಯ ದಿನದಂದು ಹಲ್ಲಿಯನ್ನು ನೋಡುವುದು ಶುಭ ಸಂಕೇತವಾಗಿದೆ. ಈ ದಿನದಂದು ಹಲ್ಲಿ ಕಂಡರೆ, ಲಕ್ಷ್ಮಿ ದೇವಿಯು ನಿಮ್ಮ ಮನೆಗೆ ಪ್ರವೇಶಿಸಲಿದ್ದಾಳೆ ಎಂದು ಸೂಚಿಸುತ್ತದೆ. ಜ್ಯೋತಿಷ್ಯದಲ್ಲಿ ಹಲ್ಲಿಯು ಲಕ್ಷ್ಮಿ ದೇವಿಗೆ ಸಂಬಂಧಿಸಿದೆ.


ಸಾಮಾನ್ಯವಾಗಿ ಜನರು ಹಲ್ಲಿಯನ್ನು ಕಂಡರೆ ಭಯಪಡುತ್ತಾರೆ. ಆದರೆ ಕೆಲವು ಸಂದರ್ಭಗಳಲ್ಲಿ ಮನೆಯಲ್ಲಿ ಹಲ್ಲಿ ಇರುವುದು ಶುಭ. ಜ್ಯೋತಿಷ್ಯದಲ್ಲಿ ಹಲ್ಲಿಗೆ ಸಂಬಂಧಿಸಿದ ಕೆಲವು ಶಕುನಗಳನ್ನು ಉಲ್ಲೇಖಿಸಲಾಗಿದೆ. ಇದು ದೊಡ್ಡ ಆರ್ಥಿಕ ಲಾಭವನ್ನು ತರುತ್ತದೆ.


ದೀಪಾವಳಿಯಂದು ಹಲ್ಲಿ ಕಂಡರೆ ಲಾಟರಿ ಹೊಡೆದಂತೆ. ದೀಪಾವಳಿಯ ದಿನದಂದು ಮನೆಯಲ್ಲಿ ಹಲ್ಲಿ ಓಡಾಡುವುದನ್ನು ನೋಡಿದರೆ, ಲಕ್ಷ್ಮಿ ದೇವಿಯು ನಿಮ್ಮ ಮನೆಯಲ್ಲಿ ನೆಲೆಸಲಿದ್ದಾಳೆ ಎಂದು ಅರ್ಥ. ಜೊತೆಗೆ ಹಣಕಾಸಿನ ಸಮಸ್ಯೆಗಳಿಗೆ ಶೀಘ್ರ ಮುಕ್ತಿ ಸಿಗಲಿದೆ ಎಂಬುದರ ಸೂಚಕ.


ಈ ಕೆಲಸವನ್ನು ತಕ್ಷಣ ಮಾಡಿ:


ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದೀಪಾವಳಿಯ ದಿನದಂದು ಹಲ್ಲಿ ಕಂಡರೆ ತಕ್ಷಣ ದೇವಸ್ಥಾನದಲ್ಲಿ ಅಥವಾ ದೇವರ ವಿಗ್ರಹದ ಬಳಿ ಇಟ್ಟಿರುವ ಅಕ್ಷತೆಯನ್ನು ದೂರದಿಂದ ಹಲ್ಲಿಗೆ ಚಿಮುಕಿಸಿ. ಹಾಗೆಯೇ ನಿಮ್ಮ ಆಸೆಯನ್ನು ತಾಯಿ ಲಕ್ಷ್ಮಿ ಬಳಿ ಹೇಳಿ ಅದನ್ನು ಈಡೇರಿಸುವಂತೆ ಪ್ರಾರ್ಥಿಸಿ. ಹೀಗೆ ಮಾಡುವುದರಿಂದ ನಿಮ್ಮ ಆಸೆಯನ್ನು ಈಡೇರಿಸಿಕೊಳ್ಳಬಹುದು.


ಇದನ್ನೂ ಓದಿ: ಈ ಫೋಟೋದಲ್ಲಿರುವ ಬಾಲಕ ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್-ಸಾವಿರ ಕೋಟಿ ಆಸ್ತಿಯ ಒಡೆಯ!


(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ) 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ